ಸದಸ್ಯ:Priyanka aradhya/WEP 2018-19 dec
ಸಂಗೀತದ ಇತಿಹಾಸ
[ಬದಲಾಯಿಸಿ]ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ಕರ್ನಾಟಕ ಸಂಗೀತವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದು ಸರಿಯಷ್ಟೇ. ಆದರೆ ಈ ಸಂಗೀತ ಪ್ರಕಾರದಲ್ಲಿ ಆಸಕ್ತಿಯುಳ್ಳ ಕೇಳುಗರು ಒಂದಂಶವನ್ನು ತಪ್ಪದೇ ಗಮನಿಸುತ್ತಾರೆ. ಕರ್ನಾಟಕ ಸಂಗೀತವು ಕರ್ನಾಟಕವೊಂದೇ ಅಲ್ಲದೆ, ಬೇರೆ ರಾಜ್ಯಗಳಲ್ಲೂ ರೂಢಿಯಲ್ಲಿದೆ, ಇಲ್ಲಿಗಿಂತ ಹೆಚ್ಚಾಗಿದೆ. ಸುಪ್ರಸಿದ್ಧರೆನಿಸಿದ ಬಹಳಷ್ಟು ಕರ್ನಾಟಕ ಸಂಗೀತಗಾರರು ತಮಿಳರು ಅಥವ ತೆಲುಗರು. ತ್ಯಾಗರಾಜರೇ ಮೊದಲಾದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳನ್ನೊಳಗೊಂಡು ಬಹಳಷ್ಟು ಜನ ವಾಗ್ಗೇಯಕಾರರು ಕನ್ನಡಿಗರಲ್ಲ. ಇನ್ನು ಕನ್ನಡದವರೇ ಆದ ಮೈಸೂರು ವಾಸುದೇವಾಚಾರ್ಯರಂಥವರೂ ಕನ್ನಡದಲ್ಲಿ ಬರೆದಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಒಂದೋ ಎರಡೋ. ಹೀಗಾಗಿ ಹರಿದಾಸರ ರಚನೆಗಳನ್ನು ಬಿಟ್ಟರೆ, ಇಂದು ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಾಗಿರುವ ಅತಿ ಹೆಚ್ಚು "ಕೃತಿ" ಎಂಬ ಪ್ರಕಾರದ ರಚನೆಗಳು ತೆಲುಗು, ಸಂಸ್ಕೃತ, ಮತ್ತು ಕೆಲಮಟ್ಟಿಗೆ ತಮಿಳು ಭಾಷೆಯವು. ಹರಿದಾಸರ ಹೆಚ್ಚಿನ ರಚನೆಗಳ ಮೂಲ ಸಂಗೀತರೂಪವೂ ಉಳಿಯದೇ ಹೋಗಿರುವುದರಿಂದ, ನಾವು ಕೇಳುವ ಹರಿದಾಸ 'ಕೃತಿ'ಗಳಲ್ಲಿ ಹೆಚ್ಚಿನವು ಸಂಗೀತದ ಮಟ್ಟಿಗೆ ಹೇಳುವುದಾದರೆ, ತ್ಯಾಗರಾಜಾದಿಗಳ ನಂತರದವು. ಅಂದಮೇಲೆ ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ? ಎಂಬ ಪ್ರಶ್ನೆಗಳು ಏಳುವುದು ಸಹಜವೇ.
ಆದರೆ ಮೇಲ್ನೋಟಕ್ಕೆ ಕನ್ನಡ ಹೆಚ್ಚಾಗಿ ಕಾಣದಿದ್ದರೂ, ಸ್ವಲ್ಪ ಒಳಹೊಕ್ಕು ನೋಡಿದಾಗ, ಸಂಗೀತದಲ್ಲಿ ಕನ್ನಡವು ಹಾಸುಹೊಕ್ಕಾಗಿರುವುದು ಕಂಡು ಬರುತ್ತದೆ.
ಭಾರತೀಯ ಸಂಗೀತವು ಸುಮಾರು 12-13ನೇ ಶತಮಾನಗಳ ತನಕ ಏಕರೂಪವಾಗಿತ್ತೆಂಬುದು, ನಂತರ ಮಹಮ್ಮದೀಯರ ಆಕ್ರಮಣದೊಡನೆ, ಅವರೊಡನೆ ಬಂದ ಪರ್ಶಿಯನ್ ಹಾಗೂ ಇತರ ಮಧ್ಯಪೂರ್ವ ದೇಶಗಳ ಸಂಗೀತದ ಪ್ರಭಾವದಿಂದ ಎರಡು ಕವಲಾಯಿತೆಂಬುದು ಸುಸ್ಪಷ್ಟ. ಇದನ್ನು ಸಂಗೀತ ಶಾಸ್ತ್ರ ಗ್ರಂಥಗಳ ಹಿನ್ನೆಲೆಯಿಂದ ಗುರುತಿಸಬಹುದು. ದಕ್ಷಿಣದ ಕವಲಿಗೆ ಕರ್ನಾಟಕದ, ಕನ್ನಡಿಗರ ಕೊಡುಗೆ ಮಹತ್ವದ್ದು.
ರಾಗಗಳ ಲಕ್ಷಣಗಳು: ಮಾಯಮಾಳವಗೌಳ- ೧೫ನೆ ಮೆಳಕರ್ತ ೩ನೆ ಅಗ್ನಿ [https://kn.wikipedia.org/s/ay9 ರಾಗ .ಮಾಳವಗೌಳ ಎಂಬ ಹೆಸರಿನಿಂದ ಪ್ರಚಾರದಲ್ಲಿದ್ದ ಈ ರಾಗಕ್ಕೆ ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ ಮಾಯಾ ಎಂಬ ಮುಂಪ್ರತ್ಯಯವನ್ನು ಸೇರಿಸಲಾಗಿದೆ. ಅತ್ಯಂತ ಪ್ರಾಚೀನ ರಾಗಗಳಲ್ಲಿ ಒಂದು. ಪ್ರಸಿದ್ಧ ಕೃತಿಗಳು: ತ್ಯಾಗರಾಜರ ಮೇರುಸಮಾನ ಮತ್ತು ತುಳಸಿದಳಮುಲಚೆ ಕೃತಿ. ಪೂನ್ನಯ್ಯ ಪಿಳ್ಳಯ್ಯವರ ಮಾಯತೀತ ಸ್ವರೂಪಿಣಿ.