ಸದಸ್ಯ:R Sachin Kumar/sandbox
ಮಾದಕ ವಸ್ತುಗಳ ಚಟಗಳಿಂದ ಹೊರಬರುವ ವಿಧಾನಗಳು
[ಬದಲಾಯಿಸಿ]ಮಾದಕ ವಸ್ತುಗಳನ್ನು ಬಳಸುವವರಿಗೆ ಅದೇ ಜೀವನವಾಗಿ ಬಿಟ್ಟಿರುತ್ತದೆ. ಸಮಯ ಕಳೆದಂತೆ ಅದರಿಂದ ಹೊರಬರಬೇಕೆಂದು ಆಲೋಚಿಸಿದರೂ ಅದು ಅಸಾಧ್ಯವೆಂದು ಅವರಿಗೆ ತೋರುತ್ತದೆ ಹಾಗೂ ಹೊರಬರುವುದಾದರೂ ಅದರ ದಾರಿ ಹೇಗೆ ಎಂದು ತಿಳಿಯುದಿಲ್ಲ.ಅದಕ್ಕಾಗಿ ಕುಟುಂಬದವರು ಮತ್ತು ಸ್ನೇಹಿತರು ಅವರಿಗೆ ಸಲಹೆ ನೀಡಬಹುದು ಮತ್ತು ಚಿಕಿತ್ಸೆಗಾಗಿ ಅವರನ್ನು ಕರೆದುಕೊಂಡು ಹೋಗಬಹುದು. ಮಾದಕ ವಸ್ತುಗಳನ್ನು ಬಳಸುವ ವ್ಯಕ್ತಿ ತೆಗೆದುಕೊಳ್ಳಬಹುದಾದ ನಿರ್ಧಾರಗಳೆಂದರೆ:
ಬದಲಾಗಲು ಧೃಡ ನಿರ್ಧಾರ ಮಾಡುವುದು.
ಮಾದಕ ವಸ್ತುಗಳ ಚಟದಿಂದ ಒದ್ದಾಡುತ್ತಿರುವ ವ್ಯಕ್ತಿ ಅದರಿಂದ ಹೊರಬರಲು ಪ್ರಯತ್ನಿಸುವಾಗ ತೆಗೆದುಕೊಳ್ಳಬೇಕಾದ ತುಂಬಾ ಜಟಿಲವಾದ ಮತ್ತು ದೊಡ್ಡದಾದ ನಿರ್ಧಾರವೆಂದರೆ: ಬದಲಾಗಲು ನಿರ್ಧರಿಸುವುದು.ಬದಲಾಗಲು ನಿರ್ಧರಿಸುವುದು ತುಂಬಾ ಗೊಂದಲದಿಂದ ಕೂಡಿದ ನಿರ್ಧಾರವೆಂದು ವ್ಯಕ್ತಿಗೆ ತೋರುತ್ತದೆ.ಆದರೆ, ಚಟದಿಂದ ಜೀವನದ ವಿವಿಧ ಭಾಗಗಳಲ್ಲಾಗುತ್ತಿರುವ ತೊಂದರೆಗಳನ್ನು ಪರಿಗಣಿಸಿ,ವ್ಯಕ್ತಿಯು ಮುಂದುವರಿಯಬೇಕು.ಚಟದಿಂದ ಹೊರಬರುವ ನಿರ್ಧಾರದ ಜೊತೆಗೆ ಜೀವನದ ಇತರ ಭಾಗಗಳಲ್ಲೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಯಾವುದೋ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸಲು ಮಾದಕ ವಸ್ತುವಿನ ಮೊರೆಹೋಗದೇ ಬೇರೆ ವಿಧಾನ ಹುಡುಕಬೇಕು,ಯಾವ ತರಹದ ಜನರೊಟ್ಟಿಗೆ ಸಮಯ ಕಳೆಯಬೇಕು,ಬಿಡುವಿನ ಸಮಯದಲ್ಲಿ ಏನು ಮಾಡಬೆಕು,ಮಾದಕ ವಸ್ತು ಸೇವಿಸಲು ಉಪಯೋಗಿಸುತ್ತಿದ್ದ ಸಮಯದಲ್ಲಿ ಏನು ಮಾಡಬೆಕು,ವ್ಯಕ್ತಿಯು ತನ್ನ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾನೆ ಮತ್ತು ಯಾವ ಅಭಿಪ್ರಾಯ ಬೆಳೆಸಿಕೊಳ್ಳಬೇಕು, ಈ ತರಹದ ಬದಲಾವಣೆಗಳನ್ನು ತಂದುಕೊಂಡರೆ,ತಾನು ಬದುಕುವುದು ಹೇಗೆ ಎನ್ನುವ ಸಂಶಯ ವ್ಯಕ್ತಿಯಲ್ಲಿ ಹುಟ್ಟಿಕೊಳ್ಳಲಾರಂಭಿಸುತ್ತದೆ.ಆದರೆ ಚಟದಿಂದ ಹೊರಬರುವ ವಿಧಾನ ಸ್ವಲ್ಪ ನಿಧಾನಗತಿಯದ್ದು ಮತ್ತು ಚಟಕ್ಕೊಳಗಾಗಿ ಗೊತ್ತಿರದೇ ವ್ಯಕ್ತಿಯು ತನಗೆ ತಿಳಿಯದೆ ಹಲವಾರು ಬದಲಾವಣೆಗಳನ್ನು ತಂದುಕೊಂಡಿರುತ್ತಾನೆ.ಇವುಗಳಿಂದ ಹಿಂದಕ್ಕೆ ಹೋಗಿ ತನ್ನ ಸಹಜ ಜೀವನಶೈಲಿಗೆ ಮರಳುವ ಪ್ರಕ್ರಿಯೆಗೆ ಹೆಜ್ಜೆಯಿಡುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಬದಲಾವಣೆಯ ಬಗ್ಗೆ ಆಲೋಚಿಸುವುದು:
- ವ್ಯಕ್ತಿಯು ಉಪಯೋಗಿಸುತ್ತಿರುವ ಮಾದಕ ವಸ್ತುವಿನ ಬಗ್ಗೆ ಮಾಹಿತಿಯನ್ನಿಟ್ಟುಕೊಳ್ಳಬೇಕು:ಯಾವ ವಸ್ತು, ಎಷ್ಟು ಪ್ರಮಾಣದಲ್ಲಿ,ಎಷ್ಟು ಸಲ ಬಳಸುತ್ತಿರುವುದು.ಇವುಗಳ ಮಾಹಿತಿ ಇದ್ದಲ್ಲಿ,ವ್ಯಕ್ತಿಯ ಜೀವನದಲ್ಲಿ ಚಟ ಎಷ್ಟರ ಮಟ್ಟಿಗೆ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವುದು ವ್ಯಕ್ತಿಗೆ ತಾನಾಗಿಯೇ ಅರಿವಾಗುತ್ತದೆ.
- ವ್ಯಕ್ತಿಯು ತನ್ನ ನಂಬಿಕಸ್ಥರಲ್ಲಿ ಈ ವಿಷಯದ ಬಗ್ಗೆ ಮಾತಾಡಬೇಕು ಮತ್ತು ತನ್ನ ಚಟದ ಬಗ್ಗೆ ಅವರಿಗೇನನ್ನಿಸುತ್ತದೆಯೆಂದು ಕೇಳಿ ತಿಳಿದುಕೊಳ್ಳಬೇಕು.
- ಇವೆಲ್ಲವುಗಳ ಅನಂತರ ವ್ಯಕ್ತಿಯು ತಾನು ಬದಲಾವಣೆಯಾಗುವುದಕ್ಕೆ ಅಡಚಣೆಯಾಗಿರುವ ವಿಷಯವೇನೆಂದು ಗುರುತಿಸಬೇಕು.
ಬದಲಾವಣೆಯ ಸಿದ್ಧತೆಗೆ ಪಂಚ ಸೂತ್ರಗಳು:
- ವ್ಯಕ್ತಿಯು ತಾನು ಬದಲಾವಣೆಯಗಲು ಇರುವ ಕಾರಣಗಳನ್ನು ತನ್ನಷ್ಟಕ್ಕೆ ತಾನೇ ಹೇಳಿಕೊಂಡು,ನೆನಪಿಸಿಕೊಳ್ಳಬೇಕು.
- ತಾನು ಕಳೆದ ಸಲ ಚಟದಿಂದ ಹೊರಬರಲು ಪ್ರಯತ್ನಿಸಿದಾಗ ಉಂಟಾದ ತೊಡಕುಗಳನ್ನು ನೆನಪಿಸಿಕೊಳ್ಳಬೇಕು ಮತ್ತು ಯಾವ ವಿಧಾನ ಉಪಯೋಗವಾಯಿತು ಯಾವ ವಿಧಾನ ಉಪಯೋಗವಾಗಲಿಲ್ಲ ಎಂದು ಅವಲೋಕಿಸಬೇಕು.
- ವ್ಯಕ್ತಿಯು ಮಾದಕ ವಸ್ತುವಿನ ಉಪಯೋಗ ಬಿಡುವ ದಿನವನ್ನು ನಿಗದಿಪಡಿಸಿಕೊಳ್ಳಬೇಕು.
- ವ್ಯಕ್ತಿಯು ತನಗೆ ತನ್ನ ಚಟವನ್ನು ನೆನಪಿಸುವ ವಸ್ತು/ಸನ್ನಿವೇಶಗಳನ್ನು ಅಳಿಸಬೇಕು ಅಥವಾ ಅವುಗಳಿಂದ ದೂರವಿರಬೇಕು.
- ವ್ಯಕ್ತಿಯು,ತನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ,ತಾನು ಮಾದಕ ವಸ್ತುವಿನ ಉಪಯೋಗವನ್ನು ನಿಲ್ಲಿಸುವ ನಿರ್ಧಾರವನ್ನು ತಿಳಿಸಬೇಕು ಮತ್ತು ಅವರಿಗೆ ಈ ಕಾರ್ಯದಲ್ಲಿ ಸಹಕರಿಸಲು ಕೇಳಿಕೊಳ್ಳಬೇಕು.
ಲಭ್ಯವಿರುವ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳಬೇಕು
ವ್ಯಕ್ತಿಯು ಒಮ್ಮೆ ಮಾದಕ ವಸ್ತು ಬಿಡುವ ನಿರ್ಧಾರ ಮಾಡಿದಾಗ,ತನಗೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ವಿವರವಾಗಿ ಅರಿತುಕೊಳ್ಳಬೇಕು.ಅನಂತರ ಚಿಕೆತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಕೆಲವು ಅಂಶಗಳನ್ನು ಗಮನಿಸಿಕೊಳ್ಳಬೇಕಾಗುತ್ತದೆ,ಅವುಗಳೆಂದರೆ:
- ಎಲ್ಲಾ ಮಾದಕ ವಸ್ತುಗಳಿಗೆ ಒಂದೇ ತರಹದ ಚಿಕಿತ್ಸೆಯಿಲ್ಲ ಮತ್ತು ಎಲ್ಲಾ ವ್ಯಕ್ತಿಗಳಿಗೆ ಒಂದೇ ತರಹದ ಚಿಕಿತ್ಸೆ ಕೊಡಲಾಗುವುದಿಲ್ಲ.ವ್ಯಕ್ತಿಯ ಮಾದಕ ವಸ್ತುವಿಗೆ ತಕ್ಕಂತೆ ಮತ್ತು ಆತನ ಚಟದ ತೀವ್ರತೆಗೆ ತಕ್ಕಂತೆ ಚಿಕೆತ್ಸೆಯನ್ನು ನೀಡಲಾಗುತ್ತದೆ.
- ವ್ಯಕ್ತಿಯು ಕೇವಲ ಮಾದಕ ವಸ್ತುವಿನ ಚಟವನ್ನಲ್ಲದೇ ತನ್ನ ಜೀವನದ ಇತರ ತೊಂದರೆಗಳನ್ನು ಅರ್ಥೈಸಿಕೊಂಡು ಬಗೆಹರಿಸುವ ಸಂಸ್ಥೆಗಳಲ್ಲಿ ಚಿಕೆತ್ಸೆಪಡೆಯಲು ಪ್ರಯತ್ನಿಸಬೇಕು.
