ಸದಸ್ಯ:Prakyathbelvai 88/ನನ್ನ ಪ್ರಯೋಗಪುಟ
ಕಕ್ಯಪದವು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದಲ್ಲಿದೆ. ಇಲ್ಲಿ ಸುಮಾರು ೪೩೫೩ ಜನಸಂಖ್ಯೆಯನ್ನು ಹೊಂದಿದೆ. ರಾಜೇಶ್ ನಾಯಕ್ ಉಳಿಪಾಡಿಗುತ್ತು ಇಲ್ಲಿನ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ಭೌಗೋಳಿಕ ಮಾಹಿತಿ
[ಬದಲಾಯಿಸಿ]ಕಕ್ಯಪದವು ಮಂಗಳೂರಿನಿಂದ ಪೂರ್ವ ಭಾಗಕ್ಕೆ ೪೨ ಕೀಲೋಮೀಟರ್ ದೂರದಲ್ಲಿದೆ. ಬಂಟ್ವಾಳದಿಂದ ೧೬ಕೀಲೋಮೀಟರ್ ಹಾಗೂ ಬೆಂಗಳೂರಿನಿಂದ ೩೦೫ ಕೀಲೋಮೀಟರ್ ದೂರದಲ್ಲಿದೆ. ಇಲ್ಲಿ ೮೪೯ ಮನೆಗಳು ಇವೆ, ೫೦.೯% ಮಹಿಳಾ ಜನಸಂಖ್ಯೆ ಹೊಂದಿದೆ. ಕಕ್ಯಪದವು ೭೧.೪% ಒಟ್ಟು ಸಾಕ್ಷರತೆ ಮತ್ತು ೩೩.೪% ಮಹಿಳಾ ಸಾಕ್ಷರತೆಯನ್ನು ಹೊಂದಿದೆ. ಕಕ್ಯಪದವು ಪಿಲಿಬೈಲು,ಬರ್ದಡ್ಡ, ಬೋಳ್ಯ, ಹೆಗ್ಗನಗುರಿ, ಗಂಪದಡ್ಡ, ದಿಡಿಂಬಿಲ ಕಟ್ಟಡಪಡ್ಪು, ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಧಾರ್ಮಿಕ ಕ್ಷೇತ್ರಗಳು
[ಬದಲಾಯಿಸಿ]- ಶ್ರೀ ಪಂಚಾದುರ್ಗಪರಮೇಶ್ವರಿ ದೇವಿ ಕ್ಷೇತ್ರ
- ಉಳಿ ಗೋಪಾಲಕೃಷ್ಣ ದೇವಸ್ಥಾನ
- ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ
- ಜುಮಾ ಮಸೀದಿ ಕಕ್ಯಪದವು
ಶಿಕ್ಷಣ ಸಂಸ್ಥೆಗಳು
[ಬದಲಾಯಿಸಿ]- ಪಂಚದುರ್ಗ ಪ್ರೌಢಶಾಲೆ
- ಪುಣ್ಕೆದಡಿ ಶಾಲೆ
- ಎಲ್ ಸಿ ಆರ್ ಇಂಡಿಯನ್ ಶಾಲೆ ಕಕ್ಯಪದವು
- ಪುತ್ತಿಲ ಹಿರಿಯ ಪ್ರಾಥಮಿಕ ಶಾಲೆ
ಕಕ್ಯಪದವು ಕಂಬಳ
[ಬದಲಾಯಿಸಿ]ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು,ತುಂಗಪ್ಪ ಬಂಗೇರರ ಇವರೆಲ್ಲರ ಸಹಕಾರ ದೊಂದಿಗೆ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಮೈರ ಇವರ ಆಶ್ರಯದಲ್ಲಿ ಕಕ್ಯಪದವು ಸತ್ಯ ಧರ್ಮ ಜೋಡುಕರೆ ಕಂಬಳ ಆರಂಭವಾಯಿತು.ಇದೀಗ ಸುಮಾರು 10ವರ್ಷ ಗಳಿಂದ ಕಕ್ಯಪದವಿನಲ್ಲಿ ಕಂಬಳವನ್ನ ನಡೆಸುತ್ತಿದ್ದಾರೆ ಸತ್ಯ ಧರ್ಮ ಅನ್ನುವ ಹೆಸರಿನೊಂದಿಗೆ ಕಕ್ಯಪದವು ಕಂಬಳ 2013 ಆರಂಭವಾಯಿತು ಇಂದಿಗೂ ಕಂಬಳ ನಡೆಯುತ್ತಿದೆ ಹಾಗೂ ಈ ಕಂಬಳವು ಜಿಲ್ಲಾ ಕಂಬಳದಲ್ಲಿ ಒಂದಾಗಿದೆ.
ಕಕ್ಯಪದವು ಪರಿಸರದ ಕಂಬಳದ ಕೋಣಗಳು
[ಬದಲಾಯಿಸಿ]- ಜೈತುಳುನಾಡ್ ಕಕ್ಯಪದವು ಪುಣ್ಕೆದಡಿ ಪ್ರಖ್ಯಾತ್ ಭಂಡಾರಿ
- ಕಕ್ಯಪದವು ಪೆಂರ್ಗಾಲು
- ಕಕ್ಯಪದವು ಕಲೆತ್ಯಾರು
- ಕಕ್ಯಪದವು ಕಕ್ಯ