ಸದಸ್ಯ:Nikhil kalose/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಬ್ ಮಾರ್ಲೆ - ಜೀವನಚರಿತ್ರೆ ಜನ್ಮದಿನ: ೦೬-೦೨-೧೯೪೫ ಮರಣ:೧೧-೦೫-೧೯೮೧ ಜನ್ಮಸ್ಥಳ: ನೈನ್ ಮೈಲ್ಸ್, ಜಮೈಕಾ

ಒಬ್ಬ ಕವಿ, ಪ್ರವಾದಿ ಮತ್ತು ಜಮೈಕನ್ ಸಂಸ್ಕೃತಿಯ ಪ್ರತೀಕವಾಗಿದ್ದ ಮಾರ್ಲೆ ಪ್ರಪಂಚದಾದ್ಯಂತ ಸಂಗೀತದ ಎಲ್ಲೆಗಳನ್ನು ಧ್ವಂಸ ಮಾಡಿದನು.

ಬಾಬ್ ಮಾರ್ಲೆ ಜಮೈಕಾ ದೇಶದ ನೈನ್ ಮೈಲ್ಸ್ ಎಂಬ ಪುಟ್ಟ ಗ್ರಾಮದಲ್ಲಿ ಜನ್ಮ ತಾಳಿದನು. ಬ್ರಿಟಿಷ್ ನೌಕಾಧಿಕಾರಿ ಮತ್ತು ಜಮೈಕಾ ಮಹಿಳೆ ಸೆಡೆಲ್ಲಾರವರ ಪುತ್ರನಾಗಿದ್ದ ಮಾರ್ಲೆ, ತಾಯಿಯ ಕುಟುಂಬದವರು ಮತ್ತು ಅವರ ಪೋಷಕರ ಸಂಬಂಧವನ್ನು ನಿರಾಕರಿಸಿದ್ದರಿಂದ ಆತ ತನ್ನ ತಂದೆಯನ್ನು ನೋಡಿಯೇ ಇರಲಿಲ್ಲ. ೧೬ನೇ ವಯಸ್ಸಿನಲ್ಲಿಯೇ ಆತ 'ಜಡ್ಜ್ ನಾಟ್' ಎಂಬ ಚೊಚ್ಚಲ ಹಾಡನ್ನು ಧ್ವನಿಮುದ್ರಣ ಮಾಡಿದ್ದ. ೧೯೬೩ರಲ್ಲಿ ಆತ ಪೀಟರ್ ಟಾಷ್, ಬನ್ನಿ ಲಿವಿಂಗ್ ಸ್ಟೋನ್, ಜೂನಿಯರ್ ಬ್ರೈತ್ ವೇಟ್ ಮತ್ತು ಬೆವೆರ್ಲಿ ಕೆಲ್ಸೋ ರವರೊಡಗೂಡಿ ವೇಲರ್ಸ್ ರಚಿಸಿದ. ಇವರ ಈ ಬ್ಯಾಂಡ್ ತಮ್ಮ ಮೊದಲ ಕಾರ್ಯಕ್ರಮವನ್ನು ಕಾಕ್ಸ್ ಒನ್ ಲೇಬಲ್ ನೊಂದಿಗೆ 'ಸಿಮ್ಮರ್ ಡೌನ್'ನೊಂದಿಗೆ ಜಮೈಕಾದಲ್ಲಿ ಪ್ರದರ್ಶಿಸಿತು. ೧೯೬೫ರಲ್ಲಿ ಬ್ರೈತ್ ವೇಟ್ ಮತ್ತು ಕೆಲ್ಸೋ ಗುಂಪಿನಿಂದ ಹೊರಬಿದ್ದಾಗ ಮಾರ್ಲೆ, ಟಾಷ್ ಮತ್ತು ಲಿವಿಂಗ್ ಸ್ಟೋನ್ ಈ ಮೂವರೇ ವೇಲರ್ಸ್ ಅನ್ನು ಮುನ್ನಡೆಸಿದರು. 