ವಿಷಯಕ್ಕೆ ಹೋಗು

ಸದಸ್ಯ:RAJ KUMAR BIDAR/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂರ್ಯ

[ಬದಲಾಯಿಸಿ]

ಈ ಲೇಖನವು ಸೌರಮಂಡಲದ ಕೇಂದ್ರ ಬಿಂದು.

ಸೂರ್ಯನು ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರ. ಭೂಮಿ ಮತ್ತು ಬೇರೆ ಕಾಯಗಳು/ ಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಹಾಗೂ ಧೂಳು ಸೇರಿದಂತೆ ಸೂರ್ಯನನ್ನು ಪರಿಭ್ರಮಿಸುತ್ತವೆ. ಸೂರ್ಯವೊಂದೇ ಸೌರಮಂಡಲದ ೯೯% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷಣೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು, ಭೂಮಿಯ ಹವಾಮಾನದ ಮೇಲೂ ಪ್ರಭಾವ ಬೀರುತ್ತದೆ.

ಸೂರ್ಯನ ಬೆಳಕು ಬಹಳ ಪ್ರಕಾಶಮಾನವಾಗಿರುತ್ತದೆ. ಬರಿಗಣ್ಣಿನಿಂದ ಸ್ವಲ್ಪ ಕಾಲದವರೆಗೆ ಸೂರ್ಯನತ್ತ ನೇರವಾಗಿ ನೋಡುವುದು ಹಿತವಾಗಿಲ್ಲದಿದ್ದರೂ ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಸೂರ್ಯನತ್ತ ನೇರವಾಗಿ ನೋಡಿದಾಗ ಕಣ್ಣು ಕುಕ್ಕಿದಂತಾಗಿ ತಾತ್ಕಾಲಿಕ ಮತ್ತು ಭಾಗಶ: ಕುರುಡು ಉಂಟಾಗಬಹುದು. ಇದಲ್ಲದೆ, ಅಕ್ಷಿಪಟಲದ ಮೇಲೆ ಬೀಳುವ ಸುಮಾರು ೪- ಮಿಲಿವ್ಯಾಟುಗಳ ಸೌರಶಕ್ತಿಯು ಅಕ್ಷಿಪಟಲವನ್ನು ಬಿಸಿ ಮಾಡಿ ಒಮ್ಮೊಮ್ಮೆ ಅದಕ್ಕೆ ಹಾನಿಯನ್ನು ಉಂಟುಮಾಡಬಹುದು. ಅತಿನೇರಳೆ ಬೆಳಕು ಹಲವು ವರ್ಷಗಳ ಅವಧಿಯಲ್ಲಿ ಕಣ್ಣಿನ ಮಸೂರವನ್ನು ಹಳದಿ ಬಣ್ಣಕ್ಕೆ ತಿರುಗಿಸಿ, ಕಣ್ಣಿನ ಪೊರೆಗಳನ್ನು ಉಂಟು ಮಾಡುತ್ತದೆ. ಇದು ಸೂರ್ಯನತ್ತ ನೇರವಾಗಿ ನೋಡದಿದ್ದರೂ ಆಗಬಹುದು.