ಸದಸ್ಯ:Pratheeksha m/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
   ನನ್ನ ಹೆಸರು ಪ್ರತೀಕ್ಷ.ನಾನು ಸಂತ ಅಲೋಶಿಯಸ್ ಕಾಲೇಜ್ನಲ್ಲಿ ಕಲಿಯುತ್ತಿದ್ದೇನೆ. ನಾನು ಸುರತ್ಕಲ್ ನಿವಾಸಿ, ನನ್ನ ಮನೆಯಲ್ಲಿ ನಾನು, ನನ್ನ ಅಮ್ಮ, ತಂಗಿ, ಅಜ್ಜಿ ಮತ್ತು ಮಾವ ಇದ್ದೇವೆ. ನನ್ನ ಅಮ್ಮನ ಹೆಸರು ರೇವತಿ, ನನ್ನ ತಂದೆಯ ಹೆಸರು ಮನೋಹರ್, ನನ್ನ ತಂಗಿಯ ಹೆಸರು ನಿಧಿ.
      ನಾನು ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಮಹಾಲಿಂಗೇಶ್ವರ ಅಂಗ್ಲ ಮಾಧ್ಯಮ ಶಾಲೆ, ಸುರತ್ಕಲ್, ಮಂಗಳೂರು ಇಲ್ಲಿ ಪೊರೈಸಿದ್ಧೇನೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಶಾರದಾ ಕಾಲೇಜು, ಕೊಡಿಯಾಲ್ ಬೈಲು ಇಲ್ಲಿ ಮುಗಿಸಿರುತ್ತೇನೆ. ನಾನು ದ್ವಿತೀಯ ಪಿಯಸಿಯಲ್ಲಿ ಶೇಕಡಾ 85 ಅಂಕಗಳನ್ನು ಪಡೆದು ಉತ್ತೀರ್ಣಳಾಗಿರುತ್ತೇನೆ.
      ಈಗಿನ ನನ್ನ ಕಾಲೇಜು ಶಿಕ್ಷಣವು ಉತ್ತಮವಾಗಿ ನಡೆಯುತ್ತಿದೆ. ಒಳ್ಳೆಯ ಅಂಕಗಳನ್ನು ಗಳಿಸುವ ಪ್ರಯತ್ನದಲ್ಲಿದ್ದೇನೆ.
























ಚಿನ್ನ ಕರಗಿಸುವ ವಿಷಯವೇ ದೇಗುಲಗಳಿಗೆ ಕಿರಿಕಿರಿ[ಬದಲಾಯಿಸಿ]

ನವದೆಹಲಿ: ದೇಶದಲ್ಲಿ ನಿಷ್ಕ್ರಿಯವಾಗಿರುವ 22 ಸಾವಿರ ಟನ್‌ ಚಿನ್ನವನ್ನು ಮರಳಿ ಬಳಕೆಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ "ಚಿನ್ನ ಠೇವಣಿ ಯೋಜನೆ' ಬಗ್ಗೆ ದೇಶದ ಹಲವು ಶ್ರೀಮಂತ ದೇಗುಲಗಳ ಆಡಳಿತ ಮಂಡಳಿಗಳು ಮೆಚ್ಚುಗೆ ವ್ಯಕ್ತಪಡಿಸಿವೆಯಾದರೂ, ತಾವು ನೀಡುವ ಚಿನ್ನವನ್ನು ಕರಗಿಸಲಾಗುವುದು ಎಂಬ ವಿಷಯ ಅವು ಚಿನ್ನವನ್ನು ಠೇವಣಿ ಇಡಲು ಹಿಂದೆ- ಮುಂದೆ ನೋಡುವಂತೆ ಮಾಡಿದೆ.

ಯೋಜನೆಯಲ್ಲಿ ಇಟ್ಟ ಚಿನ್ನಾಭರಣವನ್ನು ಕರಗಿಸಿ, ಬಳಿಕ ಅದರ ಶುದ್ಧತೆಯನ್ನು ಸರ್ಕಾರ ಪರೀಕ್ಷಿಸುತ್ತದೆ. ಬಳಿಕ ಅದಕ್ಕೆ ಮೌಲ್ಯ ಕಟ್ಟುತ್ತದೆ. ಹೀಗೆ ಯೋಜನೆಯಲ್ಲಿ ಚಿನ್ನ ಇಟ್ಟವರು ನಿಗದಿತ ಅವಧಿಯ ಬಳಿಕ ತಾವು ಇಟ್ಟಷ್ಟೇ ಚಿನ್ನವನ್ನು ಮರಳಿ ಪಡೆಯ ಬಹುದು ಇಲ್ಲವೇ ಹಣ ಪಡೆಯಬಹುದು. ಆದರೆ ಭಕ್ತರು ನೀಡಿದ ಚಿನ್ನವನ್ನು ಕರಗಿಸಿ ದರೆ ಅದು ಅವರ ನಂಬಿಕೆಗಳಿಗೆ ಹೊಡೆತ ನೀಡಬಹುದು ಎಂಬುದು ಬಹುತೇಕ ದೇಗುಲಗಳ ಆತಂಕ. ಹೀಗಾಗಿಯೇ ಅವು ಗಳ ಚಿನ್ನ ಠೇವಣಿ ಯೋಜನೆಯಡಿ ತಮ್ಮ ಬಳಿ ಇರುವ ಚಿನ್ನವನ್ನು ಹೂಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳದೇ ಸುಮ್ಮನೆ ಕುಳಿತಿವೆ.

