ಸದಸ್ಯ:Prashasthi J T/sandbox1

ವಿಕಿಪೀಡಿಯ ಇಂದ
Jump to navigation Jump to search

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ತರಕಾರಿಗಳಾಗಲಿ, ಹಣ್ಣುಹಂಪಲುಗಳಾಗಲಿ ರಾಸಾಯನಿಕ ಅಂಶಗಳೊಳಗೊಂಡಿದೆ. ಮನೆಯಲ್ಲಿ ಮಾಡುವ ಕೃಷಿ ತುಂಬಾ ದುಬಾರಿಯಾದುದರಿಂದ ನಾವು ನಾವು ಪೇಟೆಯ ತರಕಾರಿಗೆ ಮಾರುಹೋಗಿದ್ದೇವೆ. ಈ ಕೆಳಗೆ ನೀಡಿರುವ ವಿಧಾನವನ್ನು ಮನೆಯಲ್ಲಿ ಅಳವಡಿಸಿರುವುದರಿಂದ ಕಡೀಮೆ ದರದಲ್ಲಿ ಹೆಚ್ಚು ಲಾಭ ಗಳಿಸಬಹುದು ಹಾಗೂ ಉತ್ತಮ ಆರೋಗ್ಯವನ್ನು ಹೊಂದಬಹುದು. ಸಾಮಾನ್ಯವಾಗಿ ಮನೆಯಲ್ಲಿ ಉಳಿದಿರುವ ತ್ಯಾಜ್ಯ ವಸ್ತುಗಳಿಂದ ಉದಾಹರಣೆ: ತರಕಾರಿಯ ಸೊಪ್ಪು, ಹಳಸಿದ ಆಹಾರ ಧಾನ್ಯ, ಗಂಜಿ,ನೀರು ಎಲ್ಲವನ್ನೂ ಎರೆಹುಳು ಗೊಬ್ಬರ ಮಾಡಲು ಬಳಸಬಹುದು. ಇದರಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಹಾಗೂ ಯಾವುದೇ ಹಾನಿಕಾರಕ ರಾಸಾಯನಿಕ ಗೊಬ್ಬರ ಬಳಸುವ ಅಗತ್ಯವಿರುವುದಿಲ್ಲ. ಮೊದಲನೆಯದಾಗಿ ೧ ಮೀಟರ್ ಉದ್ದದ, ೧೨ ಸೆಂ.ಮೀ ಅಗಲದ ಪಿ.ವಿ.ಎಸ್ ಪೈಪನ್ನು ಮೂರಡಿ ಆಳಕ್ಕೆ ಭೂಮಿಯನ್ನು ಅಗೆದು ಹುಗಿಯಬೇಕು. ಪ್ರತಿ ದಿನ ಅದರೊಳಗೆ ಮನೆಯಲ್ಲಿ ಉಳಿದಂತಹ, ಭೂಮಿಯಲ್ಲಿ ಕರಗುವಂತಹ ತ್ಯಾಜ್ಯ ವಸ್ತು, ದನದ ಸೆಗಣಿ, ಮರದಿಂದ ಉದುರುವ ಎಲೆಗಳು ಮುಂತಾದವುಗಳನ್ನು ಪ್ರತಿನಿತ್ಯ ಆ ಮೊದಲೇ ನಿರ್ಮಿಸಿದ ಪೈಪಿನೊಳಗೆ ಹಾಕಬೇಕು. ನಂತರ ಯಾವುದೇ ರೀತಿಯ ಕೆಟ್ಟ ವಾಸನೆ ಬಾರದಂತೆ ಒಂದು ಮುಚ್ಚಳವನ್ನು ಮುಚ್ಚಬೇಕು. ಹೀಗೆ ಒಂದು ತಿಂಗಳ ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿರಬೇಕು. ಒಂದು ತಿಂಗಳ ನಂತರ ಮುಚ್ಚಳವನ್ನು ತೆಗೆದು ಪೈಪನ್ನು ಮೇಲೆತ್ತಿ ಹೊರತೆಗಿಯಬೇಕು. ಆಗ ಆ ತ್ಯಾಲ್ಯ ವಸ್ತುಗಳು ಕೊಳೆತು ಹೋಗಿರುತ್ತದೆ ಮತ್ತು ಎರೆಹುಳುಗಳು ಅದರಲ್ಲಿ ಸೇರಿಕೊಂಡಿರುತ್ತದೆ ಮತ್ತೆ ಆ ಕೊಳೆತ ತ್ಯಾಜ್ಯ ವಸ್ತುಗಳನ್ನು ಮಣ್ಣನ್ನು ಅಗೆದು ಅದರಲ್ಲಿ ಮುಚ್ಚಬೇಕು. ಅದರ ಮೇಲೆ ಮಣ್ಣನ್ನು ಮುಚ್ಚಿ ಕೆಲವು ದಿನಗಳ ಕಾಲ ಹಾಗೆಯೇ ಬಿಡಬೇಕು. ನಂತರ ಆ ಮಣ್ಣನ್ನು ಅಗೆಯಬೇಕು ಆಗ ಅದು ಗೊಬ್ಬರದ ರೂಪ ತಾಳಿರುತ್ತದೆ. ಇದನ್ನು ಸಸ್ಯಗಳಿಗೆ ಅಥವಾ ಹೂವಿನ ಗಿಡಗಳಿಗೆ ಮುಂತಾದವುಗಳಿಗೆ ಗೊಬ್ಬರವಾಗಿ ಉಪಯೋಗಿಸುವುದರಿಂದ ಅದು ಅದ್ಬುತವಾಗಿ ಬೆಳೆದು ಉತ್ತಮ ಫಲವನ್ನು ನೀಡುತ್ತದೆ. ಈ ರೀತಿಯ ಗೊಬ್ಬರವನ್ನು ತಯಾರಿಸುದರಿಂದ ಹಾಗೂ ಅದನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಾಗುತ್ತದೆ ಹಾಗೇ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಬಹುದು. ಯಾವುದೇ ರೀತಿಯ ರಾಸಾಯನಿಕ ವಸ್ತುಗಳು ನಮ್ಮ ಉದರ ಸೇರುವುದಿಲ್ಲ. ಉತ್ತಮ ಆರೋಗ್ಯ ಹೊಂದಬಹುದು.