ಸದಸ್ಯ:Nithesh Sequeira/sandbox
ಕ್ರಿಕೆಟ್ ಎಂಬುದು ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.[೧]
ಆಟದ ನಿಯಮಾವಳಿಗಳು ಕ್ರಿಕೆಟ್‌ನ ಕಾನೂನುಗಳು ಎಂದು ಪರಿಚಿತವಾಗಿವೆ.[೨]
ಇವೆಲ್ಲವುಗಳ ಉಸ್ತುವಾರಿಯನ್ನು ಗ್ರಂಥಸ್ವಾಮ್ಯ ಹೊಂದಿರುವ ICC ಮತ್ತು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ನೋಡಿಕೊಳ್ಳುತ್ತಿದೆ.ಕ್ರಿಕೆಟ್ ಆಟವನ್ನು ಕ್ರಿಕೆಟ್ ಮೈದಾನದ ಮಧ್ಯಭಾಗದಲ್ಲಿರುವ ಪಿಚ್ ಮೇಲೆ ಆಡಿಸಲಾಗುತ್ತದೆ.ಪಂದ್ಯವನ್ನು ಒಂದೊಂದು ಪಂಗಡದಲ್ಲಿಯೂ ಹನ್ನೊಂದು ಜನ ಆಟಗಾರರು ಇರುವ ಎರಡು ಪಂಗಡಗಳ ನಡುವೆ ಆಡಿಸಲಾಗುತ್ತದೆ.[೩]ಬ್ಯಾಟಿಂಗ್ ಮಾಡುತ್ತಿರುವ ಪಂಗಡ ಔಟ್ ಆಗದೆ ಸಾಧ್ಯವಾದಷ್ಟು ರನ್ ಗಳಿಸಲು ಪ್ರಯತ್ನಿಸುತ್ತಿದ್ದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿರುವ ಇನ್ನೊಂದು ಪಂಗಡ ಬ್ಯಾಟಿಂಗ್ ಮಾಡುತ್ತಿರುವ ಪಂಗಡದ ಬ್ಯಾಟ್ಸ್‌ಮನ್‌ಗಳನ್ನ ಚದುರಿಸಿ ಕಡಿಮೆ ಅಂಕಕ್ಕೆ ಮಿತಿಗೊಳಿಸಲು ಪ್ರಯತ್ನಿಸುತ್ತಿರುತ್ತದೆ.
ಯಾವಾಗ, ಬ್ಯಾಟಿಂಗ್ ಮಾಡುತ್ತಿದ್ದ ಪಂಗಡ ತನಗೆ ಲಬ್ಯವಿದ್ದ ಎಲ್ಲಾ ಒವರ್‌ಗಳನ್ನೂ ಬಳಸಿಕೊಂಡಿದ್ದು ಅಥವಾ ಎಲ್ಲಾ ಬ್ಯಾಟ್ಸ್‌ಮನ್‌ಗಳು ಔಟ್ ಆದ ನಂತರ ವ್ಯತಿರಿಕ್ತವಾಗಿ ಈಗ ಪ್ರತಿಸ್ಪರ್ಧಿಯ ಅಂಕಗಳನ್ನ ದಾಟುವುದು ಫೀಲ್ಡಿಂಗ್ ಮಾಡುತ್ತಿದ್ದ ಪಂಗಡದ ಸರದಿಯಾಗುತ್ತದೆ.
ಕ್ರಿಕೆಟ್ ಆಟದ ಪರಿಧಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಿವೆ. ವೃತ್ತಿಪರ ಕ್ರಿಕೇಟಿನಲ್ಲಿ ಈ ವ್ಯಾಪ್ತಿಯನ್ನು ಪ್ರತಿ ಭಾಗಕ್ಕೂ ೨೦ ಒವರುಗಳಿಗೆ ಸೀಮಿತಗೊಳಿಸಿ ಸೀಮಿತ ಒವರುಗಳ ಕ್ರಿಕೆಟ್ ಎಂದು ೫ ದಿನಗಳವರೆಗಿನ ಟೆಸ್ಟ್ ಕ್ರಿಕೇಟ್ ಪ್ನ್ನಂದ್ಯವನ್ನು ಆಡಿಸಲಾಗುತ್ತದೆ.ಆಡಿಸಲ್ಪಟ್ಟ ಆಟದ ಸ್ವರೂಪಕ್ಕೆ ಅನುಗುಣವಾಗಿ ವಿವಿಧ ರೀತಿಯ ನಿಯಮಮಗಳ ಮೂಲಕ ಆಟ ಗೆದ್ದಿದೆಯೊ, ಸೋತಿದೆಯೊ, ಸಮನಾಗಿದೆಯೊ ಅಥವಾ ತಡೆಹಿಡಿಯಲಾಗಿದೆಯೊ ಎಂದು ನಿರ್ಣಯಿಸಲಾಗುತ್ತದೆ.