ಸದಸ್ಯ:Nithin Kumar v454

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ:ನನ್ನ ಹೆಸರು ನಿತಿನ್ ಕುಮಾರ್ ವಿ. ನನ್ನ ಜನನ ೦೯/೦೩/೧೯೯೯. ನನ್ನ ತಂದೆ ಹೆಸರು ವಂಕಟೇಶ್, ತಾಯಿ ಶಾಂತ.

ವಿದ್ಯಾಭ್ಯಾಸ: ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೊರಿನ ಮೌಂಟ್ ಸೇನೋರಿಯ ಶಾಲೆಯಲ್ಲಿ ಮುಗಿಸಿದೆ. ನನಗೆ ಚಿಕ್ಕ ವಯಸ್ಸಿನಿಂದಲೇ ವ್ಯಾಪಾರ,ಹಣ,ವಾಣಿಜ್ಯದ ಬಗ್ಗೆ ಹೆಚ್ಚು ಆಸಕ್ತಿ. ಆದ್ದರಿಂದ ನನ್ನ ೧೧ನೇ ಮತ್ತು ೧೨ನೇ ತರಗತಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಮುಗಿಸಿದೆ. ಪ್ರಸ್ತುತ ನಾನು ಭಾರತದ ಹೆಸರಾಂತ ವಿಶ್ವವಿದ್ಯಾಲಯವಾದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನ್ನ ಬಿಕಾಂ ಡಿಗ್ರಿಯನ್ನು ಮಾಡುತ್ತಿದ್ದೇನೆ. ನನಗೆ ಚಿಕ್ಕ ವಯಸ್ಸಿನಿಂದಲೇ ಓದಿನ ಕಡೆಗೆ ವಿಶೇಷ ಆಸಕ್ತಿ. ನಾನು ಎಲ್ಲಾ ತರಗತಿಯಲ್ಲಿ ಉತ್ತಮ ಅಂಕಗಳನ್ನುಗಳಿಸಿದ್ದೇನೆ. ಹತ್ತನೆಯ ತರಗತಿಯಲ್ಲಿ ಶೇಕಡಾ ೯೦ ಅಂಕಗಳಿಸಿರುವೆ ಮತ್ತು ೧೨ನೇ ತರಗತಿಯಲ್ಲಿ ಶೇಕಡಾ ೯೪ ಅಂಕಗಳಿಸಿರುವೆ. ನಾನು ಆಟಗಳಲ್ಲಿಯೂ ಮುಂದಿರುವೆ. ಕ್ರಿಕೆಟ್ ಎಂದರೆ ಪ್ರಾಣ. ನಾನು ಓಬ್ಬ ಉತ್ತಮ ಬೌಲರ್ ಕೂಡ ಹೌದು.

ಸಾದನೆ:ನಾನು ಜಿಲ್ಲಾ ಮಟ್ಟದ ಕ್ರೀಡಾಕೊಟದಲ್ಲಿ ಟ್ರಿಪಲ್ ಜಂಪ್ ಕ್ರೀಡೆಯಲ್ಲಿ ಬೆಂಗಳೊರನ್ನು ಪ್ರತಿನಿಧಿಸಿರುವೆ. ನನ್ನ ಮೆಚ್ಚಿನ ಕ್ರೀಡಾಪಟು ವಿರಾಟ್ ಕೊಹ್ಲಿ. ನಾನು ಬಿಡುವಿನ ವೇಳೆ ಪುಸ್ತಕಗಳನ್ನು ಓದುವೆ. ನನಗೆ ಕುವೆಂಪುರವರ ಕಾವ್ಯಗಳು ತುಂಬಾ ಇಷ್ಟ. ನಾನು ಬಿಕಾಂ ಮುಗಿಸಿದ ನಂತರ ಇನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬೇಕೆಂಬುದು ನನ್ನ ಗುರಿ ಮತ್ತು ಓಳ್ಳಯ ಕಂಪನಿಯಲ್ಲಿ ಕೆಲಸವನ್ನುಗಳಿಸಿ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡು ಉತ್ತಮವಾಗಿ ಜೀವನ ನಡೆಸಬೇಕೆನ್ನುವುದು ನನ್ನ ಜೀವನದ ಗುರಿ.