ಸದಸ್ಯ:Prathap.P.S./sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾವು ಹೇಳುವುದುಂಟು ನಮ್ಮ ಮಕ್ಕಳೇ ನಮ್ಮ ಆಸ್ತಿಎಂದು, ನಮಗಿಂತ ನಮ್ಮ ಮಕ್ಕಳು ಅವರ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಬೇಕು. ವೈದ್ಯನಾಗಿಯೋ, ಇಂಜಿನಿಯರ್ ಆಗಿಯೋ.......ಇತ್ಯಾದಿ ಪೋಷಕರ ಆಸೆ ಆಕಾಂಕ್ಷೆಗಳು ಅಥವಾ ಹಗಲು ಕನಸುಗಳೊ ಅವು ಈಡೇರಿದರೆ ಮನಸ್ಸಿಗೆ ತೃಪ್ತಿ.ಅಪ್ಪಿ ತಪ್ಪಿ ಎಲ್ಲಿಯಾದರೂ ನಮ್ಮ ಮಕ್ಕಳು ಕಲಿಕೆಯಲ್ಲಿ ಬಹಳ ಹಿಂದೆ ಉಳಿದು ಮೊದಲನೇ ಎರಡನೇ ರಾಂಕ್ ಪಡೆಯದೇ ಇದ್ದರಂತೂ ಮುಗಿಯಿತು ಕತೆ. ಪೋಷಕರ ಮನಸಿನಲ್ಲಿ ನೆಮ್ಮದಿಯೇಇಲ್ಲ ಸದಾ ಸಿಡುಕು ಜಿಗುಪ್ಸೆ, ಯಾವುದೇ ಶಾಲೆಯಲ್ಲಿ ಆದರೂ ಮೂರು ಮಕ್ಕಳಲ್ಲಿ ಇಪ್ಪತ್ತು ಮಕ್ಕಳಾದರೂ (ಶೇ 20) ಕಲಿಕೆಯಲ್ಲಿ ಹಿಂದುಳಿದವರಿಗಿಂತ ಅಂಕ ಪಟ್ಟಿಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರಬಹುದು. ಇದಕ್ಕೆಲ್ಲಾ ನಾವು ಕಾರಣಗಳು ತಿಳಿಯುವುದು ತೀರಾ ಅಗತ್ಯ. (ಕಾರಣ ಒಂದಲ್ಲ ಹಲವಾರು)

     * ಬೇರೆ ಮಕ್ಕಳ ಜೊತೆಗೆ ಹೋಲಿಸಿದಾಗ ಬುದ್ಧಿ ಶಕ್ತಿ ಸ್ವಲ್ಪ ಕಡಿಮೆ ಇರಬಹುದು.
     * ಕಣ್ಣಿನ ದೃಷ್ಟಿಯಲ್ಲಿ, ಕಿವಿ ಕೇಳುವಿಕೆಯಲ್ಲಿ, ಅಲ್ಪ  ಪ್ರಮಾಣದ ಲೋಪದೋಷಗಳು ಇರಬಹುದು.
     *ಬೆಳವಣಿಗೆಯ ಹಂತಗಳು ವಿಳಂಬವಾಗಿರಬಹುದು.
     *ಬುದ್ಧಿ ಮಾಂಧ್ಯತ್ವ ಇರಬಹುದು.
     *ಗಮನದ ಅವಧಾನ ಕೊರತೆ ಇರಬಹುದು.
     *ಗಮನದ ಅವಧಾನ ಕೊರತೆ ಜೊತೆಗೆ ಮಿತಿ ಮೀರಿದ ತೀವ್ರತೆ (ಉದ್ವೇಗ) ಇರಬಹುದು.
     *ಕಲಿಕೆಯೆಲ್ಲಿ ವಿಕಲತೆ ಇರಬಹುದು.
     *ಭಾವನೆಯಲ್ಲಿ ಅವ್ಯವಸ್ಥೆ ಇರಬಹುದು.
     *ಮನೆಯಲ್ಲಿ ಸದಾ ತಾಯಿ ತಂದೆಯರ ಜಗಳ/ಮನೆಯ ಅವ್ಯವಸ್ಥೆಯ ಮತ್ತು ಕಲುಶಿತ ವಾತಾವರಣ ಕೂಡಾ ಒಂದು ಕಾರಣವಾಗಬಹುದು.
     *ಶಾಲೆಯ ವಾತಾವರಣಕ್ಕೆ ಮಗುವು ಹೊಂದಿಕೊಳ್ಳದೇ ಇರಬಹ್ದುದು.
                   ಮಾನವನಾಗಿ ಜನ್ಮ ತಾಳಿದಾಗ ಹಾಗೂ ನಂತರ ನಾವೆಲ್ಲರೂ ಒಂದೇ ಸಾಮಾನವಾಗಿರುವುದಿಲ್ಲ. ಅಂದರೆ ಒಬ್ಬ ಇನ್ನೊಬರ ಹಾಗೆ ಇರುವುದಿಲ್ಲ.ಹೆಬ್ಬೆರಳಿನ ರೇಖೆಯ ಗುರುತುಗಳು,ಮುಖ ಚರ್ಯ,ಧ್ವನಿ,ಸ್ವರ,ಮೈಬಣ್ಣ, ಮೈ ಗಾತ್ರ, ಶರೀರದೆತ್ತರ,ಯೋಚನೆ ಶಕ್ತಿ,ಬುದ್ಧಿ ಶಕ್ತಿ,ಕೌಶಲ್ಯತೆ,ಪ್ರತಿಭೆ,ಎಲ್ಲವೂ ಒಂದು ತರಹ/ ಒಂದೇ ಸಮಾನವಾಗಿರುತ್ತದೆಯೊ.ಇವೆಲ್ಲವೂ ವಿಬ್ಭಿನ್ನವಲ್ಲವೇ?
           ಹಾಗೆಯೇ ಎಲ್ಲರು ಅಲ್ಪ ಕೆಲವರಾದರೂ ಅಂಗವಿಕಲತೆಯಾಗಿ ಹುಟ್ಟುವುದಿಲ್ಲವೆ? ಉದಾಹರಣೆ :
      1. ಕಣ್ಣಿದ್ದು ಹುಟ್ಟಬಹುದು-ಪೂರ್ತಿ ದೃಷ್ಟಿ ಇರುವುದಿಲ್ಲ-ಕುರುಡ
      2. ಕಿವಿ ಇದ್ದು ಹುಟ್ಟಬಹುದು-ಪೂರ್ತಿ ಕೆಳುವುದಿಲ್ಲ -ಕಿವುಡ
      3. ಬಾಯಿ, ನಾಲಿಗೆ ಇದ್ದು ಹುಟ್ಟಬಹುದು-ಮಾತನಾಡಲು ಆಗುವುದಿಲ್ಲ---ಹೀಗೆ ಮೂಗ,ಕಿವುಡ,ಕುರುಡ,ಮೂಕ ಎಂದು ವಿವಿಧ ವಿಕಲತೆಗಳಿಂದ ಹುಟ್ಟುವ ಮಕ್ಕಳನ್ನು ನಾವು ನೋಡುವಾಗ ಅಂತಹ ಗೋಚರಣವಾಗುತ್ತದೆ.
                ಆದರೆ ಅವರ ಅಂತರಂಗದಲ್ಲಿರುವಭಾವನೆಗಳು, ಅನುಭವಗಳು ನೋಡುವವರ ಕಣ್ಣಿಗೆ ಗೋಚರಿಸುವುದಿಲ್ಲ. ಎಷ್ಟೋ ಸಲ ನಾವು ಅವರ ಸಹಾಯಕ್ಕೆ ಮುಂದೆ ಹೋಗುತ್ತೇವೆ.......ಏಕೆ? ಅವರ ಅಸಹಾಯಕತೆ ನಮ್ಮ ಕಣ್ಣಿಗೆ ಗೋಚರವಾಗುವುದರಿಂದ  ನಮ್ಮ ಅಂತರಾಳದಲ್ಲಿ ಅಯ್ಯೋ ಪಾಪ!.........ಎಂದು ಅನುಕಂಪ ತೋರಿಸುತ್ತೇವೆ. ಆದರೆ  ಎಷ್ಟೋ ಸಲ ಎಷ್ಟೋ ಮಕ್ಕಳಿಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ...........ಏಕೆ? ಅವರ ಅಸಹಾಯಕತೆ ನಮ್ಮ ಕಣ್ಣಿಗೆ ಕಾಣುವುದಿಲ್ಲ............?
        ಈಗ ಒಂದು ಪ್ರಶ್ನೆ .......ಗೋಚರವಾಗದೆ ಇರುವಂತಹ ವಿಕಲತೆಗಳು ಇದೆಯೇನು? ಅದೇನದು ಅಂತಹ ಅಗೋಚರ ವಿಕಲತೆ..........ಕಂಡೇ ಇಲ್ವಲ್ಲ.........ಆಹಾ ಗೊಂದಲ ಪಡಬೇಡಿ,ಅದರ ಮಾಹಿತಿ ನೀಡುವುದೇ ಈ ಕಿರು ಹೊತ್ತಿಗೆಯ ಮೂಲ ಉದ್ದೇಶಃ ಅಗೋಚರ ಅಥವಾ ಸುಪ್ತವಾಗಿ ಹುದುಗಿರುವ / ಅಥವಾ ಗುಪ್ತ ಸುಪ್ತ-ವಿಕಲತೆ ಅದು ಮಕ್ಕಳಲ್ಲಿ ಇರುತ್ತದೆಯೇ? ಅದರಿಂದ ಏನಾದರು ಸಮಸ್ಯೆ ಇದೆಯೇ? ಅದರ ಪ್ರಾರಂಭ ಹೇಗೆ ಗುರುತಿಸುವುದು / ಪತ್ತೆ ಹಚ್ಛುವುದು ಹೇಗೆ? ಸಮಸ್ಯೆಯನ್ನು ಬಗೆಹರಿಸಬಹುದೇ?............ ಎಂಬಿತ್ಯಾದಿ.
              ಶಿಕ್ಷಕನಾದವ ನಾನು ಏನು ಮಾಡಬಹುದು? ಪೋಷಕರಾದವರು ನಾವು ಏನು ಮಾಡಬಹುದು?, ಸಮಾಜ ಸೇವಕನಾದ ನಾನೇನು ಮಾಡಬಹುದು? ಹೌದು ಹೀಗೆ ಪ್ರಶ್ನೆಗಳ ಸರಮಾಲೆ.......ಉತ್ತರ? ಹೀಗೆ ಪ್ರಶ್ನೆಗಳು ಹುಟ್ಟುತ್ತಲೇ ಇರುತ್ತವೆ.......