ಸದಸ್ಯ:Puttappa K Naik/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಡಗಿ ಗ್ರಾಮ ಪರಿಛಯ:

ಅಂಡಗಿ ಗ್ರಾಮವು ಕರ್ನಾಟಕದ, ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದು ಗ್ರಾಮ.

         "  ಅಂಡಗಿ " ಎಂದರೆ ದೊಡ್ಡ ಮೂಟೆ ಎಂದರ್ಥ.ಹಾಗೆಯೇ ಫಲವತ್ತಾದ ಭೂಮಿ, ಚಿಕ್ಕ ಚಿಕ್ಕ ಕೆರೆಗಳನ್ನು ಹೊಂದಿರುವ ಸಮೃಧ್ದಿಯಾದ ಊರ.
            ರಾಜ್ಯ ಹೆದ್ದಾರಿ ೧೩೭ ರಲ್ಲಿ ಕನ್ನಡದ ಪ್ರಥಮ ರಾಜಧಾನಿಯಾದ ,ಮಯೂರವರ್ಮನ ಬನವಾಸಿಯಿಂದ. ಉತ್ತರಕ್ಕೆ ೮ ಕಿ ಮೀ ದೂರದಲ್ಲಿದೆ.ಸುಪ್ರಸಿದ್ಧ ಮಾರಿಕಾಂಬಾ ದೇವಿಯ, ಶಿರಶಿಯಿಂದ ಪೂರ್ವಕ್ಕೆ ೨೧ ಕಿ ಮಿ ದೂರದಲ್ಲದೆ. ಊರಿನ ದಕ್ಷಿಣ, ಪಶ್ಚಿಮ. ಮತ್ತು ಉತ್ತರಕ್ಕೆ ಅರಣ್ಯದಿಂದ ಆವರಿಸಿದೆ. ಸರಕಾರ ಗುರತಿಸಿದ ಐತಿಹಾಸಿಕ ಅತಿ ಹಳೆಯ ಸಾಗವಾನಿ ಮರ ಇರುವುದು ಇಲ್ಲಿಯೇ.ಸುತ್ತು  ಮುತ್ತಲಿನ ಹಳ್ಳಿಗಳೆಂದರೆ  ಮಾಳಂಜಿ,  ಕೊರ್ಲಕಟ್ಟಾ,ಹೆಬ್ಬತ್ತಿ,,ಮಧುರವಳ್ಳಿ,ಹಾಗೂ ಈ ಭಾಗದಲ್ಲಿ ದೊಡ್ಡ ಕೆರೆಯನ್ನು ಹೊಂದಿರುವ ಗುಡ್ನಾಪುರ.
              ಈ ಗ್ರಾಮದ ವಿಶೇಷವೆಂದರೆ, ಬಿದ್ದ ಮಳೆ ನೀರೆಲ್ಲ ಕೇವಲ ಪೂರ್ವಾಭಿಮುಖವಾಗಿ ಹರಿದು ಅಂಡಗಿ ಹಳ್ಳದ ಮೂಲಕ ವರದಾ ನದಿಯನ್ನು ಸೇರುತ್ತದೆ. ಪೂರ್ವದ ಗಡಿ ಅಂಡಗಿ ಹಳ್ಳವೇ ಆಗಿದ್ದು ಅದರಾಚೆ ಶಿವಮೊಗ್ಗ ಜಿಲ್ಲೆಯ ಹಳ್ಳಗಳಿರುತ್ತವೆ. ಉಳಿದಂತೆ ದಕ್ಷಿಣಕ್ಕೆ ಕಲಕರಡಿ, ಪಶ್ಚಿಮಕ್ಕೆ ಮರಗುಂಡಿ, ಉತ್ತರಕ್ಕೆ ಉಪಗ್ರಾಮ ಕ್ಯಾದಗಿಕೊಪ್ಪ ಗ್ರಾಮ ಇದೆ.ಇಲ್ಲಿಯೇ ಇರುವುದು "ಅವಧೂತ ಸದ್ಗುರು, ಮಹಾನ್ ಚೇತನ ಶ್ರೀ ಶ್ರೀ ಶ್ರೀ ಕಲ್ಲೇಶ್ವರಸ್ವಾಮೀಜಿವರ ಜಾಗೃತ ಸಮಾಧಿ ಹಾಗೂ ಗುರುಮಠ.
