ಸದಸ್ಯ:Nikitha madhappa/sandbox
ನನ್ನ ಹೆಸರು ನಿಖಿತ ಮಾದಪ್ಪ. ನನ್ನ ತಂದೆಯ ಹೆಸರು ಮಾದಪ್ಪ ತಾಯಿಯ ಹೆಸರು ರಾನಿ ಮಾದಪ್ಪ. ಜನ್ಮ ದಿನಾಂಕವು ೦೯.೧೦.೧೯೯೬. ನನ್ನ ರಾಶಿ ಧನಸ್ಸು. ನನ್ನ ಹುಟ್ಟೂರು ದಕ್ಷಿಣ ಕಾಶಮೀರ ಎಂದೇ ಪ್ರಸಿದ್ಧವಾಗಿರುವ ಕೊಡಗು ಅಲ್ಲಿ ಕುಶಾಲನಗರ ಮೂಲತ. ಕೃಷಿ ಕುಟುಂಬದವರಾಗಿದ್ದು ನಾವು ಕಾಫಿ ಮತ್ತು ಕಾಳುಮೆಣಸು ಮತ್ತು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತೇವೆ. ನಾನು ನನ್ನ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಕುಶಾಲನಗರದಲ್ಲಿಯೇ ಮುಗಿಸಿದ್ದೇನೆ. ನನ್ನ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ. ನಾನು ನನ್ನ ಬಿಕಾಂ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡುತ್ತಿದ್ದೇನೆ. ನನಗೆ ಪ್ಯಾಷನ್ ಡಿಸೈನಿಂಗ್ ಎಂದರೆ ತುಂಬಾ ಇಷ್ಟ. ನನ್ನ ಇತರ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು ಮತ್ತು ಗೆಳೆಯರೊಂದಿಗೆ ಮಸ್ತಿ ಮತ್ತು ಹಾಸ್ಯ ಮಾಡುವುದು.
ನಾನು ಅಚ್ಚ ಕೊಡಗಿನ ಹುಡುಗಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ. ನಾನು ಮುಂದೆ ಒಂದು ಒಳ್ಳೆಯ ಶಿಕ್ಷಕಿಯಾಗಬೇಕು ಎನ್ನುವ ಆಸೆ ನನಗಿದೆ. ಶಿಕ್ಷಕಿಯಾಗಲು ಬೇಕಾದದ್ದು ಸಹನೆ, ಸಂಯಮ ಇದು ನನ್ನಲ್ಲಿ ಕಡಿಮೆ ಆದರೂ ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ಅದನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ. ನಾನು ಯಾವುದೇ ಸಮಯಕ್ಕೆ ಯಾವ ಸಂದರ್ಭಕ್ಕೂ ಹೊಂದಿಕೊಳ್ಳುವ ಸ್ವಭಾವದವಳು.