ಸದಸ್ಯ:Prerana R Rao 1910368/ನನ್ನ ಪ್ರಯೋಗಪುಟ
ಜಯಾ ಪ್ರಾಣೇಶ್
[ಬದಲಾಯಿಸಿ]ಕವಯಿತ್ರಿ
[ಬದಲಾಯಿಸಿ]ತಮ್ಮ ನಿರೂಪಣಾ ತಂತ್ರದಿಂದಲೇ ಪ್ರೇಕ್ಷಕರ ಮನ ಗೆಲ್ಲುವ ಜಯಾ ಪ್ರಾಣೇಶ್ ಅವರ ಮಾತು ಮಾತಿನಲ್ಲಿಯೂ ಕಾವ್ಯವೇ ಅನುರಣಿಸುತ್ತಿರುತ್ತದೆ . ಹೇಳಬೇಕೆನ್ನುವ ತುಡಿತ ಹಸನಾದ ಬಾಳಿನ ಹಂಬಲದ ಸ್ತ್ರೀ ಸಂವೇದನೆಗಳ ಸ್ವಪ್ರಜ್ಞೆ ತುಂಬಿದ ಭಾವಕೋಶದ ಕವಯಿತ್ರಿ ಇವರು .ಇವರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮನ್ನಣೆಸಿಗಲು ಇವರ ಗಟ್ಟಿತನ ಹಾಗು ಕಾವ್ಯಗಳಲ್ಲಿರುವ ವೈವಿದ್ಯತೆಯೇ ಕಾರಣ. ಇವರ ಕಾವ್ಯಗಳು ಸಾಮಾನ್ಯವಾಗಿ ಮಧ್ಯಮವರ್ಗದ ಮಹಿಳೆಯರ ಮನದಾಳದ ಮಾತುಗಳನ್ನು ಬಿಂಬಿಸುತ್ತವೆ , ಇವರ ನಿರೂಪಣಾ ಶೈಲಿಯಲ್ಲಿ ವೀಕ್ಷಕರನ್ನುಹಿಡಿದಿಟ್ಟುಕೊಳ್ಳುವ ಅಯಸ್ಕಾಂತಿಯ ಶಕ್ತಿಯಿದೆ . ಇಷ್ಟೇಅಲ್ಲದೆ ಶಿಕ್ಷಕಿಯಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಆತ್ಮೀಯ ಸಮಾಲೋಚನೆಯಿಂದ ಅವರ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದ್ದಾರೆ
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಇವರು ೧೯೭೧ರಲ್ಲಿ ಹರಿಹರದಲ್ಲಿ ಶ್ರೀ ಎನ್ ಎಸ್ ಕೇಶವನ್ ಹಾಗು ಶ್ರೀಮತಿ ಪದ್ಮಜ ಇವರ ದ್ವಿತೀಯ ಪುತ್ರಿಯಾಗಿ ಜನಿಸಿದರು ,ಬಾಲ್ಯದಿಂದಲೂ ಓದಿನ ಗೀಳು ,ಬರೆಯುವ ಹವ್ಯಾಸ ಇವರದು .ಇವರು ತಮ್ಮಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಪೂರ್ಣಗೊಳಿಸಿದ್ದಾರೆ ಮತ್ತು ಡಿಪ್ಲೊಮೊ ಇನ್ ಸಿವಿಲ್ ಎಂಜೀನೀಯರಿಂಗ್ ನಂತರ ಕಂಪ್ಯೂಟರ್ ಸೈನ್ಸ್ ಪೂರ್ಣಗೊಳಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಎಮ್. ಎ ಮಾಡಿದ್ದಾರೆ ,ತಮ್ಮ ಹೋರಾಟದ ಬದುಕಿನಲ್ಲಿ ೨೦ನೇ ವಯಸ್ಸಿಗೆ ವಿವಾಹವಾಗಿ ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ೪೯ನೇ ವಯೋಮಾನದಲ್ಲಿ ಬಿ .ಎಸ್ಸಿ{ಪಿ ಸಿ ಎಂ }ಪದವಿಯನ್ನು ಪಡೆದಿದ್ದಾರೆ ,ಇದು ಅವರ ಅಧ್ಯಯನದ ಬಗೆಗಿನ ಅಪಾರ ಆಸಕ್ತಿಯನ್ನು ಬಿಂಬಿಸುತ್ತದೆ ,ಕಲಿಸುತ್ತಲ್ಲೇ ಕಲಿಯಬೇಕೆಂಬುವ ಮಾತಿಗೆ ಇವರು ನಿದರ್ಶನವಾಗಿದ್ದಾರೆ ,ವಿದ್ಯಾಸಕ್ತಿಗೆ ವಯಸ್ಸಿನ ಬೇಲಿಗಳಿಲ್ಲ ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ
ಉದ್ಯೋಗ
[ಬದಲಾಯಿಸಿ]ಇವರು ಮೊದಲು ಚಿತ್ರದುರ್ಗದ ವಿದ್ಯಾ ವಿಕಾಸ ಆಂಗ್ಲ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ನಂತರ ಕನ್ನಡ ಉಪನ್ಯಾಸಕಿಯಾಗಿ ಪ್ರಸ್ತುತ ಪ್ರಸಿದ್ಧ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಸಾಧನೆ
[ಬದಲಾಯಿಸಿ]ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ನಿರೂಪಣೆ ಸೇರಿದಂತೆ ಉತ್ತಮ ನಿರೂಪಕಿಯೆಂಬ ಹಿರಿಮೆ ಇದೆ,ಖಾಸಗಿ ವಾಹಿನಿಯಲ್ಲಿ ವಾರ್ತಾ ವಾಚಕಿಯಾಗಿ ಆಕಾಶವಾಣಿಯಲ್ಲಿ ನಲ್ನುಡಿ ,ಯುವತರಂಗ ,ಸಂದರ್ಶನ ,ಕಥೆ-ಕವನ ವಾಚನ ,ಗಮಕ ವ್ಯಾಖ್ಯಾನ ಪ್ರಸಾರವಾಗಿವೆ .ಇವರ ಹಲವಾರು ಕಥೆ ,ಕವನ ,ಪ್ರಬಂಧಗಳು ರಾಜ್ಯಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಿ ಬಹುಮಾನ ಪಡೆದಿವೆ. ಸಾಹಿತ್ಯ ಸಮ್ಮೇಳನಗಳ ಕವಿ ಗೋಷ್ಠಿಯಲ್ಲಿ ಅಧ್ಯಕ್ಷತೆಯ ಗೌರವ ಸಂದಿದೆ,ಹಲವಾರು ವಿಚಾರ ಸಂಕಿರಣಗಳಲ್ಲಿ ತಮ್ಮ ಉಪನ್ಯಾಸ ನೀಡಿದ್ದಾರೆ . "ಸಂಕ್ರಮಣ "ದಲ್ಲಿ ಇವರ ಹನಿಗವನ ಬಹುಮಾನಿತವಾಗಿದೆ . ಜಯಲಕ್ಷ್ಮಿ ಎಂಬ ಹೆಸರಿನಲ್ಲಿ ಇವರು ರಚಿಸುತಿದ್ದ ಕವಿತೆಗಳು ತುಷಾರ ,ಮಯೂರ,ಪತ್ರಿಕೆಗಳಲ್ಲಿ ಪ್ರಕಟವಾಗಿದೆ.ವಿವಾಹದ ನಂತರ ಜಯಪ್ರಾಣೇಶ್ ಎಂಬ ಕಾವ್ಯನಾಮದಿಂದ ಇವರು ರಚನೆಯನ್ನು ಮುಂದುವರಿಸಿದ್ದಾರೆ .ಹಂಪೆಯ ೫೦೦ನೇ ಉತ್ಸವ ಸೇರಿದಂತೆ ಹಲವೆಡೆ ಗಮಕ ವ್ಯಾಖ್ಯಾನ ನೀಡಿದ್ದಾರೆ .ಹಿರೇಮಗಳೂರು ಕಣ್ಣನ್ ಅವರ ಹರಟೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ .ಸೃಷ್ಟಿ ಮೀಡಿಯಾದಲ್ಲಿ ಇವರ ಕವನಗಳು ಸಂದರ್ಶನಗಳು ಪ್ರಸಾರವಾಗುತ್ತಿದೆ . "ಸಂಭವಮ್ "ಎಂಬ ಕಿರುಚಿತ್ರಕ್ಕೆ ಗೀತಸಾಹಿತ್ಯ ರಚನೆ ಮಾಡಿದ್ದಾರೆ . ಇವರು ಕಾವ್ಯಪ್ರೀತಿ ಉಳ್ಳವರು ,ಕನ್ನಡವನ್ನು ತಾಯಿಯಂತೆ ಪ್ರೀತಿಸುವ ಇವರ ಅಭಿಮಾನ ಪ್ರತಿ ಕವನದ ಪದಗಳಲ್ಲು ಎದ್ದು ಕಾಣುತ್ತದೆ .
