ಸದಸ್ಯ:Pooja sweety/sandbox

ವಿಕಿಪೀಡಿಯ ಇಂದ
Jump to navigation Jump to search

ಅಣಬೆ ಕೃಷಿ


ಅಣಬೆ ಅತ್ಯುತ್ತಮ ಆಹಾರ.ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆ ಆರಿಸಿ ತಿನ್ನುತ್ತಾರಾದರೂ ಇದು ಅಪಾಯಕಾರಿಯೂ ಆಗಬಹುದು. ಆಯ್ಕೆಮಾಡುವುದು ತಿಳಿಯದಿದ್ದಾಗ ವಿಷಕಾರಿ ಅಣಬೆ ತಿಂದು ತೀವ್ರ ತೊಂದರೆಗಳಿಗೆ ಸಿಲುಕಿದವರ ಉದಾಹರಣೆಗಳು ಅಪಾರ.ನಗರಪ್ರದೇಶಗಳಲ್ಲಿ ಕೃತಕ ರೀತಿ ಅಣಬೆ ಕೃಷಿಯಿದೆ. ಇಂಥ ಕೃಷಿ ಹೆಚ್ಚಾಗಬೇಕಿತ್ತು. ಆದರೆ ಪ್ರಚಾರದ ಕೊರತೆ, ಜನಸಾಮಾನ್ಯರ ಒಲವು ಅತ್ತ ಬೆಳೆಯದ ಕಾರಣ ಅಣಬೆ ಕೃಷಿವೃತ್ತಿಯೂ ಜನಪ್ರಿಯವಾಗಿಲ್ಲ. ಹೆಚ್ಚಾಗಿಯೂ ಇಲ್ಲ. ಎಲ್ಲೋ ಅಲ್ಲೊಬರು ಇಲ್ಲೊಬ್ಬರು ಅಣಬೆ ಕೃಷಿಕರು ಕಾಣಸಿಗುತ್ತಾರೆ. ಸ್ವಾದಿಷ್ಟ ಅಣಬೆ ತಿನ್ನುವುದು ಇತ್ತೀಚಿನ ದಶಕಗಳಲ್ಲಿ ಬಂದ ರೂಢಿಯೆನ್ನಲ್ಲ. ಶತಶತಮಾನಗಳಿಂದಲೂ ಇದರ ಸೇವನೆಯಿದೆ. ವಿದೇಶಗಳಲ್ಲಿ ಸೈನಿಕರಿಗೆ ಇದನ್ನು ಪೌಷ್ಟಿಕ ಆಹಾರವಾಗಿ ನೀಡುತ್ತಿದ್ದ ಉಲ್ಲೇಖಗಳಿವೆ.ಮಿಲ್ಕಿ ಅಣಬೆ ( ಹಾಲಣಬೆ), ಬಟನ್ ಅಣಬೆ, ಚಿಪ್ಪು ಅಣಬೆ ಕೃಷಿ ಮಾಡಲಾಗುತ್ತದೆ. ಭಾರತದಲ್ಲಿ ಹಾಲಣಬೆ ಕೃಷಿಯೇ ಹೆಚ್ಚು. ಆದರೆ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅಣಬೆ ಕೃಷಿ ಪ್ರಮಾಣ ತೀರಾ ಕಡಿಮೆ. ವಾಣಿಜ್ಯ ಬೆಳೆಯಾಗುವ ಎಲ್ಲ ಅವಕಾಶಗಳೂ ಇದ್ದರೂ ಇದರ ಕೃಷಿ ಹೆಚ್ಚುತ್ತಿಲ್ಲ. ಭಾರತಕ್ಕೆ ಹೋಲಿಸಿದರೆ ತೈವಾನ್ ಪುಟ್ಟರಾಷ್ಟ್ರ. ಇಲ್ಲಿ ಅಣಬೆ ಕೃಷಿ ಭಾರಿ ಜನಪ್ರಿಯ. ನೆದರ್ ಲ್ಯಾಂಡ್, ಅಮೆರಿಕಾ ಮತ್ತು ಚೀನಾಗಳಲ್ಲಿಯೂ ಭಾರಿ ಪ್ರಮಾಣದ ಕೃಷಿ ನಡೆಯುತ್ತಿದೆ. ಚೀನಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಣಬೆ ಕೃಷಿ ಇದೆ.ಕರ್ನಾಟಕವೂ ಸೇರಿದಂತೆ ದೇಶದ ಇತರ ಹಲವು ರಾಜ್ಯಗಳ ಹವಾಮಾನ ಅಣಬೆ ಕೃಷಿಗೆ ಅನುಕೂಲಕರ. ಆದರೂ ಇಲ್ಲಿ ಇದರ ಕೃಷಿ ಕಡಿಮೆಯಾಗಿರುವುದಕ್ಕೆ ಕೆಲವು ಕಾರಣಗಳಿವೆ. ಅಣಬೆ ಕೃಷಿ ಬಗ್ಗೆ ದೊರೆಯುತ್ತಿರುವ ಮಾಹಿತಿ ಕಡಿಮೆ. ಇತರ ಬಿತ್ತನೆ ಬೀಜಗಳ ರೀತಿ ಎಲ್ಲೆಡೆ ಅಣಬೆ ಬಿತ್ತನೆ ಬೀಜಗಳು ದೊರೆಯದಿರುವುದು. ಮಾರುಕಟ್ಟೆ ಆತಂಕ. ಇತ್ತೀಚಿನ ವರ್ಷಗಳಲ್ಲಿ ಹೋಟೆಲುಗಳಲ್ಲಿ ಅಣಬೆಯಿಂದ ಮಾಡಿದ ತಿನಿಸುಗಳು ದೊರೆಯುತ್ತಿವೆ. ಆದ್ದರಿಂದ ಹೋಟೆಲುಗಳ ಮಾರುಕಟ್ಟೆ ಲಭ್ಯವಿದೆ. ಸೂಕ್ತ ಪ್ರಚಾರ ಮಾಡಿದರೆ ಜನಸಾಮಾನ್ಯರ ನಡುವೆಯೂ ಅಣಬೆ ತಿನಿಸುಗಳು ಜನಪ್ರಿಯವಾಗುತ್ತವೆ.ಅಣಬೆಯಲ್ಲಿ ಕೆಲವು ವಿಶೇಷ ಅಂಶಗಳಿವೆ. ಮೊದಲೇ ಹೇಳಿದ ಹಾಗೆ ಇದು ಪೌಷ್ಟಿಕಾಂಶಗಳ ಅಗರ. ಸಕ್ಕರೆ, ಕೊಬ್ಬಿನ ಅಂಶ ಕಡಿಮೆ. ಇದರಿಂದ ಮಧುಮೇಹಿಗಳು-ಹೃದ್ರೋಗದ ಸಮಸ್ಯೆಗಳಿಂದ ಬಳಲುತ್ತಿರುವವರೂ ಸೇವಿಸಬಹುದು. ಮಕ್ಕಳಿಗೆ ಇದು ಅತ್ಯುತ್ತಮ ಪೋಷಕಾಂಶ ನೀಡುವ ಆಹಾರ. ತಿನ್ನಲು ಅರ್ಹವಾದ ಅಣಬೆ ಸೇವನೆಯಿಂದ ಮಕ್ಕಳ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಮುಖ್ಯವಾಗಿ ಇವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

