ಸದಸ್ಯ:Preethesh Preetham/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಹಿತ ದರ್ಶಕ[ಬದಲಾಯಿಸಿ]

ಅಶ್ರಗವನ್ನು ಬಳಸಿ ಸಂಕೀರ್ಣ ಬೆಳಕಿನಿಂದ ಶುದ್ದ ರೊಹಿತವನ್ನು ಪಡೆಯಲು ಉಪಯೋಗಿಸುವ ಉಪಕರಣವೇ ರೊಹಿತ ದರ್ಶಕ.ಕಡಿಮೆ ಆಗಲವಿರುವ ಸೀಳುಗುಂಡಿಯ ಮೂಲಕ ಅಧ್ಯಯನ ಮಾಡಬೇಕಾಗಿರುವ ಬೆಳಕನ್ನು ಬಿಡಲಾಗುತ್ತದೆ.ಅಶ್ರಗದ ಎರಡೂ ಬದಿಗಳಲ್ಲಿ ಮಸೂರಗಳನ್ನಿಡಲಾಗುತ್ತದೆ.ಇದರಿಂದ ಬಣ್ಣಗಳ ಅಧಿವ್ಯಾಪನೆ ಕಡಿಮೆಯಾಗುತ್ತದೆ.ಯಾವ ಬೆಳಕಿನ ರೊಹಿತವನ್ನು ಪರೀಕ್ಷಿಸಬೇಕೊ ಆ ಬೆಳಕಿನ ಆಕಾರವನ್ನು ಸೀಳುಗುಂಡಿ Sನ ಮುಂದೆ ಇಡಲಾಗುತ್ತದೆ.ಸೀಳುಗುಂಡಿಯಿಂದ ಬರುವ ಬೆಳಕನ್ನು ಸಮಾಂತರ ಕಿರಣಗಳಾಗಿ CL ಮಸೂರವು ಪರಿವರ್ತಿಸುತ್ತದೆ. ಈ ಕಿರಣವು ಆಶ್ರಗದ ಮೂಲಕ ಹಾದು,ವಿಭಜನೆ ಹೊಂದಿ ದೂರದರ್ಶಕ B ಯನ್ನು ಪ್ರವೇಶಿಸುತ್ತದೆ.ವರ್ಧನಗೊಂಡ ರೋಹಿತ ಬಿಂಬವನ್ನು ವೀಕ್ಸಿಸಲು ದೂರದರ್ಶನವು ನೆರವಾಗುತ್ತದೆ. ರೋಹಿತ ದರ್ಶಕದ ಉಪಯೋಗಗಳು; ಸರಳ ರೋಹಿತ ದರ್ಶಕವು ಅನೇಕ ರೋಹಿತಗಳನ್ನು ವೀಕ್ಸಿಸಲು ಅನುವು ಮಾಡಿಕೊಡುತ್ತದೆ.ಉತ್ತಮಗೊಳಿಸಿದ ರೋಹಿತ ದರ್ಶಕಗಳಲ್ಲಿ ರೋಹಿತವನ್ನು ಕುರಿತು ಅಧ್ಯಯನ ಮಾಡಬಹುದು ಮತ್ತು ಬೆಳಕಿನ ಆಕರದ ಬಗ್ಗೆ ಮಾಹಿತಿ ಪಡೆಯಲು ರೋಹಿತವನ್ನು ವಿಶ್ಲೆಷಿಸಬಹುದು.ವಿವಿಧ ವಸ್ತುಗಳಿಂದ ಬರುವ ವಿಕಿರಣಗಳನ್ನು ಒಂದು ರೋಹಿತ ದರ್ಶಕದಿಂದ ವೀಕ್ಶಿಸಿ,ವಿಷ್ಲೇಷಿಸಿದಾಗ ಏನು ಕಂಡುಬರುತ್ತದೆ? ಸೂರ್ಯನ ಬೆಳಕು,ತಂತುದೀಪದಿಂದ ಹೊಮ್ಮಿದ ಬೆಳಕು ಇವೆಲ್ಲವೂ ಕಾಮನಬಿಲ್ಲಿನಂತಹ ರೋಹಿತವನ್ನು ಉಂಟುಮಾಡುತ್ತದೆ.