ಸದಸ್ಯ:Poornima.Poorvi/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಲ್ಲಿಗಿಡ[ಬದಲಾಯಿಸಿ]

ಸಂ: ಅಮಲಕ

ಹಿಂ:ಆವ್‍ಲಾ

ಮ: ಆಂವುಲಾ

ಗು: ಆಮರನ್

ತೆ: ಉಸರೀಕಯ್

ತ: ನೆಲ್ಲಿಕಾಯ್

ವರ್ಣನೆ[ಬದಲಾಯಿಸಿ]

ಮಧ್ಯಮ ಗಾತ್ರದ, ಚಳಿಗಾಲದಲ್ಲಿ ಎಲೆಗಳು ಉದುರುವ ಚಿಕ್ಕ ಚಿಕ್ಕ ಎಲೆಗಳುಳ್ಳ ಮರ. ತೊಗಟೆಯು ಬಿಳಿ ಮಾಸು ಹಸಿರು ಹಳದಿ ಬಣ್ಣದ ಸಣ್ಣ ಸಣ್ಣ ಹೂಗಳು. ಕಾಯಿಗಳು ಗುಂಡಗೆ ಹಸಿರಾಗಿರುವುದು. ಬಲಿತ ಹಣ್ಣು ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ಮೆಲೆ ಸ್ಪಷ್ಟವಾದ ಕಾಣುವ ಆರು ರೇಖೆಗಳಿರುತ್ತದೆ.ಒಣಗಿದ ಕಾಯಿ ಕಪ್ಪಾಗಿದ್ದು, ಒಗರು ಹುಲಿಯಾಗಿರುತ್ತದೆ. ಇದನ್ನು ನೆಲ್ಲಿಚೆಟ್ಟು ಎನ್ನುತ್ತಾರೆ. ಸರಳ ಚಿಕಿತ್ಸೆಗಳು ವಿಟಮಿನ್ ಸಿ ಅನ್ನಸತ್ವದ ಭಂಡಾರ ಮಧುಮೇಹದಲ್ಲಿ ನೆಲ್ಲಿಚೆಟ್ಟು ಮತ್ತು ನೆರಳೆ ಬೀಜಗಳನ್ನು ಸಮವಾಗಿ ಸೇರಿಸಿ ಕುಟ್ಟಿ ನುಣುಪಾದ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು. ದಿವಸಕ್ಕೆ ಎರಡು ವೇಳೆ ತಲೆಸುತ್ತು ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿ ಸಮ ತೂಕ ರಾತ್ರಿ ನೀರಿನಲ್ಲಿ ನನೆ ಹಾಕುವುದು. ಬೆಳಿಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಮುಪ್ಪನ್ನು ಗೆಲ್ಲಲು,ದಿವ್ಯ ಕಾಂತಿ ಮತ್ತು ಬಲ ವೃದ್ಧಿಗಾಗಿ ಅಮೃತಬಳ್ಳಿ ಸತ್ವ ಆನೆ ನೆಗ್ಗಿಲು ಮತ್ತು ನೆಲ್ಲಿ ಚೆಟ್ಟು ಸಮರಿಸಿ, ನುಣ್ಣಗೆ ಚೂರ್ಣಿಸುವುದು. ಒಂದು ಓ್ಭ ಚಮಚ ಚೂರ್ಣಕ್ಕೆ ಸ್ವಲ್ಪ ಹಸುವಿನ ತುಪ್ಪ ಸೇರಿಸಿ, ಸೇವಿಸುವುದು ಮತ್ತು ಮೇಲೆ ಕೆಂಪು ಕಲ್ಲು ಸಕ್ಕರೆ ಪುಡಿ ಬೆರೆಸಿದ ಆಕಳ ಹಾಲನ್ನು ಕುಡಿಯುವುದು. ಜ್ಞಾಪಕ ಶಕ್ತಿ ಹೆಚ್ಚಲು ನೆಲ್ಲಿಚೆಟ್ಟು ಮತ್ತು ದನಿಯ,ತಲಾ 10-10 ಗ್ರಂ ತೆಗೆದುಕೊಂಡು, ಚೆನ್ನಾಗಿ ಕುಟ್ಟಿ ರಾತ್ರಿ ನೀರಿನಲ್ಲಿ ನನೆ ಹಾಕುವುದು. ಬೆಳಿಗ್ಗೆ ಈ ಕಲ್ಕವನ್ನು ಚೆನ್ನಾಗಿ ಕಿವುಚಿ, ಶೋಧಿಸಿಕೊಂಡು ಸಕ್ಕರೆ ಸೇರಿಸಿ ಸೇವಿಸುವುದು. ನಿದ್ರೆ ಬಾರದಿರುವಿಕೆ ಅಜೀರ್ಣವಾಗಿದ್ದರೆ ತಕ್ಕ ಉಪಚಾರ ಮಾಡುವುದು. ಒಂದು ಟೀ ಚಮಚ ನೆಲ್ಲಿಕಾಯಿ ರಸ ಅರ್ಧ ನೆಲ್ಲಿಚೆಟ್ಟಿನ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು ಮತ್ತು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಾಲನ್ನು ಕುಡಿಯುವುದು. ಮೂತ್ರದಲ್ಲಿ ಉರಿ ಮತ್ತು ಮೂತ್ರದ ತಡೆ ದಪ್ಪವಾಗಿರುವ 5-6 ಹಸೀ ನೆಲ್ಲಿಕಾಯಿಗಳನ್ನು ತಂದು ಬೀಜಗಳನ್ನು ಬೇರ್ಪಡಿಸಿ, ಸ್ವಲ್ಪ ಬೆಚ್ಚಗೆ ಮಾಡಿ,ರಸವನ್ನು ಹಿಂಡಿಕೊಳ್ಳುವುದು. ನಂತರ ರಸವನ್ನು ಬಟ್ಟೆಯಲ್ಲಿ ಸೋಸಿ, ಕಬ್ಬಿನ ಹಾಲಿನಲ್ಲಿ ಹಾಕಿ ಕುಡಿಯುವುದು.