8 - grown up mushrooms (9791585774)

ಅಣಬೆಗಳು ಸಸ್ಯಗಳಲ್ಲ,ಮತ್ತು ಸೂಕ್ತ ಬೆಳವಣಿಗೆಗೆ ವಿವಿಧ ಪರಿಸ್ಥಿತಿಗಳಲ್ಲಿ ಅಗತ್ಯವಿರುತ್ತದೆ.ಅಣಬೆಯನ್ನು ಹಲವರು ಮಾಂಸಾಹಾರವೆಂದು ಬಗೆದು ಆಹಾರದಲ್ಲಿ ವರ್ಜ್ಯಿಸುತ್ತಾರೆ. ಆದರೆ ಅಣಬೆಯೇ ಒಂದು ಬಗೆಯ ಸಸ್ಯ. ಅಂದ ಮೇಲೆ ಇದು ಸಸ್ಯಾಹಾರವಲ್ಲವೇ? ಬೃಹದಾಕಾರದ ಮರಗಳೂ ಇರುವಂತೆ ಅತಿ ಸೂಕ್ಷ್ಮ ಗಾತ್ರದ ಸಸ್ಯಗಳು ಸಹ ಇವೆ. ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ಬೆಳೆಯುವ, ಸ್ವತಂತ್ರವಾಗಿ ಆಹಾರ ತಯಾರಿಸಿಕೊಳ್ಳಲು ಬೇಕಾದ ಪತ್ರಹರಿತ್ತನ್ನು ಹೊಂದಿಲ್ಲದ ಸಸ್ಯಗಳ ವರ್ಗಗಳಲ್ಲಿ ಅಣಬೆಯೂ ಒಂದು.ಇಂದು ಸುಮಾರು ನಾಲ್ಕು ರೀತಿಯ ಅಣಬೆಗಳನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಸಲಾಗುತ್ತಿದೆ. ಅವುಗಳಲ್ಲಿ ತುಂಬಾ ಜನಪ್ರಿಯವಾದುದು ಚಿಪ್ಪು ಅಣಬೆ, ಇದನ್ನು ಪ್ಲುರೋಟಿಸ್ ಎಂದು ಕರೆಯುತ್ತಾರೆ. ಇದು ಗೃಹಿಣಿಯರಿಗೆ ಉತ್ತಮ ಆದಾಯದ ಮೂಲವಾಗಬಲ್ಲದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ಬೆಳೆಯಬಹುದು.<ref>http://www.kannadaprabha.com/supplements/agriculture-environment.

ಬೇಕಾಗುವ ಸಾಮಗ್ರಿ 1216, 1218 ಅಥವಾ 1224 ಇಂಚು ಪಾಲಿಪ್ರೊಪಲೀನ್ ಪ್ಲಾಸ್ಟಿಕ್ ಚೀಲಗಳು (80 ಗೇಜ್), ಆದಷ್ಟು ಹೊಸದಾದ ಬತ್ತದ ಹುಲ್ಲು, ಅಣಬೆ ಬೀಜಗಳು, ರಬ್ಬರ್‌ಬ್ಯಾಂಡ್ ಅಥವಾ ದಾರ ಮತ್ತು ಬ್ಲೇಡ್.

