ಸದಸ್ಯ:Poushak ponnanna/ನನ್ನ ಪ್ರಯೋಗಪುಟ2
ಗೋಚರ
ಕೊಡಗು (ಕೂರ್ಗ್) ಜಿಲ್ಲೆ, ಕರ್ನಾಟಕದಲ್ಲಿ ದಟ್ಟಅರಣ್ಯದಿಂದ ಕೂಡಿದ ಹಾಗೂ ಅತೀ ಸುಂದರವಾದ ಬೆಟ್ಟಗುಡ್ಡಗಳ ಹೊಂದಿರುವ ಪಶ್ಚಿಮ ಘಟ್ಟಕ ಕರಾವಳಿ ಪ್ರದೇಶವಾಗಿದೆ. ಜಿಲ್ಲೆಯು ನೈರುತ್ಯ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ 4,102 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ( 1,584 ಚ.ಮೀ) ಹೊಂದಿದೆ ಹೆಚ್ಚು ಓದಿ ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ.
- ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
- ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
- ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ
- ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ
- ಅಲ್ಲೆ ಆ ಕಡೆ ನೋಡಲಾ
- ಅಲ್ಲೆ ಕೊಡಗರ ನಾಡಲಾ
- ಅಲ್ಲೆ ಕೊಡಗರ ಬೀಡಲಾ
ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. .