ಚಿತ್ರದುರ್ಗದ ಆಕಾಶವಾಣಿಯ ಹಲವು ಪ್ರಮುಖ ಸಾಹಿತ್ಯ -ಸಂಗೀತ ಕಾರ್ಯಕ್ರಮಗಳಲ್ಲಿ ,ಶ್ರೀ ಅಂಜನಾ ನೃತ್ಯ ಕಾಲ ಕೇಂದ್ರದ ವಾರ್ಷಿಕೋತ್ಸವಗಳಲ್ಲಿ ,ಶ್ರೀ ಸದ್ಗುರು ಕಬೀರಾನಂದ ಮಠದ ಮಹಾಶಿವರಾತ್ರಿ ಉತ್ಸವಗಳಲ್ಲಿ ,ಗಮಕ ಕಲಾ ಪರಿಷತ್ ,ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ರೋಟರಿ ಕ್ಲಬ್ ,ಇನ್ನರ್ ವೀಲ್ ಕ್ಲಬ್ಇವುಗಳಲ್ಲಿ ,ಇವರು ನೆಡೆಸಿಕೊಡುವ ಹಲವಾರು ಸಾಹಿತ್ಯ -ಸಂಗೀತ ನೃತ್ಯ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮನ್ನಣೆಯನ್ನುಗಳಿಸಿದ್ದಾರೆ . ಇನ್ನು ಹಲವಡೆ ರಾಷ್ಟೀಯ ಭಾವೈಕ್ಯತಾ ದಿನಾಚರಣೆಗಳ ಜಿಲ್ಲಾ ಕಾರ್ಯಕ್ರಮಗಳಲ್ಲಿ ಅತ್ಯುತಮ ನಿರೂಪಕಿಯಾಗಿದ್ಹಾರೆಂಬ ಹಿರಿಮೆ ಇವರದಾಗಿದೆ . ಕವಿಜಯಂತೋತ್ಸವಗಳಲ್ಲಿ ,ಕನ್ನಡ ಸಾಹಿತ್ಯ ಪರಿಷತ್ ,ಜಿಲ್ಲಾ ಪ್ರೌಢ ಶಾಲಾ ಕನ್ನಡ ಭಾಷ ಭೋದಕರವೇದಿಕೆ ,ಚಿತ್ರದುರ್ಗ ಪ್ರಾಚೀನ ಕವಿ-ಕಾವ್ಯ ಚಿಂತನ ಮಾಲೆಯಲ್ಲಿ ,ಹಂಪಿಯ ೫೦೦ನೇ ಉತ್ಸವ ಸೇರಿದಂತೆ ಹಲವಾರು ಕಡೆ ಗಮಕ ವ್ಯಾಖಾನ ಮಾಡಿದ್ದಾರೆ . ಕನ್ನಡದ ಪೂಜಾರಿ ಹಿರೇಮಗಳೂರಿನ ಕಣ್ಣನ್ ಅವರೊಂದಿಗೆ ಹರಟೆ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದಾರೆ . "ಸಂಕಲನ " ಸಾಹಿತ್ಯ ಪತ್ರಿಕೆಯಲ್ಲಿ ಇವರ ವಿನೂತನ ಲೇಖನ ಬೇಂದ್ರೆಯವರ ಜೋಡಿ ಪ್ರಕಟವಾಗಿದೆ. ಜಿಲ್ಲಾ ಕ.ಸಾ.ಪ , ಸಂಸ್ಕಾರ ಭಾರತಿ ಸಹಯೋಗದಲ್ಲಿ ನೆಡೆಸಿದ "ಹುಲ್ಲೂರು ಶ್ರೀನಿವಾಸ ಜೋಯಿಸರ ಸಾಹಿತ್ಯದ ಸಂಶೋದನೆಗಳು" ಸೇರಿದಂತೆ ಹಲವೆಡೆ ಪ್ರಬಂಧ ಮಂಡನೆ ,ಉಪನ್ಯಾಸ ನೀಡಿದ್ದಾರೆ
ಪ್ರಶಸ್ತಿ ಮತ್ತು ಗೌರವಗಳು
[ಬದಲಾಯಿಸಿ]🔺ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಏರ್ಪಡಿಸಿದ್ದ ವಿಶ್ವ ಅಮ್ಮಂದಿರ ದಿನಾಚರಣೆಯ ಅಂಗವಾಗಿ ನೆಡೆದ ಪತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
🔺ಸಂಕ್ರಮಣ ಪತ್ರಿಕೆಯಲ್ಲಿ "ಹನಿಗವನ" ಬಹುಮಾನಿತವಾಗಿದೆ .
