ಸದಸ್ಯ:Nishairuvail/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಪ್ಟೆಗಾರ/ಚಪ್ಟೆಕಾರ[ಬದಲಾಯಿಸಿ]

ಚಪ್ಟೆಗಾರ ಸಾರಸ್ವತ ಬ್ರಾಹ್ಮಣರ ಸಮಾಜವುಒಂದು ಪಂಗಡ. ಗೋವಾದಲ್ಲಿ ಪೋರ್ಚುಗೀಸರಆಕ್ರಮಣದ ನಂತರಗೋವಾದಿಂದದಕ್ಷಿಣ ಭಾರತದ ವಿವಿಧ ಪ್ರದೇಶಕ್ಕೆ ಹರಡಿಕೊಂಡಕೊಂಕಣಿಗರಲ್ಲಿಚಪ್ಟೆಗಾರ ಸಮಾಜವೂಕೂಡಾಒಂದು. ಚಪ್ಟೆಗಾರ ಸಮುದಾಯವು ಹಿಂದೂಧರ್ಮವಾಗಿದ್ದು ಸಾರಸ್ವತ ಬ್ರಾಹ್ಮಣರ ಉಪ ಜಾತಿಯಲ್ಲೊಂದಾಗಿದೆ. ಕರ್ನಾಟಕದಲ್ಲಿ ಈ ಸಮುದಾಯಜನತೆಯ ಮಾತೃ ಭಾಷೆಕೊಂಕಣಿ. ಮೂಲತಃ ವ್ಯಾಪಾರದಲ್ಲಿತೊಡಗಿಕೊಂಡಿರುವ ಈ ಸಮುದಾಯದಜನರು, ಜಾತ್ರೆಯ ಸಂದರ್ಭದಲ್ಲಿಊರು ಪರವೂರಿಗೆ ಹೋಗಿ ವ್ಯಾಪಾರ ನಡೆಸುತ್ತಾರೆ. ಸರಕಾರದ ಸಾಮಾಜಿಕ ಜಾತಿಗಳ ವರ್ಗಿಕರಣದಲ್ಲಿಚಪ್ಟೇಗಾರ್ ಸಮುದಾಯವು ಹಿಂದುಳಿದ ವರ್ಗದ '2ಎ'ನಲ್ಲಿ ಬರುತ್ತದೆ. ಈ ಸಮುದಾಯದ ಕುಲ ಕಸುಬು ತಿನಿಸುಗಳಾದ ನೈಯಪ್ಪ, ಚಕ್ಕುಲಿ ಉಂಡೆ, ಸುಕುನಪ್ಪಗಳನ್ನು ತಯಾರಿಸುವುದಾಗಿದೆ. ಈ ಸಮುದಾಯದವರುಗೋವಾದಿಂದ ವಲಸೆ ಬಂದ ನಂತರಕರ್ನಾಟಕದದಕ್ಷಿಣಕನ್ನಡ, ಕೊಡಗಿನ ವಿರಾಜಪೇಟೆ, ಉಡುಪಿಯ ಬ್ರಹ್ಮಾವರ, ಹಾಗೂ ಕೇರಳದ ಮಂಜೇಶ್ವರ ದಿಂದಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ವರೆಗೆ ಹಬ್ಬಿದ್ದಾರೆ. ಇವರ ಕುಲದೇವರುಗಳಾದ ಕುಡ್ತೇರಿ ಮಹಮ್ಮಾಯಿ, ಶಾಂತೇರಿ ಮಹಮ್ಮಾಯಿ, ಶಾಂತದುರ್ಗಾ, ಮಹಾಲಸ ಹೀಗೆ ಹಲವಾರು ಮಹಮ್ಮಾಯಿರೂಪವಾದದೇವಿಯನ್ನುಆರಾಧಿಸುತ್ತಾ ಬಂದಿದ್ದು, ಇವರು ಕುಲದೇವತೆಗಳು ಗೋವಾದಲ್ಲಿ ನೆಲೆಗೊಂಡಿದೆ. ಕರ್ನಾಟಕದಲ್ಲಿಇವರಅಡ್ಡ ಹೆಸರುಗಳನ್ನು ನಾಯಕ್‍ಎಂದುಕರೆದರೆ ಕೇರಳದಲ್ಲಿ ರಾವ್‍ಎಂದು ಬಳಸುತ್ತಾರೆ. ಚಪ್ಟೆಗಾರ್ ಸಮುದಾಯವುಇತರ ಸಾರಸ್ವತ್ ಬ್ರಾಹ್ಮಣ ಸಮುದಾಯದವರಂತೆ ಗೋತ್ರಗಳನ್ನು ಹೊಂದಿದ್ದು, ಅಳಿಯ ಕಟ್ಟನ್ನುಅನುಸರಿಸುತ್ತಾರೆ. ಅಮ್ಮೆಂಬಳ ಶ್ರೀ ಮಹಮಾಯಾದೇವಸ್ಥಾನ, ಪಿದಮಲೆ, ಕುರ್ನಾಡ್, ಕುರ್ನಾಡ್ ಚಪ್ಟೆಗಾರ್ ಸಾರಸ್ವತ ಬ್ರಾಹ್ಮಣ ಸಮಾಜ ಭಾಂದವರು ಕಳೆದ ನೂರಾರು ವರುಷಗಳಿಂದ ಅತ್ಯಂತ ಶೃದ್ಧಾ ಭಕ್ತಿಯಿಂದಆರಾಧನೆ ನಡೆಸಿಕೊಂಡು ಬರುತ್ತಿರುವ ಏಕೈಕ ಶೃದ್ಧಾಕೇಂದ್ರ ಅಮ್ಮೆಂಬಳ ಶ್ರೀ ಮಹಮಾಯಾದೇವಸ್ಥಾನ. ಈ ದೇವಸ್ಥಾನವು ಮಂಗಳೂರು ನಗರದಿಂದ ಸುಮಾರು 30 ಕಿಲೋಮೀಟರ್‍ದೂರದ ಮುಡಿಪು ಬಸ್ಸು ನಿಲ್ದಾಣದಿಂದ ಮುಂದಕ್ಕೆ ಮೂಳೂರಿನ ಅಮ್ಮೆಂಬಳ ಗ್ರಾಮದ ಪಿದಮಲೆ ಎಂಬ ಎತ್ತರವಾದ ಪ್ರದೇಶದತಪ್ಪಲಲ್ಲಿರುವ ನಿತ್ಯರಿದ್ವರ್ಣವಾದ ಕಾನನ ಮತ್ತುಅಡಿಕೆತೋಟದ ಮಧ್ಯದಲ್ಲಿದೆ. ಈ ದೇವಸ್ಥಾನವು ಮೂಳೂರು ರಾಮಯ್ಯಕೋಡಿ ನಾಯಕ್ (ಅಮ್ಮೆಂಬಳ ನಾಯಕ್) ಮನೆತನದವರುಆರಾಧನೆ ಮಾಡಿಕೊಂಡು ಬರುತ್ತಿದ್ದು ಇಂದಿಗೂ ಇದೇ ಮನೆತನದ ಹಿರಿಯ ಸದಸ್ಯರಾದ ಶ್ರೀ ಬೋಜರಾಜ (ಬೇಬಿ) ನಾಯಕ್‍ರವರುಅಧ್ಯಕ್ಷರಾಗಿ ಆಡಳಿತ ನಡೆಸಿಕೊಂಡು ಬರುತಿದ್ದಾರೆ, ಮತ್ತುಇದೇ ಮನೆತನದಇನ್ನೊಬ್ಬ ಸದಸ್ಯರಾದ ಶ್ರೀ ಉಮೇಶ್ ನಾಯಕ್‍ರವರುದರ್ಶನ ಪಾತ್ರಿಯಾಗಿದೇವಿಯಅವಿರತ ಸೇವೆಯನ್ನು ಶೃದ್ಧಾ ಭಕ್ತಿಯಿಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದಲ್ಲದೇ ಈ ಸಮಾಜದಇತರ 5 ಪ್ರಧಾನ ಕುಟುಂಬಗಳಾದ (2) ಪಿದಮಲೆ/ಕಟ್ಟೆಮಾರ್ ನಾಯಕ್ (3) ಕೋಕಳ ಯಾನೆಚಂಗುಲಿಕೋಡಿ ನಾಯಕ್ (4) ಇರಾಯಾನೆತೀರ್ಥಾಡಿ (5) ಪಜೀರುಯಾನೆಅಗರಿಮಾರು ನಾಯಕ್ (6) ವೆಂಕಟ್ ನಾಯಕ್ (7) ಮುಕುಂದ ನಾಯಕ್ ಈ ಉಳಿದ 5 ಕುಟುಂಬಸ್ಥರುಒಟ್ಟಿಗೆ ಸೇರಿ ಶ್ರೀ ದೇವಿಯ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು, ಈ ದೇವಸ್ಥಾನದ ಶ್ರೇಯಾಭಿವೃದ್ಧಿ ಮತ್ತು ಉಳಿವಿಗಾಗಿ ನಿತ್ಯ ನಿರಂತರ ಹಗಲಿರುಳು ಶ್ರಮ ವಹಿಸಿ ದುಡಿಯುತ್ತಿದ್ದಾರೆ.

