ಸದಸ್ಯ:Poojagowdalg/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವ

ಶಿಶು ಬೆಳೆದಂತೆಲ್ಲಾ ತನ್ನ ಸುತ್ತಲ ಜಗತ್ತನ್ನು ವೀಕ್ಷಿಸತೊಡಗುತ್ತದೆ. ಅದರ ಸುಪ್ತ ಕುತೂಹಲ ಜಾಗೃತಗೊಳ್ಳುತ್ತದೆ. ಅದರ ಕಲ್ಪನಾಶಕ್ತಿ ಚುರುಕುಗೊಂಡು ಅದು ಪ್ರಕೃತಿಯ ಸ್ವರೂಪ ಅರಿತುಕೂಳ್ಳಲು ಪ್ರಯತ್ನಿಸುತ್ತದೆ. ಅದರ ಎಳೆಯ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಏಳುತ್ತದೆ. ತನ್ನ ಸೌಂತ ಅನುಭವಗಳಿಂದ ಅನೇಕ ಪ್ರಶ್ನೆಗಳಿಗೆ ಪ್ರಮಾಣೀಕೃತ ಉತ್ತರ ದೊರಕಿಸಿಕೊಂಡರೂ, ಹೆಚ್ಚಿನ ವಿವರಣೆಗೆ ತಂದೆ ತಾಯಿಯರನ್ನೋ, ದೊಡ್ಡವರನ್ನೋ ಕಾಡಲು ಪ್ರಾರಂಭಿಸುತ್ತದೆ. ಅನು ಹಾತೊರೆದು ಹಾಕುವ ಮುಗ್ಧ ಪ್ರಶ್ನೆಗಳಲ್ಲೊಂದು, "ನಾನು ಎಲ್ಲಿಂದ ಬಂದೆ"?

ಇಂತಹದೊಂದು ಪ್ರಶ್ನೆ ನಿತ್ಯ ನೂತನವಾಗಿ ಮಾನವನಿಗೆ ತನ್ನ ಸೃಷ್ಟಿಯಾದಂದಿನಿಂದ ಎದ್ದು ಜಿಜ್ಞಾಸೆಯಾಗಿಯೇ ಉಳಿದುಕೊಂಡು ಬಂದಿರುವುದಂತೂ ನಿಜ. ತನ್ನ ಹಾಗೂ ತನ್ನ ಕುಲದವರ ಜೀವನ ನಿರ್ವಹಣೆಗೆ ಬೇಟೆಯಾಡುವಾಗಲೂ, ಆಹಾರ ಸಂಗ್ರಹಿಸುವಾಗಲೂ ಮಾನವ ಮಾಹಿತಿಗಳನ್ನು ಸಂಗ್ರಹಿಸುತ್ತಾ ಹೋದ. ಆತನ ಗಮನಕ್ಕೆ ಬಂದ ಅತಿ ಮುಖ್ಯ ವಿಷಯವೆಂದರೆ ಎರಡು ರೀತಿಯ ವಸ್ತುಗಳಿವೆ; ಒಂದನೆಯವು, ತನ್ನಂತೆ ಚಲಿಸುತ್ತವೆ, ಸ್ವಯಂವೃದ್ಧಿಯಾಗುತ್ತವೆ, ನೀರು -ಆಹಾರಗಳನ್ನು ಸೇವಿಸುತ್ತವೆ. ಪ್ರಕೃತಿಯ ಶಕ್ತಿಗಳ ಪ್ರಭಾವಕ್ಕೆ ಸುಲಭವಾಗಿ ಸಪಂದಿಸುತ್ತವೆ. ಎರಡನೆಯವು ಚಲಿಸವು, ಬೆಳೆಯವು ಆಹಾರ ಸೇವಿಸುವು. ಅವು ಪ್ರಕೃತಿಯ ಪ್ರಭಾವಕ್ಕೂ ಒಳಗಾಗದೆ ಇದ್ದೆಡೆಯಲ್ಲಿಯೇ ಇರುವಂತಹು. ಜೀವಿಯಾದ ತನ್ನಲ್ಲಿ ನಿರ್ಜೀವಿಯಲ್ಲಿಲ್ಲದ ಎನೋ ಒಂದು ಇದೆ ಎಂದವನು ಮನಗಂಡಿರಬೇಕು.