🔺ಚಿತ್ರದುರ್ಗದ ಬೃಹನ್ಮಠದವತಿಯಿಂದ ನೆಡೆದ ಶರಣಸಂಸ್ಕೃತಿ ಉತ್ಸವದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ
🔺ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೯ರ ಕವಿಗೋಷ್ಠಿಯ ಅಧ್ಯಕ್ಷತೆ
🔺ಚಿತ್ರದುರ್ಗದ ಆಕಾಶವಾಣಿಯ "ಕಥೆಮುಗಿದಿಲ್ಲ " ಸರಣಿಯಲ್ಲಿ ಪ್ರಸಾರವಾಧ ಸ್ವರಚಿತ ಕಥೆಗಾಗಿ ಸಾಹಿತ್ಯ ವೇದಿಕೆಗಳಿಂದ ಪುರಸ್ಕಾರ .
🔺ಕನ್ನಡ ಸಂಸ್ಕೃತಿ ಇಲಾಖೆ ಚಿತ್ರದುರ್ಗವತಿಯಿಂದ ನೆಡೆದ ಮಹಿಳಾ ಸಂಸ್ಕೃತಿ ಉತ್ಸವ ೨೦೧೯ರಲ್ಲಿ ಕವಿಗೋಷ್ಠಿ ಅಧ್ಯಕ್ಷತೆ .
🔺ಸುಪ್ರತೀಕ ಮಂಧಾರಾ , ತರಳಬಾಳು ಹುಗ್ಗಿ ,ಡಾ.ಬಿ ಎಲ್ ವೇಣು ಅವರ ಬದಕು ಬರಹಗಳ ಅವಲೋಕನದ ಚಿನ್ಮೂಲಾದ್ರಿಸಿರಿ ಸೇರಿದಂತೆ ಹಲವು ಸ್ಮರಣ ಸಂಚಿಕೆಗಳಲ್ಲಿ ಇವರ ಕಥೆ , ಕವನ , ಲೇಖನ ಪ್ರಕಟವಾಗಿದೆ
🔺ವಿಜಯ ಕರ್ನಾಟಕದಲ್ಲಿ ಫೇರ್ ಅಂಡ್ ಲವ್ಲೀ ಅವರ ಮಹಿಳಾ ಸಾಧಕಿಯರು ,ಸವಾಲು ಎದುರಿಸಿದ ಸ್ತ್ರೀಯರು ಎಂಬ ವಿಶೇಷ ಅಂಕಣದಲ್ಲಿ ಇವರ ಸಾಧನೆಗೆ ಗೌರವ ಲೇಖನವಿದೆ.
ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಭರವಸೆಯ ಕವಿಯತ್ರಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ . ಇವರ ಪ್ರಕಟಿತ ಕವನ ಸಂಕಲನ "ಸಂಭ್ರಮ ".ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಮೂಲಕ ಪ್ರಕಟಗೊಂಡಿದೆ. ಪ್ರಸ್ತುತ ಇವರು ಚಿತ್ರದುರ್ಗದ ಮಹೇಶ್ ಪಿ.ಯು ಕಾಲೇಜಿನಲ್ಲಿ ಸೇವೆಸಲ್ಲಿಸುತಿದ್ದಾರೆ. ಇವರು ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಇವರ ಅನೇಕ ಲೇಖನಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿವೆ.
ಉಲ್ಲ್ಲೇಖಗಳು
[ಬದಲಾಯಿಸಿ]Pranesh, J., Mrs. (2020, July 10). Talk with great poetess jaya pranesh [Personal interview].