ವಿಷಯಕ್ಕೆ ಹೋಗು

ಸದಸ್ಯ:Poornima1310072/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲಂಕಾರಗಳು

ಮನುಷ್ಯನು ಚೆನ್ನಾಗಿ ಕಾಣುವ ಉದ್ಧೆಶದಿಂದ ವಡವೆ , ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾನೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚೆಸಲು ಸುಂದರ ವಸ್ತುಗಳಿಂದ ಅಲಂಕರಿಸಿತ್ತೇವೆ . ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತಾನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು ಉದಾ : ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು ಎಂದು ಹೇಳುವ ಬದಲಿಗೆ ಪೂರ್ವ ದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತೈದೆಯ ಹಣೆಯ ಕುಂಕುಮದಂತೆ ಶೋಭಿಸುತ್ತಿದ್ದನು ಎಂದು ಹೀಳಿದಾಗ ಮಾತಿನ ಸೌಂದರ್ಯ ಹೆಚ್ಛುವುದು

   ಅಲಂಕಾರದಲ್ಲಿ ಎರಡು ವಿಧ

೧)ಅರ್ಥಾಲಂಕಾರ

   ಅ. ಉಪಮಾಲಂಕಾರ
   ಆ. ರೂಪಕಾಲಂಕಾರ
   ಇ. ಉತ್ಪ್ರೇಕ್ಷಾಲಂಕಾರ
   ಈ. ಅರ್ಥಂತರನ್ಯಾಸ ಅಲಂಕಾರ
   ಉ. ದೃಷ್ಟಾಂತ ಅಲಂಕಾರ
   ಊ. ಶ್ಲೇಷಾಲಂಕಾರ

೨)ಶಬ್ದ್ದಾಲಂಕಾರ

೧)ಅರ್ಥಾಲಂಕಾರ : ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದು ಅರ್ಥಾಲಂಕಾರ

 ಅ. ಉಪಮಾಲಂಕಾರ : ಎರಡು  ವಾಸ್ತ್ತುಗಳಿಗೆ  ಪರಸ್ಪರವಾಗಿ  ಇರುವ  ಸಾದೃಶ್ಯ (ಸಮಾನವಾದ) ಹೋಲಿಕೆಯೆನ್ನು  ತಿಳಿಸುವುದೇ  ಉಪಮಾಲಂಕಾರ  

ಉಪಮಾಲಂಕಾರದಲ್ಲಿ

ಉಪಮೇಯ = ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು

ಉಪಮಾನ = ಯಾವ ವಸ್ತುವಿಗೆ ಹೋಲಿಸುತ್ತೇವೆಯೋ ಆ ವಸ್ತು

ಸಮಾನಧರ್ಮ = ಉಪಮೇಯ , ಉಪಮಾನಗಳಲ್ಲಿ ಕಂಡು ಬರುವ ಸಮಾನ ಗುಣ

ಉಪಮಾವಾಚಕ = ಅಂತೆ , ಹಾಗೆ , ವೂಲ್ , ಅಂಗ ಎಂಬ ನಲ್ಕು ಅಂಶಗಳಿರುತ್ತದೆ

ಉದಾ : ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿವೆ

ಉಪಮೇಯ = ಮಗುವಿನ ಮುಖ

ಉಪಮಾನ = ಚಂದ್ರನ ಮುಖ

ಸಮಾನಧರ್ಮ = ಮನೋಹರ

ಉಪಮಾವಾಚಕ = ಅಂತೆ

ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನ ಮುಖಕ್ಕೆ ಸಮಾನವಾಗಿ ( ಸಾದೃಶ್ಯ) ಹೊಲಿಸಲಾಗಿದೆ ಆದ್ದರಿಂದ ಇದು ಉಪಮಾಲಂಕಾರ ( ಪೂರ್ಣ ಉಪಮಾಲಂಕಾರ )


 ಆ .ರೂಪಕಾಲಂಕಾರ : ಉಪಮೇಯ  ಉಪಮಾನಗಳಲ್ಲಿ  ಹೋಲಿಕೆಯು  ಬೀಧವಿಲ್ಲದೆ  ವರ್ಣಿತವಾದರೆ  ಅದು  ರೂಪಕಾಲಂಕಾರ ( ಉಪಮೇಯ , ಉಪಮಾನ  ಎರಡು  ಒಂದೇ  ಎಂದು  ವರ್ಣಿಸುವುದು ) 

ಉದಾ : ಸೀತೆಯ ಮುಖ ಕಮಲ

ಉಪಮೇಯ = ಸೀತೆಯ ಮುಖ

ಉಪಮಾನ = ಕಮಲ

ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖಕ್ಕೂ ಉಪಮಾನವಾದ ಕಮಲಕ್ಕೂ ಯಾವುದೇ ವ್ಯತ್ಯಸ ಇಲ್ಲ ಆದ್ದರಿಂದ ಇದು ರೂಪಕಾಲಂಕಾರ


 ೩. ಉತ್ಪ್ರೇಕ್ಷಾಲಂಕಾರ : ಉಪಮೇಯವನ್ನು  ಉಪಮಾನವನ್ನಾಗಿ  ಸಂಭಾವಿಸಿ  ಅಂದರೆ  ಕಲ್ಪಿಸಿ  ವರ್ಣಿಸುವುದನ್ನು  ಉತ್ಪ್ರೇಕ್ಷಾಲಂಕಾರ  ಎನ್ನುವರು  

ಉದಾ : ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು

ಉಪಮೇಯ = ಸೀತೆಯ ಮುಖ

ಉಪಮಾನ = ಕಮಲ

ಸಮನ್ವಯ : ಎಲ್ಲಿ ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕನಮಲವೆಂದು ಕಲ್ಪಿಸಿ ಹೇಳಲಾಗಿದೆ