ವಿಷಯಕ್ಕೆ ಹೋಗು

ಸದಸ್ಯ:Nisha Nagaraj/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪ್ರಧಾನ ಮಂತ್ರಿ ಜನ ಧನ ಯೋಜನೆ'[[೧]]

ಪ್ರಧಾನ ಮಂತ್ರಿ ಜನ ಧನ ಯೋಜನೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನರ ಆರ್ಥಿಕ ಸ್ಥಿತಿ ಗತಿಯನ್ನು ಇನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಅಗಸ್ಟ್ ೨೮, ೨೦೧೪ರಂದು ಪ್ರತಿಷ್ಟಾಪಿಸಲಾಗಿರುವ ಒಂದು ಯೋಜನೆ. ಈ ಯೋಜನೆಯನ್ನು ಅಗಸ್ಟ್ ೧೫, ೨೦೧೪ರಂದು ನೆಡೆಯುವ ಸ್ವಾತಂತ್ರ ದಿನಾಚರಣೆಯಲ್ಲಿ ಘೋಷಿಸಿದರು.[]

ಹಣಕಾಸು ವಿಭಾಗ, ಹಣಕಾಸಿನ ಸಚಿವಾಲಯ ಉದ್ಘಾಟನೆಯ ದಿನದಂದು ೧.೫ ಕೋಟಿ ಬ್ಯಾಂಕ್ ಖಾತೆಗಳನ್ನು ಈ ಯೋಜನೆಯಡಿಯಲ್ಲಿ ತೆರೆಯಲಾಯಿತು. ಸೆಪ್ಟೆಂಬರ್ ೨೦೧೪ರಂದು ಖಾತೆಗಳ ಸಂಖ್ಯೆ ತೀವ್ರಗತಿ ಏರಿಕೆಯನ್ನು ಕಂಡು ೩.೦೨ ಕೋಟಿಯನ್ನು ತಲುಪಿತು. ಈ ಎಲ್ಲ ಖಾತೆಗಳಲ್ಲಿ ಸುಮಾರು ರೂ.೧೫೦೦ ಕೋಟಿ ಠೇವಣಿಯಾಗಿದೆ. ಈ ಯೋಜನೆಯಡಿಯಲ್ಲಿ ಶೂನ್ಯ ಠೇವಣಿಯ ಖಾತೆಯನ್ನು ತೆರೆಯುವ ಆಯ್ಕೆಯು ಸಹ ಎದೆ.[]

ಭಾರತೀಯ ಸ್ಟೇಟ್ ಬ್ಯಾಂಕ್, ಭಾರತದ ಅತಿ ದೊಡ್ಡ ಬ್ಯಾಂಕ್ ೧೧,೩೦೦ ಕ್ಯಾಂಪ್ಗಳನ್ನು ಜನ ಧನ ತೆರೆಯಲಾಗಿದೆ ಹಾಗೂ ೧ ಕೋಟಿಗು ಅಧಿಕ ಖಾತೆಗಳನ್ನು ಇದುವರೆಗು ತೆರೆಯಾಲಾಗಿದೆ. [] ಎಲ್ಲ ರಾಜ್ಯದ ಹಳ್ಳಿಗಳನ್ನು ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳಲಿ ಸುಮಾರು ೭ ಕೋಟಿಗು ಅಧಿಕ ಮನೆಗಳನ್ನೂ ತಲುಪಿದೆ.[]

ಪ್ರಧಾನ ಮಂತ್ರಿ ಜನ ಧನ ಯೋಜನೆಯ (ಪಿಎಂಜೆಡಿವೈ) ಮೊದಲ ಹಂತ (7.50 ಕೋಟಿ ಖಾತೆ ತೆರೆ ಯುವ) ಗುರಿ ಮುಟ್ಟಲು ನಿಗದಿಪಡಿ ಸಿದ್ದ ಗಡುವನ್ನು 2015ರ ಆಗಸ್ಟ್‌ 15ರಿಂದ ಜನವರಿ 16ಕ್ಕೆ ಮರು ಹೊಂದಾಣಿಕೆ ಮಾಡಲಾಗಿದೆ. ಆ ಮೂಲಕ ತ್ವರಿತಗತಿಯಲ್ಲಿ ಕೆಲಸ ಮಾಡಿ ಗುರಿ ಸಾಧಿಸಬೇಕೆಂಬ ಸಂದೇಶ ವನ್ನೂ ರವಾನಿಸಲಾಗಿದೆ.[]

