ಸದಸ್ಯ:Praajna G/ನನ್ನ ಪ್ರಯೋಗಪುಟ8
ಗೋಚರ
ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಕಾರ್ಕಳ ತಾಲೂಕಿನಲ್ಲಿರುವ ಒಂದು ದೇವಸ್ಥಾನ. ಇದು ಕಾರ್ಕಳ-ಹಿರಿಯಡ್ಕ-ಉಡುಪಿ ರಸ್ತೆಯಲ್ಲಿಯ ಗುಡ್ಡೆ ಅಂಗಡಿ ಎಂಬಲ್ಲಿಂದ ಸುಮಾರು ಮೂರುವರೆ ಕಿ. ಮೀ. ದೂರದಲ್ಲಿದೆ.
ಇತಿಹಾಸ
[ಬದಲಾಯಿಸಿ]ಅಲ್ಲಿಯ ನಂಬಿಕೆಯ ಪ್ರಕಾರ ಶಿವನ ಆರಾಧನೆಯಲ್ಲಿ ನಿರತರಾಗಿ ಸಿದ್ಧಿಹೊಂದಿದ ಅಡಕತ್ತಾಯ ಎಂಬ ತಪಸ್ವಿಯು ಶಿವನ ಗಣಗಳೊಂದಿಗೆ ಬಂದು ಕಣಂಜಾರುವಿನಲ್ಲಿ ಶಿವನ ದೇವಾಲಯವನ್ನು ನಿರ್ಮಿಸಿ ಅಲ್ಲಿ ಅವನ ಅಸಂಖ್ಯ ಗಣಗಳನ್ನು ನೆಲೆಗೊಳಿಸಿದನು. ನಂದಳಿಕೆ, ಕವತ್ತಾರು, ಹಿರಿಯಡ್ಕ ಮುಂತಾದ ೬೪ ಅಡಕಗಳಲ್ಲಿ ಈ ತಪಸ್ವಿ ಶಿವಾಲಯಗಳನ್ನು ನಿರ್ಮಿಸಿ ಅಲ್ಲಿ ಅವನ ಗಣಗಳನ್ನು ನೆಲೆಗೊಳಿಸಿದನು ಎಂಬ ನಂಬಿಕೆ ಇದೆ.
ದೇವರ ಬಗ್ಗೆ
[ಬದಲಾಯಿಸಿ]ಇಲ್ಲಿಯ ಪ್ರಧಾನ ಆರಾಧ್ಯದೇವ ಬ್ರಹ್ಮಲಿಂಗೇಶ್ವರ. ಇಲ್ಲಿ ಶಿವನ ಲಿಂಗ ಮತ್ತು ಚತುರ್ಮುಖ ಬ್ರಹ್ಮನ ವಿಗ್ರಹ ಇದೆ.