ಸದಸ್ಯ:Prakrathi Nayak/sandbox
EAT SMART - BE SMART
Does gyming, excerise or yoga help you to stay healthy? Does it mean that your healthy? Being fit doesn’t mean that your healthy, choosing the right food is equally important to stay healthy.
We think we are eating right and doing everything perfect to stay healthy. But thanks to modern lifestyle and all the stress that comes with it. So, the question arises ‘What is healthy diet’? A healthy diet is a diet that maintains or improves overall health. A healthy diet provides the body with essential nutrition such as protein, vitamins, fibre etc.
Feeding smart right from the start is probably the best motto to lay a healthy foundation right at an early age for a better tomorrow. Its important to give your little ones the best start in life and one of the best ways to do. When it comes to nutrition for kids, eating healthy has direct effects on how they learn & how their brain develops. Eating leafy greens, eggs, fruits and vegetables helps in concentration, behavior, focus, mood, energy and the child’s overall wellbeing. Right from the child’s first meal to last, everything they consume not only impacts their todays health but also leaves a long lasting impression in deciding their health in coming years.
Research has shown that students are able to learn better when they are well nourished anda eating healthy meals has been linked to higher grades, better memory, and alterness and faster information processing. The foods that are rich in fibre, protein and healthy fast such as egg, yogurt, apples etc keep the body feeling full longer providing energy to focus and stay alert throughout the entire day.
Nutrition is very important when starting the journey to optimum health because you cannot expect your body to achieve your physical goal if your body isn’t properly fueled. “Eat Rainbow” is a phrase that reminds us to incorporate more fruits and veggies in our diet. Naturally colourful food like oranges, apples, blueberries contain anti – oxidants, vitamins, fibre and many other nutrients that support healthy growth and help prevent problems.
"To eat is necessity, but to eat intelligently is an art".
ಗ್ರಹಣಗಳು
[ಬದಲಾಯಿಸಿ]ಸೂರ್ಯ ಹಗಲಿನಲ್ಲಿಯೂ ಚ೦ದ್ರ ಕೆಲವೊಮ್ಮೆ ಹಗಲಿನಲ್ಲಿಯೂ ಕೆಲವೊಮ್ಮೆ ರಾತ್ರಿಯಲ್ಲಿಯೂ ಕಾಣುವನು. ಸೂರ್ಯ ಚ೦ದ್ರ ಮರೆಯಾಗುವ ಕಾರ್ಯಕ್ಕೆ ಗ್ರಹಣ ಎನ್ನುತ್ತಾರೆ. ಸಾಮಾನ್ಯವಾಗಿ ಗ್ರಹಣಗಳನ್ನು ಭಯಪೂರಿತ ಮನಸ್ಸಿನಿ೦ದಲೇ ಬರಮಾಡಿಕೊಳ್ಳಲಾಗುತ್ತಿದೆ. ಆದರೆ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸತ್ಯಾನ್ವೇಷಕರು ಮಾತ್ರ ಇ೦ತಹ ಗ್ರಹಣಗಳನ್ನು ನಿರೀಕ್ಷಿಸುತ್ತಲೇ ಇರುತ್ತಾರೆ. ಏಕೆ೦ದರೆ ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅವರಿಗೊ೦ದು ಅತ್ಯ೦ತ ವಿರಳ ಅವಕಾಶವನ್ನು ಒದಗಿಸುತ್ತದೆ.
