ಸದಸ್ಯ:Poojaganesh13/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                        ಉಷ್ಣ                                                                             ಒಂದು ವಸ್ತುವನ್ನು ಕಾಯಿಸಿದಾಗ ಆ ದ್ರವ್ಯದಲ್ಲಿನ ಲಕ್ಷಣಗಳು ಉಷ್ಣತೆಯೊಂದಿಗೆ ಬದಲಾದಂತೆ ಆ ವಸ್ತುವಿನ ಭೌತಿಕ ಸ್ಥಿತಿಯು ತಾಪದೊಂದಿಗೆ ಬದಲಾಗುತ್ತದೆ. ಉದಾಹರಣೆಗೆ ಕಬ್ಬಿಣವನ್ನ ಕೆಂಪಗೆ ಕಾಯಿಸಿದಾಗ ಅದು ಮೃದುವಾಗುತ್ತದೆ.                                                         ದ್ವಿಲೋಹ ಪಟ್ಟಿ:-
         * ಬೇರೆ ಬೇರೆ ಲೋಹಗಳು ಬೇರೆ ಬೇರೆ ರೇಖೀಯ ವ್ಯಾಕೋಚನ ಸಹಾಂಕವನ್ನು ಹೊಂದಿರುತ್ತದೆ. ಎರೆಡು ಬೇರೆ ಬೇರೆ ಲೋಹಗಳಿಂದಾದ ಪಟ್ಟಿಗಳನ್ನು ಒಟ್ಟಿಗೆ ಜೋಡಿಸಿ ಕಾಯಿಸಿದಾಗ ಒಂದು ಮತ್ತೋಂದಕ್ಕಿಂತ ಹೆಚ್ಚು ಭಾಗುತ್ತದೆ 

ದ್ವಿಲೋಹ ಪಟ್ಟಿಯ ಅನ್ವಯಗಳು:-

  * ಸ್ಥಿರ ತಾಪವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಸಾಧನವೇ ಉಷ್ಣತಾಪಿ ಅಥವಾ ತಾಪಸ್ಥಾಪಿ. ದ್ವಿಲೋಹ ಪಟ್ಟಿಯ ತಾಪಸ್ಥಾಪಿ ವಿದ್ಯುತ್ ಮಂಡಲದ ಒಂದು ಭಾಗ. ತಾಪವು ನಿಗದಿತ ಮಟ್ಟವನ್ನು ತಲುಪಿದಾಗ ದ್ವಿಲೋಹ ಪಟ್ಟಿ ಒಂದು ಕಡೆ ಭಾಗಿ ಮಂಡಲದೊಂದಿಗೆ ತನ್ನ ಸಂಪರ್ಕವನ್ನು ಕಡಿದುಕೊಳ್ಳುತ್ತದೆ ತಾಪವು ಒಂದು ನಿಗದಿತ ಮಟ್ಟಕ್ಕಿಂತ ಕಡಿಮೆಯಾದಾಗ ದ್ವಿಲೋಹ ಪಟ್ಟಿಯು ವಿರುದ್ಧ ದಿಕ್ಕಿನಲ್ಲಿ ಬಾಗಿ ಮಂಡಲ ಪೂರ್ಣಗೊಳಿಸುತ್ತದೆ. ಈ ಕ್ರಿಯೆ ಪುನರಾವರ್ತನೆಗೊಳ್ಳುವುದರಿಂದ ಹೀಟರ್ ನಲ್ಲಿ ಸ್ಥಿರತಾಪವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ. ತಾಪಾಸ್ಥಾಪಿ ಸ್ವಿಚ್ಗಳಲ್ಲಿ ತಾಪನ್ನು ನಿಯಂತ್ರಿತವಾಗಿಡಲು ನಿಯಂತ್ರಣ ಮೊಳೆಗಳನ್ನು ಬಳಸುತ್ತಾರೆ.
* ತಾಪಸ್ಥಾಪಿ ಸ್ವಿಚ್ ಗಳನ್ನು ರೆಫ್ರೆಜಿರೇಟರ್, ಹವಾನಿಯಂತ್ರಣ ಸಲಕರಣೆ, ವಿದ್ಯುತ್ ಒಲೆ, ಇಸ್ತ್ರಿ ಪೆಟ್ಟಿಗೆ,ಮಂಜುಗಡ್ಡೆ ಕೇಂದ್ರಗಳಲ್ಲಿ ಬಳಸುತ್ತಾರೆ.
* ದ್ವಿಲೋಹ ಪಟ್ಟಿಯನ್ನು ಉಷ್ಣತಾ ಮಾಪಕದಲ್ಲಿಯೂ ಬಳಸುತ್ತಾರೆ.
* ಸುರುಳಿಯು ದ್ವಿಲೋಹ ಪಟ್ಟಿಯಿಂದಾಗಿದ್ದು ಇದನ್ನು ಮುಖಫಲಕದ ಮುಳ್ಳಿಗೆ ಜೋಡಿಸಿರುತ್ತಾರೆ. ತಾಪದಲ್ಲಿ ಬದಲಾದಂತೆ ಸುರುಳಿಯು ಸುತ್ತಿಕೊಳ್ಳುತ್ತದೆ. ಮತ್ತು ತೆರೆದುಕೊಳ್ಳುತ್ತದೆ ಇದಕ್ಕೆ ಹೊಂದಿಕೊಂಡತೆ ಮುಖಫಲದಲ್ಲಿನ ಮುಳ್ಳು ಚಲಿಸುತ್ತದೆ.
ದ್ರವಗಳ ವ್ಯಾಕೋಚನೆ: ನೀರಿನ ಅಸಂಗತ ವ್ಯಾಕೋಚನೆ
  ಶೀತವಲಯದಲ್ಲಿ ತಾಪಮಾನವು ೦ ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾದಾಗಲೂ ಅಲ್ಲಿನ ಜಲಚರಗಳು ಬದುಕ್ಕಿರುತ್ತವೆ. ಇದಕ್ಕೆ ಕಾರನ ನೀರಿನ ಒಂದು ವಿಚಿತ್ರ ಮತ್ತು ಅಸಕ್ತಿದಾಯಕ ವರ್ತನೆ, ಸಾಮಾನ್ಯವಾಗಿ ದ್ರವಗಳನ್ನು ಕಾಯಿಸಿದಾಗ ವ್ಯಾಕೋಚನೆಗೊಳ್ಳುತ್ತದೆ ಆದರೆ ನೀರಿಗೆ ಇದಕ್ಕೆ ತದ್ವಿರುದ್ದ ವರ್ತನೆ ಇದೆ.