ಇದೇ ಅವಿಛ್ಛಿನ ರೋಹಿತ. ಅನಿಲಗಳಿಂದ ಅಥವಾ ಭಾಷ್ಪಾಗಳಿಂದ ಬೆಳಕು ಉತ್ಸರ್ಜಿತವಾಗುವಂತೆ ಮಾಡಿದಾಗಿನ ಪರಿಸ್ಥಿತಿಯೆ ಬೇರೆ.ಈ ಸಂದರ್ಭದಲ್ಲಿ ಒಂದು ಕಪ್ಪು ಹಿನ್ನೆಲೆಯಲ್ಲಿ ಅನೇಕ ಸ್ಪುಟವಾದ ಮತ್ತು ಪ್ರಕಾಶವಾದ ಗೆರೆಗಳನ್ನು ರೋಹಿತವು ಹೊಂದಿರುವುದನ್ನು ಕಾಣಬಹುದು.ಈ ಗೆರೆಗಳನ್ನು ಬೇರೆ ಬೇರೆ ಬಣ್ಣಗಳಿಂದಾದ ಸೀಳುಗುಂಡಿಯ ಬಿಂಬಗಳು.ಇದನ್ನು ರೇಖಾ ನಿಸ್ಸರಣ ರೋಹಿತ ಎನ್ನುತ್ತರೆ.ಒಮ್ಮೆ ಈ ಮಾದರಿಗಳು ಲಭ್ಯವಾದರೆ ಯಾವುದೇ ಆಕಾರದಲ್ಲಿನ ಧಾತುಗಳನ್ನು ಗುರುತಿಸಬಹುದು.ಸೂರ್ಯ ಮತ್ತು ನಕ್ಷತ್ರಗಳಲ್ಲಿ ಯಾವ ಧಾತುಗಳಿವೆ ಎಂಬುವುದನ್ನು ಕಂಡುಹಿಡಿಯಲು ಈ ವಿಧಾನವು ಸಹಕಾರಿ.ಗೆರೆಗಳ ತೀವ್ರತೆಯನ್ನು ಅಳೆಯುವುದರಿಂದ ಪ್ರತಿ ವಸ್ತುವೂ ಸರಿ ಸುಮಾರು ಎಷ್ಟು ಪರಿಮಾಣದಲ್ಲಿದೆ ಎಂಬುದನ್ನು ನಿರ್ಧರಿಸಬಹುದು.ರೋಹಿತ ರಸಾಯನ ವಿಶ್ಲೇಷಣೆ ಎಂದು ಕರೆಯುವ ಈ ತಂತ್ರವನ್ನು ಕೈಗಾರಿಗಳಲ್ಲಿ,ಅಪರಾಧ ಪತ್ತೆ ಇತ್ಯಾದಿಗಳಲ್ಲಿ ಬಳಸುತ್ತರೆ.ಸಂಕೀರ್ಣ ಬೆಳಕು ಅರೆಪಾರದಶ್ರಕ ವಸ್ತುವಿನ ಮೂಲಕ ಹಾಯ್ದು ಹೋದಾಗ ಪತನ ಬೆಳಕಿನ ಕೆಲವು ಬಣ್ಣಗಳು ಹೀರಲ್ಪಡುತ್ತದೆ.ಆಗ ಹೊರಬಂದ ಬೆಳಕಿನಲ್ಲಿ ಆ ಬಣ್ಣಗಳು ಇರುವುದಿಲ್ಲ.ಅನುರೂಪಿ ರೋಹಿತದಲ್ಲಿ ಅನೇಕ ಕಪ್ಪು ಗೆರೆಗಳು ಅಥವಾ ಪಟ್ಟಿಗಳು ಇರುತ್ತದೆ.ಅವಿಚ್ಚಿನ್ನ ರೋಹಿತದ ಹಿನ್ನೆಲೆಯಲ್ಲಿ ಇವು ಕಂಡುಬರುತ್ತದೆ.ಇಂತಹ ರೋಹಿತವನ್ನು ಹೀರಿಕೆ ರೋಹಿತ ಎನ್ನುತ್ತಾರೆ.ಕಾರ್ಬನ್ ಚಾಪದೀಪದಿಂದ ಹೊಮ್ಮುವ ಪ್ರಖರ ಬಿಳಿ ಬೆಳಕನ್ನು ಸೋಡಿಯಂ ಭಾಷ್ಪದ ,ಮುಲಕ ಹಾಯಿಸಿದಾಗ ಸೋಡಿಯಂ ಹಳದಿ ರೇಖೆಗಳಿಗೆ ಸಂವಾದಿಯಾದ ಎರಡು ಕಪ್ಪು ಗೆರೆಗಳಿರುತ್ತದೆ .