ವಿಷಯಕ್ಕೆ ಹೋಗು

ಸದಸ್ಯ:ROSE DILNA/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹಸರು ಡಿಲ್ನ ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾಥಿ‍ನಿ. ನನ್ನ ತಂದೆಯ ಹೆಸರು ಜಾಯ್, ತಾಯಿ ಲಿಜಿ. ನನ್ನ ಹವ್ಯಾಸಗಳು ನೃತ್ಯ, ಪದ್ಯ, ಕ್ರೀಡೆ ನನಗೆ ಕ್ರೀಡಾಟಗಳಲ್ಲಿ ತುಂಬಾ ಪ್ರಶಸ್ತಿಗಳು ಸಿಕ್ಕಿದೆ. ನನ್ನ ಮನೆ ಕುಂಜತ್ ಬೈಲ್ ನಾವು ಮೂರು ಮಕ್ಕಳು ನನಗೆ ಅಣ್ಣ ಮತ್ತು ತಂಗಿ ಇದ್ದಾರೆ ಅಣ್ಣ ಡಿಗ್ರಿ ಮುಗಿಸಿದ್ದಾನೆ. ತಂಗಿ ಪಿ.ಯು.ಸಿ. ಕಲಿತ್ತಿದ್ದಾಳೆ. ನಾನು ನನ್ನ ಕುಟುಂಬವನ್ನು ತುಂಬಾ ಪ್ರೀತಿಸತ್ತೇನೆ.























ಚೀನ ಕೈಗಾರಿಕಾ ನಗರ ಶೆಂಝೆನ್‌ನಲ್ಲಿ ಭೂಕುಸಿತ

[ಬದಲಾಯಿಸಿ]

ಬೀಜಿಂಗ್‌: ಚೀನದ ಶೆಂಝೆನ್‌ ವಾಣಿಜ್ಯ ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು 32 ಮಹಿಳೆಯರ ಸಹಿತ ಕನಿಷ್ಠ 91 ಮಂದಿ ನಾಪತ್ತೆಯಾಗಿದ್ದಾರೆ.

ಚೀನದ ಅತ್ಯಂತ ಭೀಕರ ನಗರ ವಲಯ ದುರಂತ ಇದೆಂದು ಹೇಳಲಾಗಿದ್ದು ಸರಕಾರ ಇದೀಗ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯವನ್ನು ಕೈಗೊಂಡಿದೆ.

91 ಮಂದಿ ನಾಪತ್ತೆಯಾಗಿರುವವರಲ್ಲಿ 59 ಮಂದಿ ಪುರುಷರು ಹಾಗೂ 32 ಮಂದಿ ಮಹಿಳೆಯರು ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ತಿಳಿಸಿದೆ.

ಪರ್ವತದಿಂದ ನೂರಾರು ಟನ್‌ ಮಣ್ಣು ಕುಸಿದು ಕೆಳಜಾರಿ ಬಂದು ಕನಿಷ್ಠ ಶೆಂಝೆನ್‌ ನಗರದ ಸುಮಾರು 32 ಕಟ್ಟಡಗಳನ್ನು ಆವರಿಸಿಕೊಂಡಿದೆ. ಭೂಕುಸಿತದ ಪರಿಣಾಮವಾಗಿ ಗ್ಯಾಸ್‌ ಸ್ಟೇಶನ್‌ ಒಂದರಲ್ಲಿ ಭಾರೀ ಸ್ಫೋಟವೂ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇದೀಗ ಸಮರೋಪಾದಿಯಲ್ಲಿ ಸಾಗಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ, ಪೊಲೀಸ್‌ ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರು ಸೇರಿದಂತೆ 1,500ಕ್ಕೂ ಹೆಚ್ಚು ಮಂದಿ ಶಾಮೀಲಾಗಿದ್ದು ಅವಶೇಷಗಳನ್ನು ತೆರವು ಗೊಳಿಸಿ ಅದರಡಿ ಸಿಲುಕ್ಕಿರುವವರನ್ನು ಪಾರುಗೊಳಿಸುವ ಪ್ರಯತ್ನ ನಡೆದಿದೆ.

ಭೂಕುಸಿತದಿಂದಾಗಿ 33 ವಸತಿ ಸಮುಚ್ಚಯಗಳು ಮಣ್ಣಿನಡಿ ಸೇರಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.