ಬೆಳೆಯುವ ಬಗೆ ಪಾಲಿಪ್ರೋಪಲೀನ್ ಚೀಲಗಳಿಗೆ ಪಂಚಿಂಗ್ ಯಂತ್ರದ ಸಹಾಯದಿಂದ ಒಂದು ಸೆಂಮೀ ವ್ಯಾಸದ ರಂಧ್ರ ಮಾಡಿ. ಚೆನ್ನಾಗಿ ಒಣಗಿರುವ ಬತ್ತದ ಹುಲ್ಲನ್ನು 1- 2 ಇಂಚು ಉದ್ದ ಕತ್ತರಿಸಿ, ತಣ್ಣನೆಯ ನೀರಿನಲ್ಲಿ 6- 8 ಗಂಟೆಗಳ ಕಾಲ ನೆನೆಸಿಡಿ. ನಂತರ ಹುಲ್ಲನ್ನು ನೀರಿನಿಂದ ತೆಗೆದು ಕುದಿಯುವ ನೀರಿನಲ್ಲಿ ಅರ್ಧ ಗಂಟೆ ಕಾಲ ಬೇಯಿಸಿ, ಹೀಗೆ ಸಮ ಪ್ರಮಾಣದ ಉಷ್ಣತೆಯಲ್ಲಿ ನಿರ್ದಿಷ್ಟ ಅವಧಿಯವರೆಗೆ ಬೇಯಿಸುವುದರಿಂದ ಅಣಬೆಗೆ ತಗುಲುವ ಹಸಿರು ಪಾಚಿ ತಡೆಗಟ್ಟಬಹುದು. ಹುಲ್ಲನ್ನು ತೆಗೆದು ನೆರಳಿನಲ್ಲಿ ಒಣಗಿಸಿ. ಪಾಲಿಪ್ರೋಪಲೀನ್ ಚೀಲ ತೆಗೆದುಕೊಂಡು ತಳಭಾಗಕ್ಕೆ ಸುಮಾರು 5- 6 ಇಂಚಿನವರೆಗೆ ಹುಲ್ಲನ್ನು ಒತ್ತಿ ಒತ್ತಿ ತುಂಬಿ. ಬಾಟಲಿಯಲ್ಲಿ ಸಿಗುವ ಅಣಬೆ ಬೀಜ ತೆಗೆದು ಹುಲ್ಲಿನ ಅಂಚಿನ ಭಾಗದಲ್ಲಿ ಉದುರಿಸಿ. ಇದೇ ರೀತಿ 3- 4 ಪದರ ಮತ್ತೆ 3- 4 ಇಂಚು ಹುಲ್ಲನ್ನು ಹಾಕಿ ಬೀಜವನ್ನು ಅಂಚಿನಲ್ಲಿ ಚೆಲ್ಲಿರಿ. ಹೀಗೆಯೆ ಪದರ ಪದರವಾಗಿ ತುಂಬಿ ಬೀಜವನ್ನು ಅಂಚಿನಲ್ಲಿ ಮಾತ್ರ ಉದುರಿಸಿ. ಕೊನೆಯ ಪದರಕ್ಕೆ ಮಾತ್ರ ಅಂಚಿನಲ್ಲಿ ಮತ್ತು ಮೇಲ್ಭಾಗದಲ್ಲಿ ಬೀಜ ಹಾಕಿ ಚೀಲವನ್ನು ಬಿಗಿಯಾಗಿ ರಬ್ಬರ್‌ಬ್ಯಾಂಡ್ ಅಥವಾ ದಾರದ ಸಹಾಯದಿಂದ ಕಟ್ಟಿ ತಂಪಾದ ಹಾಗೂ ತೇವವಾದ ಸ್ಥಳದಲ್ಲಿಡಿ. ಸುಮಾರು 15- 20 ದಿನಗಳಲ್ಲಿ ಚೀಲದೊಳಗೆಲ್ಲಾ ಬಿಳಿ ಹತ್ತಿಯಂಥ ವಸ್ತು ಕಾಣಬಂದಾಗ ಚೀಲವನ್ನು ನಿಧಾನವಾಗಿ ಕತ್ತರಿಸಿ ತೆಗೆದು ಆ ಹುಲ್ಲಿನ ಮುದ್ದೆಗೆ ಬೆಳಗ್ಗೆ ಮತ್ತು ಸಾಯಂಕಾಲ ನೀರನ್ನು ಚಿಮುಕಿಸಿ ಕತ್ತಲೆ ಕೋಣೆಯೊಳಗೆ ಇಡಿ.

ಕಟಾವು ವಿಧಾನ ನಂತರ ಒಂದೆರೆಡು ದಿನಗಳಲ್ಲಿ ಅಣಬೆಗಳ ಕಟಾವನ್ನು ಶುರು ಮಾಡಬಹುದು. ಕೈಯಿಂದ ಕಿತ್ತು ತೆಗೆದರೆ ಎಳೆ ಅಣಬೆಗಳಿಗೆ ತೊಂದರೆಯಾಗುತ್ತದೆ. ಅದ್ದರಿಂದ ಬೆಳೆದ ಅಣಬೆಗಳನ್ನು ಚಾಕು ಸಹಾಯದಿಂದ ಕಟಾವು ಮಾಡಬಹುದು. ಈ ರೀತಿ ಮೊದಲ ಬೆಳೆ ತೆಗೆದ ನಂತರ ಮತ್ತೆರಡು ಕೂಳೆ ಬೆಳೆಗಳನ್ನು ತೆಗೆಯಬಹುದು. ಎರಡನೇ ಬೆಳೆ ಬೇಕಾದಲ್ಲಿ ಮೊದಲ ಬೆಳೆ ಕಟಾವಾದ ನಂತರ ಮುದ್ದೆಯನ್ನು ನೀರು ಹಾಕದೆ ಬಿಡಿ. ನಂತರ ಹೊರ ಭಾಗದ ಹುಲ್ಲನ್ನು ತೆಗೆದು ನೀರನ್ನು ಸಿಂಪಡಿಸುತ್ತಾ ಇದ್ದರೆ 2-3 ದಿನಗಳಲ್ಲಿ ಅಣಬೆಗಳು ಬರುತ್ತವೆ. ಮೂರನೇ ಬೆಳೆಗೆ ಪದರ ಬಿಡಿಸಿ ತೆಳುವಾಗಿ ಹರಡಿ ನೀರನ್ನು ಸಿಂಪಡಿಸಿರಿ. 3 ದಿನಗಳಲ್ಲಿ ಅಣಬೆಗಳು ಕಾಣಿಸಿಕೊಳ್ಳುತ್ತವೆ.