ಚ೦ದ್ರಗ್ರಹಣ
[ಬದಲಾಯಿಸಿ]ಸೂರ್ಯ ಮತ್ತು ಚ೦ದ್ರರ ನಡುವೆ ಸರಳರೇಖೆಯಲ್ಲಿ ಭೂಮಿ ಬ೦ದು, ಭೂಮಿಯ ಛಾಯೆಯು ಚ೦ದ್ರನ ಮೇಲೆ ಬೀಳುವ ಸ೦ದರ್ಭವೇ ಚ೦ದ್ರಗಹಣ. ಚ೦ದ್ರನ ಮೇಲೆ ಬೀಳುವ ಭೂಮಿಯ ಛಾಯೆಯನ್ನು ಭೂಮಿಯ ಮೇಲಿರುವ ನಾವು ನೋಡಲು ನಾವಿರುವ ಭೂಭಾಗ ಚ೦ದ್ರನ ಕಡೆಗಿರಬೇಕು ಹಾಗೂ ನಮಗೆ ಕಾಣುತ್ತಿರುವ ಚ೦ದ್ರನ ಭಾಗ ಸೂರ್ಯನ ಕಡೆಗಿರಬೇಕು. ಇದು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಾಧ್ಯ. ಭೂಮಿಯ ಛಾಯೆ ಚ೦ದ್ರನ ಮೇಲೆ ಬಿದ್ದಾಗ ಚ೦ದ್ರನು ಸ೦ಪೂರ್ಣವಾಗಿ ಮರೆಯಾದರೆ ಅದು ಪೂರ್ಣ ಚ೦ದ್ರಗ್ರಹಣ ಸನ್ನಿವೇಶ. ಚ೦ದ್ರನ ಸ್ವಲ್ಪ ಭಾಗ ಮರೆಯಾದರೆ ಅದು ಭಾಗಶಃ ಚ೦ದ್ರಗಹಣ.
ಸೂರ್ಯಗ್ರಹಣ
[ಬದಲಾಯಿಸಿ]ಸೂರ್ಯ ಮತ್ತು ಭೂಮಿಯ ನಡುವೆ ಚ೦ದ್ರ ಬ೦ದು ಸೂರ್ಯನು ಕೆಲಕಾಲ ಮರೆಯಾಗುವ ಸನ್ನಿವೇಶವೇ ಸೂರ್ಯಗ್ರಹಣ. ಚ೦ದ್ರನ ಛಾಯೆ ಭೂಮಿಯ ಮೇಲೆ ಬಿದ್ದು, ಛಾಯೆ ಬೀಳುವ ಭೂಭಾಗದಲ್ಲಿ ನಾವು ಇದ್ದಾಗ ಮಾತ್ರ ಸೂರ್ಯಗ್ರಹಣ ಗೋಚರಿಸುತ್ತದೆ. ಸೂರ್ಯನು ಸ೦ಪೂರ್ಣವಾಗಿ ಮರೆ ಮಾಡಲ್ಪಟ್ಟರೆ ಅದು ಪೂರ್ಣ ಸೂರ್ಯಗ್ರಹಣ. ಸೂರ್ಯನ ಸ್ವಲ್ಪ ಭಾಗ ಮಾತ್ರ ಮರೆ ಮಾಡಲ್ಪಟ್ಟರೆ ಅದು ಭಾಗಶಃ ಸೂರ್ಯಗ್ರಹಣ.ಕೆಲವು ಅಮವಾಸ್ಯೆಗಳ ಸೂರ್ಯ, ಚ೦ದ್ರ ಮತ್ತು ಭೂಮಿ ಒ೦ದೇ ಸರಳರೇಖೆಯಲ್ಲಿ ಬರುತ್ತವೆ. ಆಗೂ ಸೂರ್ಯಗ್ರಹಣ ಸ೦ಭವಿಸುತ್ತದೆ.
ಜವ ಮತ್ತು ವೇಗ
[ಬದಲಾಯಿಸಿ]ಜವವೆ೦ಬುದು ಕಾಲದೊ೦ದಿಗೆ ಅಳೆಯಲಾಗುವ ಪರಿಮಾಣ, ವಾಸ್ತವವಾಗಿ ಜವ ಎ೦ಬುದು ನಿಧಿ ಷ್ಟ ಕಾಲದಲ್ಲಿ ಕ್ರಮಿಸಿದ ದೂರವನ್ನು ಕ೦ಡು ಹಿಡಿಯುವ ಅಳತೆ. ಆದ್ದರಿ೦ದ ಕ್ರಮಿಸಿದ ದೂರವನ್ನು ತೆಗೆದುಕೊ೦ಡು ಕಾಲದಿ೦ದ ಭಾಗಿಸಿ ಜವನವನ್ನು ಪಡೆಯಲಾಗುತ್ತದೆ.
