ಸದಸ್ಯ:Poojaganeshlggowda13/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಜು[ಬದಲಾಯಿಸಿ]

ಅನಾದಿ ಕಾಲದಿಂದಲೂ ಮಾನವ ಉಪಯೋಗಿಸುವ ವಸ್ತುಗಳ ಪೈಕಿ ಗಾಜೂ ಒಂದು. ಐತಿಹಾಸಿಕ ಮತ್ತು ಪೌರಾಣಿಕ ದಾಖಲೆಗಳಲ್ಲಿ ಈ ಬಗ್ಗೆ ಉಲ್ಲೇಖಗಳಿವೆ. ಪ್ರಸ್ತುತ ದಿನಗಳಲ್ಲಿ ಗಾಜಿನ ಬಳಕೆ ಸಾಮಾನ್ಯವಾಗಿದ್ದರೂ, ಅನಾದಿ ಕಾಲದಲ್ಲಿ ಅಪರೂಪದ ಹಾಗೂ ದುಬಾರಿ ವಸ್ತುವಾಗಿತ್ತು. ಗಾಜನ್ನು ಆಕಸ್ಮಿಕವಾಗಿ ಮಾನವ ಉಪಜ್ಞೆಗೊಳಿಸಿದ ಎನ್ನಲಾಗಿದೆ. ಕೆಲವು ವರ್ತಕರು ಮರುಭೂಮಿಯಲ್ಲಿ ಅಡುಗೆ ಮಾಡುವಾಗ ಮಡಕೆಗಳನ್ನಿಡಲು ಸುಣ್ಣದ ಕಲ್ಲುಗಳನ್ನು ಬಳಸಿದ್ದರು.ಮಡಕೆಗಳನ್ನು ಕೆಳಗಿಡುವಾಗ ಪಾರದರ್ಶಕವಾದ ಹೊಸ ವಸ್ತುವನ್ನು ಕಂಡುಕೊಂಡರು.ಸುಣ್ಣದ ಕಲ್ಲು ಮರಳನ್ನು ಒಟ್ಟಿಗೆ ಕಾಸಿದಾಗ ವಸ್ತು ವನ್ನು ಕಂಡುಕೊಂಡರು.

ಸಾಮಾನ್ಯ ಗಾಜಿನ ತಯಾರಿಕೆ:-[ಬದಲಾಯಿಸಿ]

ಕಚ್ಚಾ ಪದಾರ್ಥಗಳು -೧ ಸೋಡ ಆಷ್ ೨ಸುಣ್ಣದ ಕಲ್ಲು ೩ಮರಳು

ತಯಾರಿಕ ಹಂತಗಳು:- ಸರಿಯಾದ ಪ್ರಮಾನದಲ್ಲಿ ಬೆರಸಿದ ಕಚ್ಚಾ ಪದಾರ್ಥಗಳೊಂದಿಗೆ ಗಾಜಿನ ಚೂರುಗಳನ್ನು ನಯವಾಗಿ ಪುಡಿಮಾಡಿಕೊಡಲಾಗುತ್ತದೆ. ಪುಡಿ ಮಾಡಿದ ಕಚ್ಚಾವಸ್ತುಗಳನ್ನು ಕುಲುಮೆಗೆ ಸೇರಿಸಿ ಸುಮಾರು ೨೦೭೩k ತಾಪವನ್ನು ಉಂಟುಮಾಡಬೇಕು.ಆಗ ಕಚ್ಚಾವಸ್ತುಗಳನ್ನು ದ್ರವಿಸಿ ರಾಸಾಯನಿಕವಾಗಿ ಸೇರಿ ಕ್ಯಾಲ್ಸಿಯಂ ಸಿಲಿಕೇಟ್ ಮತ್ತು ಸೋಡಿಯಂ ಸಿಲಿಕೇಟ್ ಏಕರೂಪ ಮಿಶ್ರಣ ಉಂಟಾಗುತ್ತದೆ.[ಬದಲಾಯಿಸಿ]

ಕಾರ್ಬನ್ ಡೈ ಆಕ್ಸೈಡ್ ಅನಿಲ ವಿಲೀನಗೊಂಡ ಗಾಜಿನಿಂದ ವಾತಾವರಣಕ್ಕೆ ಬಿಡುಗಡೆಗೊಂಡ ನಂತರ ನಿರ್ವರ್ಣೀಕರಣ ವಸ್ತುವನ್ನು ಸೇರಿಸಲಾಗುತ್ತದೆ.ಇದರಿಂದ ಒಂದು ವೇಳೆ ಒಳಿದಿರಬಹುದಾದ ಫೆರಸ್ ಸಂಯುಕ್ತಗಳನ್ನು ಮತ್ತು ಕಾರ್ಬನ್ ಅನ್ನು ಹೋಗಲಾಡಿಸಬಹುದು.