ಚಿಪ್ಪು ಅಣಬೆ

ಚಿಪ್ಪು ಅಣಬೆಯನ್ನು ಸಾಮಾನ್ಯವಾಗಿ ಡಿಂಗ್ರಿ ಅಣಬೆಯೆಂದು ಕರೆಯುತ್ತಾರೆ. ಈ ಅಣಾಬೆಯನ್ನು ೨೦-೩೦ಡೇಗ್ರೀ ಸೆ. ಉಷ್ಣಾಂಶದಲ್ಲಿ ಹಾಗೂ ವಿವಿಧ ಕೃಷಿ ತ್ಯಾಜ್ಯ ವಸ್ತುಗಳಾದ ಹುಲ್ಲು, ಕಬ್ಬಿನ ತರಗು, ಅಡಿಕೆ ಸಿಪ್ಪೆ ಇತ್ಯಾದಿ ಉಪಯೋಗಿಸಿ ಬೆಳೆಯಬದು.

Oyster mushroom


ಇತರ ತಳಿಗಳಿಗಿಂತ ಈ ಅಣಬೆಯನ್ನು ಬೆಳೆಯುವುದರಿಂದ ಅನುಕೂಲಗಳು

 1. ಬೆಳೆಯೂವುದು ಸುಲಭ
 2. ಅಲ್ಪಾವಧಿ ಬೆಳೆ
 3. ಕಡಿಮೆ ಖಚು
 4. ಸಾಮಾನ್ಯ ವಾತಾವರಣದಲ್ಲಿ ಬೆಳೆಯಬಹುದು
 5. ವಿವಿಧ ತ್ಯಾಜ್ಯ ವಸ್ತುಗಳನ್ನು ಬೆಳೆಯಬಹುದು
 6. ಇತರೆ ಅಣಬೆ ತಳಿಗಳಿಗೆ ಹೋಲಿಸಿದರೆ ಇದಕ್ಕೆ ರೋಗ- ರುಜಿನಗಳ ಬಾಧೆ ಕಡಿಮೆ.
 7. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಾಯವಾಗುತ್ತದೆ.