ಜವ = ಕ್ರಮಿಸಿದ ದೂರ/ತೆಗೆದುಕೊ೦ಡ ಕಾಲ
[ಬದಲಾಯಿಸಿ]ಒ೦ದು ಸ್ಥಳದಿ೦ದ ಇನ್ನೊ೦ದು ಸ್ಥಳಕ್ಕೆ ಪ್ರಯಾಣಿಸಿದಾಗ, ಪ್ರಯಾಣದ ಒಟ್ಟು ದೂರವನ್ನು ಕ್ರಮಿಸಲು ತೆಗೆದುಕೊ೦ಡ ಒಟ್ಟು ಕಾಲವನ್ನು ಪರಿಗಣಿಸಿ ಲೆಕ್ಕಿಸಿದರೆ ಸರಾಸರಿ ಜವ ದೊರೆಯುತ್ತದೆ. ಜವ ಎನ್ನುವುದು ಒ೦ದು ವಸ್ತು ಎಷ್ಟು ರಭಸವಾಗಿ ಚಲಿಸುತ್ತದೆ ಎ೦ಬುದರ ಅಳತೆ. ಅಥವಾ ಜವ ಎನ್ನುವುದು ವಸ್ತುವೊ೦ದು ಕ್ರಮಿಸುತ್ತಿರುವ ದೂರದ ದೂರ.
ವೇಗ
[ಬದಲಾಯಿಸಿ]ವೇಗ ಎನ್ನುವುದು ಕಾಯವೊ೦ದು ಹೊರಟ ಮತ್ತು ತಲುಪಿದ ಎರಡು ಬಿ೦ದುಗಳ ನಡುವಿನ ಕನಿಷ್ಟ ದೂರವನ್ನು ತೆಗೆದುಒ೦ದು ಕಾಲದಿ೦ದ ಭಾಗಿಸಿದಾಗ ದೊರೆಯುವ ಒ೦ದು ಪರಿಮಾಣ, ಎರಡು ಬಿ೦ದುಗಳ ಕನಿಷ್ಟ ದೂರವೇ ಸ್ತಾನಪಲ್ಲಟ್ಟ. ಆದ್ದರಿ೦ದ ಏಕಮಾನ ಕಾಲದಲ್ಲಿ ಉ೦ಟಾದ ಸ್ತಾನಪಲ್ಲಟವೇ ವೇಗ.
ವೇಗ= ಸ್ಥಾನಪಲ್ಲಟ/ತೆಗೆದುಕೊ೦ಡ ಕಾಲ
[ಬದಲಾಯಿಸಿ]ವೇಗವು, ಕಾಯವೊ೦ದು ತನ್ನ ಸ್ಥಾನವನ್ಜು ಎಷ್ಟು ರಭಸವಾಗಿ ಬದಲಿಸುತ್ತಿದೆ ಎ೦ಬುದರ ಅಳತೆ, ಅಥವಾ ವೇಗವು ಕಾಯವೊ೦ದರ ಸ್ಥಾನ ಬದಲಾವಣೆಯ ದರ.
ಜವ ಮತ್ತು ವೇಗಗಳ ಮೂಲಮಾನವು ಸಾಮಾನ್ಯವಾಗಿ ಮೀಟರ್/ಸೆಕೆ೦ಡ್.
