ಸದಸ್ಯ:Priyanka aradhya/ನನ್ನ ಪ್ರಯೋಗಪುಟ
ನನ್ನ ಹೆಸರು ಪ್ರಿಯಂಕ. ನಾನು ಬೆಂಗಳೂರಿನಲ್ಲಿಯೇ ಬೆಳೆದದ್ದು. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ನಾನು ನನ್ನ ಬಗ್ಗೆ, ನನ್ನ ಇಷ್ಟಗಳು, ಸಾಧನೆಗಳು ಹಾಗೂ ನನ್ನ ಕೆಲವು ನೆನಪುಗಳನ್ನು ನಿಮ್ಮೋಂದಿಗೆ ಹಂಚಿಕೊಳ್ಳಲು ಬಯಸುತ್
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲ ೨೨ ಜೂನ್ ೧೯೯೯ ರಂದು ಜನಿಸಿದೆ. ನಾನು ನನ್ನ ತಂದೆ ತಾಯಿಯರ ಮುದ್ದಿನ ಮಗಳು. ನನಗೆ ಸಂಗೀತವೆಂದರೆ ಪಂಚಪ್ರಾಣ. ನನಗೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುವ ಆಸೆ. ನಾನು ಸಂಗೀತ ವಾಧ್ಯಗಳನ್ನೂ ಸಹ ಕಲಿಯುತ್ತಿದ್ದೇನೆ. ನಾನು ಕೆಲವು ಬಾರಿ ಸಂಗೀತದ ಪ್ರಪಂಚದಲ್ಲಿ ತೇಲಿ ಹೋಗುತ್ತೇನೆ.
ಆಸಕ್ತಿ
[ಬದಲಾಯಿಸಿ]ಪುಸ್ತಕಗಳು ನಮ್ಮ ಜೀವನದಲ್ಲಿ ಒಂದು ಮಾರ್ಗದರ್ಶನ. " ದೇಶ ಸುತ್ತು ಕೋಶ ಓದು " ಎಂಬ ಗಾದೇಯೆ ಇದೆ. ನನ್ನ ಪಿ.ಯು.ದಿನಗಳಲ್ಲಿ ನಮ್ಮ ಇತಿಹಾಸದ ಶಿಕ್ಷಕರೊಬ್ಬರು ನನಗೆ ಎ.ಆರ್. ಮಣಿಕಾಂತ್ ರವರ " ಅಪ್ಪ ಅಂದ್ರೆ ಆಕಾಶ" ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಆ ಪುಸ್ತಕದಲ್ಲಿ ಎ. ಆರ್. ಮಣಿಕಾಂತ್ ರವರು ನೈಜ್ಯ ಕಥೆಗಳನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ. ನಮ್ಮ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ನಾವು ಈ ಪುಸ್ತಕದಿಂದ ಬಹಳಷ್ಟು ತಿಳಿದುಕೊಳ್ಳಬಹುದು.
ಪ್ರವಾಸ
[ಬದಲಾಯಿಸಿ]ನನಗೆ ಪ್ರವಾಸತಾಣಗಳಿಗೆ ಬೇಟಿ ಕೊಡಲು ಬಹಳ ಇಷ್ಟ. ಅದರಲ್ಲೂ ವಿದೇಶಕ್ಕೆ ಹಾರಿ ಅವರ ಜೀವನ ಶೈಲಿ, ಸಂಸ್ಕೃತಿ ಹಾಗು ಇತಿಹಾಸವನ್ನು ಯಿಳಿದುಕೊಳ್ಳುವ ಆಸೆ. ಒಂದು ವರ್ಷದ ಹಿಂದೆ ನಾನು ಮಲೇಷಿಯಾ ಹಾಗು ಸಿಂಗಾಪುರಕ್ಕೆ ಭೇಟಿ ನೀಡಿದ್ದೆ. ಬಹಳ ಸ್ಪಚ್ಛವಾದ ದೇಶಗಳು. ಅಲ್ಲಿ ಸಮಯಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದಕ್ಕಾಗಿಯೇ ಅವರು ಬೇರೆ ದೀಶಕ್ಕಿಂತ ಎರಡು ಪಟ್ಟು ಮುಂದಿದ್ದಾರೆ. ಸಿಂಗಾಪುರಕ್ಕೆ ಒಂದು ರೋಚಕವಾದ ಇತಿಹಾಸವಿದೆ. ಅಲ್ಲಯೂ ಸಹ ನಮ್ಮ ಭಾರತೀಯರು ಅದರಲ್ಲೂ ದಕ್ಷಿಣ ಭಾರತದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಚೋಳರು ಆಳ್ವಿಕೆಯನ್ನು ನಡೆಸಿದ ದೇಶವದು. ಅವರ ಉಡುಪುಗಳನ್ನು, ತಿಂಡಿ ತಿನಿಸುಗಳು, ದೊಡ್ಡ ದೊಡ್ಡ ದೇವಾಲಯಗಳನ್ನು ನೋಡುವುದೇ ನಮ್ಮ ಕಣ್ಣುಗಳಿಗೆ ಹಬ್ಬ. ದೇವಾಲಯದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಆರಾಧಿಸುತ್ತಾರೆ. ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಈ ದೇವಾಲಯ ನಮ್ಮ ರೋಮ ರೋಮಗಳನ್ನು ಎಚ್ಚೇಬ್ಬೀಸುತ್ತದೆ.
ಸಾಧನೆ
[ಬದಲಾಯಿಸಿ]ನಮ್ಮ ಭರತದೇಶದ ರಾಜಧಾನಿಯಾದ ನವದೆಹಲಿಗೆ ಮೂರು ವರ್ಷದ ಹಿಂದೆ ಭೇಟಿ ನೀಡಿದ್ದೆ. ಅಲ್ಲಿ, ಅಕ್ಷರಧಾಮ ದೇವಾಲಯದಲ್ಲಿ ಪ್ರತಿಯೊಂದು ಮಂದಿರವು ಹಾಗು ಶಿಲೆಗಳನ್ನು ಅತೀ ನಾಜೂಕಿನಿಂದ ಕೆತ್ತಲಾಗಿದೆ. ಇವೆಲ್ಲವು ನನ್ನ ಪುಟ್ಟ ಆಸೆಗಳು, ಕನಸುಗಳು ಹಾಗು ಕೆಲ ನೆನಪುಗಳು.
ಧನ್ಯವಾದಗಳು.