ಬೆಳೆಸುವ ವಿಧಾನ

 1. ೧ ರಿಂದ ೨ ಕೆ.ಜಿ. ಒಣ ಹುಲ್ಲುನ್ನು ೩ ಅಂಗುಲದ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸುವುದು. ಕತ್ತರಿಸಿದ ಹುಲ್ಲುನ್ನು ಸ್ವಚ್ಚವಾದ ತಣ್ಣೀರಿನಲ್ಲಿ ೮ ರಿಂದ ೧೦ ಘಂಟೆಗಳ ಕಾಲ ನೆನಸುವುದು.
 2. ಹುಲ್ಲು ನೆನೆ ಹಾಕಿದ ನೀರನ್ನು ಬಸಿದು ಮತ್ತೆ ಹುಲ್ಲನ್ನು ಕುದಿಯುವ ನೀರಿನಲ್ಲಿ ಅರ್ಧ ಘಂಟೆ ಕಾಲ ಕುದಿಸಿ, ನೀರನ್ನು ಬಸಿಯಬೇಕು. ನೆನೆದ ಹುಲ್ಲು ಅಧಿಕ ನೀರನ್ನು ಹಿಡಿದಿದ್ದರೆ ಸ್ವಚ್ಚವಾದ ಕಬ್ಬಿಣದ ಜರಡಿ ಮೇಲೆ ಹುಲ್ಲನ್ನು ಹರಡಿದರೆ ಅಧಿಕ ನೀರು ಹೊರ ಬರುತ್ತಿದೆ.
 3. ೧೨-೧೮ ಅಂಗುಲ ಅಥವಾ ೧೪-೨೪ ಅಂಗುಲ ಅಳತೆಯ ಪಾಲಿಥೀನ್ ಚೀಲವನ್ನು ತೆಗೆದುಕೊಂಡು ಪ್ರತಿ ಚೀಲಕ್ಕೆ ೮-೧೦ ರಂದ್ರಗಳನ್ನು ಮಾಡಿ, ನಂತರ ಪ್ಯಾಶ್ಚರಿಕರಿಸಿದ ಹುಲ್ಲನ್ನು ೪ ಅಂಗುಲಗಳ ಎತ್ತರದಷ್ತು ಪಾಲಿಥೀನ್ ಚೀಲದ ಒಳಗೆ ತುಂಬಿಸಬೇಕು.ನಂತರ ಅರ್ಧ ಹಿಡಿಯಷ್ಟು ಅಣಬೆ ಬೀಜವನ್ನು ಹುಲ್ಲಿನ ಅಂಚಿನ ಚೀಲದಲ್ಲಿ ಸುತ್ತ ಬಿತ್ತನೆ ಮಾಡಬೇಕು.
 4. ಮತ್ತೆ ೪ ಅಂಗುಲ ಎತ್ತರದಷ್ಟು ಸಿದ್ದಪಡಿಸಿದ ಹುಲ್ಲನ್ನು ತುಂಬಿ ಅಣಬೆ ಬೀಜವನ್ನು ಮೇಲೆ ತಿಳಿಸಿದಂತೆ ಬಿತ್ತನೆ ಮಾಡಬೇಕು. ಈ ರೀತಿ ಚೀಲದಲ್ಲಿ ೪ ಅಥಾವ ೫ ಪದರದಂತೆ ಪ್ಯಾಶ್ಚರೀಕಸಿದ ಹುಲ್ಲನ್ನು ತುಂಬಿ ಅಣಬೆ ಬೀಜವನ್ನು ಬಿತ್ತನೆ ಮಾಡಬೇಕು. ಈ ಹಂತದಲ್ಲಿ ಹುಲ್ಲಿನ ಅಂಚಿನ ಸುತ್ತಲೂ ಬೀಜವನ್ನು ನೋಡಬಹುದು.