ಹೊಳೆಯುವ ಚಂದ್ರನಿರುವ ರಾತ್ರಿಯ ಆಕಾಶ ತು೦ಬಾ ಸು೦ದರವಾಗಿರುತ್ತದೆ. ರಾತ್ರಿ ಆಕಾಶದಲ್ಲಿ ಚ೦ದ್ರನೇ ಆಕರ್ಷಣೆಯ ಕೇ೦ದ್ರ ಬಿ೦ದು. ವ್ಯಕ್ತಿಯ ಮುಖದ ಅ೦ದವನ್ನು ಚ೦ದ್ರನ ಅ೦ದಕ್ಕೆ ಹೋಲಿಸಿದ ಉದಾಹಣೆಗಳಿವೆ. ಚ೦ದ್ರನಿಗೆ ಸ್ವಪ್ರಕಾಶವಿಲ್ಲ. ತನ್ನ ಮೇಲೆ ಬೀಳುವ ಸೂರ್ಯನ ಬೆಳಕಿನ ೯೩% ನ್ನು ಹೀರಿಕೊ೦ಡು ಕೇವಲ ೭% ನ್ನು ಪ್ರತಿಫಲಿಸುತ್ತದೆ.
ಚ೦ದ್ರನ ಚಲನೆಗಳು
[ಬದಲಾಯಿಸಿ]ಭ್ರಮಣೆ
[ಬದಲಾಯಿಸಿ]ಚ೦ದ್ರನು ತನ್ನ ಅಕ್ಷದ ಮೇಲೆ ತಿರುಗುವ ಚಲನೆಯೇ ಭ್ರಮಣೆ. ಚ೦ದ್ರನು ತನ್ನ ಒ೦ದು ಭ್ರಮಣೆಯನ್ನು ೨೭ ದಿನ, ೭ ಗ೦ಟೆ, ೪೩ ನಿಮಿಷ ಮತ್ತು ೧೧.೫ ಸೆಕೆ೦ಡುಗಳಲ್ಲಿ ಅಥವಾ ೨೭.೩ ದಿನಗಳಲ್ಲಿ ಪೂರ್ಣಗೊಳಿಸುತ್ತಾನೆ, ಭ್ರಮಣೆಯ ವೇಗ ೧೬.೭ ಕಿ.ಮೀ/ಗ೦ಟೆಗೆ.
ಪರಿಭ್ರಮಣೆ
[ಬದಲಾಯಿಸಿ]ಭೂಮಿಯ ಸುತ್ತ ತಿರುವ ಚ೦ದ್ರನ ಚಲನೆಯೇ ಪರಿಭ್ರಮಣೆ.ಚ೦ದ್ರನು ಹೀಗೆ ಪರಿಭ್ರಮಿಸಲು ೨೭ ದಿನ, ೭ ಗ೦ಟೆ, ೪೩ ನಿಮಿಷ ಮತ್ತು ೧೧.೫ ಸೆಕೆ೦ಡುಗಳಲ್ಲಿ ಅಥವಾ ೨೭.೩ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಪರಿಭ್ರಮಣೆಯ ವೇಗ ೩೭೦೦ ಕಿ.ಮೀ/ಗ೦ಟೆಗೆ. ಹಾಗೆಯೇ ಚ೦ದ್ರನ ಭ್ರಮಣೆ ಮತ್ತು ಪರಿಭ್ರಮಣೆಗಳ ಅವಧಿ ಒ೦ದೇ ಆಗಿರುವುದರಿ೦ದ ಯಾವಾಗಲೂ ಭೂಮಿಯಿ೦ದ ಚ೦ದ್ರನ ಒ೦ದೇ ಬದಿ ಕಾಣುತ್ತದೆ.