ಬಣ್ಣದ ಗಾಜನ್ನು ಪಡೆಯಬೇಕಾದರೆ ಈ ಹಂತದಲ್ಲಿ ಲೋಹದ ಸಂಯುಕ್ತಗಳನ್ನು ಬೆರೆಸಲಾಗುತ್ತದೆ.ಆನಂತರ ನಿಧಾನವಾಗಿ ತಣಿಸಬೆಕಾಗುತ್ತದೆ.

ಗಾಜಿನ ಗುಣಗಳು:-[ಬದಲಾಯಿಸಿ]
  • ಗಾಜು ರಾಸಾಯನಿಕವಾಗಿ ಜಡ ವಸ್ತು.
  • ಮೇಲ್ಮೈ ನುಣುಪಾಗಿರುವ ಕಾರಣ ಹೊಳಪು ಹೆಚ್ಚು. ಪಾಲಿಷ್ ಮಾಡುವುದರಿಂದ ಗಾಜಿನ ಮೆಲ್ಮೈಯನ್ನು ಹೊಳಪಾಗಿಸಲಾಗುತ್ತದೆ.
  • ಅನುಕೂಲಕ್ಕೆ ತಕ್ಕಹಾಗೆ ಗಾಜನ್ನು ವಿವಿಧ ಆಕಾರಕ್ಕೆ ತರಬಹುದು.
  • ಗಾಜಿಗೆ ಬಣ್ಣ ಕೊಡಬಹುದು. ಗಾಜು ಗೋಚರ ಬೆಳಕಿಗೆ ಪಾರದರ್ಶಕ.
  • ಗಾಜಿನ ಮೇಲೆ ವಿವಿಧ ರೀತಿಯ ಚಿತ್ತಾರಗಳನ್ನು ಬಿಡಿಸಬಹುದು.
  • ಬೆರೆಸುವ ವಸ್ತುಗಳ ಆಧಾರದ ಮೇಲೆ ಗಾಜಿನ ಲಕ್ಷಣಗಳನ್ನು ಬದಲಿಸಬಹುದು.
ಬೆಳಕಿನುಗುಣವಾಗಿ ಪಾರದರ್ಶಕವಾಗುವಂತೆ ಮಾಡಬಹುದು[ಬದಲಾಯಿಸಿ]

ಗಾಜಿನ ವಿಧಗಳು:-

  1. ಸೋಡಗಾಜು-ಅಗ್ಗವಾದದ್ದು. ಕಡಿಮೆ ತಾಪದಲ್ಲಿಯೂ ಸುಲಭವಾಗಿ ಮೆದುವಾಗುತ್ತದೆ
  2. ಗಟ್ಟಿ ಗಾಜು-ಅತಿ ಹೆಚ್ಚು ದ್ರವನ ಬಿಂದು ಇದೆ
  3. ಸೀಸದ ಗಾಜು-ಸೀಸದ ಆಕ್ಸೈಡನ್ನು ಬೆರೆಸಿ ತಯಾರಿಸಲಾಗುತ್ತದೆ.
  4. ಜೆನಾ ಗಾಜು-ವಾಣಿಜ್ಯ ಉದ್ದೇಶಕ್ಕಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಗಟ್ಟಿಯಾದ ಗಾಜು.
  5. ಸುರಕ್ಷಾ ಗಾಜು-ಈ ಗಾಜು ಒಡೆದಾಗ ಚೂಪಾದ ಅಂಚುಗಳು ಉಂಟಾಗುವುದಿಲ್ಲ. ಮೋಟಾರು ವಾಹನಗಳಲ್ಲಿ ಮತ್ತು ವಿಮಾನ ತಯಾರಿಕಾ ಘಟಕಗಳಲ್ಲಿ ಗಾಳಿ ತೆರೆಗಳಾಗಿ ಬಳಸುತ್ತಾರೆ.