ಈ ಸ್ಥಳದ ಮಹಿಮೆ ಮತ್ತುದೇವಸ್ತಾನದ ಹಿನ್ನಲೆಇತಿಹಾಸ:

ಮೂಳೂರು ರಾಮಯ್ಯಕೋಡಿ ನಾಯಕ್ (ಅಮ್ಮೆಂಬಳ ನಾಯಕ್) ಮನೆತನದವರುತಮ್ಮಕುಟುಂಬದ ಬಗ್ಗೆ ಶ್ರೀ ಗೋಪಾಲಕೃಷ್ಣ ಪಣಿಕ್ಕರ್, ಪಯ್ಯನ್ನೂರುಇವರ ಮುಖಾಂತರಇಟ್ಟ ಅಷ್ಟಮಂಗಳ ಪ್ರಶ್ನಾಚಿಂತನೆಯಲ್ಲಿಕಂಡುಬಂದಂತೆ, ಈ ಪ್ರದೇಶವು ಸಾವಿರಾರು ವರುಷಗಳಿಂದ ಋಷಿಮುನಿಗಳು ತಪ್ಪಸ್ಸು ಮಾಡಿದತಪೋ ಭೂಮಿಯಾಗಿದ್ದುಅದರಕುರುಹಾಗಿ ಪಿದಮಲೆಯಲ್ಲಿಅವರುತಪ್ಪಸ್ಸು ನಡೆಸಿದ ಗುಹೆ, ನೀರಿನಝರಿ, ಬಂಡೆ ಕಲ್ಲುಗಳು ಈಗಲೂ ಕಾಣಸಿಗುತ್ತದೆ. ಈ ಪ್ರದೇಶದಲ್ಲಿ ಹಿಂದೆ ಹುಲಿ ಮತ್ತು ದನಗಳು ಒಟ್ಟಿಗೆ ವಾಸಿಸುತ್ತಿತ್ತು ಎಂದುಕುಟುಂಬದ ಹಿರಿಯರು ಹೇಳುತಿದ್ದರು. ಅಷ್ಟಮಂಗಳ ಪ್ರಶ್ನಾಚಿಂತನೆಯಲ್ಲಿಇಲ್ಲಿ ಋಷಿಗಳು ಧ್ಯಾನ ಸಂಕಲ್ಪದಲ್ಲಿಯೋಗಿ (ಶಿವ) ಮತ್ತುಯೋಗಿನಿ (ಶಿವೆ) ಯಆರಾಧನೆಯನ್ನು ಸಾವಿರಾರು ವರುಷಗಳಿಂದ ಮತ್ತು ಈಗಲೂ ಅವರ ಚೈತನ್ಯಗಳು ಆರಾಧನೆ ನಡೆಸಿಕೊಂಡು ಬರುತಿದ್ದಾರೆಎಂದು ತಿಳಿದು ಬಂದಿದೆ.