- ಚಿಕೆತ್ಸೆಯ ಅವಧಿ ದೀರ್ಘಕಾಲದ್ದಾಗಿರಬಹುದು,ಆದರೆ ಅದು ವ್ಯಕ್ತಿಯ ಮಾದಕ ವಸ್ತುವಿನ ತೀವ್ರತೆಯ ಮೇಲೆ ಮತ್ತು ಅದರ ಜೊತೆಗಿರುವ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಮೇಲೆ ನಿರ್ಧಾರವಾಗಿರಬಹುದು.ಆದುದರಿಂದ ಚಿಕಿತ್ಸೆಯ ಅವಧಿಯ ಬಗ್ಗೆ ಪೂರ್ವ ನಿರ್ಧಾರ ಮಾಡಿ ಚಿಕಿತ್ಸಾ ವೈದ್ಯರ ಮೇಲೆ ಒತ್ತಡ ಹೇರಬಾರದು.
- ವಿವಿಧ ಚಿಕಿತ್ಸಾ ಸಂಸ್ಥೆಗಳು ಲಭ್ಯವಿರುತ್ತವೆ.ವ್ಯಕ್ತಿಯು ಸಂಪೂರ್ಣ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಉದ್ದೇಶಿಸುವ ತನ್ನ ಚಿಕಿತ್ಸೆಗೆ ಸೂಕ್ತವಾದ ಸಂಸ್ಥೆಗಳನ್ನು ಆರಿಸಿಕೊಳ್ಳಬಹುದು.
ಸಹಾಯ ಪಡೆಯುವುದಕ್ಕಾಗಿ ಮುಂದೆ ಬರುವುದು
- ಮಾದಕ ವಸ್ತು ಚಟಕ್ಕೆ ಚಿಕಿತ್ಸೆ ಪಡೆದು ಮುಂದುವರೆಯುವಾಗ ಒಬ್ಬರೇ ಮುನ್ನುಗದೇ,ವ್ಯಕ್ತಿಯು ತನ್ನ ಸಮರ್ಥನೆಗಾಗಿ ತನ್ನ ಎಲ್ಲಾ ಬೆಂಬಲ ಗುಂಪುಗಳನ್ನು ಒಟ್ಟುಗೂಡಿಸುದರಿಂದ ವ್ಯಕ್ತಿಯ ಬದಲಾವಣೆಗೆ ಹೆಚ್ಚಿನ ಸಹಕಾರ ದೊರೆತು,ಆ ಗುರಿ ಪುಷ್ಟೀಕರಣಗೊಳ್ಳುತ್ತದೆ.
- ವ್ಯಕ್ತಿಯು ತನ್ನ ಕುಟುಂಬದ ಮತ್ತು ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕು.ಅವರೊಂದಿಗೆ ಮನಸ್ತಾಪವಾಗಿದ್ದರೆ,ಸಂಬಂಧ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ತನ್ನ ಚಟ ನಿಲ್ಲಿಸುವ ನಿರ್ಧಾರಕ್ಕೆ ಸಹಕರಿಸುವಂತೆ ಕೇಳಿಕೊಳ್ಳಬಹುದು.
- ವ್ಯಕ್ತಿಯು ತನ್ನ ಹಳೆಯ ಮಾದಕ ವಸ್ತುಗಳ ಗೆಳೆಯರ ಗುಂಪನ್ನು ಬಿಟ್ಟು ರಚನಾತ್ಮಕ,ಕ್ರಿಯಾಶೀಲ ವ್ಯಕ್ತಿಗಳ ಗುಂಪಿಗೆ ಸೇರಿ ಅವರೊಟ್ಟಿಗೆ ಒಡನಾಟ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.
ಈ ರೀತಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ,ಮಾದಕ ವಸ್ತುವಿನ ಬಳಕೆ ಪುನಃ ಪ್ರಾರಂಭಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ.