ವಿಷಯಕ್ಕೆ ಹೋಗು

ಸದಸ್ಯ:RB GURUBASAVARAJ/ನನ್ನ ಪ್ರಯೋಗಪುಟ೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನ್ವರಾ ತೈಮೂರ್

[ಬದಲಾಯಿಸಿ]

ಸೈಯದಾ ಅನ್ವರಾ ತೈಮೂರ್ (ಜನನ : 24 ನವೆಂಬರ್ 1936 – ಮರಣ :28 ಸೆಪ್ಟೆಂಬರ್ 2020) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದರು. ಅವರು 6ನೇ ಡಿಸೆಂಬರ್ 1980 ರಿಂದ 30ನೇ ಜೂನ್ 1981 ರವರೆಗೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು 28ನೇ ಸೆಪ್ಟೆಂಬರ್ 2020 ರಂದು ಆಸ್ಟ್ರೇಲಿಯಾದಲ್ಲಿ ನಿಧನರಾದರು. ಅನ್ವರಾ ತೈಮೂರ್ ಅವರು ಅಸ್ಸಾಂನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾಗಿದ್ದರು ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸದಸ್ಯರೂ ಆಗಿದ್ದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಅನ್ವರಾ ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಪಡೆದರು. ನಂತರ ಅವರು 1956 ರಲ್ಲಿ ಜೋರ್ಹತ್‌ ನ ದೇವಿಚರಣ್ ಬರುವಾ ಬಾಲಕಿಯರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದರು.

ರಾಜಕೀಯ ಜೀವನ

[ಬದಲಾಯಿಸಿ]

ಅಸ್ಸಾಂನ ಇತಿಹಾಸದಲ್ಲಿ, ಅನ್ವರಾ ತೈಮೂರ್ ಅವರು ರಾಜ್ಯದ ಏಕೈಕ ಮಹಿಳಾ ಮತ್ತು ಮುಸ್ಲಿಂ ಮುಖ್ಯಮಂತ್ರಿಯಾಗಿದ್ದರು. ಅವರು 6ನೇ ಡಿಸೆಂಬರ್ 1980 ರಿಂದ 30ನೇ ಜೂನ್ 1981 ರವರೆಗೆ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು. ಭಾರತದ ಇತಿಹಾಸದಲ್ಲಿ ಸೈಯದಾ ಅನ್ವರಾ ತೈಮೂರ್ ಅವರು ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ರಾಜ್ಯವನ್ನು ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಗೆ ಒಳಪಡಿಸಿದಾಗ ಅವರ ಮುಖ್ಯಮಂತ್ರಿ ಅವಧಿಯು ಕೊನೆಗೊಂಡಿತು.

1983 ರಿಂದ 1985 ರವರೆಗೆ ಅವರು ಅದೇ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದರು.

ಅವರು 1972, 1978, 1983, ಮತ್ತು 1991 ರಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾಯಿತ ರಾಗಿದ್ದರು. 1988 ರಲ್ಲಿ ಅವರು ಭಾರತೀಯ ಸಂಸತ್ತಿನ ಮೇಲ್ಮನೆ (ರಾಜ್ಯಸಭೆ)ಗೆ ನಾಮನಿರ್ದೇಶನಗೊಂಡರು. 1991 ರಲ್ಲಿ ಅವರು ಅಸ್ಸಾಂನಲ್ಲಿ ಕೃಷಿ ಸಚಿವರಾಗಿ ನೇಮಕವಾಗಿದ್ದರು.

ಅನ್ವರಾ ಅವರು 2011 ರಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷ[೧]ಕ್ಕೆ ಸೇರಿದರು. 2018ರ ರಾಷ್ಟ್ರೀಯ ನಾಗರಿಕರ ನೋಂದಣಿಯ (NRC) ಅಂತಿಮ ಕರಡಿನಲ್ಲಿ ಸೇರಿಸಲಾಗಿಲ್ಲದ ಗಮನಾರ್ಹ ಹೆಸರುಗಳಲ್ಲಿ ಅನ್ವರಾ ಕೂಡ ಒಬ್ಬರಾಗಿದ್ದರು. ಇದಕ್ಕಾಗಿ ಅವರು ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ತಮ್ಮ ಕುಟುಂಬ ಸದಸ್ಯರು ಅರ್ಜಿ ಸಲ್ಲಿಸದೇ ಇರಬಹುದು ಎಂದು ಸ್ಪಷ್ಟನೆ ನೀಡಿದ್ದರು.

ಅನ್ವರಾ ತೈಮೂರ್ ಅವರು 28ನೇ ಸೆಪ್ಟೆಂಬರ್ 2020 ರಂದು ಆಸ್ಟ್ರೇಲಿಯಾದಲ್ಲಿ ಹೃದಯ ಸ್ತಂಭನದಿಂದಾಗಿ ಮರಣ ಹೊಂದಿದರು. ಅಲ್ಲಿ ಅವರು ಕಳೆದ ನಾಲ್ಕು ವರ್ಷಗಳಿಂದ ತಮ್ಮ ಮಗನೊಂದಿಗೆ ವಾಸವಾಗಿದ್ದರು.