ವಿಷಯಕ್ಕೆ ಹೋಗು

ಸದಸ್ಯ:Nikithagowdakalmanja/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೈಠಣಿ ರೇಷ್ಮೆ

[ಬದಲಾಯಿಸಿ]

ಸುಮಾರು 2500 ವರ್ಷಗಳಷ್ಷು ಅಂದರೆ, ಶಾತವಾಹನ ಅರಸರ ಕಾಲದಷ್ಟು ಪುರಾತನ ಇತಿಹಾಸ ಹೊಂದಿರುವ ಪೈಠಣಿ ಸೀರೆಗಳನ್ನು ರೇಷ್ಮೆ ಮತ್ತು ಜರಿಯ ಕಾವ್ಯ ಎಂದು ಕರೆಯಲಾಗುತ್ತದೆ.ಈ ಅದ್ಭುತ ನೆಯ್ಗೆಯು ಅಲ್ಲಿನ ಮಹಿಳೆಯರ ಸ್ವತ್ತಾಗಿದ್ದು, ಅದನ್ನು ತಮ್ಮ ಹೆಣ್ಣುಮಕ್ಕಳಿಗೆ ಕಲಿಸಿ ಕೊಡುತ್ತಾ ಬರುವುದರಿಂದ ಪಾರಂಪರಿಕ ಆಸ್ತಿಯಾಗಿ ನೆಯ್ಗೆ ಕಲೆ ಬೆಳೆದು ಬಂದಿದೆ.ಇತೀಚಿಗೆ ಕೈ ಮಗ್ಗದ ಬದಲಿಗೆ ಪವರ್ ಲೂಮ್ ಬಳಕೆಯಾಗುತ್ತಿದೆ.

ಪೈಠಣಿ ಸೀರೆಗಳ ಮೂಲ ಲಕ್ಷಣ ಎಂದರೆ, ಓರೆ ಮತ್ತು ಚೌಕುಳಿ ವಿನ್ಯಾಸ ಹಾಗೂ 40 ಅಂಗುಲಗಳ ಸೆರಗಿನ ಮೇಲೆ ಬಿಡಿಸಿದ ನವಿಲಿನ ಚಿತ್ರ.ಅಡ್ಡ ನೆಯ್ಗೆಗೆ ಒಂದು ಬಣ್ಣದ ರೇಷ್ಮೆದಾರ ಬಳಸಲಾಗುತ್ತದೆ, ಉದ್ದ ನೆಯ್ಗೆಯಲ್ಲಿ ಇನ್ನೊಂದು ಬಣ್ಣದ ಮಿಳಿತವನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಸೀರೆ ಎರಡು ಬದಿಗಳಲ್ಲಿಯೂ ಒಂದೇ ರೀತಿ ಕಾಣುತ್ತದೆ. ಸೆರಗಿನ ಮೇಲೆ ಬಂಗಡಿ ಮೋರ್( ನವಿಲು ಮತ್ತು ಕಮಲ) ಅಸಾವಳಿ, ಶಿಖಾರ್, ಖಾನ, ಗಾಜ್ವೇಲ್, ಆಕ್ರೋಟ್, ತವಲಾ, ಸಂಬಲ್, ಅಜಂತಾ, ಕಮಲದ ಚಿತ್ರಗಳೊಂದಿಗೆ ಸೀರೆಯ ಅಂಚಿನಲ್ಲಿ ಅಪರೂಪದ ಒಂದು ಸೀರೆಯನ್ನು  ಸೃಷ್ಟಿಸಲು ಬಹಳ ಸಮಯ ಬೇಕಾಗುತ್ತದೆ. ಪೈಠಣಿ ಸೀರೆಗಳು ಗುಲಾಬಿ, ಕೆಂಪು, ನೇರಳೆ, ಕಾವಿ, ಆಕಾಶ ನೀಲಿ, ಕೆನ್ನೇರಳೆ, ರಾಯಲ್ ಬ್ಲೂ ಮುಂತಾದ ಬಣ್ಣಗಳಲ್ಲಿ ದೊರೆಯುತ್ತದೆ.ಪೈಠಣಿ ಸೀರೆಯನ್ನು ಸ್ವಚ್ಚಗೊಳಿಸುವಲ್ಲಿ ಎಚ್ಚರಿಕೆ ಅಗತ್ಯ.ಡ್ರೈಕ್ಲೀನ್ ಮಾಡಿ ನೆರಳಿನಲ್ಲಿ ಒಣಗಿಸಬೇಕು ಮತ್ತು ಜೋಪಾನವಾಗಿ ತೊಳೆಯಬೇಕು.