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನ ಧನ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ಆ. 28ರಂದು ಆರಂಭಗೊಂಡ ಜನ ಧನ ಯೋಜನೆಯಡಿ ಈವರೆಗೆ 3.02 ಕೋಟಿ ಉಳಿತಾಯ ಖಾತೆಗಳನ್ನು ಹೊಸದಾಗಿ ತೆರೆಯಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 1.89 ಕೋಟಿ ಹಾಗೂ ನಗರ ಪ್ರದೇಶಗಳಲ್ಲಿ 1.13 ಕೋಟಿ ಖಾತೆ ತೆರೆಯಲಾಗಿದೆ. ಪ್ರತಿ ಖಾತೆಗೆ ರೂ 495ರಂತೆ ಒಟ್ಟು ರೂ 1,496.51 ಕೋಟಿ ಠೇವಣಿಯೂ ಸಂಗ್ರಹವಾಗಿದೆ.[]

ದೇಶದ ಪ್ರತಿ ಕುಟುಂಬವನ್ನೂ ಬ್ಯಾಂಕಿಂಗ್‌ ಸೇವೆಗಳ ವ್ಯಾಪ್ತಿ ತರುವ ಮಹತ್ವ ಜನ ಧನ ಯೋಜನೆ ಜಾರಿಯಲ್ಲಿ ಹಾಕಿಕೊಂಡಿ ರುವ ಗುರಿ ಸಾಧನೆಗಾಗಿ ಕೇಂದ್ರ ಸರ್ಕಾರ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

ಬ್ಯಾಂಕ್‌ ಸೇವಾ ವ್ಯಾಪ್ತಿಗೆ ಹೆಚ್ಚು ಜನರನ್ನು ಒಳಪಡಿಸಿಕೊಳ್ಳುವ ಸಲು ವಾಗಿ ಜನ ಧನ ಖಾತೆಗಳನ್ನು ಅಧಿಕ ಪ್ರಮಾಣದಲ್ಲಿ ತೆರೆಯುವ ಬ್ಯಾಂಕ್‌ ಗಳಿಗೆ ಪ್ರೋತ್ಸಾಹ ಧನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರೋತ್ಸಾಹ ಧನ ಕಾರ್ಯತಂತ್ರ ಕುರಿತು ರೂಪುರೇಷೆ ಸಿದ್ಧಪಡಿಸಲಾ ಗುತ್ತಿದೆ. ಸದ್ಯದಲ್ಲೇ ಅದು ಪ್ರಕಟ ಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.[]


ಉದ್ದೇಶ

• ಸಾರ್ವಜನಕರಿಗೆ ವೈಯಕ್ತಿಕ ಖಾತೆ ತೆರೆದರೆ, ಹಣದ ಸುರಕ್ಷತೆಯೊಂದಿಗೆ ಬಡ್ಡಿ ದೊರೆಯಲಿದೆ • ಡೆಬೆಟ್ ಕಾರ್ಡ್ ಮೂಲಕ ಎಟಿಎಂನಿಂದ ಹಣ ಪಡೆಯ ಬಹುದು • ರೂ. ೧ ಲಕ್ಷವರೆಗೆ ಅಪಘಾತ ನಿಮೆ ದೊರೆಯಲಿದೆ • ದೇಶದ ಯಾವ ಸ್ಥಳಗಳಿಗಾದರೂ ಸುಲಭವಾಗಿ ಹಣ ಕಳುಹಿಸಲು ಅನುಕೂಲ • ಯೋಜನೆಗಳ ಫ಼ಲಾನು ಭವಿಗಳಾಗಿದ್ದರೆ, ಯೋಜನೆಗಯಳ ಮೊತ್ತವನ್ನು ಖಾತೆಗಳಿಗೆ ಜಮಾ ಮಾಡುವುದು ಸುಲಭವಾಗಲಿದೆ[]

  1. https://en.wikipedia.org/wiki/Pradhan_Mantri_Jan_Dhan_Yojana
  2. https://en.wikipedia.org/wiki/Pradhan_Mantri_Jan_Dhan_Yojana
  3. http://timesofindia.indiatimes.com/business/india-business/74-of-bank-accounts-opened-in-Modis-Jan-Dhan-Yojana-have-zero-balance/articleshow/45192244.cms
  4. http://timesofindia.indiatimes.com/business/india-business/74-of-bank-accounts-opened-in-Modis-Jan-Dhan-Yojana-have-zero-balance/articleshow/45192244.cms
  5. http://www.prajavani.net/article/ಬ್ಯಾಂಕ್‌ಗಳಿಗೆ-ಪ್ರೋತ್ಸಾಹ-ಧನ
  6. http://www.prajavani.net/article/ಬ್ಯಾಂಕ್‌ಗಳಿಗೆ-ಪ್ರೋತ್ಸಾಹ-ಧನ
  7. http://www.prajavani.net/article/ಬ್ಯಾಂಕ್‌ಗಳಿಗೆ-ಪ್ರೋತ್ಸಾಹ-ಧನ
  8. http://www.vijaykarnatakaepaper.com/Details.aspx?id=15699&boxid=24751968