ಸದಸ್ಯ:Prathika Suvarna/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಣದ ಅಪಮೌಲಿಕರಣ

ಯಾವುದೇ ಕರೆನ್ಸಿ ಅಪಮೌಲ್ಯವಾದಾಗ ಡಾಲರು ಅಥವಾ ಇತರ ಮೀಸಲು ಕರೆನ್ಸಿಗಳ ಮೌಲ್ಯ ಅದರ ವಿರುದ್ಧ ಜಾಸ್ತಿಯಾಗುತ್ತದೆ. ಅಂದರೆ, ಮೀಸಲು ಕರೆನ್ಸಿ ದೇಶಗಳು ಅವರ ಹಣಕ್ಕೆ ಆ ದೇಶದಿಂದ ಹೆಚ್ಚು ಸರಕು ಯಾ ಸೇವೆಗಳನ್ನು ಪಡೆಯಬಹುದು. ಅವರು ಜಾಸ್ತಿ ಖರೀದಿಸಿದಾಗ ಆ ದೇಶದ ರಫ್ತು ಅಧಿಕವಾಗುತ್ತದೆ. ಆಮದು ತುಟ್ಟಿಯಾಗುವುದರಿಂದ, ಗಾತ್ರ ಕಮ್ಮಿಯಾಗಿ ವಿದೇಶಿ ವಿನಿಮಯದ ಹೊರ ಹರಿವು ಕಡಿಮೆಯಾಗುತ್ತದೆ. 2ಅವರ ರಫ್ತು ಅಗ್ಗವಾಗುವುದರಿಂದ, ಇತರ ದೇಶಗಳ ರಫ್ತು ತುಟ್ಟಿಯಾಗಿ, ಆ ದೇಶದ ಸರಕುಗಳು ಸ್ಪರ್ಧಾತ್ಮಕವಾಗುತ್ತವೆ. 3ರಫ್ತು ಅಗ್ಗವಾಗಿ ಇತರ ದೇಶಗಳಿಗೆ ವಿಸ್ತರಿಸಿದಾಗ, ಆ ದೇಶದೊಂದಿಗೆ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತಮಗೊಳಿಸಲು ಅನುಕೂಲವಾಗುತ್ತದೆ. 4ಇತರ ಸ್ಪರ್ಧಿ ದೇಶಗಳ ರಫ್ತು ಯೋಜನೆ ಅಡಿ ಮೇಲಾಗಿ, ಅಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿ, ಅದರ ಲಾಭ ಎತ್ತಲು ಅನುಕೂಲವಾಗುತ್ತದೆ. ಮುಖ್ಯ ಭಾದಕಗಳು: 1ಬೇಡಿಕೆ ಜಾಸ್ತಿಯಾದಾಗ ತಯಾರಿಕೆಗೆ ಬೇಕಾಗುವ ಮೂಲ ವಸ್ತುಗಳ ಕೊರತೆಯುಂಟಾಗಿ, ಅದರ ಬೆಲೆ ಏರಿ, ಸ್ಪರ್ಧೆಯಲ್ಲಿ ಇರುವಂತಹ ಪೈಪೋಟಿ ಮಾಯವಾಗುತ್ತದೆ. 2ಇತರ ರಾಷ್ಟ್ರಗಳು ಇಂತಹ ಸ್ಪರ್ಧೆಗೆ ಇಳಿದರೆ, ಎಲ್ಲ ರಾಷ್ಟ್ರಗಳ ಆರ್ಥಿಕತೆ ಹಾನಿಗೊಳಗಾಗುತ್ತದೆ. 3ವಿದೇಶಿ ಹಣದ ಒಳಹರಿವು ವಿದೇಶಿ ಮೀಸಲನ್ನು ಒಮ್ಮೆಗೇ ಜಾಸ್ತಿಯಾಗಿಸುವುದರಿಂದ, ಅದನ್ನು ಸರಿಯಾಗಿ ವಿನಿಯೋಗಿಸುವಂತಹ - ಹೊಣೆಗಾರಿಕೆ ಆ ದೇಶದ ಮೇಲೆ ಬೀಳುತ್ತದೆ. 4ವಿದೇಶಿ ಕರೆನ್ಸಿ ಆಧರಿತ ಸಾಲವನ್ನು ಎತ್ತಿರುವ ಭಾರತ ಮತ್ತು ಅರ್ಜೆಂಟೀನಾದಂತಹ ದೇಶಗಳಿಗೆ, ಕರೆನ್ಸಿ ಅಪಮೌಲ್ಯದಿಂದ ಮರುಪಾವತಿ ಹೊಣೆ ಜಾಸ್ತಿಯಾಗುತ್ತದೆ. ಭಾರತದ ವಿದೇಶಿ ಕರೆನ್ಸಿ ಸಾಲ ಮಾರ್ಚ್, 2015ಕ್ಕೆ 475.8 ಬಿಲಿಯನ್ ಡಾಲರ್ ಇತ್ತು.