ಹಿಂದೆ ಈ ಸೀರೆಗಳನ್ನು ಅಪ್ಪಟ ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಬಳಸಲಾಗುತ್ತಿತ್ತು.1 ಕಿಲೋಗ್ರಾಮ್‍ ಚಿನ್ನಕ್ಕೆ 1 ತೊಲ ತಾಮ್ರವನ್ನು ಸೇರಿಸಿ ಸೀರೆಯನ್ನು ನೇಯಲಾಗುತ್ತಿತ್ತು.‘ನಾಲೀ’ ಮತ್ತು ‘ಪಾಂಖೀ’ ಸೆರಗುಗಳು ಆ ಕಾಲದಲ್ಲಿ ಹೆಚ್ಚು ಪ್ರಚಲಿತವಾಗಿದ್ದವು.ಅಂತಹ ಸೀರೆಗಳು ಸಾಕಷ್ಟು ತೂಕವಾಗಿರುತ್ತಿಲ್ಲದೇ ಬೆಲೆಯೂ ಹೆಚ್ಚಾಗಿರುತ್ತಿತ್ತು.ಅವುಗಳನ್ನು ನೇಯಲು 6 ತಿಂಗಳಿನಿಂದ 1 ವರ್ಷದ ಸಮಯ ಬೇಕಾಗುತ್ತಿತ್ತು.ಪೇಶ್ವೆಗಳು ಇಂತಹ ಸೇರೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.

ಕಾಲದೊಂದಿಗೆ ಮಹಿಳೆಯರ ಅಭಿರುಚಿ ಬದಲಾಗುತ್ತಿದೆ.ಇಂದು ಹತ್ತಿಯಿಂದ ಸಿಲ್ಕ್‍ನವರೆಗೆ ನೇಯ್ದಿರುವ ಈ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ.200-205 ಗ್ರಾಂಜರಿ ಮತ್ತು 700 ಗ್ರಾಂ ಸಿಲ್ಕ್ ನಿಂದ ತಯಾರಾಗುವ ಈ ಸೀರೆಗಳು 800-700 ಗ್ರಾಂ ತೂಕ ಹೊಂದಿದ್ದು, ಹೆಚ್ಚು ಭಾರ ಅನ್ನಿಸುವುದಿಲ್ಲ. ಸೀರೆಯ ಅಂಚು ಮತ್ತು ಸೆರಗಿನಲ್ಲಿರುವ ವಿನ್ಯಾಸಗಳು ಚೆನ್ನಾಗಿ ಗೋಚರಿಸುವಂತೆ ಸೀರೆಯನ್ನು ನೇಯಲಾಗುತ್ತದೆ.ಇವು ಇತರೆ ಸೀರೆಗಳಿಗಿಂತ ಪ್ರತ್ಯೇಕವಾಗಿ ಗುರುತಿಸಲ್ವಡುತ್ತವೆ.ಇಂದಿನ ದಿನಗಳಲ್ಲಿ ಜರಿಯ ಬದಲು ಟೆಸ್ಟಡ್‍ಗೋಲ್ಡ್ ಬಳಸಿ ಪೈಠಣಿ ಡಿಸೈನ್‍ ತಯಾರು ಮಾಡುತ್ತಾರೆ.ಇಂತಹ ಸೀರೆಗಳು ಅಗ್ಗವಾಗಿರುವುದಲ್ಲದೆ ಗ್ಲಾಮರಸ್ ಮತ್ತು ಎಲಿಗೆಂಟ್ ಸಹ ಆಗಿರುತ್ತದೆ.ಇಂತಹ ಡಿಸೈನ್‍ನ ಸೇರೆಗಳಿಗೆ ಇಂದು ಹೆಚ್ಚಿನ ಬೇಡಿಕೆಇದೆ.

