ಸದಸ್ಯ:Prajwal Nice/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್[ಬದಲಾಯಿಸಿ]

ಆನ್ಲೈನ್ನಲ್ಲಿ ನಡೆಯುವಂತಹ ಹಣದ ವ್ಯವಹಾರಗಳನ್ನು ಮತ್ತಷ್ಟು ಸುಲಭ ಮಾಡುವ ಉದ್ದೇಶದಿಂದ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಓಅPI), ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಣದಲ್ಲಿ ಇದು ಕೆಲಸ ನಿರ್ವಹಿಸುತ್ತಿದ್ದು. ಗ್ರಾಹಕರು ತಮ್ಮ ಖಾತೆಯಿಂದ ಮತ್ತೊಂದು ಖಾತೆಗೆ ಅವರ ಮೊಬೈಲ್ ಫೋನ್‌ಗಳ ಮೂಲಕವೇ ಅತ್ಯಂತ ವೇಗವಾಗಿ ಹಣ ಕಳುಹಿಸುವ ವ್ಯವಸ್ಥೆಯಾಗಿದೆ. ಮಾರ್ಚ್ ೨೦೧೯ರ ದತ್ತಾಂಶಗಳ ಪ್ರಕಾರ ಯುಪಿಐನ ಅಡಿಯಲ್ಲಿ ೧೪೨ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದೆ ಹಾಗೂ ೧.೩೩೪ ಟ್ರಿಲಿಯನ್ ಮೌಲ್ಯದ ೭೯೯.೫೪ ಮಿಲಿಯನ್ ವಹಿವಾಟುಗಳು ನಡೆದಿದೆ.  ಆಗಸ್ಟ್ ೨೦೧೯ರವರೆಗೆ ಗಮನಿಸುವುದಾದರೆ ೧,೦೨೯.೪೪ ಕೋಟಿ ಟ್ರಾನ್ಸಾಕ್ಷನ್‌ಗಳಿಗೆ ಯುಪಿಐ ತಂತ್ರಜ್ಞಾನವು ಸಾಕ್ಷಿಯಾಗಿದೆ. ಈ ವಿಶೇಷ ಮೊಬೈಲ್ ತಂತ್ರಜ್ಞಾನವು ತನ್ನ ೩೭ ತಿಂಗಳುಗಳ ಕಾರ್ಯಾವಧಿಯಲ್ಲಿ  ೧೭.೨೯ ಲಕ್ಷ ಕೋಟಿ ಮೌಲ್ಯದ ಹಣವನ್ನು ವ್ಯವಹಾರ ಮಾಡಿದೆ.

ಸೇವೆಗಳು[ಬದಲಾಯಿಸಿ]

ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಂತರ್ ಬ್ಯಾಂಕುಗಳ ನಡುವಿನ ಹಣದ ವಹಿವಾಟು ಮಾಡುವ ಆನ್ಲೈನ್ ತಂತ್ರಜ್ಞಾನವಾಗಿದೆ ಯು.ಪಿ.ಎನಿಂದ ಮಾನ್ಯತೆ ಪಡೆದಿರುವಂತ ಈ ತಂತ್ರಜ್ಞಾನವು ಒಂದೇ ಆಪ್ ನೊಳಗೆ ಹಲವು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿಕೊಳ್ಳುವಂತಹ ಅವಕಾಶ ಕಲ್ಪಿಸಿದೆ. ಈ ಕೆಳಗೆ ತಿಳಿಸಿದಂತಹ ವಿಧಾನಗಳ ಮೂಲಕ ಹಣ ಕಳಿಸುವ ಅಥವಾ ಪಡೆದುಕೊಳ್ಳುವ ವ್ಯವಹಾರವನ್ನು ಮಾಡಬಹುದಾಗಿದೆ.

  1. ವರ್ಚುಯಲ್ ಪೇಮೆಂಟ್ ಅಡ್ರೆಸ್ ಅಥವಾ ಯೂಸರ್ ಐಡಿ ಮೂಲಕ ಹಣವನ್ನು ಕಳುಹಿಸಬಹುದಾಗಿದೆ ಹಾಗೂ ಹಣದ ಕೋರಿಕೆ ಸಂದೇಶವನ್ನು ಕೂಡ ಕಳುಹಿಸಬಹುದಾಗಿದೆ.
  2. ಬ್ಯಾಂಕಿನ ಜೊತೆಗೆ ಜೋಡಣೆಯಾಗಿರುವಂತಹ ಮೊಬೈಲ್ ಸಂಖ್ಯೆಯ ಮೂಲಕವೂ ಕೂಡ ಹಣವನ್ನು ಕಳುಹಿಸುವ ಅಥವಾ ಪಡೆದುಕೊಳ್ಳುವ ಅವಕಾಶವಿದೆ.
  3. ಖಾತೆಯ ವಿವರಗಳು ಮತ್ತು ಐ.ಎಫ್.ಎಸ್.ಸಿ ಕೋಡ್‌ನ ಸಹಾಯದಿಂದ ಹಣವನ್ನು ಕಳುಹಿಸುವ ಅಥವಾ ಪಡೆದುಕೊಳ್ಳುವ ಅವಕಾಶವಿದೆ.
  4. ಆಧಾರ್ ಸಂಖ್ಯೆಯ ಮೂಲಕವು ಹಣವನ್ನು ಕಳುಹಿಸುವ ಅಥವಾ ಪಡೆದುಕೊಳ್ಳುವ ಅವಕಾಶ ಈ ತಂತ್ರಜ್ಞಾನ ಹೊಂದಿದೆ.
  5. ಖಾತೆಯ ವಿವರಗಳು ಕೂಡಿ ಕೊಂಡಿರುವAತಹ ಬಾರ್ಕೋಡ್ ಮೂಲಕವೂ ಹಣವನ್ನು ಕಳುಹಿಸುವ ಅಥವಾ ಪಡೆದುಕೊಳ್ಳುವ ಅವಕಾಶವಿದೆ.

ಮೊಬೈಲ್ ಆಪ್‌ಗಳು[ಬದಲಾಯಿಸಿ]

ಯುಪಿಎನಿಂದ ಮಾನ್ಯತೆ ಪಡೆದ ಮೊಬೈಲ್ ಆಪ್‌ಗಳ ಮೂಲಕ ಬ್ಯಾಂಕ್‌ಗಳಿAದ ಹಣ ಕಳಿಸುವ ಅಥವಾ ಪಡೆದುಕೊಳ್ಳುವ ವ್ಯವಹಾರ ಮಾಡಬಹುದಾಗಿದೆ.

ಯು.ಪಿ.ಐ ೨.೦[ಬದಲಾಯಿಸಿ]

ಆಗಸ್ಟ್ ೧೬ ೨೦೧೮ ಯು.ಪಿ.ಐ ೨.೦ ಅನ್ನು ಬಿಡುಗಡೆ ಮಾಡತು, ಈ ತಂತ್ರಜ್ಞಾನವು ಕಳುಹಿಸಿದ ಅಥವಾ ಪಡೆದುಕೊಂಡ ಹಣದ ರಶೀದಿಯನ್ನು ಅಪ್ ನ ಒಳಗಡೆಯೇ ಸೆವ್ ಮಾಡಿಕೊಳ್ಳುವ ಸೌಲಭ್ಯ ಹೊಂದಿದೆ. ಹಣದ ವಹಿವಾಟುಗಳನ್ನು ಮತ್ತಷ್ಟು ಸುಲಭ ಮಾಡುವುದು ಹಾಗೆಯೇ ಇನ್ನಿತರ ಹೊಸ ಫೀಚರ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿ ಕೊಟ್ಟಿದ್ದು ಇದರ ವಿಶೆಷ.

ಯು.ಪಿ.ಐ ಬ್ಯಾಂಕುಗಳು[ಬದಲಾಯಿಸಿ]

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ವೆಬ್ಸೈಟ್ನಲ್ಲಿ ಯು.ಪಿಐ ಸೇವೆಗಳಿಗೆ ಅರ್ಹ ವಿರುವಂತಹ ಎಲ್ಲಾ ಬ್ಯಾಂಕುಗಳ ವಿವರಗಳನ್ನು ನೀಡಲಾಗಿದೆ ಮತ್ತು ಅದನ್ನು ಪೇಮೆಂಟ್ ಸರ್ವಿಸ್ ಪ್ರೋವಿದೇರ್ಸ್ ಎಂದು ಕರೆಯಲಾಗುತ್ತದೆ. ಈ ಪೇಮೆಂಟ್ ಸರ್ವಿಸ್ ಪ್ರೋವಿದೇರ್ಸ್ ತಮ್ಮದೇ ಆದ ಯು.ಪಿ.ಐ ಅಪ್ಲಿಕೇಶನ್‌ಗÀಳನ್ನು ಹೊಂದಿರುತ್ತವೆ. ಕೆಲವು ಬ್ಯಾಂಕುಗಳು ಸ್ವಂತ ಯುಪಿಐ ಅಪ್ಲಿಕೇಶನ್‌ಗಳನ್ನು ಹೊಂದಿರದ ಕಾರಣ, ಮೂರನೇ ವ್ಯಕ್ತಿಯ ಸಂಸ್ಥೆಗಳಿAದ ತಯಾರಿಸಲ್ಪಟ್ಟ ಯು.ಪಿ.ಐ ಅಪ್ಲಿಕೇಶನ್ನುಗಳನ್ನು ಬಳಸಿಕೊಳ್ಳುತ್ತದೆ.