ಸದಸ್ಯ:Niroop Sampath Bananda/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                          ಹುತ್ತರಿ
                        ಕೊಡಗಿನಲ್ಲಿ ಹುತ್ತರಿ ಹಬ್ಬ ಬಂತೆಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದವರೆಗೆ ಸಂಭ್ರಮ ಮನೆ ಮಾಡಿಬಿಡುತ್ತದೆ. ಏಕೆಂದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಹೆಚ್ಚಿನ  ಪ್ರಾಧ್ಯಾನತೆ ನೀಡಲಾಗುತ್ತದೆ. ಈ ಹಬ್ಬ ಇಲ್ಲಿನವರ ಪಾಲಿಗೆ ಸುಗ್ಗಿ  ಹಬ್ಬವೂ ಹೌದು. ಹಬ್ಬ ಬರುತ್ತಿದೆ ಎನ್ನುವಾಗಲೆ ಸಣ್ಣಗೆ ನಡುಕ ಹುಟ್ಟಿಸುವ ಚಳಿ ಪ್ರಾರಂಬವಾಗುತ್ತದೆ. ಇದನ್ನು ಕೊಡಗಿನಲ್ಲಿ ಹುತ್ತುರಿ ಚಳಿ ಎಂದೇ ಹೇಳುತ್ತಾರೆ. ಜೊತೆಗೆ ಹಚ್ಚ ಹಸಿರಾಗಿದ್ದ ಗದ್ದೆಯ ಬಯಲುಗಳು ತೆನೆ ಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತದೆ. 
                         ಹಾಗೆ ನೋಡಿದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಿಗೆ ತನ್ನದೇ ಆದ ವೈಶಿಷ್ಟ್ಯತೆ ಇರುವುದನ್ನು ನಾವು ಕಾಣಬಹುದು. ಹಿಂದಿನ ಕಾಲದಲ್ಲಿ ಇಲ್ಲಿನವರಿಗೆ ಭತ್ತದ ಕೃಷಿಯೇ ಜೀವಾಳವಾಗಿತ್ತು. ಹಾಗಾಗಿ ಮಳೆಗಾಲದಲ್ಲಿ ಭತ್ತದ ಕೃಷಿ ಪ್ರಾರಂಭಿಸಿ ನೆಟ್ಟಿ ಮುಗಿದ ಸಂತೋಷದಲ್ಲಿ ಕೈಲ್ ಮೂಹೂತ‌‌‌‌‍ವನ್ನು ಆಚರಿದರೆ, ಬೆಳೆ ಬೆಳೆದು ತೆನೆಯೊಡೆಯುತ್ತಿದ್ದಂತೆಯೇ ತುಲಾ ಸಂಕ್ರಮಣ, ಸಂದಭದಲ್ಲಿ ಹುತ್ತುರಿ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ.