ಸದಸ್ಯ:Prashanth hugar/ನನ್ನ ಪ್ರಯೋಗಪುಟ
ಶಿರೂರು
[ಬದಲಾಯಿಸಿ]ಬಾಗಲಕೋಟೆ ಈ ಜಿಲ್ಲೆಯಲ್ಲಿ ಒಂದು ದೊಡ್ಡ ಗ್ರಾಮವಿದೆ ಅದುವೇ ಶಿರಿಯೂರು. ಬಾಲಕೋಟೆಯಿಂದ ಕೇವಲ ೧೫ ಕೀಮಿ ದೂರದಲ್ಲಿದೆ ಈ ಊರು ಇಲ್ಲಿ ಮೂರು ಜಲಪಾತಗಳಿದ್ದು ಒಂದೊಂದು ಜಲಪಾತಕ್ಕೂ ಒಂದೊಂದು ಹೆಸರಿದೆ. ಮತ್ತು ಅತಿಹ್ಯವಾದ ಇತಿಹಾಸವಿದೆ. ಭೈರಪ್ಪನ ಪಡಿ, ಬೆಣ್ಣೆ ದಿಡಗ, ಜೋಕುಮಾರನ ಪಡಿ, ಈವೆಲ್ಲವೂ ತನ್ನ ಚಲುವಿನಿಂದ ಮನಸೆಳೆಯುತ್ತವೆ. ನಮ್ಮ ಗ್ರಾಮೀಣ ಆಚರಣೆಗಳಲ್ಲಿ ಒಂದಾದ ಜೋಕುಮಾರಸ್ವಾಮಿ ಆರಾಧನೆಯ ನಂತರ ಮೂರ್ತಿಯನ್ನು ವಿಸರ್ಜಿಸುವ ಸ್ಥಳದಲ್ಲಿ ಧುಮುಕುವ ಜಲಪಾತಕ್ಕೆ ಜೋಕುಮಾರನ ಪಡಿ ಎನ್ನುತ್ತಾರೆ.ಈ ಗ್ರಾಮದ ಜಲಪಾತಗಳು ಸುತ್ತಮುತ್ತಲಿನ ಪರಿಸರ ಪ್ರೀಯರ ನೆಚ್ಚಿನ ತಾಣವಾಗಿದೆ. ವರುಣನ ಕೃಪೆಯಿಂದ ವರ್ಷದಲ್ಲಿ ಕೆಲ ತಿಂಗಳು ಮಾತ್ರ ಈ ಜಲಪಾತ ಜೀವಂತವಾಗಿ ನಳನಳಿಸುತ್ತಿರುತ್ತವೆ.ಭೈರಪ್ಪನ ಪಡಿಯ ಚಿಕ್ಕ ಜಲಪಾತದ ಜಲಧಾರೆಯ ಲಾಶ್ಯ ಅತ್ಯಂತ ರಮಣೀಯ ಎರಡು ಹೆಬ್ಬಂಡೆಗಳ ನಡುವೆ ಹರಿದುಬರುವ ಮೂರ್ ನಾಲ್ಕು ಸ್ಥಳಗಳಲ್ಲಿ ದುಮುಕುವ ಈ ಜಲಪಾತ ನೋಡುಗರನ್ನ ಮಂತ್ರಮುಗ್ದರನ್ನಾಗಿಸುತ್ತದೆ.