 5. ಒಂದು ಪ್ಯಾಕೆಟ್ನಲ್ಲಿರುವ ಬೀಜವು ೧೨-೧೮ ಅಂಗುಲ ಪ್ರತಿ ಅಳತೆಯ ೨ ಕೆ.ಜಿ. ಭತ್ತದ ಹುಲ್ಲುಳ್ಳ ಸುಮಾರು ೨-೩ ಪಾಲಿಥೀನ್ ಚೀಲಗಳಿಗೆ ಸಾಕಾಗುತ್ತದೆ.
 6. ಪಾಲಿಥೀನ್ ಚೀಲದಲ್ಲಿ ಮುಕ್ಕಾಲು ಭಾಗದಷ್ಟು ಹುಲ್ಲನ್ನು ತುಂಬಿ ಅಣಬೆ ಬೀಜವನ್ನು ಬಿತ್ತನೆ ಮಾಡಿದ ನಂತರ ಚೀಲದ ಬಾಯಿಯನ್ನು ಕಟ್ಟಿ ದಿನಾಂಕವನ್ನು ಗುರುತಿಸಿ ೧೮-೨೦ ದಿವಸಗಳವರೆಗೆ ತಂಪಾದ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಇಡುವುದು. ಈ ಅವಧಿಯಲ್ಲಿ ಅಣಬೆಯ ಬೀಜವುಹುಲ್ಲಿನ ಮೇಲೆ ಬೆಳ್ಳಗೆ ಹತ್ತಿಯಂತೆ ಬೆಳೆದಿರುವುದನ್ನು ನೋಡಬಹುದು.
 7. ೧೮-೨೦ ದಿವಸಗಳ ನಂತರ ಪಾಲಿಥೀನ್ ಚೀಲವನ್ನು ಕತ್ತರಿಸಿ ಹುಲ್ಲಿನ ಕಂತೆಯನ್ನು ಹೊರತೆಗೆಯಬೇಕು.
 8. ನಂತರ ಹುಲ್ಲಿನ ಕಂತೆಗಳನ್ನು ಸತಂಪಾದ, ಸ್ವಚ್ಛವಾದ ಮತ್ತು ಬೆಳಕು ಇರುವಂತಹ ಕೊಠಡಿಯಲ್ಲಿ ೧ ಅಡಿ ಅಂತರದಲ್ಲಿ ಜೋಡಿಸಬೇಕು.
 9. ಹುಲ್ಲಿನ ಕಂತೆಯ ಮೇಲೆ ಪ್ರತಿ ದಿನ ೩ ರಿಂದ ೪ ಸಲ ತಣ್ಣೀರನ್ನು ಸಿಂಪಡಿಸಿ, ಹುಲ್ಲಿನ ಕಂತೆಗಳು ತಂಪು ಇರುವಂತೆ ನೋಡಿಕೊಳ್ಳಬೇಕು.
 10. ಚೀಲವನ್ನು ಬಿಚ್ಚಿದ ೩ ರಿಂದ ೪ ದಿನಗಳ ನಂತರ ಅಣಬೆ ಮೊಳಕೆಯೊಡೆಯುತ್ತದೆ. ಅನಂತರ ೨ ರಿಂದ ೩ ದಿನಗಳಲ್ಲಿ ಅಣಬೆ ಕೊಯ್ಲಿಗೆ ಸಿದ್ದವಾಗಿರುತ್ತದೆ.
 11. ಪ್ರತಿ ಚೀಲ್ದಿಂದ ೨ ರಿಂದ ೩ ಬೆಳೆಗಳನ್ನು ೬ ರಿಂದ ೭ ದಿವಸಗಳ ಅಂತರದಲ್ಲಿ ಹಾಗೂ ಪ್ರತಿ ಚೀಲದಿಂದ ಸಮಾರು ೫೦೦ ರಿಂದ ೬೦೦ ಗ್ರಾಂ ಬೆಳೆಯನ್ನು ತೆಗೆಯಬಹುದು.