"ಅಂಡಗಿ " ಇತಿಹಾಸ
                ಈ ಗ್ರಾಮದ ಸ್ಥಾಪಕರಾಗಿ, ನಾಮಧಾರಿ ಸಮಾಜದ. ದೊಡ್ಡದೀವರ ಕುಟುಂಬ ಮತ್ತು ಲಿಂಗಾಯತ ಸಮಾಜದ ದೊಡ್ಡ ಗೌಡರ ಕುಟುಂಬದವರು ಗುರುತಿಸಲ್ಪಡುತ್ತಾರೆ.ಆಧಾರವಾಗಿ ಊರಿನ ಅಗಸೆಯಲ್ಲಿ ರಾಮಂತ ದೇವರು ಮತ್ತು ಈಶ್ವರ ದೇವರ ಗುಡಿಗಳಿವೆ ಹಾಗೂ ಊರ ಒಳಿತಿಗಾಗಿ ಪ್ರಾಣಾರ್ಪಣೆ ಮಾಡಿದ ಕೊಮಾರಪ್ಪನ ಗುಡಿಯೂ ಇದ್ದು  ,ನಂತರದಲ್ಲಿ ಊರ ಮಧ್ಯದಲ್ಲಿ ಬಸವಣ್ಣನ ಗುಡಿ ಸ್ಥಾಪಿಸಲ್ಪಟ್ಟಿದೆ.
              
               ಅಂಡಗಿ ಗ್ರಾಮದ ಜನಸಂಖ್ಯೆ ೧೧೬೦+ಉಪಗ್ರಾಮ ೫೫ ಒಟ್ಟು ೧೨೧೫,ಇದ್ದು ೨೭೫ ಕುಟುಂಬಗಳು ಒಳಗೊಂಡಿವೆ.  ಹಿಂದೂ  ಧರ್ಮದ ನಾಮಧಾರಿ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಯ ಜನರಿದ್ದು, ಸಾಕಷ್ಟು ಸಂಖ್ಯೆಯ ಮುಸ್ಲಿಂ ಕುಟುಂಬಗಳೂ  ಇವೆ.ಊರಿನ ಎಲ್ಲಾ ಜನಾಂಗದ ಜನರು ಸಹೋದರ ಭಾವನೆಯಿಂದ ಪರಸ್ಪರ ಸಹಕಾರದೊಂದಿಗೆ ಬಾಳುತ್ತಿದ್ದಾರೆ. ಮೂಲ ಗ್ರಾಮದ ಮೂರು  ಗುಡಿಗಳಲ್ಲದೆ,ವಿಸ್ತರಣಾಭಾಗದಲ್ಲಿ ಮಾರುತಿ, ಮಾರಿಕಾಂಬಾ ದೇವಿಯ ಗುಡಿಗಳಿದ್ದು, ,ಎರಡು  ಮಸೀದಿಗಳಿವೆ. ಎಲ್ಲಾ ಧಾರ್ಮಿಕ ಉತ್ಸವಗಳನ್ನು ಪರಸ್ಪರ ಸಾಮರಸ್ಯದಿಂದ ಒಟ್ಟಾಗಿ  ಆಚರಿಸುತ್ತಾರೆ .
             ಗ್ರಾಮದ ಒಟ್ಟೂ  ಭೂಮಿ  ೫೧೦.೦೦ಹೆಕ್ಟರ , ಖುಷ್ಕಿ ೨೩೮. ಹೆಕ್ಟೇರ್,  ತರಿ ೧೨೪ಹೆಕ್ಟೇರ್,  ಅರಣ್ಯ ೧೮೪ ಹೆಕ್ಟೇರು, ಕೆರೆ ಕಟ್ಟೆ೧೦ ಹೆಕ್ಟೇರು ,ಇತರೆ ೬೦ ಹೆಕ್ಟೇರ್ ಇದ್ದು ಒಟ್ಟೂ  ಬೆಳೆಯ ಕ್ಷೇತ್ರ ೨೯೦.೦೦. ಹೆಕ್ಟೇರ್ ಇದೆ.  ಇಲ್ಲಿ  ಭತ್ತ ಪ್ರಮುಖ ಬೆಳೆಯಾಗಿದ್ದು ಬಾಳೆ, ಅಡಿಕೆ, ಅನಾನಸ್ಸ, ಶುಂಠಿ ಹಾಗೂ ಗೋವಿನಜೋಳ ಸಹಬೆಳೆಗಳಾಗಿವೆ .ಸ್ವಲ್ಪ. ಪ್ರಮಾಣದಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ.ಗ್ರಾಮದಲ್ಲಿ ಅನುಭವಿ,ಮುಂದುವರಿದ ಕೃಷಿಕರಿದ್ದು,ಕೃಷಿ ಆದಾಯದಿಂದಲೆ ಸ್ಕೂಟರ್,  ಟ್ರಾಕ್ಟರ್, ಟಿಲ್ಲರ್, ಕಾರು ಹಾಗೂ  ಜೀಪಗಳನ್ನು ಹೊಂದಿದ ರೈತರಿದ್ದಾರೆ. ಅಲ್ಲದೇ ಒಂದು ಅಕ್ಕಿಯ ಗಿರಣಿ ,ಮೂರು ಹಿಟ್ಟಿನ ಗಿರಣಿಗಳು ಇವೆ.
   ಸಾಕ್ಷರತೆ.
                   ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ  ೧೯೩೮ ರಲ್ಲಿಯೇ ಇಲ್ಲಿ ಸರಕಾರದ ಕನ್ನಡ ಶಾಲೆ ಸ್ಥಾಪನೆಯಾಗಿದ್ದು ಊರಿನ ಹಿರಿಮೆಗೆ ಸಾಕ್ಷಿ.ಆವರೆಗೆ ಉಳ್ಳವರ ಮಕ್ಕಳು ಮಾತ್ರ ಅಯ್ನರ ಮಠದಲ್ಲಿ ಮರಳಿನಲ್ಲಿ ಅಕ್ಷರ ಕಲಿಯುತ್ತಿದ್ದರಂತೆ. ನಂತರದಲ್ಲಿ ಊರಿನ ಗಾಂಧೀವಾದಿ ಶಿವಪ್ಪ ಮಲ್ಲಪ್ಪ ಗೌಡರ ಮುಂದಾಳತ್ವದಲ್ಲಿ  ಕೆರಿಯಪ್ಪ ನಾಯ್ಕ ದೊಡ್ಡದೀವರ್, ಹೊಳಿಯಪ್ಪ ಗೌಡ್ ಮತ್ತು ಬಸಪ್ಪ ಸೂರಣಗಿ ಮುಂತಾದವರು ಸಮೀತಿಯೊಂದಿಗೆ ೧೯೬೨ ರಲ್ಲಿ ಸ್ಥಳದಾನಿ ಬಸವಲಿಂಗಪ್ಪ ಗೌಡರ ಸ್ಥಳದಲ್ಲಿ ಸರಕಾರಿ ಕಟ್ಟಡದಲ್ಲಿ ಶಾಲೆ ಪ್ರಾರಂಬಗೊಂಡಿತು. ಈ.ಪ್ರಾಥಮಿಕ ಶಾಲೆ , ರಾಜ್ಯ ಹೆದ್ದಾರಿ ೧೩೭ ರಲ್ಲಿ ಊರಿನ ದಕ್ಷಿಣದಲ್ಲಿದ್ದರೆ, ಉತ್ತರದಲ್ಲಿ ಚಿದಾನಂದ ನಾಯ್ಕ ಮಾಳಂಜಿ ಯವರು ಸ್ಥಾಪಿಸಿದ ಪ್ರೌಢಶಾಲೆ ಇದೆ.ಇದಕ್ಕೆ ಖಾದರ ಸಾಬ ಹಾನಗಲ್ ರವರು ಸ್ಥಳಧಾನ ಮಾಡಿರುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬನವಾಸಿ, ಶಿರಸಿ, ಇತರೆ ನಗರಗಳನ್ನು ಅವಲಂಬಿಸಬೇಕಾಗುತ್ತದೆ.
