ಸದಸ್ಯ:Nishairuvail/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಇರುವೈಲು

ಸ್ಥಳ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಿಂದ ಎಂಟು ಕಿ.ಮೀ ದೂರದಲ್ಲಿರುವ ಇರುವೈಲಿನ ಸುಂದರ ಗಿರಿ ಬಯಲುಗಳ ಪ್ರಕೃತಿ ಮಡಿಲಲ್ಲಿ ಕಾಣಸಿಗುವುದೇ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಇಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿರುವ ಫಲ್ಗುಣಿ ಹೋಳೆಯು ಹರಿಯುತ್ತಿರುವುದು.ಕಾರ್ಕಳ ಬಂಟ್ವಾಳ,ಮಂಗಳೂರು ಈ ಮೂರು ತಾಲೂಕುಗಳ ಗಡಿ ಪ್ರದೇಶದಲ್ಲಿ ಇರುವೈಲಿಗೆ ಮೂಡಬಿದ್ರೆಯಿಂದ ನೇರ ರಸ್ತೆ ಮತ್ತು ಮಂಗಳೂರಿನಿಂದ ಮಿಜಾರು, ಎಡಪದವು, ಕುಪ್ಪೆಪದವು ಹೀಗೆ ನಾಲ್ಕು ಕಡೆಯಿಂದಲೂ ರಸ್ತೆ ಮತ್ತು ವಾಹನ ಸಂಪರ್ಕ ಇರುವುದಲ್ಲದೇ ಫಲವತ್ತಾದ ಕೃಷಿ ಭೂಮಿಯನ್ನು ಆವರಿಸಿಕೊಂಡಿರುವ ಶಾಂತ ವಾತಾತರಣದ ಪ್ರದೇಶವಾಗಿದೆ.

ಇತಿಹಾಸ ಮೂಡಬಿದ್ರೆಯ ಚೌಟರ ಸೀಮೆಗೆ ಒಳಪಟ್ಟ ಇರುವೈಲಿನ ದೇವಗಿರಿ, ವಜ್ರಗಿರಿ, ಕನಕಗಿರಿ ಎಂಬ ಪರ್ವತಗಳ ಮಧ್ಯದಲ್ಲಿ ಇರುವ ಈ ದೇವಾಲಯವು ಪುರಾತನದಲ್ಲಿ ಪ್ರಸ್ತುತ್ತ ದೇವಾಲಯವಿರುವ ಪೂರ್ವಕ್ಕೆ ದೇವಗಿರಿಯಲ್ಲಿ ಇತ್ತು. ಎಂಬುದನ್ನು ದೇವಾಲಯದ ಆವಷೇಶ ಮತ್ತು ಶಿಲಾ ಶಾಸನಗಳಿಂದಲೂ ತಿಳಿಯಬಹುದಾಗಿದೆ. ಹಿಂದೆ ಪರ್ವತದಲ್ಲಿರುವ ದೇವಾಲಯಕ್ಕೆ ತ್ರಿಕಾಲ ಪೂಜೆಗಳಿಗೆ ನೀರನ್ನು ಹೊತ್ತುಕೊಂಡು ಹೋಗುವುದು ಬಹಳ ಪ್ರಯಾಸದ ಕೆಲಸವಾಗಿತ್ತಂತೆ. ವಯೋವೃದ್ದರೂ, ಭಕ್ತರು ಆಗಿದ್ದ ಅಂದಿನ ಅರ್ಚಕರೂ ತನ್ನ ಹಾಗೂ ಭಕ್ತರ ಕಷ್ಟದ ಬಗ್ಗೆ ದೇವಿಯ ಸನ್ನಿಧಿಯಲ್ಲಿ "ಅಮ್ಮಾ ಸಕಲ ಭಕ್ತರಿಗೆ ಅನುಕೂಲವಾಗುವಂತೆ ಈ ಗಿರಿಯಿಂದ ಕೆಳಗೆ ಇಳಿದು ನೆಲೆಸಬೇಕೆಂದು ಪ್ರಾರ್ಥಿಸಿಕೊಂಡರಂತೆ" ಇದರ ಫಲವಾಗಿ ಅದೇ ದಿನ ರಾತ್ರಿ ಅರ್ಚಕರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ನಿಮ್ಮೆಲ್ಲರ ಅಭಿಷ್ಟದಂತೆ ಭಕ್ತರ ಉದ್ಧಾರಕ್ಕಾಗಿ ಕಾಸಿಕಾವನ (ಈಗ ದೇವಾಲಯವಿರುವ ಪ್ರದೇಶ)ದಲ್ಲಿ ಉದ್ಭವಿಸಿದ್ದೇನೆ ಎಂದು ಅಭಯವಾಯಿತಂತೆ ಮರುದಿನ ಮುಂಜಾನೆ ಅರ್ಚಕರು ಹಾಗೂ ಭಕ್ತರು ಕಂಡಾಗ ಸರೋವರವೊಂದರ ಸಮೀಪ ಒಂದು ಹುಲಿ ಮತ್ತು ದನ ಒಟ್ಟಿಗೆ ಮೇಯುವ ದೃಶ್ಯದೊಂದಿಗೆ ಶ್ರೀ ದೇವಿಯ ಲಿಂಗರೂಪದಲ್ಲಿ ಉದ್ಭವವಾಗಿದ್ದರಂತೆ ಮುಂದೆ ಭಕ್ತಮಹಶಯರೆಲ್ಲ ಸೇರಿ ಅಂದಿನ ಅರಸರ ಸಹಕಾರಗಳೊಂದಿಗೆ ದೇವಾಲಯವು ನಿರ್ಮಾಣವಾಯಿತಂತೆ ಈ ರೀತಿ ಎರಡನೇ ಬಾರಿ ಶ್ರೀ ದೇವಿಯ ಉದ್ಭವಿಸಿರುವ ಕಾರಣ ತುಳು ಭಾಷೆಯಿಂದ (ಇರುವಾರ ಉಂಡು ಇತಿಹಾಸದಲ್ಲಿ ಇರುವೈಲು" ಎಂಬ ಹೆಸರು ಬಂತೆಂದು ಪ್ರತೀತಿ ಇದೆ.

