ಸದಸ್ಯ:Puneeth236

ವಿಕಿಪೀಡಿಯ ಇಂದ
Jump to navigation Jump to search
                       ಕವಿರಾಜಮಾರ್ಗ

1. ಲೇಖಕ: ಶ್ರೀವಿಜಯ

2. ಕಾಲ: ಒಂಬತ್ತನೆಯ ಶತಮಾನ

3. ವಸ್ತು: ಕಾವ್ಯಮೀಮಾಂಸೆ, ಛಂದಸ್ಸು, ವ್ಯಾಕರಣ

4. ಕಿರು ಪರಿಚಯ: ಕವಿರಾಜಮಾರ್ಗವು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿ. ಅದು ಕಾವ್ಯಮೀಮಾಂಸೆ, ಛಂಧಸ್ಸು, ವ್ಯಾಕರಣ ಮುಂತಾದ ವಿಶಯಗಳನ್ನು ಒಳಗೊಂಡ ಸಾಹಿತ್ಯ ತತ್ವಕ್ಕೆ ಸಂಬಂಧಿಸಿದ ಬರವಣಿಗೆಯೆನ್ನುವುದು ಕುತೂಹಲಕರವಾದ ಸಂಗತಿ. ಎದಲ್ಲದೆ ಕವಿರಾಜಮಾರ್ಗವು ಕರ್ನಾಟಕದ ನಾಡು, ನುಡಿ, ಜನ ಮತ್ತು ಸಂಸ್ಕೃತಿಗಳನ್ನು ಕುರಿತ ಸಮೃದ್ಧ ಮಾಹಿತಿಯನ್ನು ಒಳಗೊಂಡಿದೆ. ನಮ್ಮ ನಾಡಿನ ಭೌಗೋಳಿಕವಾದ ಮತ್ತು ಸಾಂಸ್ಕೃತಿಕವಾದ ಗಡಿಗೆರೆಗಳನ್ನು ಗುರುತಿಸುವ ಮೊದಲ ಪ್ರಯತ್ನವನ್ನು ಮಾಡಿದ ಪುಸ್ತಕವೂ ಕವಿರಾಜಮಾರ್ಗವೇ ಆಗಿದೆ. ಆದರೂ ಈ ಗ್ರಂಥವು ದಕ್ಷಿಣ ಭಾರತದ ಲಾಕ್ಷಣಿಕನಾದ ದಂಡಿಯ ಸಂಸ್ಕೃತ ಕೃತಿ ಕಾವ್ಯದರ್ಶವನ್ನು ಸಾಕಷ್ಟು ಅವಲಂಬಿಸಿದೆ. ಕವಿರಾಜಮಾರ್ಗವನ್ನು ಬರೆದವರು ಯಾರೆಂಬುದನ್ನು ಕುರಿತ ಚರ್ಚೆಯು ಈಗ ಶ್ರೀವಿಜಯನ ಪರವಾಗಿ ತೀರ್ಮಾನವಾಗಿದೆ. ಅವನು ಕ್ರಿ.ಶ.814-878 ರ ಅವಧಿಯಲ್ಲಿ ಆಳ್ವಿಕೆ ನಡೆಸಿ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದ ಲೇಖಕ.ಆದರೂ ಕೂಡ ಆ ಕೃತಿಯೊಳಗಿರುವ ವಿಷಯಗಳನ್ನು ಕುರಿತು ರಾಜ ಮತ್ತು ಕವಿಗಳ ನಡುವೆ ಸಹಮತವಿರುವಂತೆ ತೋರುತ್ತದೆ. ಕೃತಿಯಲ್ಲಿಯೇ ಬರುವ ನೃಪತುಂಗದೇವಾನುಮತ ಎಂಬ ಮಾತು ಇದಕ್ಕೆ ಸಾಕ್ಷಿಯಾಗಿದೆ. ಈ ಕೃತಿಯಲ್ಲಿ ಮೂರು ಪರಿಚ್ಛೇದಳಿವೆ. ಮೊದಲನೆಯ ಅಧ್ಯಾಯವು ತಿರುಳುಗನ್ನಡ ಪ್ರದೇಶ, ಕರ್ನಾಟಕದ ಗಡಿಗಳು, ಕನ್ನಡದ ಉಪಭಾಷೆಗಳು ಹಾಗೂ ಪ್ರಾಮಾಣ ಭಾಷೆಯನ್ನು ಕುರಿತಾದ ಮಾಹಿತಿಯನ್ನು ನೀಡುತ್ತದೆ. ಕವಿಯು ಕನ್ನಡಿಗರ ನಿಷ್ಪಕ್ಷಪಾತವೂ ನ್ಯಾಯಪರವೂ ಬುದ್ಧಿಶಾಲಿಯೂ ಆದ ಸ್ವಭಾವದ ಬಗ್ಗೆ ಮಾತನಾಡುತ್ತಾನೆ. ಅನಂತರ 10ನೆ ಶತಮಾನದ ಕೊನೆಯವರೆಗಿನ ಕನ್ನಡ ಸಾಹಿತ್ಯ ಪಕ್ಷಿನೋಟವನ್ನು ಕೊಡಲು ಪ್ರಯತ್ನಿಸುತ್ತಾನೆ. ಗದ್ಯ ಮತ್ತು ಪದ್ಯಗಳಲ್ಲಿ ಕೃತಿರಚನೆ ಮಾಡುತ್ತಿದ್ದ ಸಾಹಿತಿಗಳ ಪಟ್ಟಿಯನ್ನು ಕೊಡುತ್ತಾನೆ. ಆಮೇಲೆ ಕನ್ನಡ ಸಾಹಿತ್ಯದ ಕೆಲವು ವಿಶಿಷ್ಟ ಲಕ್ಷಣಗಳನ್ನು ವಿವರಿಸುತ್ತಾ ಬೆದಂಡೆ, ಚಿತ್ತಾಣ, ಒನಕೆವಾಡು, ಬಾಜನೆಗಬ್ಬ ಮುಂತಾದ ಸಾಹಿತ್ಯರೂಪಗಳ ಪರಿಚಯ ಮಾಡಿಕೊಡುತ್ತಾನೆ. ಕಾವ್ಯದಲ್ಲಿ ಇರಬಹುದಾದ ಗುಣ ದೋಷಗಳ ವಿವರಣೆಯನ್ನು ಇಲ್ಲಿಯೇ ಕೊಡಲಾಗಿದೆ. ಕವಿರಾಜಮಾರ್ಗದ ಎರಡನೆಯ ಅಧ್ಯಾಯವು ಶಬ್ದಾಲಂಕಾರಗಳ ವಿವರಣೆಗೆ ಮೀಸಲಾಗಿದೆ. ಇವು ಭಾಷೆಯ ಧ್ವನಿರಚನೆ ಮತ್ತು ಪದರಚನೆಯ ಹಂತದಲ್ಲಿ ಕೆಲಸ ಮಾಡಿ ಕಾವ್ಯಸೌಂದರ್ಯವನ್ನು ಹೆಚ್ಚಿಸುವ ಅಲಂಕಾರಗಳು. ಈ ಅಲಂಕಾರಗಳನ್ನು ಪ್ರಾಚೀನ ಕಾವ್ಯಗಳಿಂದ ಆಯ್ದು ತೆಗೆದ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಲಾಗಿದೆ. ಇಂತಹ ಪ್ರಾಚೀನತೆಯನ್ನು ನಿರ್ಧರಿಸುವ ಕೆಲಸದಲ್ಲಿ ಬಹಳ ಉಪಯುಕ್ತವಾಗಿವೆ. ಮೂರನೆಯ ಅಧ್ಯಾಯವು ಭಾಷೆಯ ಅರ್ಥದ ನೆಲೆಯಲ್ಲಿ ಸೌಂದರ್ಯವನ್ನು ಸೃಷ್ಟಿಸುವ ಅರ್ಥಾಲಂಕಾರಗಳನ್ನು ಪರಿಚಯ ಮಾಡಿಕೊಡುತ್ತದೆ. ಸಂಸ್ಕೃತ ಗ್ರಂಥಗಳ ಮೇಲೆ ಶ್ರೀವಿಜಯನಿಗಿದ್ದ ಅವಲಂಬನೆಯು, ಆ ಕಾಲದಲ್ಲಿ ಕನ್ನಡ ಸಂಸ್ಕೃತಿಯು ಎದುರಿಸುತ್ತಿದ್ದ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ನಿರ್ವಹಿಸುವುದರಲ್ಲಿ ಅವನಿಗೆ ಅಡ್ಡಿಯಾಗಿಲ್ಲ . ಶ್ರೀವಿಜಯನು ಸಂಸ್ಕೃತದಂತಹ ಅನ್ಯ ಭಾಷೆಗಳನ್ನು ಸಂಪೂರ್ಣವಾಗಿ ದೂರವಿಡಬೇಕೆನ್ನುವ ಧೋರಣೆಯನ್ನು ತಳೆಯುವದಿಲ್ಲ. ವಾಸ್ತವವಾಗಿ ದ್ರಾವಿಡ ಭಾಷೆಯಗಿದ್ದು, ಅದಕ್ಕೆ ಅನುಗುಣವಾದ ಗುಣಲಕ್ಷಣಗಳನ್ನು ಹೊಂದಿದ್ದ ಕನ್ನಡವು ಸಂಸ್ಕೃತವನ್ನು ಸ್ವೀಕರಿಸುವ ಕೆಲಸದಲ್ಲಿ ಪಡೆದುಕೊಂಡಿತು ಹಾಗೆಯೆ ತನ್ನ ಮೂಲ ನೆಲೆಗಳನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿತು. ಕಳೆದ ಎರಡು ದಶಕಗಳಲ್ಲಿ ಕವಿರಾಜಮಾರ್ಗವನ್ನು ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಕನ್ನಡದ ಸಾಹಿತ್ಯ ಪರಂಪರೆಯನ್ನು ರೂಪಿಸುವ ಕೆಲದಲ್ಲಿ ಅದು ವಹಿಸಿರುವ ಪಾತ್ರ್ವನ್ನು ಈಗ ಗೌರುತಿಸಲಾಗಿದೆ. ಶೆಲ್ಡನ್ ಪೊಲಾಕ್, ಕೆ.ವಿ.ಸುಬಣ್ಣ , ಡಿ.ಆರ್.ನಾಗರಾಜ, ಕೀರ್ತನಾಥ ಕುರ್ತಕೋಟಿ, ಕೆ.ವಿ.ನಾರಯಣ, ಷ.ಶೆಟ್ಟರ್ ಮತ್ತು ಇತರ ಅನೇಕ ವಿದ್ವಾಂಸರು ಕವಿರಾಜಮಾರ್ಗವನ್ನು ಕನ್ನಡದ ಆದ್ಯ ಕೃತಿಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಕವಿರಾಜಮಾರ್ಗದಿಂದ ನಾವು ಕಲಿಯ ಬೇಕಾದುದೇನು? ಕೆ.ವಿ.ಸುವಬ್ಬಣ್ಣನವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಹೊತ್ತಿಗೆ ಓದುತ್ತಿದ್ದಾಗ ಹಲವಾರು ಏಡುಗಳ ಹಿಂದೆ ಬರೆದಿರುವ ಈ ಕಬ್ಬ ಇಂದಿಗೂ ಹೊಂದುವಂತಹದು ಮತ್ತು ಅಲ್ಲಿ ತಿಳಿಸಿರುವ ವಿಚಾರಗಳು ಎಷ್ಟು ಮೇಲ್ಮಟ್ಟದ್ದು ವಎಂಬುದು ಅರಿವಾಯ್ತು. ಕವಿರಾಜಮಾರ್ಗದ ತುಂಬ ಹೆಸರುವಾಸಿಯಾಗಿರುವ ಸಾಲು: [ಕಾವೇರಿಯಿಂದಂ-ಆ-ಗೋದಾವರಿವರಂ-ಇರ್ದ-ನಾಡು-ಅದು-ಆ-ಕನ್ನಡದೊಳ್-ಭಾವಿಸಿದ-ಜನಪದಂ; (ಇದು)ವಸುಧಾ-ವಲಯ-ವಿಲೀನ,ವಿಶ್ದ,ವಿಶಯ-ವಿಶೇಶಂ;] ಇಲ್ಲಿ ನಾಡಿನ ಎಲ್ಲೆಯನ್ನು ಗುರುತಿಸಿ ನುಡಿಯ(ಕನ್ನಡ) ಹೆಸರನ್ನು ನಾಡಿಗೂ ಮತ್ತು ಜನಪದಕ್ಕೂ ಕೊಟ್ಟಿದ್ದಾರೆ. ಇಲ್ಲಿ 'ಭಾವಿಸಿದ' ಬದಲು 'ಭವಿಸಿದ' ಎಂದು ಬರಬೇಕಿತ್ತು ಆದರೆ ಛಂದಸ್ಸಿಗೋಸ್ಕರ ಅದನ್ನು ಮಾರ್ಪಾಡು ಮಾಡಿ ಬರೆಯಲಾಗಿದೆ ಎಂದು ಹೇಳುವವರಿದ್ದಾರೆ. ಆಗ ಹೀಗೆ ಅರಿತೈಸಬಹುದು:- --> ಕನ್ನಡವೆಂಬ ನಾಡಿನಲ್ಲಿ, ನುಡಿಯಲ್ಲಿ ಕನ್ನಡವೆಂಬ ಜನಪದವು(ಬುಡಕಟ್ಟು, ಸಂಸ್ಕೃತಿ,ನಡಾವಳಿ) ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಷವನ್ನು ದಿನವೂ ತಿಳಿಯಪಡಿಸುತ್ತಿದೆ. --> ಕನ್ನಡವೆಂಬ ನಾಡು ನುಡಿಬಲ, ಜನಪದಬಲ; ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಷತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ. ಈಗ ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ಬರೋಣ. ಅದರ ಆರನೇ ಅಧಿಕರಣ(ಮಂಡಲಯೋನಿ)ದಲ್ಲಿರುವ ರಾಜ್ಯದ ಶಕ್ತಿಗಳಾವುವು ಎಂಬುದನ್ನು ಕೌಟಿಲ್ಯ ಹೀಗೆ ಹೇಳಿದ್ದಾನೆ. [ಬಲಂಶಕ್ತಿ...ಶಕ್ತಿಸ್ತ್ರಿವಿಧಾ-ಜ್ಙಾನಬಲಂ ಮಂತ್ರಶಕ್ತಿಃ ಕೋಶದಂಡಬಲಂ ಪ್ರಭುಶಕ್ತಿಃ-ವಿಕ್ರಮಬಲಮುತ್ಸಾಹ ಶಕ್ತಿಃ] ಇಲ್ಲಿ ಅವನು ಹೇಲುವಂತೆ ರಾಜ್ಯವೆಂಬುದು ಮಂತ್ರಿ-ರಾಜ-ವೀರ ಶಕ್ತಗಳ ಕೂಟ. ಇಲ್ಲಿ ಗಮನಿಸಬೇಕಾದುದು ಕೌಟಿಲ್ಯನು ಸಾಮನ್ಯ ಜನಬಲದ ಬಗ್ಗೆ ಅಥವ ಸಂಸ್ಕೃತಿಯ ಬಗ್ಗೆ ಮಾತಡಿಲ್ಲ. ಅಂದರೆ ಇಂದಿಗೂ ಈ ಮೇಲಿನ ಸೂತ್ರ ಒಪ್ಪುತ್ತದೆ ಎಂದು ಹೇಳಲಾಗದು ಮತ್ತು ಇದು ಅಷ್ಟು ಡೆಮಕ್ರಾಟಿಕ್ ನಿಲುವು ಎಂಬುದು ಹೇಳಲಾಗುವದಿಲ್ಲ. ಈಗ ಮತ್ತೆ ಕವಿರಾಜಮಾರ್ಗಕ್ಕೆ ಮರಳಿ ಹೋಗೋಣ. ಕವಿರಾಜಮಾರ್ಗವು ಒಂದು ರಾಜ್ಯ/ನಾಡು ಕಟ್ಟಲು ತನ್ನದೇ(ತನಗೆ ಗೊತ್ತೋ/ಗೊತ್ತಿಲ್ಲದೆಯೋ) ಒಂದು ಸೂತ್ರವನ್ನು