               ಗ್ರಾಮಪಂಚಾಯಿತಿ ಕೇಂದ್ರ ಸ್ಥಳ ಅಂಡಗಿಯೇ ಆಗಿದ್ದು, , ಸರಕಾರಿ ವಾಚನಾಲಯ ಇದ್ದು,,ಸಹಕಾರಿ ಸಂಘ ಹಾಗೂ ಹಾಲು ಸಂಗ್ರಹ ಕೇಂದ್ರಗಳು ಇಲ್ಲಿವೆ. ಧರ್ಮಸ್ಥಳ ಗ್ರಾಮಾಭಿವೃಧ್ದಿ ಸೇವಾಕೇಂದ್ರಗಳು ಇಲ್ಲಿವೆ.
           ....   ಉತ್ಸವಗಳು ...
                ಗ್ರಾಮ ದೇವಸ್ಥಾನದಲ್ಲಿ ಬಸವ ಜಯಂತಿಯಂದು ಅದ್ದೂರಿ ಉತ್ಸವದೊಂದಿಗೆ ಸಾರ್ವಜನಿಕ ದಾಸೋಹ ನಡೆಯುತ್ತದೆ. ವಿಜಯದಶಮಿಯಂದು ಪಲ್ಲಕ್ಕಿಯಲ್ಲಿ ದೇವರ ಬನ್ನಿಮೆರವಣಿಗೆ,ಆರಿದ್ರಾಮಳೆಯಲ್ಲಿ ಮಾಂಸಹಾರಿಗಳ ಭಾರೀ ಊಟದ ಹಬ್ಬ ಹಾಗೂ ಮುಸ್ಲಿಂ ಬಂಧುಗಳ ಮೊಹರಂ ಮೆರವಣಿಗೆ ಇತ್ಯಾದಿಗಳು ಬಹಳೇ ಸಂಭ್ರಮದಿಂದ ಆಚರಿಸಲ್ಪಡುತ್ತವೆ. ಮತ್ತು  ಶ್ರೀ  ಶ್ರೀ ಶ್ರೀ ಸದ್ಗುರು ಕಲ್ಲೇಶ್ವರಸ್ವಾಮೀಜಿವರ ಮಠದಲ್ಲಿ ಪ್ರತಿ ಅಮವಾಸೆ ಯಂದು ನಡೆಯುವ ಅಭಿಷೇಕ, ದಾಸೋಹ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಪ್ರತಿ ವರ್ಷ, ಮಾಘ ಬಹುಳ ನವಮಿಯಂದು ಆಚರಿಸುವ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ರಾಜ್ಯದ, ಹೊರರಾಜ್ಯದಿಂದ ವಿವಿಧ ಮಠಾಧೀಶರು, ಸಂತರು,ಭಕ್ತರು ಸಮಾವೇಶಗೊಳ್ಳುತ್ತಾರೆ,
          ಸಂಚಾರ ವ್ಯವಸ್ಥೆಯಾಗಿ ಶಿರಶಿಯಿಂದ, ಬನವಾಸಿ, ಸೊರಬದಿಂದ,ಶಿವಮೊಗ್ಗದಿಂದ ಹಾನಗಲ್ ಹಾಗೂ ಜಡೆ ಗಳಿಂದ ಬಸ್,ಟೆಂಪೊ ಹಾಗೂ ಟ್ಯಾಕ್ಸಿ ವ್ಯವಸ್ಥೆಯಿದೆ.
       ಬನವಾಸಿಯಲ್ಲಿ  ನಾಡಕಚೇರಿ,ಪೊಲೀಸ್ ಠಾಣೆ ಬ್ಯಾಂಕುಗಳು, ಇತರೇ ಸರಕಾರಿ ಕಚೇರಿಗಳಿದ್ದು ವ್ಯವಹಾರಕ್ಕೆ ಪೂರಕವಾಗಿವೆ, ಉಪ ಅಂಚೆಕಚೇರಿ ಎಕ್ಕಂಬಿ ಆಗಿದ್ದು ಕೋಡ್ ೫೮೧೩೫೮ ಇದೆ.
                    
                                         ಪುಟ್ಟಪ್ಪ. ಕೆ ನಾಯ್ಕ
                                  ಗ್ರಾಮ,  ಅಂಡಗಿ..  ತಾಲೂಕ, ಶಿರಸಿ
                                   ಜಿಲ್ಲೆ,,,ಉತ್ತರ ಕನ್ನಡ..  ಕರ್ನಾಟಕ
                                       ಪೋನ್....೯೭೩೧೯೬೦೧೪೦