ತಾನೊಂದು ಈ ವಿಶ್ವದ ತುಣಕು ಎಂಬ ಭಾವನೆಯೂ ಅವನಿಗೆ ಬಹು ಬೇಗನೆಯೇ ಉಂಟಾಗಿರಬೇಕು. ದಿನವಿಡೀ ಜೇವ ನಿರ್ವಹಣೆಗೆ ದುಡಿದು, ಬಳಲಿ ರಾತ್ರಿ ಅಂಗಾತವಾಗಿ ಮಲಗಿ ವಿಶಾಲ ಆಕಾಶದಲ್ಲಿ ಹೊಳೆಯುತ್ತಿದ್ದ ಅಸಂಖ್ಯಾತ ನಕ್ಷತ್ರಗಳನ್ನೂ ಇತರೇ ಆಕಾಶ ಕಾಯಗಳನ್ನು ವೀಕ್ಷಿಸಿದ. ಅತಿ ದೂರದಲ್ಲಿದ್ದರೂ ಅದ್ಬುತವಾಗಿ ಮತ್ತು ಪವಾಡದಂತೆ ಕಂಡ ಅವು ತನ್ನ ಅಳಿವು ಉಳಿವುಗಳ ಮೇಲೆ ಪ್ರಭಾವ ಬೀರುತ್ತಿದ್ದವೇನೋ ಎಂದವನಿಗೆ ಅನ್ನಿಸಿತು. ಅಂತೆಯೇ ಅದಕ್ಕೋಂದು ದೈವಿಕ ಸ್ವರೂಪವನ್ಉ ಕೊಟ್ಟ. ಈ ದೈವಿಕ ಚೇತನವೇ ತನ್ನ ಸುತ್ತಲ ಜಗತ್ತಿನ ಪರಿವರ್ತನೆಗೆ ಕಾರಣವೆಂದು ಭಾವಿಸಅಇದ. ಆದರೆ ನ್ಮ ಜ್ಞಾನ ಗ್ರಂಥಗಳೂ ಭೂಮಿಯ ಸಮಸ್ತ ವಸ್ತುಗಳೂ ಪಂಚಭೂತಗಳಿಂದಾಗಿವೆ ಎಂಬ ಸತ್ಯವನ್ನೇ ಅರಹುತ್ತವೆ. ಅವೇ ಪೃಥ್ವಿ (ಭೂಮಿ) ಅಪ್ (ನೀರು) ತೇಜ್ (ಬೆಂಕಿ) ವಾಯು (ಗಾಳಿ) ಮತ್ತು ಆಕಾಶ ಜೀವಿಗಳೂ ವಿಶ್ವದ ಒಂದು ಭಾಗ ಎಂಬುದೇ ಈ ಸ್ಪಷ್ಟ ಕಲ್ಪನೆಯ ತಿರುಳು.

ವಿಶ್ವವು ಎಷ್ಟು ಅಗಾಧವೆಂದರೆ ಅದರಲ್ಲಿ ಸುಮಾರು ನೂರು ಬಿಲಿಯನ್ ಕ್ಷೀರ ಪಥಗಳಿವೆ. ಇವು ಒಂದೊಂದು ಸುಮಾರು ನೂರು ಬಿಲಿಯನ್ ನಕ್ಷತ್ರಗಳನ್ನು ಹೊಂದಿದೆ. ಇವುಗಳಲ್ಲಿ ಸೂರ್ಯನೂ ಅಂಥ ಒಂದು ನಕ್ಷತ್ರ. ಅದರ ಸುತ್ಲಲೂ ೯ ಗ್ರಹಗಳು ಸುತ್ತುತ್ತಿದೆ. ಭೂಮಿಯಲ್ಲದೆ ಬುಧ, ಶುಕ್ರ , ಕುಜ , ಬೃಹಸ್ಪತಿ ಶನಿ ಯುರೆನೆಸ್, ನೆಪ್ಚೂನ್ ಮತ್ತು ಪ್ಲೂಟೋ ಇವೆಲ್ಲಾ ಸೇರಿ ಸೌರವ್ಐಹ ರಚಿಸುವೆ. ಇವಲ್ಲದೆ ೫೩ ಉಪಗ್ರಹಗಳೂ ಸಾವಿರಾರೂ ಕ್ಷುದ್ರಗ್ರಹಗಳೂ ಹಾಗೂ ಬಿಲಿಯನ್ ಗಟ್ಟಲೆ ಧೂಮಕೇತುಗಳೂ ಇವೆ.