ಹತ್ತಿ ಮತ್ತು ಸಿಲ್ಕ್ ಎರಡುರೀತಿಯ ಸೀರೆಗಳನ್ನು ಒಂದೇ ರೀತಿಯ ಡಿಸೈನ್‍ನಲ್ಲಿ ತಯಾರಿಸಲಾಗುತ್ತದೆ. ಜೊತೆಗೆ ಹಿಂದೆ 6-7 ಅಂಗುಲವಿರುತ್ತಿದ್ದ ಬಾರ್ಡರ್‍ನ್ನು ಈಗ 3 ಅಂಗಲದಷ್ಟು ತಯಾರಿಸಲಾಗುತ್ತದೆ. ಸೀರೆಗಳು ಹಗುರವಾಗಲೆಂದು ನವಿರಾದ ‘ಕಾಂಪೆಂಟರರಿ ಮೋಟಿಫ್ಸ್’ ಬಳಸಲಾಗುತ್ತದೆ. ಹೀಗಾಗಿ ಈ ಸೇರೆಯನ್ನು ಒಮ್ಮೆಕೂಡ ನಂತರ ಎಲ್ಲ ರೀತಿಯ ಸಮಾರಂಭಗಳಿಗೂ ಬೇರೆ ಬೇರೆರೀತಿಯಾಗಿ ಮಿಕ್ಸ್‍ ಅಂಡ್ ಮ್ಯಾಚ್’ ಮಾಡಿ ಉಡಬಹುದಾಗಿದೆ.ಮ್ಯಾಚಿಂಗ್ ಬ್ಲೌಸ್‍ ಅಥವಾ. ಕಾಂಟ್ರಾಸ್ಟ್ ಬ್ಲೌಸ್ ನಳಸಬಹುದಲ್ಲದೆ, ಸೀರೆಯನ್ನು ಬೇರೆ ಬೇರೆ ಸ್ಟೈಲ್‍ನಲ್ಲೂ ಉಟ್ಟುಕೊಳ್ಳಬಹುದು.ಈ ಸೀರೆಗಳು ಹೆಚ್ಚಾಗಿ ಡಾರ್ಕ್‍ ಕಲರ್‍ನಲ್ಲಿ ಬರುತ್ತದೆ.ಅದರಲ್ಲಿ ಕೆಲವು ನೀಲಿ, ಕೇಸರಿ, ಗುಲಾಬಿ, ಹಳದಿ, ನವಿಲು ಬಣ್ಣಗಳು ಹೆಚ್ಚು ಪ್ಯಾಪುಲರ್ ಆಗಿವೆ.

ಸೀರೆಯಲ್ಲಿ ಅಂದವಾಗಿ ಕಾಣಲು ಡಿಸೈನರ್‍ನಲ್ಲಿ ನವೀನತೆಯನ್ನು ತರಲು ಟೆಕ್ಸ್‍ಚರ್, ಕಲರ್ ಮತ್ತುಕ್ರಾಸ್ ಬಾರ್ಡರ್‍ನ ಪ್ರಭಾವ ಮಹತ್ವಪೂರ್ಣವಾಗಿರುತ್ತದೆ.ಡಿಸೈನ್ ಹೊಸತಾಗಿದ್ದರೆ, ಪೈಠಣಿಯಲ್ಲಿ ಬಂಗಾಳದ ಜಾಮ್‍ದಾನ್ ವಿನ್ಯಾಸವನ್ನು ಸೇರಿಸಿ ಈ ಹೊಸ ಟೆಕ್ಸ್‍ಟೈಲ್‍ನ್ನು ಪರಿಚಯಿಸುತ್ತದೆ. ಪೈಠಣಿ ಸೀರೆಗಳು ಮತ್ತಷ್ಟು ಜನಪ್ರಿಯವಾಗಲೆಂದು , ಆಗಾಗ ಫ್ಯಾಷನ್ ಶೋ ಮತ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ.

ಗಮನದಲ್ಲಿಇಡಬೇಕಾದ ಅಂಶಗಳು:

  1. ಯಾವುದೇರೇಷ್ಮೆ ಸೀರೆ ಇರಲಿ, ಹೊರಗಿನಕಾರ್ಯಕ್ರಮ ಮುಗಿಸಿ ಮನೆಗೆ ಬಂದತಕ್ಷಣಅದನ್ನು 1-2 ತಾಸು ಗಾಳಿಗೊಡ್ಡಿ ನಂತರ ಬೀರುವಿಲ್ಲದಬೇಕು.
  1. ಸೀರೆ ಏನಾದರೂ ಬಿದ್ದು ಕಲೆ ಆಗಿದ್ದರೆ, ತಕ್ಷಣ ಶುಚಿಗೊಳಿಸಿ ಒಣಗಿಸಲು ಮರೆಯದಿರಿ.
  1. ಇವನ್ನು ತೇವಾಂಶವಿರುವ ವುಡನ್‍ರ್ಯಾಕ್‍ನಲ್ಲಿರಿಸಬೇಡಿ
  1. ಮಖಮಲ್‍ ವಸ್ತ್ರವಾಗಿದ್ದರೆ, ನೀಟಾಗಿ ಪೇಪರ್‍ನಲ್ಲಿ ಪ್ಯಾಕ್ ಮಾಡಿಡಿ.
  1. ಜರಿಯನ್ನು ಹಸಿರು ಮಖಮಲ್ ವಸ್ತ್ರದಲ್ಲಿ ಸುತ್ತಿಡಿ ಆಗ ಜರಿ ಹೊಳಪು ಕಳೆದುಕೊಳ್ಳುವುದಿಲ್ಲ.

ಆಧಾರ

ಜಿ.ಸುನಂದಾ, ಗೃಹಶೋಭಾ ಮ್ಯಾಗಜೀನ್ ತರಂಗ 15 ಮಾರ್ಚ್ 2018

ಉಲ್ಲೇಖಗಳು

[ಬದಲಾಯಿಸಿ]

<refference/>[]

  1. https://www.craftsvilla.com/blog/paithani-saree-the-story-of-the-queen-of-heirlooms/