ಶ್ರೀ ಕ್ಷೇತ್ರದಲ್ಲಿ ನಾಗಾಲಯ , ನಾಗಬೃಹ್ಮಸ್ಥಾನ ಹಾಗೂ ಬಹಳ ವಿಶಿಷ್ಟವಾದ ಮಾಡ್ಲಾಯಿ ಎಂಬ ಕ್ಷೇತ್ರ ರಕ್ಷಕ ದೈವವು ಹೊಸಮರಾಯ ಎಂಬ ಗ್ರಾಮ ರಕ್ಷಕ ದೈವವು ಇರುವುದು. ಹಾಗೂ ಇದಕ್ಕೆ ಸಂಬಂಧಪಟ್ಟು ಇರುವೈಲು ಗ್ರಾಮದಲ್ಲಿ ಹದಿನಾರು ಗುತ್ತುಬಾಳಿಕೆ ಮನೆತನಗಳು ಇರುವುವು.

ಭಕ್ತಾಬಿಷ್ಟ ಫಲಪ್ರದೆಯಾದ ಶ್ರೀ ದೇವಿಗೆ ರಂಗ ಪೂಜಾರಾಧನೆ, ಹೂವಿನಪೂಜೆ ,ಭಜನೆ ,ಯಕ್ಷಗಾನ ಇತ್ಯಾದಿಗಳು ವಿಶೇಷ ಪ್ರತೀ ವರ್ಷ ಪಾಲ್ಗುಣ ಪೌರ್ಣಮಿಯಿಂದ ಮೊದಲ್ಗೊಂಡು ವರ್ಷಾವಧಿ ಮಹೋತ್ಸವ ರಥೋತ್ಸವವು, ಜರುಗುವುವು. ಹಾಗೂ ನವರಾತ್ರಿ ಮತ್ತು ಪರ್ವ ದಿನಗಳಲ್ಲಿ ಉತ್ಸವಗಳು ಅಲ್ಲದೇ ನಿತ್ಯ ನೈಮಿತ್ತಿಕ ತ್ರಿಕಾಲ ಪೂಜೆಗಳು ಜರುಗುವುವು. ಸುಮಾರು 9 ಶತಮಾನಕ್ಕಿಂತಲೂ ಅಧಿಕ ಇತಿಹಾಸವಿರುವ ಊರ ಪರವೂರ ಭಕ್ತಬಿಮಾನಿಗಳ ಆರಾಧ್ಯ ಕೇಂದ್ರವಾಗಿರುವ ದೇವಾಲಯದ ಹಿಂದಿನ ಆಡಳಿತ ಹಾಗೂ ಉಸ್ತುವಾರಿಯನ್ನು ನೋಡಿಕೊಂಡು ಬರುತ್ತಿದ್ದ ಭಕ್ತ ಮಹಾಷಯರು ತಮ್ಮಿಂದ ಸಾಧ್ಯವಾದಷ್ಟು ಸಹಕಾರಗಳನ್ನಿತ್ತು ನಿಷ್ಕ್ರಷ್ಟ ಅವಸ್ಥೆಯಲ್ಲಿದ್ದ ದೇವಾಲಯದ ವ್ಯವಸ್ಥೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘ್ಲನೀಯ. ಇತ್ತೀಚಿಗೆ ಕೆಲವು ದಶಕಗಳಿಂದ ದೇವಾಲಯವು ಸರಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಉಂಬಳಿ ಇಲಾಖೆಯ ಅಧೀನದಲ್ಲಿದ್ದು 1995ರಿಂದ ನೂತನ ಆಡಳಿತ ಮಂಡಳಿಯನ್ನು ದೇವಸ್ಥಾನಕ್ಕೆ ನೇಮಿಸಿರುತ್ತದೆ.