ಸದಸ್ಯ:Nivasdimpugowda/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇಡಿಯೋ ದೃಷ್ಟಿ ಮಟ್ಟದ ಬೆಳಕಿಗಿಂತ ಹೆಚ್ಚಿನ ತರಂಗಾಂತರದ ವಿದ್ಯುತ್ ಕಾಂತೀಯ ತರಂಗಗಳಲ್ಲಿ ಸಂಜ್ಞೆಗಳನ್ನು ಪ್ರಸರಿಸುವ ತಂತ್ರಜ್ಞಾನ. ಈ ತರಂಗಗಳು ಬಹಳ ದೂರದವರೆಗೆ ಪ್ರಸಾರವಾಗುವುದರಿಂದ ದೂರಪ್ರಸರಣಗಳಿಗೆ ಈ ತಂತ್ರಜ್ಞಾನ ಅತ್ಯಂತ ಸಹಾಯಕಾರಿ.ಭಾರತದಲ್ಲಿ ಸರಕಾರದ ರೇಡಿಯೋ ವ್ಯವಸ್ಥೆಗೆ ಆಕಾಶವಾಣಿ ಎಂಬ ಹೆಸರು ಇದೆ. ಸಂಸ್ಕೃತದ ಈ ಶಬ್ದಕ್ಕೆ ಆಕಾಶದಿಂದ ಬರುವ ದನಿ ಎಂದರ್ಥ. ಕೆಲವರು ರವೀಂದ್ರನಾಥ ಠಾಗೋರ್ ಅವರು ೧೯೩೦ ರಲ್ಲಿ ರೇಡಿಯೋ ಪದಕ್ಕೆ ಆಕಾಶವಾಣಿ ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಇನ್ನೂ ಕೆಲವರು ೧೯೨೦ ರಲ್ಲಿ ಕನ್ನಡದ ಬರಹಗಾರರಾದ ನಾ. ಕಸ್ತೂರಿಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ. ದೇಶದ ಮೊದಲ ಬಾನುಲಿ ರೇಡಿಯೋ.ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ರೇಡಿಯೋ ಕೇ೦ದ್ರವೊಂದನ್ನು ಸ್ಥಾಪಿಸಿದರು. ಆಗ ೧೯೩೫ ರ ಸಮಯ. ಕಾಲೇಜಿನ ಕಾರ್ಯಗಳನ್ನು ಮುಗಿಸಿದ ನಂತರದ ಸಮಯವನ್ನು ಸದುಪಯೋಗ ಮಾಡಲು ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ ಮಾಡಬೇಕು ಎ೦ಬ ಆಸೆ ಹುಟ್ಟಿತು. ಡಾ.ಎಂ.ವಿ.ಗೋಪಾಲಸ್ವಾಮಿಯವರು ಲಂಡನ್ ಗೆ ಹೋಗಿದ್ದ ಸಮಯದಲ್ಲಿ ಕಡಿಮೆ ವಿದ್ಯುತ್ ಬಳಕೆಯ ಟಾಲ್ ಎಂಬ ಟ್ರಾನ್ಸ್ ಮೀಟರ್ ತಂದು ಕೆಆರ್ಎಸ್ ರಸ್ತೆಯಲ್ಲಿರುವ ತಮ್ಮ ಮನೆ ವಿಠಲ ವಿಹಾರದಲ್ಲಿ ಸ್ಥಾಪಿಸುತ್ತಾರೆ. ಈ ಪ್ರೇಷಕದಿಂದ ೧೯೩೫ ಸೆಪ್ಟೆಂಬರ್ ೧೦ ರಂದು ರೇಡಿಯೋದ ಮೊದಲ ಅಲೆ ಪ್ರಸಾರವಾಗುತ್ತದೆ. ಇದನ್ನು ಕೇಳಲು ಸ್ವತ: ಮೈಸೂರಿನ ಮಹಾರಾಜರು ಕಾಲೇಜಿನ ಅಸೆಂಬ್ಲಿ ಹಾಲಿನಲ್ಲಿ ಹಾಜರಿದ್ದರು, ರಾಷ್ಟ್ರ ಕವಿ ಕುವೆಂಪು ಅವರಿಂದ ಕವನ ವಾಚನದ ಮೂಲಕ ಕಾರ್ಯಕ್ರಮ ಆರಂಭಗೊಂಡಿತ್ತು. ಹೀಗೆ ಏಕ ವ್ಯಕ್ತಿಯೊಬ್ಬರಿಂದ ಆರಂಭವಾದ ದೇಶದ ಮೊದಲ ರೇಡಿಯೋ ಸ್ಟೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ೧೯೪೧ರವರೆಗೆ ಇವರ ಮನೆಯಿಂದಲೇ ಬಾನುಲಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಇಲ್ಲಿ ರೇಡಿಯೋ ೪೯.೪೬ ಮೀಟರ್ ಶಾರ್ಟ್ ವೇವ್ ನಲ್ಲಿ ಹಾಗೂ ೩೧೦ ಮೀಟರ್ ಮೀಡಿಯಂ ವೇವ್ ತರಂಗಾತರಗಳಲ್ಲಿ ಇಲ್ಲಿನ ಪ್ರಸಾರ ಕಾರ್ಯ ನಡೆಯುತ್ತಿತ್ತು.