ಈ ಪ್ರದೇಶಕ್ಕೂ ಮತ್ತು ಮೂಳೂರು ರಾಮಯ್ಯಕೋಡಿಕುಟುಂಬಸ್ಥರಿಗೂಇರುವ ಅವಿನಾಭಾವ ಸಂಬಂಧ : ಅಷ್ಟಮಂಗಳ ಪ್ರಶ್ನಾಚಿಂತನೆಯಲ್ಲಿಕಂಡು ಬಂದಂತೆ, ಚಪ್ಟೇಗಾರ್ ಸಾರಸ್ವತ ಬ್ರಾಹ್ಮಣ ಸಮಾಜದ ಭಾರ್ಗವ ಪಂಚ ಋಷಿ ಪ್ರವರಾನ್ವಿತ ವತ್ಸಗೋತ್ರ ಸಾತ್ವಿಕ ಬ್ರಾಹ್ಮಣನಾದ ಮೂಳೂರು ರಾಮಯ್ಯಕೋಡಿ ಮನೆತನದ ಮೂಲ ಪುರುಷನುಗೋವಾದಲ್ಲಿ ಸುಮಾರು 600 ವರ್ಷದ ಹಿಂದೆ ನಡೆದ ಪೋರ್ಚುಗೀಸರ ಹಿಂದೂದೇವಾಲಯ, ಮಠ ಮತ್ತು ಹಿಂದುಗಳ ಮೇಲೆ ನಡೆದ ದಬ್ಬಾಳಿಕೆ ಮತಾಂತರದ ಭೀತಿಯಿಂದತಮ್ಮಕುಟುಂಬಸ್ಥರನ್ನುಇತರ ಸಾರಸ್ವತ ಬ್ರಾಹ್ಮಣ ಸಮಾಜದವರಂತೆದಕ್ಷಿಣದ ಪರಶುರಾಮ ಸೃಷ್ಟಿಯಕೋಡಿಯಲ್ (ಮಂಗಳೂರು ಪ್ರಾಂತ) ಪ್ರದೇಶವನ್ನು ಮಂಜೇಶ್ವರದ ಹಾದಿಯಾಗಿಈಗಿರುವ ಮೂಳೂರು (ಮೂಲ ಪುರ) ಎಂಬಲ್ಲಿ ಬಂದು ನೆಲೆಸಿದ್ದರು. ಹೀಗೆ ಗೋವಾದಿಂದ ಬರುವಾಗಕುಟುಂಬದ ಮೂಲ ಪುರುಷನುತನ್ನೊಂದಿಗೆತನ್ನಕುಲದೇವಿಯಾದಅನ್ನಪೂಣ್ರ್ವೆಶ್ವರಿ ಸ್ವರೂಪಿಣಿಯಾದ ಶ್ರೀ ಮಹಾಲಸ ನಾರಾಯಣಿದೇವಿಯಚಿನ್ನದ ಪ್ರತಿಮೆಯನ್ನು ಮತ್ತು ಶ್ರೀ ಮಹಾಗಣಪತಿದೇವಿಯಆರಾಧನೆಯನ್ನು ನಡೆಸಿಕೊಂಡು ಬರುತ್ತಿರುವಾಗ, ಒಂದುತೀರ್ಥಕ್ಷೇತ್ರದಲ್ಲಿ ನಾಥ ಸಂಪ್ರದಾಯದ ಶಿವಯೋಗಿಯ ಪರಿಚಯವಾಗಿ ಆ ಶಿವಯೋಗಿಯು ಈ ಸಾತ್ವಿಕ ಬ್ರಾಹ್ಮಣನಗುರು ಭಕ್ತಿ ಮತ್ತು ಸೇವಾ ಮನೋಭಾವನೆಯಿಂದ ಪುಳಕಿತನಾಗಿ ಎಲ್ಲಾಕುಟುಂಬಸ್ಥರನ್ನುತನ್ನೊಂದಿಗೆ ಸೇರಿಕೊಂಡು "ಪಿದಮಲೆ" ಎಂಬ ತಪೋಭೂಮಿಗೆಅವರನ್ನುಕರೆದುಕೊಂಡು ಬರುತ್ತಾನೆ. ಇದಕ್ಕೆ ಮೂಲ ಕಾರಣ ಈ ಕುಟುಂಬದ ಮೂಲ ಪುರುಷನು ಮೂಲತಃ ಸಾರಸ್ವತ ಬ್ರಾಹ್ಮಣ ಸಮಾಜದ ಮೂಲ ಗುರು ಪೀಠ ಶ್ರೀ ಗೌಡ ಪಾದಚಾರಿಯಕೈವಲ್ಯ ಮಠದಅನುಯಾಯಿಯಾಗಿದ್ದು, ಸ್ಮಾರ್ಥ ಬ್ರಾಹ್ಮಣನಾಗಿ ಪಂಚಾಯುತನ ಪೂಜಾ ಪದ್ಧತಿ (ಶಿವ, ನಾರಾಯಣ, ಶಕ್ತಿ, ಗಣಪತಿ, ನಾಗ) ಮತ್ತು ಆ ಶಿವ ಯೋಗಿಯ ನಾಥ ಪಂಥದ ಪೂಜಾ ಪದ್ಧತಿ (ಶೈವ, ವೈಷ್ಣವ, ಶಾಕ್ತೇಯ) ಪರಸ್ಪರ ಹೊಂದಾಣೀಕೆಇರುವುದರಿಂದ ಈ ಕುಟುಂಬದ ಮೂಲ ಪುರುಷನುಗ್ರಹಸ್ಥನಾಗಿತನ್ನಕುಟುಂಬಸ್ಥರೊಂದಿಗೆತನ್ನ ಸ್ವಗ್ರಹದಲ್ಲಿತನ್ನಕುಲದೇವಿಯಚಿನ್ನದ ಪ್ರತಿಮೆಯನ್ನು ಮತ್ತು ಶ್ರೀ ಮಹಾಗಣಪತಿದೇವರನ್ನುಆರಾಧನೆ ಮಾಡಿಕೊಂಡಿದ್ದು ಆ ಶಿವಯೋಗಿಯು ಕಾನನದಲ್ಲಿತನ್ನಧ್ಯಾನ ಸಂಕಲ್ಪದಲ್ಲಿ ಪರಶಿವ ಮೂಲ ನಾರಾಯಣ ಮತ್ತು ಮೂಲ ದುರ್ಗೆ ಶ್ರೀ ಮಹಾಮಾಯದೇವಿಯಆರಾಧನೆಯನ್ನು ಸುಮಾರು ವರುಷಗಳ ವರೆಗೆ ನಡೆಸಿಕೊಂಡು ಹೋಗುತ್ತಿದ್ದರು. ಈ ಕುಟುಂಬವು ಆ ಶಿವಯೋಗಿಯ ಸೇವೆಯನ್ನು ನಡೆಸಿಕೊಂಡು, ಆ ಗುರುವಿನ ಪ್ರೀತಿಗೆ ಪಾತ್ರರಾಗಿ, ತಮ್ಮೆಲ್ಲ ಕಷ್ಟ ಕಾರ್ಪಣ್ಯವನ್ನು ಆ ಶಿವಯೋಗಿಗೆ ತಿಳಿಸಿ ಪರಿಹಾರಕಂಡುಕೊಂಡು ನೆಮ್ಮದಿಯಜೀವನ ನಡೆಸಕೊಂಡು ಬರುತ್ತಿದ್ದರುಆದರೆ ಶಿವಯೋಗಿಯು ನಿರ್ವಾಣ ಹೊಂದಿದ ನಂತರ, ಕುಟುಂಬದ ಮೂಲ ಪುರುಷನು ಮಂಗಳೂರಿನಲ್ಲಿರುವ ಕುಟುಂಬದ ಮೂಲ ಮನೆಯ ಹಿಂಭಾಗದಲ್ಲಿರುವ ಬನ ಪ್ರದೇಶದಲ್ಲಿ ಆ ಶಿವಯೋಗಿಗೆ ಸಮಾಧಿ ನಿರ್ಮಿಸಿ ಆರಾಧನೆ ಡೆಸಿಕೊಂಡು ಬರುತ್ತಿದ್ದು, ಅಷ್ಟಮಂಗಳ ಪ್ರಶ್ನಾಚಿಂತನೆಯಲ್ಲಿಕಂಡು ಬಂದಂತೆಕಾಲಕ್ರಮೇಣ ಈ ಎಲ್ಲಾ ಪ್ರದೇಶವುಒಂದುಜೈನರ ಬೀಡಿಗೆ ಸಂಬಂಧ ಪಟ್ಟಜಾಗವಾಗಿದ್ದು, ಮೂಲ ಪುರ ಶ್ರೀ ಪರಮೇಶ್ವರದೇವಸ್ಥಾನವೂಕೂಡಾ ಈ ಕುಟುಂಬಕ್ಕೆ ಸಂಬಂಧವಿತ್ತುಎಂದು ತಿಳಿದು ಬರುತ್ತದೆ. ಕಾಲಕ್ರಮೇಣ ಮೂಲ ಪುರುಷನದೇಹಾಂತ್ಯದ ನಂ5ತರ ಕುಟುಂಬದಲ್ಲಿ ನಡೆದಅನಾಚಾರದಿಂದ ನಾವು ಆರಾಧನೆ ಮಾಡಿಕೊಂಡು ಬರುತ್ತಿದ್ದಕುಲದೇವಿಯಚಿನ್ನದ ಮೂರ್ತಿಯನ್ನು ಕಳೆದುಕೊಂಡು, ಆ ಶಿವ ಯೋಗಿಯಆರಾಧನೆ ನಡೆಸುತ್ತಿದ್ದ ಶ್ರೀ ಮಹಾಮಾಯದೇವಿಯನ್ನು ಬಿಟ್ಟು ಪಿದಮಲೆಯಿಂದ ಕೆಳಗೆ ಮೂಳೂರಿಗೆ ಬಂದು ಮೂಲ ಮನೆಯಲ್ಲಿ ನೆಲೆಸಲು ಪ್ರಾರಂಭಿಸಿತ್ತು. ಕಾಲಕ್ರಮೇಣ ಸಮಾಜದಇನ್ನೊಂದುಕುಟುಂಬ ಅರ್ಚಕರಾದ ಶ್ರೀ ರಾಮ ನಾಯಕ್‍ರವರ ಹಿರಿಯರು ಅರ್ಚಿಸಿಕೊಂಡು ಬರುತ್ತಿದ್ದು, ಅದನ್ನು ಈ ವರೆಗೆ ಮುಂದುವರೆಸಿ ಬರುತ್ತಿದ್ದಾರೆ. ದೇವಸ್ಥಾನದಲ್ಲಿರುವ ಸಾನಿದ್ಯಗಳು : 1.ಮೂಲ ದುರ್ಗೆ - ಶ್ರೀ ಮಹಮಾಯದೇವಿ (ಮೂಲ ಗರ್ಭಗುಡಿ) 2.ಶ್ರೀ ಕಾಲಬೈರವ - (ಮೂಲ ಗರ್ಭಗುಡಿಯಎಡಭಾಗ) 3.ಶ್ರೀ ಸತ್ಯದೇವತೆ _ (ಮೂಲ ಗರ್ಭಗುಡಿಯ ಮುಂಭಾಗ) 4.ಶ್ರೀ ಮೂಲ ನಾಗ -(ದೇವಸ್ಥಾನದಎಡ ಭಾಗದಲ್ಲಿರುವತೋಟದ ಮಧ್ಯೆ) 5.ಶ್ರೀ ರಕ್ತೇಶ್ವರಿ, ಇತರ ಪರಿವಾರ ಶಕ್ತಿಗಳು - (ತೀರ್ಥಕೆರೆಯ ಹತ್ತಿರ) ಹೀಗೆ ಹಲವು ವರ್ಷಗಳ ನಂತರ ಸುಮಾರು 1845ರಂದು ಪಿದಮಲೆಯಾನೆಕಟ್ಟೆಮಾರುಕುಟುಂಬದ ಹಿರಿಯರಾದ ಶ್ರೀಯುತ ಪರಮೇಶ್ವರ ನಾಯಕ್‍ರವರಧರ್ಮಪತ್ನಿ ಶ್ರೀಮತಿ ಸರಸ್ವತಿ ನಾಯಕ್‍ರವರುದೇವರಚಿಲುಮೆಯಲ್ಲಿ ನೀರುತುಂಬಲು ಮಣ್ಣಿನಕೊಡವನ್ನು ಮುಳುಗಿಸಿದಾಗ ಬಿಂಬ (ಮೂರ್ತಿ)ಯೊಂದು ಕೊಡದೊಳಗೆ ಸಿಕ್ಕಿತು. ಈ ಮೂರ್ತಿಯನ್ನುಇವರ ಮಗ ಶ್ರೀ ಈಶ್ವರ ನಾಯಕ್‍ರವರು ಮನೆಯಲ್ಲಿಟ್ಟು ಪೂಜಿಸಲು ಪ್ರಾರಂಭಿಸಿದರು. ಪೂಜಿಸಿದ ಅರ್ಚಕರು ಮತ್ತುದರ್ಶನ ಪಾತ್ರಿಗಳು: ಶ್ರೀ ಬೂದು ನಾಯಕ್ - ಚಂಗುಲಿಕೋಳಿ ಶ್ರೀ ಲಕ್ಷ್ಮಣ ನಾಯಕ್ ಶ್ರೀ ವೀರಪ್ಪ ನಾಯಕ್ - ಪಿದಮಲೆ ಶ್ರೀ ಓಬಯ್ಯ ನಾಯಕ್ ಶ್ರೀ ಪಾಡುರಂಗ ನಾಯಕ್ - ಶ್ರೀ ಪುತ್ತುನಾಯಕ್ - 1915ರಲ್ಲಿ ರಾಮಯ್ಯಕೋಡಿ ಶ್ರೀ ಲಿಂಗಪ್ಪ ನಾಯಕ್ ಶ್ರೀ ಲಕ್ಷ್ಮಣ ನಾಯಕ್ ಶ್ರೀ ಕೊರಗ ನಾಯಕ್ - (ಸ್ವಜಾತಿ ಬಾಂದವರ ಆಡಳಿತ ಸಮಿತಿ ನಿರ್ಮಾಣ) ಶ್ರೀ ರಾಮ ನಾಯಕ್ - ರಾಮಯ್ಯಕೋಡಿ ಶ್ರೀ ಬಾಬಣ್ಣ ನಾಯಕ್ (ಮೂಳೂರು ಸ್ರೀ ಬಾಬಣ್ಣ ನಾಯಕ್‍ರವರಅಧ್ಯಕ್ಷತೆಯಲ್ಲಿ 05.02.1965 ರಿಂದ ನೂತನದೇವಸ್ಥಾನ ರಚಿಸಿ, ಪುನಃ ಪ್ರತಿಷ್ಠಾ ಬಹ್ಮ ಕಲಶ ನಡೆಯಿತು.

ಶ್ರೀ ದೇವಿಯ ಪವಾಡಗಳು: ಶ್ರೀ ಮತ್ತು ನಾಯಕ್‍ರವರುಅರ್ಚಕರಾಗಿದ್ದ ಕಾಲ ಶ್ರೀ ಲಿಂಗಪ್ಪ ನಾಯಕ್‍ರವರುದರ್ಶನ ಪಾತ್ರಿಯಾಗಿರುವಾಗಓರ್ವ ಬ್ರಾಹ್ಮಣ ಸ್ತ್ರೀಗೆ ಮಕ್ಕಳಿಲ್ಲದ ಕಾರಣದರ್ಶನದಲ್ಲಿ ಹರಕೆ ಮಾಡಿದೇವರಚಿಲುಮೆಯತೀರ್ಥ ಸ್ಥಾನ ಮಾಡಿದ ಕೆಲವೇ ಸಮಯದಲ್ಲಿ ಮಕ್ಕಳ ಭಾಗ್ಯದೊರಕಿತು. ಕುಷ್ಟರೋಗ, ಕೋರೆ, ಮೈಮೇಲೆ ಬೀಳುವುದು ಈ ಎಲ್ಲಾ ರೋಗಿಗಳಿಗೆ ದೇವರಚಿಲುಮೆಯತೀರ್ಥ ಸ್ಥಾನವನ್ನುಕಟ್ಟೆಮಾರು ಶ್ರೀ ನಾಗಪ್ಪ ನಾಯಕ್‍ರವರ ಮನೆಯ ಹತ್ತಿರ (ದೇವಾಲಯದ ಹಿಂಬಾಗ ತೀರ್ಥ ಬಾವಿಯ ಬಳಿ) ಸ್ಥಾನ ಮಾಡಿಸಿದ ನಂತರತಮ್ಮತಮ್ಮ ಊರುಗಳಿಗೆ ಹೋಗುತ್ತಿದ್ದರು. ಶ್ರೀ ದೇವಿಗೆ ಹರಕೆಯಾಗಿ - ಬಂಗಾರ ಹೂವು, ಬೆಳ್ಳಿಯ ಹೂವು, ಅಮ್ಮೆಂಬಳ ಪೈ ಕುಟುಂಬಸ್ಥರುಕದ್ದು ಹೋದದಕ್ಕೆ ಹರಕೆÀಯಾಗಿ ಬೆಳ್ಳಿಯ ಸಿಯಾಳ, ಬೆಳ್ಳಿಯ ಅಡಿಕೆಕೊಟ್ಟಿದ್ದರು. ಗೋವಾದಲ್ಲಿರುವಕುಲದೇವರು ಮತ್ತುಗೋತ್ರ: 1. ಶ್ರೀ ಶಾಂತದುರ್ಗಾ, ಶ್ರೀ ಚಾಮುಂಡೇಶ್ವರಿತಥಾ ಶ್ರೀ ಕುಡ್ತೇರಿ ಮಹಾಮಾಯ -ವಿಶ್ವಾಮಿತ್ರ,ಕೌಶಿಕ, ಕೌಂಡಿಣ್ಯ, ವತ್ಸ, ಭಾರಧ್ವಾಜ 2. ಶ್ರೀ ಮಹಾಲಸಾ ನಾರಾಯಣೀ -ಕೌಶಿಕ, ಅತ್ರಿ, ವತ್ಸ, ಭಾರಧ್ವಾಜ 3. ಶ್ರೀ ಆರ್ಯದುರ್ಗಾ,

ಶ್ರೀ ದಾಮೋದರ				-ಕೌಶಿಕ, ಕಾಶ್ವಯಪ,ವತ್ಸ, ಭಾರಧ್ವಾಜ

4. ಶ್ರೀ ಮಹಾಲಕ್ಷ್ಮೀ -ಕೌಶಿಕ, ಕಾಶ್ಯಪ, ವತ್ಸ, ಭಾರಧ್ವಾಜ 5. ಶ್ರೀ ನಾಗೇಶ್ -ಕೌಶಿಕ, ವತ್ಸ, ಭಾರಧ್ವಜ 6. ಶ್ರೀ ಶಿರೋಡ ಕಾಮಾಕ್ಷಿ -ವತ್ಸ, ಕೌಶಿಕ, ಅತ್ರಿ 7. ಶ್ರೀ ರಾಮನಾಥ, ಶ್ರೀ ಶಾಂತೇರಿ, ಶ್ರೀ ಕಾಮಾಕ್ಷಿ -ವತ್ಸ, ಕೌಂಡಿಣ್ಯ 8. ಶ್ರೀ ಮಂಗೇಶ, ಶ್ರೀ ಶಾಂತದುರ್ಗಾ -ಕೌಶಿಕ, ವತ್ಸ, ಕೌಂಡಿಣ್ಯ 9. ಶ್ರೀ ಶಾಂತದುರ್ಗಾ, ಶ್ರೀ ವಿಜಯದುರ್ಗಾ -ಕೌಶಿಕ, ಕಾಶ್ಯಪ 10. ಶ್ರೀ ಲಕ್ಷ್ಮೀ ನರಸಿಂಹ -ಕುತ್ಸ (ಶಂಖ-ಪಿಂಗಲ) 11. ಶ್ರೀ ಮಹಾಲಕ್ಷ್ಮೀ ಶ್ರೀ ರವಳನಾಥ -ಅತ್ರಿ, ಕಾಶ್ಯಪ, ವತ್ಸ, ಕೌಶಿಕ, ಭಾರಧ್ವಜ 12. ಶ್ರೀ ದೇವಕಿ ಕೃಷ್ಣ, ಶ್ರೀ ರವಳನಾಥಅತ್ರಿ, -ಕಾಶ್ಯಪ, ವತ್ಸ, ಕೌಂಡಿಣ್ಯ, ವಸಿಷ್ಠ