ಸಂಸ್ಕರಣೆ ಮತ್ತು ಶೇಖರಣೆ

ಈ ಅಣಭೆಯನ್ನು ಒಣಗಿಸಿ ಬಹಳ ದಿನಗಳವರೆಗೆ ಶೇಖರಿಸಿ ಇಡಬಹುದು. ಒಣಗಿಸಬೇಕಾಗಿರವ ಅಣಬೆಯನ್ನು ತೊಟ್ಟಿನ ಸಮೇತ ಕತ್ತರಿಸಿ, ಚೆನ್ನಾಗಿ ತೊಳೆದು ೩ ರಿಂದ ೫ ನಿಮಿಷಗಳವರೆಗೆ ಹಬೆಯಲ್ಲಿ ಅಥವಾ ಕುದಿಯುವ ನೀರಿನಲ್ಲಿ ಬ್ಲಾಂಚ್ ಮಾಡಬೇಕು. ಸೂರ್ಯನ ಶಾಖದಿಂದ ಅಥವಾ ಡ್ರ್ರೇಯರ್ ಮೂಲಕವೂ ಅಣಬೆಯನ್ನು ಒಣಗಿಸಬಹುದು.


ವಿಶೇಷ ಸೂಚನೆ

 1. ಬೆಳೆಯೂವ ಕೊಠಡಿಯಲ್ಲಿ ಬೆಳೆ ಇಡುವ ಮುನ್ನ ಮತ್ತು ಶೇ.೨ ರ ಫಾಮ್ರಲಿನ್ ದ್ರಾನವಣವನ್ನು ಸಿಂಪದಿಸಿ
 2. ಅಣಬೆ ಉತ್ಪಾದನೆಯಲ್ಲಿ ಸ್ವಚ್ಚತೆಯೇ ಮುಖ್ಯನವಾದ ವಿಷಯ.