ವಿಷಯಕ್ಕೆ ಹೋಗು

ಸದಸ್ಯ:PRASKRIS011/sandbox11

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದ ಏನ್ ಪ್ರಹಸನ ಅಲ್ಲ ಮತ್ತ

[ಬದಲಾಯಿಸಿ]

, ಇದು ನಾ ಈ ಪುಸ್ತಕದಾಗ ಬರದದ್ದ ಪ್ರಹಸನಗಳ ಪ್ರಸವ

ವೇದನೆಯ

[ಬದಲಾಯಿಸಿ]

==== ಅನುಭವಗಳ

ಒಂದ ಲೇಖನ ====

.

ನನ್ನ ಜೀವನದಾಗ ನಾ ಕನ್ನಡದಾಗ

[ಬದಲಾಯಿಸಿ]

===== ಬರಿತೇನಿ ಅಂತ

ಎಂದೂ
ಅನ್ಕೋಂಡಿದ್ದಿಲ್ಲ =====
ಆದರೂ ಇವತ್ತ ಒಂದ ಮಾಟನ ಛಂದನ ಪುಸ್ತಕಾ ಆಗೋ ಅಷ್ಟ ಲೇಖನ ಕನ್ನಡದಾಗ ಬರದೆ, ನೀವು ಓದಿದಿರಿ, ಬರದದ್ದ ಅಂತೂ ನನಗ ಖುಷಿ ಕೊಟ್ಟದ, ಓದಿದವರು ನೀವು ಖುಷಿ ಪಟ್ಟಿರಿ ಅಂತ ಅಂದ್ಕೊಂಡೇನಿ. ಹಂಗ ನೋಡಿದ್ರ ನಾ ಬರಿಲಿಕ್ಕೆ ಶುರುಮಾಡಿದ್ದ ಭಾರಿ ಆಕಸ್ಮಿಕ. ನನಗ ನಮ್ಮ ದೋಸ್ತರ ಯಾರರ ಕನ್ನಡದಾಗ ಬರದರು ಸಂಕಟಾಗಿ ನಾನೂ ಬರಿಬೇಕು, ನಾನೂ ಬರಿಬಹುದು ಅಂತೇಲ್ಲಾ ಅನಸ್ತಿತ್ತು. ಆದರ ಇಷ್ಟ ವರ್ಷಗಟ್ಟಲೇ ಬರೆ ಸಂಕಟಾನ ಪಟ್ಟನೆ ಹೊರತು ಬರಿಲಿಕ್ಕೆ ಪ್ರಯತ್ನ ಮಾಡಿರಲಿಲ್ಲಾ.

ಒಂದ ದಿವಸ ಮಧ್ಯಾಹ್ನ ನಾನೂ ಏನರ ಇವತ್ತ ಬರದ ಬಿಡಬೇಕು ಅಂತ ನನ್ನ ಹಿಂದಿನ ದಿವಸದ್ದ ಗ್ರಹಣದ ಅನುಭವವನ್ನ ಒಂದ ರಫ್ ಪೇಪರ ಮ್ಯಾಲೇ ಪೆನ್ಸಿಲನಿಂದ ನಾಲ್ಕ ಅಕ್ಷರದಾಗ ಗೀಚಿಲಿಕತ್ತೆ. ಬರಿತಾ-ಬರಿತಾ ಎರಡ ಪೇಜ್ ತುಂಬಿ ಬಿಟ್ಟತು. ಅರೇ ಇಷ್ಟ ಬರದನೇಲಾ ಅಂತ ನನಗ ಆಶ್ಚರ್ಯ ಆತ , ಒಂದ ಎರಡ ಸರತೆ ನಾ ಬರದಿದ್ದನ್ನ ಓದಿ ನೋಡಿದೆ. ಏ, ಎನ್ ಅಡ್ಡಿ ಇಲ್ಲಾ ಅನಸ್ತು. ಇರಲಿ ಯಾರರ ಶಾಣ್ಯಾರಿಗ ತೊರಸೋಣ ಅಂತ ಹಾಳಿ ಹರಿಲಾರದ ಹಂಗ ಇಟಗೊಂಡೆ. ನಾ ಬರದಿದ್ದ ನನಗ ಭಾಳ ದೊಡ್ಡ ವಿಷಯ ಇರಬಹುದು ಆದರ ಓದೊರಿಗೆ ಅದನ್ನ ಓದಲಿಕ್ಕ ಇಂಟರೇಸ್ಟ ಇರಬೇಕಲಾ ? ಕಡಿಕೆ ನಮ್ಮ ಗ್ರೂಪ್ ನಾಗ ಇದ್ದಿದ್ದಾರಾಗ ಒಂದ ಸ್ವಲ್ಪ ಭಾಳ ಶಾಣ್ಯಾ, ಅದು ಇದು ಓದ್ಕೊಂಡಾಂವ, ಸುಟ್ಟ ಸುಡಗಾಡ ತಿಳ್ಕೊಂಡೊಂವಾ ಅಂದರ ನಮ್ಮ ಬೀದರದ ಋಷಿಕೇಶ ಬಹಾದ್ದೂರ ದೇಸಾಯಿ ಒಬ್ಬನ ಅಂತ ಅವಂಗ ಫೋನ್ ಮಾಡಿ “ಮಗನ, ನಾನು ಕನ್ನಡದಾಗ ಒಂದ ಲೇಖನಾ ಬರದೇನಲೆ ” ಅಂತ ಹೇಳಿದೆ. “ಹೌದ , ಭಾಳ ಛಲೋ ಆತ ನನಗ ಮೇಲ್ ಮಾಡ ” ಅಂದಾ. “ಲೇ, ನಾ ಕೈಲೇ ಬರದೇನಲೇ ” ಅಂದೆ “ಹಂಗರ ಸ್ಕ್ಯಾನ ಮಾಡಿ ಕಳಿಸು ” ಅಂದಾ. “ಯಪ್ಪಾ ದೇವರ ಪೆನ್ಸಿಲ್ಲೇ ಬರದೇನಿ, ಕಚ್ಚಾ ಹಾಳ್ಯಗ, ಸ್ಕ್ಯಾನ ಮಾಡಲಿಕ್ಕೆ ಬರಂಗಿಲ್ಲಾ” ಅಂದೆ. “ಭಾಳ ಶಾಣ್ಯಾ ಇದ್ದಿ , ಈಗ ಮತ್ತ ಏನ ಮಾಡೋಂವಾ ” ಅಂದಾ. “ನೀ ಫ್ರಿ ಇದ್ದರ ಓದಿ ಹೇಳ್ತೇನಿ” ಅಂದೆ “ನಾ ಫ್ರಿ ಇಲ್ಲಾ ,ಈಗ ನಾ ಪ್ರೆಸ್ ಕ್ಲಬಗೆ ಊಟಕ್ಕ ಹೊಂಟೇನಿ. ನೀ ರಾತ್ರಿ ಫೊನ್ ಮಾಡ ” ಅಂತ ಇಟ್ಟಾ.