ಕಾನೂನು ಸಮರ: ಭಾರೀ ಪ್ರಮಾಣ ದಲ್ಲಿ ಚಿನ್ನ ಇರುವ ಕೇರಳದ ಶ್ರೀ ಅನಂತ ಪದ್ಮನಾಭ ದೇಗುಲ ಮತ್ತು ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇಗುಲಗಳು ಸದ್ಯ ಚಿನ್ನ, ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಕಾನೂನು ಸಮರ ಎದುರಿಸುತ್ತಿವೆ. ಹೀಗಾಗಿ ಅವು ಸದ್ಯಕ್ಕೆ ಯೋಜನೆಯಲ್ಲಿ ಚಿನ್ನ ಹೂಡುವುದು ಸಾಧ್ಯವಿಲ್ಲ.

ಮಿಶ್ರ ಪ್ರತಿಕ್ರಿಯೆ: ಗುಜರಾತ್‌ನ ಪ್ರಸಿದ್ಧ ಅಂಬಾಜಿ ದೇಗುಲ ಸದ್ಯಕ್ಕೆ ತಾನು ಸರ್ಕಾ ರದ ಬಳಿ ಚಿನ್ನ ಇಡುವ ಗುರಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಸೋಮನಾಥ ದೇಗುಲದ ಆಡಳಿತ ಮಂಡಳಿ ಯೋಜನೆ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದು, ಶೀಘ್ರವೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳು ವುದಾಗಿ ಹೇಳಿದೆ. ದ್ವಾರಕಾದಲ್ಲಿನ ದ್ವಾರಕಾ ಧೀಶ ದೇಗುಲ ಕೂಡಾ ಯೋಜನೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ.

ಇನ್ನು ಮಹಾರಾಷ್ಟ್ರದ ಸಿದ್ಧಿವಿನಾಯಕ ದೇಗುಲ ತನ್ನ ಬಳಿ ಇರುವ 160 ಕೆಜಿ ಚಿನ್ನದ ಪೈಕಿ ಎಷ್ಟು ಚಿನ್ನವನ್ನು ಯೋಜನೆಯಲ್ಲಿ ವಿನಿಯೋಗಿಸಬಹುದು ಎಂಬುದರ ಕುರಿತು ಚಿಂತನೆ ಆರಂಭಿಸಿದೆ. ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿ ಕೂಡಾ ಶೀಘ್ರವೇ ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ. ಆದರೆ ವಿಜಯ ವಾಡಾದಲ್ಲಿರುವ ಕನಕ ದುರ್ಗಮ್ಮ ದೇಗುಲ ಮಾತ್ರ ಸದ್ಯಕ್ಕೆ ತಾನು ಯೋಜನೆ ಕುರಿತು ಆಸಕ್ತಿ ಹೊಂದಿಲ್ಲ ಎಂದಿದೆ. ಇನ್ನು ಕೇರಳದ ಅಯ್ಯಪ್ಪ ಸ್ವಾಮಿ ದೇಗುಲ ಕೂಡಾ ಯೋಜನೆ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದೆ. ಇದ್ದಿದ್ದರಲ್ಲಿ ಕೇರಳದ ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ದೇಗುಲದ ಆಡಳಿತ ಮಂಡಳಿ ಚಿನ್ನ ಠೇವಣಿ ಯೋಜನೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ.

ಕರ್ನಾಟಕ, ಕೇರಳ, ತೆಲಂಗಾಣ, ರಾಜ ಸ್ಥಾನದ ದೇಗುಲಗಳು ಯೋಜನೆ ಕುರಿತು ನಿರಾಸಕ್ತಿ ವ್ಯಕ್ತಪಡಿಸಿದ್ದರೆ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್‌ನ ಕೆಲ ದೇಗುಗಳ ಯೋಜನೆ ಕುರಿತು ಆಸಕ್ತಿ ವ್ಯಕ್ತಪಡಿಸಿವೆ.