ಕಂಡುಕೊಂಡಿದೆ. ಇಲ್ಲಿ ಕವಿರಾಜಮಾರ್ಗ ಸಕ್ಕದದ ದಟ್ಟವಾದ ನೆರಳಿದ್ದ ಹೊತ್ತಿನಲ್ಲೂ ತನ್ನ ಕನ್ನಡತನದ ಮನಸ್ಸನ್ನು ಚೆನ್ನಾಗಿ ಬಳಸಿಕೊಂಡಿದೆ ಎಂದು ಅರಿವಾದಾಗ ತುಂಬ ನಲಿವಾಗುತ್ತದೆ. ಕನ್ನಡವೆಂಬ ನಾಡಿರುವುದೇ (ವಿಶೇಷತೆಯನ್ನು ಪಡೆದಿರುವುದೇ)ಕನ್ನಡವೆಂಬ ನುಡಿಯಿಂದ, ಕನ್ನಡವೆಂಬ ಜನರಿಂದ/ಸಂಸ್ಕೃತಿಯಿಂದ ಮತ್ತು ಕನ್ನಡದ ಅರಸನಾದ ಅಮೋಘವರ್ಷನ ಮುಂದಾಳುತನದ ಬಲದಿಂದ ಹೀಗೆ ನುಡಿ-ಜನ-ಮುಂದಾಳುತನ, ಈ ಮೂರು ಬಲಗಳ ಕೂಟವೇ ಕನ್ನಡವೆಂಬ ನಾಡು. ಇಲ್ಲಿ ಅರಸಬಲ/ ಮುಂದಾಳುತನ ಯಾಕೆ ಬಂದಿದೆ ಅಂದರ್ ಸಿರಿವಿಜಯನ ಕವಿರಾಜಮಾರ್ಗದಲ್ಲಿ ಎಲ್ಲದಕ್ಕೂ ಮೊದಲು(ದೇವರುಗಳಿಗೂ ಮೊದಲು) ಅಮೋಘವರ್ಷನನ್ನು ನೆನೆದಿದ್ದಾನೆ(ಸ್ತುತಿಸಿದಾನೆ). ಇಲ್ಲಿ ಗಮನಿಸಬೇಕಾದ ಅಂಶಗಳೇನೆಂದರೆ: --> ಅಮೋಘವರ್ಷನಿಗೂ ಮೊದಲು ಅವನ ತಂದೆ ಗೋವಿಂದರಸ ನಾಡಿನ ಗುಡಿಯನ್ನು ಬಡಗಿನ ಗಂಗಾಹೊಳೆಯವರೆಗೂ ತೆಗೆದುಕೊಂಡುಹೋಗಿದ್ದನಂತೆ. ಆದರೆ ಅಮೋಘವರ್ಷನ ಕಾಲದಲ್ಲಿ ಅವೆಲ್ಲಾ ದಂಗೆಯಿಂದ ಕಳೆದುಕೊಳ್ಳಬೇಕಾಯ್ತು. ಆಗ ಅಮೋಘವರ್ಷನಿಗೆ ದಿಟವಾದ ಕನ್ನಡ ನಾಡು ಎಲ್ಲಿಂದ ಎಲ್ಲಿಯವರೆಗೆ ಇದೆ, ಬರೀ ಅಲ್ಲಿಯವರೆಗೆ ಆಡಳಿತ ನಡೆಸೋಣವೆಂದು ತೀರ್ಮಾನಿಸಿರಬೇಕು. ಆಗ ಅವನಿಗೆ ಈ ಮೇಲಿನ ಸೂತ್ರದ ಅರಿವಾಗಿರಬೇಕು ಎಂದು ಎಣಿಸಬಹುದು. --> ಕವಿರಾಜಮಾರ್ಗವು ಅರ್ಥಶಾಸ್ತ್ರಕ್ಕಿಂತ ಹೆಚ್ಚು ಡೆಮಾಕ್ರಾಟಿಕ್ ನಿಲುವನ್ನು ಹೊಂದಿದೆ ಎಂದು ಹೇಳಬಹುದು. ಜನಬಲವಿಲ್ಲದೆ, ನುಡಿಬಲವಿಲ್ಲದೆ ನಾಡ ಕಟ್ಟಲು ಆಗುವುದಿಲ್ಲ ಎಂಬ ನಿಲುವು ದಿಟವಾಗಲು ಮೆಚ್ಚತಕ್ಕದು ಮತ್ತು ಇಂದಿಗೂ ಹೊಂದುವಂತಹದು

Indian School.pngThis user is a member of WikiProject Education in India