ಸದಸ್ಯ:POOJA R,151063,pooja chandu 1997
https://commons.wikimedia.org/wiki/File:Photo_on_14-01-16_at_1.53_PM.jpg
ಪೂಜ.ಆರ್ | |
---|---|
ಜನನ | ಪೂಜ.ಆರ್ ೧೨-೦೭-೧೯೯೭ ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಚಾಂದು |
ಪರಿಚಯ:
[ಬದಲಾಯಿಸಿ]ನನ್ನ ಹೆಸರು ಪೂಜಾ.ಆರ್ ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ೨ನೇ ಬಿ.ಕಾಂ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇನೆ. ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ. ಬೆಂಗಳೂರು ಉದ್ಯಾನ ನಗರ ಮತ್ತು ಸಿಲಿಕಾನ್ ಸಿಟಿಯೊಂದೇ ಹೆಸರುವಾಸಿಯಾದದ್ದು. ಬೆಂಗಳೂರಿನಲ್ಲಿ ನಾವು ವಿವಿಧ ರೀತಿಯ ಜನಾಂಗವನ್ನು ಕಾಣಬಹುದು. ಆದರೆ ಈಗ ಬೆಂಗಳೂರಿನ ಪರಿಸ್ಥಿತಿ ಸ್ವಲ್ಪ ಹದಗೆಟ್ಟಿದೆ. ಪರಿಸರ ಮಾಲಿನ್ಯಕ್ಕೆ ಒಳಗಾಗಿದೆ. ಆದ್ದರಿಂಡ ಬೆಂಗಳೂರನ್ನು ಶುದ್ಧಗೊಳಿಸುವುದು ಹಾಗೆ ಸ್ವಚ್ಛವಾಗಿ ಮಾಡುವುದು ನಮ್ಮೇಲ್ಲರಿನ ಕರ್ತವ್ಯವಾಗಿದೆ.
ನನ್ನ ಬಾಲ್ಯ:
[ಬದಲಾಯಿಸಿ]ಎಲ್ಲರಿಗೂ ಗೊತ್ತಿರುವ ಹಾಗೆ ಬಾಲ್ಯ ಜೀವನವು ಎಲ್ಲರ ಅಚ್ಚುಮೆಚ್ಚಿನ ಜೀವನವಾಗಿರುತ್ತದೆ. ಬಾಲ್ಯವನ್ನು ಇಷ್ಟಪಡದೇ ಇರುವವರೂ ಯಾರು ಇಲ್ಲ. ಅದೇ ರೀತಿ ನನ್ನ ಬಾಲ್ಯವು ಸಹ ಅಷ್ಟೇ ಅದ್ಭುತವಾಗಿತ್ತು. ಆ ದಿನಗಳಲ್ಲಿ ನನ್ನ ಜೊತೆ ಆಟ ಆಡುತ್ತಿರುವ ಸ್ನೇಹಿತರು, ನಾನು ಮಾಡುತ್ತಿದ್ದ ಕಪಿ ಚೇಷ್ಟೆಗಳು ಸಾಯುವವರೆಗೂ ನೆನಪಿನಲ್ಲಿರುತ್ತದೆ. ನನ್ನ ಬಾಲ್ಯದಲ್ಲಿ ನಾನು ತುಂಬಾ ಮುಗ್ಧ ಆದರೆ ಸ್ವಲ್ಪ ಸಮಯದಲ್ಲಿ ತುಂಟಿ. ನಾನು ತುಂಬಾ ಚೂಟಿಯಾಗಿದ್ದು, ಎಲ್ಲರೂ ನನ್ನನ್ನು ತುಂಬಾ ಇಷ್ಟ ಪಡುತ್ತಿದದ್ದು, ನನ್ನ ತಾಯಿಯ ಅದನ್ನು ಕಂಡು ತುಂಬ ಸಂತೋಷ ಪಡುತ್ತಿದ್ದರೂ, ನಾನು ಹಿರಿಯರಿಗೆ ಮಾರ್ಯಾದೆ ಕೊಡುವುದರಲ್ಲಿ ಎತ್ತಿದ ಕೈ ಹಾಗೆಯೇ ಕಿರಿಯರ ಜೊತೆ ಆಟವಾಡುವುದರಲ್ಲಿ ಮುಂಚಿತವಾಗಿಯೇ ತಯಾಯಾಗುತ್ತಿದ್ದೆ.
ವಿದ್ಯಾಭ್ಯಾಸ:
[ಬದಲಾಯಿಸಿ]ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲದಕ್ಕಿಂತವೂ ಮುಖ್ಯವಾದದ್ದು ವಿದ್ಯಾಭ್ಯಾಸ. ವಿದ್ಯಾಭ್ಯಾಸ ಮಾಡದೇ ಇರುವವರಿಗೆ ತಲೆ ಎತ್ತಿ ನಡೆಯುವ ಅಧಿಕಾರವು ಸಹ ಇರುವುದಿಲ್ಲ. ನಾನು ಮೊಟ್ಟ ಮೊದಲಿಗೆ ನರ್ಸರಿಯನ್ನು ಓದಿದು ಮನೆಯ ಬಳಿ ಇರುವ ಅರವಿಂದ ಶಾಲೆಯನ್ನು ಆನಂತರ ಒಂದನೇ ತರಗತಿಯಿಂದ ಹತ್ತನೇ ತರಗತ್ಗಿಯವರೆಗೂ ಶಾರದ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದೆ. ನಾನು ೧೦ನೇ ತರಗತಿಯಲ್ಲಿ ಶೇಕಡ ೮೦ ಅಂಕಗಳನ್ನು ಪಡೆದನು. ನಂತರ ನನ್ನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯನ್ನು ಶಿರಡಿ ಸಾಯಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇಕಡ ೮೫ ಅಂಕಗಳನ್ನು ಪಡೆದು ನನ್ನ ಪ್ರಗತಿಗಳಿಸಿಕೊಂಡೆ. ಈಗ ಕಷ್ಟದ ಫಲವಾಗಿ ನನಗೆ ಕ್ರ್ಸೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಗೆ ಸೀಟ್ ಲಭಿಸಿತು. ಪ್ರಸ್ತುತ ಈಗ ನನ್ನ ಈ ಪಯಣವೂ ತುಂಬಾ ಅಪೂರ್ವವಾಗಿ ಸಾಗುತ್ತಿದೆ. ನಾನು ಕ್ರ್ಸೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರವೇಶ ಪಡೆದುಕೊಂಡಿದ್ದು ನನಗೂ ಹಾಗೂ ಎಲ್ಲರಿಗೂ ಆಶ್ಚಯವನ್ನು ಉಂಟು ಮಾಡಿತು. ಎಲ್ಲರೂ ನನ್ನನ್ನು ಆಶಿಸಿ ಮೆಚ್ಚಿಕೊಂಡರೂ. ಇಲ್ಲಿ ಓದುವ ವಿದ್ಯಾರ್ಥಿಗಳಿಗೆ ಒಳ್ಳೆಯ ಜೀವನವನ್ನು ಸಾಗಿಸಲು ಸುಲಭವಾಗುತ್ತದೆ ಎನ್ನುವುದು ನನ್ನ ಇಚ್ಚೆ.
ನನ್ನ ಹವ್ಯಾಸಗಳು:
[ಬದಲಾಯಿಸಿ]ನಾನು ತುಂಬಾ ಇಷ್ಟಪಟ್ಟು ಮಾಡುವುದು ದೂರದರ್ಶನವನ್ನು ವೀಕ್ಷಿಸುವುದು ಹಾಗೆಯೇ ನ್ರುತ್ಯ ಮಾಡುವುದು ನನ್ನ ಮನಸ್ಸಿಗೆ ಖುಷಿಯನ್ನು ಕೊಡುತ್ತದೆ. ನನಗೆ ಪುಸ್ತಕಗಳನ್ನು ಓದುವ ಅಭ್ಯಾಸ ಇದೆ. ಹಾಗೆಯೇ ಸ್ನೇಹಿತರೊಂದಿಗೆ ಹರಟೆ ಒಡೆಯುವುದಕ್ಕೆ ತುಂಬಾ ಇಷ್ಟ. ಸಮಯ ಹೋಗುವುದೂ ಸಹ ಅರಿಯುವುದಿಲ್ಲ.
ಆಸಕ್ತಿ:
[ಬದಲಾಯಿಸಿ]ನನ್ನ ಆಸಕ್ತಿ ಎಂ.ಬಿ.ಎ ಪೂರ್ತಿ ಮಾಡಿ, ನನ್ನ ಒಂದು ಒಳ್ಳೆಯ ಸ್ಥಾನದಲ್ಲಿ ಇದ್ದು, ನನ್ನ ತಂದೆ ತಾಯಿಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವವರಿಗೆ ಒಂದು ಚಿಕ್ಕ ಕಷ್ಟವನ್ನು ಕೂಡ ನೀಡಬಾರದು. ಅವರಿಗೆ ಸೇವೆ ಮಾಡಿ ನನ್ನ ಜೀವನವನ್ನು ಸಾರ್ಥಕಮಾಡಿಕೊಳ್ಳಬೇಕು.
ನನ್ನ ಗುರಿಯನ್ನು ಸಾಧಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇದು ನನ್ನ ಬಗ್ಗೆ ನಾನು ನೀಡಿರುವ ಕಿರು ಪರಿಚಯ.