ಸದಸ್ಯ:RB GURUBASAVARAJ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Holagundi Siddeshwara
Holagundi Siddeshwara

ಹೊಳಗುಂದಿ[ಬದಲಾಯಿಸಿ]

ಹೊಳಗುಂದಿ ಇದು ವಿಜಯನಗರ[೧] ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಒಂದು ಗ್ರಾಮ. ಪೂರ್ವಕ್ಕೆ ಮೋರಿಗೇರಿ, ಪಶ್ಚಿಮಕ್ಕೆ ಹೂವಿನ ಹಡಗಲಿ, ಉತ್ತರಕ್ಕೆ ಹಿರೇ ಮಲ್ಲನಕೇರಿ ಹಾಗೂ ದಕ್ಷಿಣಕ್ಕೆ ಸೋಗಿ ಗ್ರಾಮಗಳಿವೆ. ಇಲ್ಲಿ ೫೦೦೦ಕ್ಕೂ ಹೆಚ್ಚು ಕುಟುಂಬಗಳಿವೆ. ಸುಮಾರು ೭೦೦೦ ಜನಸಂಖ್ಯೆ ಹೊಂದಿದೆ. ಇಲ್ಲಿ ಕಲ್ಯಾಣಿ ಚಾಲುಕ್ಯರ [೨]/ಕಾಲದ ಬಳ್ಳೇಶ್ವರ ಮತ್ತು ಸೋಮೇಶ್ವರ ದೇವಸ್ಥಾನಗಳಿವೆ. ಇಲ್ಲಿನ ಪ್ರಮುಖ ಆರಾಧ್ಯ ದೈವ ಶ್ರೀ ಸಿದ್ದೇಶ್ವರ. ಈ ಗ್ರಾಮವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಬಳ್ಳೇಶ್ವರ ದೇವಸ್ಥಾನದಲ್ಲಿರುವ ಶಿಲಾ ಶಾಸನದ ಪ್ರಕಾರ ಗ್ರಾಮದ ಹೆಸರು ಪೊಳಲುಗುಂದೆ ಎಂದು ಉಲ್ಲೇಖಿತವಾಗಿದೆ. ಅಂತೆಯೇ ಸೋಮೇಶ್ವರ ದೇವಸ್ಥಾಣದಲ್ಲಿನ ಶಾಸನದ ಪ್ರಕಾರ ಪೊಳಲ್ಗುಂದೆ ಎಂದು ಉಲ್ಲೇಖಿತವಾಗಿದೆ. ಪೊಳಲ್ ಎಂದರೆ ಪಟ್ಟಣ, ಗುಂದೆ ಎಂದರೆ ಗುಡ್ಡ ಬೆಟ್ಟ ಎಂದರ್ಥ. ಈ ಗ್ರಾಮದ ಬಳಿ ಒಂದು ಕಲ್ಲು ಗುಡ್ಡ ಇರುವುದರಿಂದ ಈ ಗ್ರಾಮಕ್ಕೆ ಪೊಳಲ್ ಗುಂದೆ ಎಂದು ಹೆಸರು ಬಂದಿದೆ. ಉಚ್ಛಾರಣೆಯ ಬಳಕೆಯಲ್ಲಿ ಪ ಕಾರ ಹ ಕಾರವಾಗಿ ಬದಲಾಗಿದೆ. ನಂತರ ಪೊಳಲ್ ಗುಂದೆ ಹೊಳಗುಂದಿ ಆಗಿ ಬದಲಾಗಿದೆ.

ಜನಪದೀಯ ಕತೆಗಳ ಪ್ರಕಾರ ಗ್ರಾಮವು ಏಳು ಊರುಗಳನ್ನು ಹೊಂದಿತ್ತು ಎಂದು ತಿಳಿದು ಬಂದಿದೆ. ಸೋಮಾಪುರ, ವೀರಾಪುರ, ಅರಕೇರಿ, ಬೈರಾಪುರ, ವರಕೇರಿ, ಸಿದ್ದಾಪುರ ಮತ್ತು ಅಗಸನಕಟ್ಟೆ ಎಂಬ ಏಳು ಊರುಗಳು ಸೇರಿ ಹೊಳಗುಂದಿ ಆಗಿದೆ ಎಂಬುದು ಪ್ರತೀತಿ. ಈಗ ಈ ಹೆಸರಿನ ಊರುಗಳಲ್ಲಿ ಜನವಸತಿಯ ಕೆಲ ಕುರುಹುಗಳಿವೆ. ಬಹುತೇಕ ಈ ಊರುಗಳ ಬಳಿ ನೀರಿನ ಮೂಲಗಳಿವೆ. ಅಲ್ಲದೇ ಕೆಲ ಊರುಗಳ ಬಳಿ ಆಂಜನೇಯ ದೇವಸ್ಥಾನಗಳೂ ಇವೆ. ಹಾಗಾಗಿ ಜನಪದ ಕತೆಯೂ ಇಲ್ಲಿ ಸೂಕ್ತ ಎನಿಸುವಂತಾಗಿದೆ.

ಸಿದ್ದೇಶ್ವರ ದೇವಸ್ಥಾನವು ಗುಡ್ಡದ ಬುಡದಲ್ಲಿದೆ. ಇಲ್ಲಿ ನಿಂತು ಇಡೀ ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳನ್ನು ವೀಕ್ಷಿಸಬಹುದು. ದೇವಸ್ಥಾನದ ಸಮೀಪ ಒಂದು ಕಲ್ಲು ಕೆರೆ ಇದೆ. ಇದನ್ನು ವಿಜಯನಗರ ಅರಸರು ಕಟ್ಟಿಸಿದರು ಎಂಬ ಪ್ರತೀತಿ ಇದೆ. ಕೆರೆಯ ನೀರು ಕೇವಲ ಮನುಷ್ಯರು ಮತ್ತು ಪ್ರಾಣಿಗಳ ಬಳಕೆಗೆ ಮಾತ್ರ ಇದೆ. ಇದೊಂದು ಚಿಕ್ಕ ಕೆರೆ ಆಗಿದ್ದರಿಂದ ಕೃಷಿಗೆ ಈ ನೀರನ್ನು ಬಳಸುತ್ತಿಲ್ಲ.

ಗುಡ್ಡವು ಬಹುತೇಕ ಕಲ್ಲುಗುಡ್ಡವಾಗಿದೆ. ಇಲ್ಲಿ ನೈಸರ್ಗಿಕ ಜಾರು ಬಂಡೆ ಇದೆ. ಇದು ಪ್ರವಾಸಿಗಳ ಆಕರ್ಷಣೆಯ ಕೇಂದ್ರ. ಅಂತೆಯೇ ಇಲ್ಲಿರುವ ಗುಡ್ಡ ಚಾರಣದ ತಾಣವಾಗಿದೆ. ಗುಡ್ಡದ ನೆತ್ತಿಯ ಮೇಲೆ ನಿಂತರೆಸುತ್ತಲೂ ಹತ್ತಾರು ಕಿಲೋಮೀಟರ್ ವರೆಗಿನ ದೃಶ್ಯವನ್ನು ನೋಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. https://vijayanagara.nic.in/history/
  2. https://www.gktoday.in/chalukyas-of-kalyani