ಸ್ಥಳೀಯ ದೇವಾಲಯ
[ಬದಲಾಯಿಸಿ]ಶಿರೂರಿನ ಆರಾಧ್ಯದೈವ ಶ್ರೀ. ಸಿದ್ದಲಿಂಗೇಶ್ವರ ದೇವಸ್ಥಾನವಿದೆ. ಇದು ಕ್ರಿ.ಶ ೫೦೦ ರಲ್ಲಿ ಬದಾಮಿ ಚಾಲುಕ್ಯರ ಕಾಲದ ಹಳೆಯ ದೇವಾಲಯ ಇದಾಗಿದೆ. ಮುಖ್ಯವಾಗಿ ಈ ದೇವಸ್ಥಾನಕ್ಕೆ ಹೋಗುವ ರಸ್ತೆ ಮಧ್ಯ ಎರಡು ಬೃಹುತ್ ಕೆರೆಗಳಿವೆ ಅವುಗಳಲ್ಲಿ ಪಡಗೆರೆ ಮತ್ತು ದೊಡ್ಡಕೆರೆ. ಈ ದೊಡ್ಡಕೆರಯ ದಂಡೆಯ ಮೇಲೆ ಈ ದೇವಸ್ಥಾನವಿದೆ. ಇಲ್ಲಿಗೆ ಪ್ರವಾಸಿಗರು ಬರುವುದು ಉಂಟು.! ==ರಥೋತ್ಸವ== ಜಾತ್ರೆ ಇನ್ನೂ ಒಂದು ತಿಂಗಳು ಇರುವಾಗಲೇ ಈ ಜಾತ್ರೆಯ ತಯಾರಿಗಳು ನಡೆಯುತ್ತವೆ ತ್ಸೆಬರ ತಿಂಗಳಿನಲ್ಲಿ ಬರುವ ಹೊಸ್ತಲ ಹುಣ್ಣಿಮೆ ದಿನ ಸಿದ್ದೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗುವುದು. ==ಜಂಗಿ ಕುಸ್ತಿ== ಬೆಣಕಟ್ಟಿ,ಕಿರಸೂರು,ಹೊನ್ನಾಕಟ್ಟಿ,ಮನ್ನಿಕಟ್ಟಿ,ಗುಂಡನಪಲ್ಲೆ, ಗುಳೇದಗುಡ್ಡ ಸೇರಿದಂತೆ ಹಲವಾರು ಗ್ರಾಮದ ಕುಸ್ತಿ ಪೈಲ್ವಾಣರು ಭಾಗವಹಿಸುತ್ತಾರೆ. ಗ್ರಾಮದಲ್ಲಿ ಒಂಬತ್ತು ಗರಡಿ ಮನೆಗಳಿದ್ದು ಇದ್ದು ಇಲ್ಲಿನ ಫೈಲ್ವಾನರೊಂದಿಗೆ ಸ್ವರ್ಧೆ ಎರ್ಪಡುತ್ತದೆ.ಗೆದ್ದವರಿಗೆ ಸಂಭಾವನೆ ಮತ್ತು ಗೌರವ ಇರುತ್ತದೆ.
ಪಲ್ಲಕ್ಕಿ ಉತ್ಸವ
[ಬದಲಾಯಿಸಿ]ಲಿಂಗೈಕ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ವಿಶೇಷವಾಗಿ ಜರುಗುತ್ತದೆ. ಪುಣ್ಯಸ್ಮರಣೆಯ ನಿಮಿತ್ತ ಶ್ರೀಗಳವರ ಗದ್ದುಗೆಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಜರುಗುವುದು.ನಂತರ ಸಿದ್ದಲಿಂಗ ಮಾಹಾ ಸ್ವಾಮೀಗಳ ಬೆಳ್ಳಿ ಮೂರ್ತಿ ಪಲ್ಲಕ್ಕಿಯಲ್ಲಿ ಹೊತ್ತು ನಸುಕಿನ ಜಾವ ೫. ಗಂಟೆ ಸುಮಾರಿಗೆ ಸಾಗುತ್ತಾರೆ. ಈ ಪಲ್ಲಕ್ಕಿ ಉತ್ಸವದಲ್ಲಿ ಜಿಲ್ಲೆಯ ಹಲವಾರು ಕಲಾ ತಂಡಗಳು ಮತ್ತು ಹೂವಿನ ಆಟ, ೨೦ಕ್ಕೂ ಹೆಚ್ಚು ಕೋಲಾಟ ತಂಡಗಳು, ಡೊಳ್ಳಿನ ಮೇಳ, ಮರಗಾಲು ಕುಣಿತ, ಭಾಜಾ ಭಜಂತ್ರಿಯೊಂಂದಿಗೆ ಗ್ರಾಮದ ಪ್ರಮೂಕ ಬೀದಿ ಬೀದಿಗಳಲ್ಲಿ ಸಂಚರಿಸುತ್ತದೆ. ಗ್ರಾಮದ ನೂರಕ್ಕೂ ಹೆಚ್ಚು ಸುಮಂಗಲಿಯರು ಕಳಸಾರುತಿಯನ್ನು ಹಿಡಿದು ಕತ್ತಲಲ್ಲಿ ಸಾಗುವುದ ದೃಶ್ಯ ನೀರಲ್ಲಿ ತೇಲುವ ಹಣತೆಯಂತೆ ಕಾಣುತ್ತಿರುತ್ತದೆ. ==ತೆರೆ ಬಂಡಿ ಸ್ಪರ್ಧೆ== ರೈತರಿಗೆ ಈ ಸಮಯದಲ್ಲಿ ಸ್ವಲ್ಪ ಬಿಡುವಿರುತ್ತದೆ. ಇದೆ ಮದ್ಯ ಗ್ರಾಮದ ಹಿರಿಯರು ಮತ್ತು ರೈತಾಪಿ ವರ್ಗ ತೆರೆ ಭಂಡಿ ಸ್ಪರ್ದೆಯನ್ನ ಹಮ್ಮಿಕೊಳ್ಳುತ್ತಾರೆ. ಶಿರೂರು ಬಸ್ಸ ನಿಲ್ದಾಣದಿಂದ ಸಂಗಮಕ್ರಾಸ ವರೆಗೆ ಸುಮಾರು ೭ಕೀಮಿ ಕಡಿಮೆ ಸಮಯದಲ್ಲಿ ತಲುಪಿಬರಬೇಕು. ಜಯಶಾಲಿಯಾದ ರೈತನಿಗೆ ೧ತೊಲೆ ಬಂಗಾರ ಕೊಡಲಾಗುತ್ತದೆ ಇದು ರೈತರಿಗೆ ಒಂದು ಸಂಭ್ರಮದ ವಾತಾವರಣ ಸಿಕ್ಕಂತಾಗುತ್ತದೆ.
ಹೀಗೆ ಈ ೫ದಿನ ನಡೆಯುವ ಜಾತ್ರೆಗೆ ದೇಶಕಾಯುವ ವೀರ ಯೋಧರು ತಪ್ಪದೇ ಬಂದು ಅಜ್ಜನ ಆಶೀರ್ವಾದ ಪಡೆಯುತ್ತಾರೆ. ಕಲೆ, ಸಂಸ್ಕೃತಿ.ಮತ್ತು ಜಾನಪದ ಕಲೆಗಳನ್ನು ಉಳಿಸಿದಂತಾಗುದರ ಜತೆಗೆ ವಿವಿಧ ದೇಶಿ ಕ್ರೀಡೆಗಳನ್ನು ಆಡಿ ಈ ೫ ದಿನದ ಜಾತ್ರೆ ಹೀಗೆ ಸಂಪನ್ನವಾಗುತ್ತದೆ. ಪ್ರತಿ ವರ್ಷ ಡಿಸೆಂಬರ ತಿಂಗಳಿನಲ್ಲಿ ನಡೆಯುವ ಈ ಜಾತ್ರೆಗೆ ತಪ್ಪದೆ ಬನ್ನಿ. ಈ ಜಾತ್ರಾ ದೃಶ್ಯಗಳನ್ನು ಕಂಡವರು ಏನನ್ನೋ ಜಯಸಿದಂತೆ ಬರದೆ ಇರುವವರು ಏನನ್ನೋ ಕಳೆದುಕೊಂಡಂತಾಗುತ್ತದೆ.
ಪ್ರಶಾಂತ ಹೂಗಾರ