ಸದಸ್ಯ:Noel Prajwal Monteiro/sandbox
ಅಂತರಾಷ್ಟ್ರೀಯ ವ್ಯವಹಾರಕ್ಕೆ ಕಾರಣಗಳು
ಅಂತರಾಷ್ಟ್ರೀಯ ವ್ಯವಹಾರವು ಅಭಿವೃದ್ಧಿ ಹೊಂದಲು ಅನೇಕ ಕಾರಣಗಳಿವೆ ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ ೧. ನೈಸರ್ಗಿಕ ಸಂಪನ್ಮೂಲಗಳ ಕೊರತೆ. ೨. ನೈಸರ್ಗಿಕ ಸಂಪನ್ಮೂಲಗಳು ವೈವಿಧ್ಯತೆಯಿಂದ ಕೂಡಿರುವುದು. ೩. ಎಲ್ಲಾ ವಿಧದ ಸಂಪನ್ಮೂಲಗಳ ಕೊರತೆ ಅಂತರಾಷ್ಟ್ರೀಯ ವ್ಯವಹಾರಗಳ ಬೆಳವಣಿಗೆಗೆ ಪ್ರಮುಖವಾಗಿದೆ. ಎಲ್ಲಾ ನೈಸರ್ಗಿಕ ಸಂಪನ್ಮೂಲಗಳು ಯಾವುದೇ ದೇಶದಲ್ಲಿ ಪರಿಪೂರ್ಣವಾಗಿ ಲಭಿಸದ ಕಾರಣ ಯಾವುದೇ ದೇಶವೂ ಸ್ವಾವಲಂಬಿಯಾಗಿಲ್ಲ.೪. ಭೌಗೋಳಿಕ ವಿಶೇಷತೆ ಮತ್ತು ಕ್ರಮ ವಿಭಜನೆ ಎಲ್ಲಾ ದೇಶಗಳು ಒಂದೇ ರೀತಿಯ ಹವಗುಣ ಮತ್ತು ವಾಯುಗುಣ ಹೊಂದಿರುವುದಿಲ್ಲ.ಅಲ್ಲದೆ ಪ್ರತಿಯೊಂದು ದೇಶವು ಕೆಲವೇ ವಸ್ತುಗಳನ್ನು ಉತ್ಪಾದಿಸುವಲ್ಲಿ ವಿಶೇಷತೆ ಮತ್ತು ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ ಅಂತಹ ಸರಕುಗಳು ಹೊರದೇಶಗಳಿಗೂ ಅವಶ್ಯಕವಿರುತ್ತವೆ. ೫. ಉತ್ಪಾದನೆ ಮತ್ತು ವೆಚ್ಚ ಈ ಅಂಶವೂ ಕೂಡ ಅಂತರಾಷ್ಟ್ರೀಯ ವ್ಯವಹಾರಕ್ಕೆ ಕಾರಣವಾಗಿದೆ. ಕೆಲವೊಂದು ವಸ್ತುಗಳನ್ನು ಉತ್ಪಾದಿಸಲು ಅಧಿಕ ವೆಚ್ಚ ತಗಲುತ್ತದೆ. ಆದರೆ ಅದೇ ವಸ್ತು ಮಾರುಕಟ್ಟೆಗಳಲ್ಲಿ ಅಗ್ಗದ ದರದಲ್ಲಿ ಲಭಿಸುತ್ತದೆ.ಉತ್ಪಾದನೆ ದುಬಾರಿಯಾಗುತ್ತದೆ.೬.ಅನುಕರಣೆ ಮತ್ತು ತಂತ್ರಜ್ಙಾನದಲ್ಲಿ ಬದಲಾವಣೆ - ಇತ್ತೀಚಿನ ದಿನಗಳಲ್ಲಿ ನಾಗರೀಕತೆಯಲ್ಲಿ ಬದಲಾವಣೆಗಳಾಗಿವೆ.ಇವುಗಳು ಬೇರೆ ದೇಶದಿಂದ ಅನುಕರಣೆಯಾಗುತ್ತಿದೆ ತಂತ್ರಜ್ಞಾನದಲ್ಲೂ ಕೂಡ ಹಲವಾರು ಬದಲಾವಣೆಗಳಾಗುತ್ತಿವೆ. ವಸ್ತುಗಳ ವಿನ್ಯಾಸ, ಆಕಾರ ಮತ್ತು ಗಾತ್ರಗಳಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ.