ಸದಸ್ಯ:Pruthviraj ujire/ನನೀ1Dನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸನ್ಯಾಸಿ ಗುಳಿಗ ದೈವ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮಖ ದೈವಗಳಲ್ಲಿ ಒಂದಾದ ಸನ್ಯಸಿ ಗುಳಿಗ ದೈವವು ಹಲವು ವಿಶೇಷತೆಗಳನ್ನು ಹೊಂದಿದೆ. ಬೆಳ್ತಂಗಡಿ ತಾಲೂಕಿನ ಗುರುವಾಯಣಕೆರೆ ಯ ಪಣೆಜಾಲು ಎಂಬ ಪ್ರದೇಶದಲ್ಲಿ ಸನ್ಯಾಸಿ ಗುಳಿಗ ದೈವದ ಗುಡಿ ಇದೆ. ಈ ದೈವದ ಗುಡಿ ಹಲವು ವರ್ಷಗಳ ಹಿಂದೆ ಪ್ರತಿಷ್ಟಾಪನೆಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಂದ ಜನರು ಇಲ್ಲಿಗೆ ಬಂದು ಬೇಟಿ ನೀಡಿ ಹರಕೆಗಳನ್ನು ಹಾಕುತ್ತಾರೆ ಇಲ್ಲಿಗೆ ಬರುವ ಜನರ ನಂಬಿಕೆ ಏನೆಂದರೆ ಇಲ್ಲಿ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಬೇಗ ಪರಿಹರ ಆಗುತ್ತದೆ ಎಂಬ ನಂಬಿಕೆ ಹಾಗೆ ಇಷ್ಟರವರೆಗೆ ಇಲ್ಲಿಗೆ ಬಂದ ಭಕ್ತರು ಯಾವುದೇ ರಿತಿಯ ಒಳ್ಲೆ ಉದ್ದೇಷವನ್ನು ಇಟ್ಟುಕೊಂಡು ಬಂದು ಪ್ರಾರ್ಥನೆ ಮಡಿದ ಯಾರಿಗೂ ಏನೂ ಮೋಸ ಆಗಲಿಲ್ಲ ಅನ್ನುವ ನಂಬಿಕೆ ಇದೆ.ಇಲ್ಲಿಗೆ ಬರುವ ಭಕ್ತರು ಒಂದು ಸೀಯಾಳ ಮತು ದೈವಕ್ಕೆ ಇಷ್ಟಟವಾದ ಯಾವದೇ ವಸ್ತುವನ್ನು ತೆಗೆದುಕೊಂಡು ಬಂದರೂ ಸಾಕು ದೈವ ಸಂತುಷ್ಟನಾಗುತ್ತಾನೆ ಅನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಹಿಂದೆ ಇಲ್ಲಿ ದೈವ ಇರುವ ಸುಳಿವು ಈ ಊರಿನಲ್ಲಿ ವಸವಾಗುವ ಜನರಿಗೆ ಗೊತ್ತಿರಲಿಲ್ಲ ಇಲ್ಲಿನ ಊರಿನ ಜನರಿಗೆ ಹಲವು ಬಗೆಯ ಕಷ್ಷಟಗಳು ಎದುರಾಗುತ್ತಿದ್ದವು ಇದಕ್ಕೆಲ್ಲಾ ಪರಿಹರ ಹುಡುಕುವ ದೃಷ್ಟಿಯಿಂದ ಊರಿನ ಎಲ್ಲಾ ಜನರು ಹಾಗೂ ಮುಖಂಡರು ಒಂದು ನಿರ್ಣಯಕ್ಕೆ ಬಂದು ದೇವಸ್ಥಾನದಲ್ಲಿ ಪ್ರಶ್ನೆ ಹಾಕಿ ನೋಡಿದಾಗ ಇದಕ್ಕೆ ಉತ್ತರ ದೊರಕಿತು ಇದಕ್ಕೆ ಉತ್ತರ ಏನೆಂದರೆ ಇಲ್ಲಿ ಒಂದು ದೈವದ ಗುಡಿಯಾಗಬೇಕೆಂದು ಆಯಿತು ಇದಾದ ಸ್ವಲ್ಪ ಸಮಯದ ನಂತರ ಇಲ್ಲಿ ದೈವದ ಗುಡಿಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ನಂತರ ಭೂತಕೋಲ ಪ್ರಾರಂಬವಾದ ವರ್ಷ ಇಲ್ಲಿ ಅಷ್ಟೋಂದು ಜನರು ಇಲ್ಲಗೆ ಬರುತ್ತಿರಲಿಲ್ಲ ಇದಕ್ಕೆ ಕಾರಣ ಈ ಸ್ಥಳ ಯಾರಿಗೂ ಅಷ್ಟೊಂದು ಪರಿಚಯ ಇರಲಿಲ್ಲ ಸ್ವಲ್ಪ ಸಮಯದ ನಂತರ ಈ ಸ್ಥಳದ ಬಗ್ಗೆ ಜನರಿಗೆ ತಿಳಿಯಲು ಪ್ರಾರಂಬವಾಯಿತು, ಹಾಗೇ ಇಲ್ಲಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಿತು ಮತ್ತು ಪ್ರತೀ ವರ್ಷ ಅದ್ದೂರಿಯಿಂದ ಇಲ್ಲಿ ಭೂತ ಕೋಲವನ್ನು ಆಚರಿಸಲಾಗುತ್ತಿದೆ ಮತ್ತು ಇಲ್ಲಿ ಇದು ಈಗ ಪ್ರತೀ ವರ್ಷವು ರೂಡಿಯಾಗಿಬಿಟ್ಟಿದೆ. ಇಲ್ಲಿನ ದೈವದ ವಿಶೇಷ ಎನೆಂದರೆ ಇದು ಉಳಿದ ದೈವಗಳಿಗೆ ಹೋಲಿಸಿದರೆ ಬಹಳ ಶಕ್ತಿಶಾಲಿ ಮತ್ತು ಹೆಸರುವಾಸಿ ದೈವ ಎನ್ನುವ ಹೆಸರು ಇದಕ್ಕೆ ಇದೆ. ಹಾಗೇ ಈ ದೈವಕ್ಕೆ ಇಷ್ಟವಾದ ಆಹಾರ ಏನೆಂದರೆ ಕೋಳಿ ಇದು ಕೋಳಿಯ ರಕ್ತವನ್ನು ಕುಡಿಯುತ್ತದೆ ಮತ್ತು ಕೋಲದ ಸಮಯದಲ್ಲಿ ಕೋಳಿ ಎಲ್ಲಿಯಾದರೂ ಸಿಗದೇ ಹೋದರೆ ಇದು ಕೋಪಗೊಂಡ ಉದಹರನೆ ಇದೆ. ಈ ದೈವಕ್ಕೆ ಸುಮರು ಪ್ರತೀ ವರ್ಷ ೧೦೦ ಕ್ಕಿಂತಲೂ ಹೆಚ್ಚು ಕೋಳಿಯನ್ನು ಅದರ ರಕ್ತ ಕುಡಿಯಲು ನೀಡಲಾಗುತ್ತದೆ ಹೆಚ್ಚು ಕೋಳಿ ದೈವಕ್ಕೆ ನೀಡಿದಲ್ಲಿ ಸಂತುಷ್ಟನಾಗುತ್ತಾನೆ ಅನ್ನುವ ನಂಬಿಕೆ ಹಾಗೇ ಪ್ರತೀ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ನಡೆದ ಭೂತ ಕೋಲದಲ್ಲಿ ಸುಮರು ೪೦೦ ಕ್ಕೂ ಹೆಚ್ಚು ಕೋಳಿಯನ್ನು ಅದರ ರಕ್ತ ಸವಿಯಲು ನೀಡಲಾಗುತ್ತದೆ ಮತ್ತು ೧೦೦೦ ಕ್ಕೂ ಹೆಚ್ಚು ಸೀಯಾಳಗಳನ್ನು ಜನರು ದೈವಕ್ಕೆ ತರುತ್ತಾರೆ ಇದನ್ನೆಲ್ಲಾ ಕೊನೆಯಲ್ಲಿ ಈ ದೈವ ಕುಡಿಯುತ್ತದೆ ಮತ್ತು ಉಳಿದದ್ದನ್ನು ಜನರಿಗೆ ಪ್ರಾಸಾದದ ರೀತಿಯಲ್ಲಿ ನೀಡಲಾಗುತ್ತದೆ ಇದನ್ನು ಕುಡಿಯುವುದರಿಂದ ಒಳ್ಲೆಯದಾಗುತ್ತದೆ ಅನ್ನುವ ವಿಶೇಷ ನಂಬಿಕೆ ಇಲ್ಲಿನ ಜನರಲ್ಲಿದೆ. ದೈವದ ವೇಷಭಷಣಗಳು, ನೃತ್ಯ ಶೈಲಿ ಹಾಗೂ ವಿಶೇಷತೆ ಈ ಸನ್ಯಾಸಿ ಗುಳಿಗ ದೈವವನ್ನು ಉಳಿದ ದೈವಗಳಿಗೆ ಹೊಲಿಸಿದಾಗ ಈ ಗುಳಿಗ ದೈವದ ವೇಷಭೂಷಣ ಪೂರ್ತಿ ಬದಲಾಗಿರುತ್ತದೆ ಮತ್ತು ಈ ದೈವಕ್ಕೆ ಕೋಲದ ಸಮಯದಲ್ಲಿ ಹೆಚ್ಚಿನ ಉಡುಗೆಗಳನ್ನು ತೋಡಿಸುವಿದಿಲ್ಲ ಮತ್ತು ಇದರ ಬಗೆ ಬಗೆಯ ಬಣ್ಣಗಳನ್ನು ಹಚ್ಚಲಾಗುತ್ತದೆ ಇದು ಆಕರ್ಷಣೀಯವಾಗಿ ಕಾಣುತ್ತದೆ. ಮತ್ತು ಇದರ ನೃತ್ಯ ಶೈಲಿ ಕೂಡ ನೋಡುಗರಿಗೆ ಹೆಚ್ಚು ಭಯವನ್ನುಂಟು ಮಾಡುತ್ತದೆ ಹಾಗೇ ಕುತೂಹಲಕಾರಿಯಾಗಿರುತ್ತದೆ ಇದು ನೃತ್ಯ ಮಾಡುವ ಸಮಯದಲ್ಲಿ ಜನರ ಮೈ ಮೇಲೆ ಬಂದು ಬೀಳುತ್ತದೆ ಜನರು ಕೂಡ ಒಮ್ಮೆಗೆ ಬೆಚ್ಚಿಬೀಳುತ್ತಾರೆ. ಉಳಿದ ಭೂತ ಕೋಲಗಳಿಗೆ ಹೋಲಿಸಿದಾಗ ಇದು ಬೇಗ ಶುರುವಾಗಿ ಬೇಗ ಮುಗಿಯುತ್ತದೆ ಸುಮಾರು ಸಂಜೆ ೬ ಗಂಟೆಗೆ ಪ್ರಾರಂಬವಾಗುವ ಈ ಭೂತ ಕೋಲ ಮದ್ಯರಾತ್ರಿ ೧೨ ಗಂಟೆ ಹೋತ್ತಿಗೆ ಮಗಿಯುತ್ತದೆ. ಭೂತ ಕೋಲದ ಕೊನೆಯಲ್ಲಿ ಊರಿನ ಜನರು ದೈವದ ಬಳಿ ತಮ್ಮ ಕಷ್ಟಗಳನ್ನು ಹೆಳಿಕೊಂಡು ಹಲವು ಪ್ರಶ್ನೆಗಲನ್ನು ಕೇಳುತ್ತಾರೆ. ಇದಕ್ಕೆ ದೈವವು ಸರಿಯಾಗಿ ಸ್ಪಂದನೆ ನೀಡಿ ಜನರ ಮನದಲ್ಲಿರುವ ಗೊಂದಲವನ್ನು ದುರಮಾಡುತ್ತದೆ.