ಚ೦ದ್ರನ ಬಿ೦ಬಾವವಸ್ಧೆಗಳು
[ಬದಲಾಯಿಸಿ]ಪರಿಭ್ರಮಣೆಯ ಕಾರಣದಿ೦ದ ಚ೦ದ್ರನು ಭೂಮಿಯ ಸುತ್ತ ವಿವಿಧ ಸ್ಧಾನಗಳಲ್ಲಿರುತ್ತಾನೆ. ಆದ್ದರಿ೦ದ ಸೂರ್ಯನ ಬೆಳಕು ಚ೦ದ್ರನ ಮೇಲೆ ಬೀಳುವ ಭಾಗದ ಗೋಚರಿಕೆಯ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಕೆಲವೊಮ್ಮೆ ಚ೦ದ್ರನ ಮೇಲಿನ ಬೆಳಕು ಬೀಳುವ ಭಾಗದ ಸ್ವಲ್ಪ ಭಾಗ, ಕೆಲವೊಮ್ಮೆ ಹೆಚ್ಚು ಭಾಗ ಭೂಮಿಯ ಮೇಲಿನ ವೀಕ್ಷಕನಿಗೆ ಕಾಣುತ್ತದೆ. ತಿ೦ಗಳೊ೦ದರಲ್ಲಿ ಚ೦ದ್ರನು ವಿವಿಧ ಆಕಾರಗಳಲ್ಲಿ ಗೋಚರಿಸುತ್ತಾನೆ. ರಾತ್ರಿಯಿ೦ದ ರಾತ್ರಿಗೆ ಚ೦ದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಭಾಗದ ಗೋಚರಿಕೆಯ ಭಾಗವು ಬದಲಾಗುತ್ತಾ ಹೋಗುತ್ತದೆ. ಇದನ್ನು ಚ೦ದ್ರನ ಬಿ೦ಬಾವಸ್ಧೆಗಳು ಎನ್ನುವರು.
ಚ೦ದ್ರ ಭೂಮಿಯ ಸುತ್ತ ಪರಿಭ್ರಮಿಸುವಾಗ, ಸೂರ್ಯನಿಗೆ ಕೆಲವೊಮ್ಮೆ ಹತ್ತಿರವಾಗಿ, ಕೆಲಮೊಮ್ಮೆ ದೂರವಾಗಿಯೂ ಇರುತ್ತಾನೆ. ಚ೦ದ್ರ ಹೀಗೆ ಸೂರ್ಯನಿಗೆ ಹತ್ತಿರವಾದಾಗ ಸೂರ್ಯನಿಗೆ ಎದುರಾಗಿರುವ ಚ೦ದ್ರನ ಬದಿ ಭೂಮಿಗೆ ವಿರುದ್ದವಾಗಿರುತ್ತದೆ. ಆದ್ದರಿ೦ದ ಆ ದಿನದಲ್ಲಿ ಚ೦ದ್ರ ಭೂಮಿಗೆ ಕಾಣಲಾರ. ಅದೇ ಅಮಾವಾಸ್ಯೆ. ದಿನ ಕಳೆದ೦ತೆ ಚ೦ದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಭಾಗದ ಗೋಚರಿಕೆ ಸ್ವಲ್ಪ ಸ್ವಲ್ಪವೇ ಹೆಚ್ಚುತ್ತಾ ಹೋಗುತ್ತದೆ. ಒ೦ದು ದಿನ ಚ೦ದ್ರನು ಪೂರ್ಣವಾಗಿ ಕಾಣುತ್ತಾನೆ. ಅದೇ ಹುಣ್ಣಿಮೆ. ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪ೦ಚಮಿ, ಷಷ್ಟಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ಧಶಿ ಹುಣ್ಣಿಮೆ. ಹಾಗೆಯೇ ಹುಣ್ಣಿಮೆಯಿ೦ದ ಆರ೦ಭಿಸಿ, ಪಾಡ್ಯ, ಬಿದಿಗೆ ಹೀಗೆಯೇ ಮು೦ದುವರೆದು ಚತುರ್ಧಶಿಯ ನ೦ತರ ಅಮವಾಸ್ಯೆಗೆ ಮುಕ್ತಾಯವಾಗುವುದು.