'ರೂಡ್ ಬಾಯ್'ನಂತಹ ಏಕವ್ಯಕ್ತಿ ಪ್ರದರ್ಶನದ ನಡುವೆಯೂ, ಉಳಿದ ಕಲಾವಿದರಿಗೆ ಕಡಿಮೆ ಸಂಭಾವನೆ,ಹಾಗೂ ಕೆಲವೊಮ್ಮೆ ಸಂಭಾವನೆಯೇ ಇಲ್ಲದ್ದರಿಂದ ೧೯೬೬ರಲ್ಲಿ ಅವರೂ ಸಹ ಬ್ಯಾಂಡನ್ನು ತೊರೆದರು. ತನ್ನ ಗೆಳತಿ ರೀಟಾ ಆಂಡರ್ಸನ್ ಳನ್ನು ಮದುವೆಯಾದ ನಣತರ, ೧೯೬೩ರಲ್ಲಿ ತನ್ನ ತಾಯಿ ನೆಲೆಸಿದ್ದ ಅಮೆರಿಕಾದ ನೆವಾರ್ಕಿನ ಕಾರ್ಖಾನೆಯೊಂದರಲ್ಲಿದುಡಿದ. ಮತ್ತೆ ಜಮೈಕಾಗೆ ಮರಳಿದ ಮಾರ್ಲೆ, ತನ್ನ ಸಂಗಡಿಗರೊಡಗೂಡಿ ಕಾಕ್ಸ್ ಒನ್ ಗಾಗಿ ಧ್ವನಿಮುದ್ರಿಸಿದ ಪ್ರತಿಗಳು ಅಲ್ಪಯಶಸ್ಸು ಕಂಡಿತು. ಈ ಅವಧಿಯಲ್ಲಿ ವೇಲರ್ಸ್ ಗಳು ರಸ್ತಫಾರಿ ಎಂಬ ಧಾರ್ಮಿಕ ವಿಭಾಗದಲ್ಲಿ ತೊಡಗಿಕೊಂಡರು. ೧೯೬೯ರಲ್ಲಿ ಇವರು ಲೀ'ಸ್ಕ್ರ್ಯಾಚ್' ಪೆರ್ರಿಯೊಂದಿಗೆ ಮೂರು ವರ್ಷಗಳ ಕೂಡಿಕೆ ಮಾಡಿಕೊಂಡು, ಆತನ ನಿರ್ದೇಶನದಂತೆ ಅವರವರ ಗಾನಸಾಮಗ್ರಿಗಳನ್ನು ಅವರೇ ನುಡಿಸುವಂತೆ ಹಾಗೂ ಆಸ್ಟನ್, ಪೆರ್ರಿ ಸ್ಟುಡಿಯೋ ಬ್ಯಾಂಡಿನ ಈ ಹಿಂದಿನ ರಿದಂ ವಿಭಾಗದ ಮುಖ್ಯಸ್ಥ ಕಾರ್ಲ್ ಟನ್ ಬಾರೆಟ್ ರನ್ನು ಬ್ಯಾಂಡ್ ನ ಲೈನ್ ನಲ್ಲಿ ಸೇರಿಸಿದ. ಪೆರ್ರಿಯೊಡನೆ ಸೇರಿ ಮಾಡಿದ ರೆಕಾರ್ಡ್ 'ಫ್ರೆಂಚ್ ಟೌನ್ ರಾಕ್' ಸ್ಥಳೀಯವಾಗಿ ಜನಪ್ರಿಯಾಗಿತ್ತು. ಆದರೆ ಜಮೈಕಾದ ರೆಕಾರ್ಡ್ ಉದ್ಯಮದಲ್ಲಿ ಅದು ಎಷ್ಟರಮಟ್ಟಿಗೆ ಧೂಳೆಬ್ಬಿಸಿತೆಂದರೆ, ಆ ಗುಂಪು ಅಲ್ಲಿಂದಾಚೆಗೆ ನಿರಂತರ ಗೆಲುವಿನ ಹಾದಿ ಹಿಡಿದಿತ್ತು. ಅವರು ೧೯೭೧ರಲ್ಲಿ ತಮ್ಮದೇ ಸ್ವತಂತ್ರವಾದ ಟಫ್ ಗಾಂಗ್ ಎಂಬ ರೆಕಾರ್ಡಿಂಗ್ ಸಂಸ್ಥೆ ಸ್ಥಾಪಿಸಿದರು. ಆದರೆ ಈ ಉದ್ಯಮ ಅಲ್ಪದವರಲ್ಲಿಯೇ ಸ್ಥಗಿತಗೊಂಡಿತು. ಲಿವಿಂಗ್ ಸ್ಟೋನ್ ಜೈಲುಪಾಲಾದ. ಜಾನಿ ನ್ಯಾಶ್ ಎಂಬ ಪಾಪ್ ಸಂಗೀತಗಾರನೊಂದಿಗೆ ಸಿನಿಮಾವೊಂದಕ್ಕೆ ವಾದ್ಯ ನುಡಿಸಲು ಮಾರ್ಲೆ ಒಪ್ಪಂದ ಮಾಡಿಕೊಂಡ. ೧೯೬೩ರಲ್ಲಿ 'ಜಡ್ಜ್ ನಾಟ‍್'ಅನ್ನು ಬಿಡುಗಡೆಗೊಳಿಸಿದ್ದ ಕ್ರಿಸ್ ಬ್ಲಾಕ್ ವೆಲ್ ೧೯೭೨ರಲ್ಲಿ ಐಲ್ಯಾಂಡ್ ರೆಕಾರ್ಡ್ಸ್ ರವರೊಂದಿಗೆ ವೇಲರ್ಸ್ ಗೆ ಸಹಿ ಹಾಕಿ, ಜಮೈಕಾದಲ್ಲಿಯೇ ರೆಕಾರ್ಡ್ ಮಾಡಲು ಮುಂಗಡ ಹಣ ನೀಡಿದಾಗ ಅವರಿಗೆ ದೊಡ್ಡದೊಂದು ಬ್ರೇಕ್ ಸಿಕ್ಕಿತ್ತು. ಇದರ ಫಲವೇ ೧೯೭೩ರಲ್ಲಿ 'ಕ್ಯಾಚ್ ಎ ಫೈರ್' ಆಲ್ಬಂ. ಈ ಮೂಲಕ ಇವರ ಬ್ಯಾಂಡ್ ಅಂತಾರಾಷ್ಟ್ರೀಯ ಶ್ರೋತೃಗಳಿಗೆ ತಲಫಿತು. ಮನರುವರ್ಷವೇ 'ಗೆಟಪ್, ಸ್ಟ್ಯಾಂಡಪ್', ಮತ್ತು 'ಐ ಷಾಟ್ ದ ಷರೀಫ್' ಎಂಬ ಹಾಡುಗಳನ್ನೊಳಗೊಂಡ 'ಬನಿ‍ಂಗ್' ಹೊರಬಂದಿತು. ಈ ಅವಧಿಯಲ್ಲಿ ಬ್ಯಾಂಡ್ ಹೆಚ್ಚಿನ ಪ್ರವಾಸಮಾಡಿತು. ಸಂಗೀತಸಾಮಗ್ರಿಗಳ ವಿಸ್ತರಣೆಹಾಗೂ ಐ-ತ್ರೀ ಎಂದು ಖ್ಯಾತರಾಗಿದ್ದ ಮೂರು ಮಹಿಳಾ ಹಾಡುಗಾರ್ತಿಯವರನ್ನು ಬ್ಯಾಂಡ್ ನಲ್ಲಿ ಸೇರಿಸಿಕೊಳ್ಳಲಾಯಿತು. ಈ ಪೈಕಿ ಈತನ ಪತ್ನಿ ರೀಟಾ ಸಹ ಇದ್ದಳು. ಬಾಬ್ ಮಾರ್ಲೆ ಅಂಡ್ ವೇಲರ್ಸ್ ಹೆಸರಿನ ಬ್ಯಾಂಡ್ ಯೂರೋಪ್, ಆಫ್ರಿಕಾ, ಅಮೆರಿಕಾ, ಹೆಚ್ಚಿನ ಅನುಯಾಯಿಗಳನ್ನು ಯುನೈಟೆಡ್ ಕಿಂಗ್ ಡಂನಲ್ಲಿ ಸೃಷ್ಟಿಸಿ, ಸ್ಕಾಂಡಿನೇವಿಯಾ ಮತ್ತು ಆಫ್ರಿಕಾಗಳಲ್ಲಿ ಪ್ರವಾಸ ಕೈಗೊಂಡಿತು. ಅವರಲ್ಲಿ ಯುನೈಟೆಡ್ ಕಿಂಗ್ ಡಂನ ಟಾಫ-೪೦ ಹಿಟ್ ಹಾಡುಗಳಾದ 'ನೋ ವುಮನ್ ನೋ ಕ್ರೈ'(೧೯೭೫), 'ಎಕ್ಸೋಡಸ್'(೧೯೭೭), 'ವೇಟಿಂಗ್ ಇನ್ ವೇನ್'(೧೯೭೭) ಅನದ 'ಸ್ಯಾಟಿಸ್ಫೈ ಮೈ ಸೋಲ'(೧೯೭೮) ಇದ್ದವು. ೧೯೭೬ರಲ್ಲಿ ಜಮೈಕಾದ ಚುನಾವಣಾ ಪ್ರಚಾರವೊಂದರಲ್ಲಿ ಗನ್ ಮ್ಯಾನ್ ಒಬ್ಬನಿಂದ ಗುಂಡೇಟಿಗೆ ತುತ್ತಾದ ಮಾರ್ಲೆ ಬದುಕುಳಿದು, ಮಿದುಳು, ಶ್ವಾಸಕೋಶ ಹಾಗೂ ಉದರ ಕ್ಯಾನ್ಸರ್ ಗಳಿಂದಾಗಿ ೧೯೮೧ರಲ್ಲಿ ಮರಣ ಹೊಂದುವವರೆಗೂ ಸಹ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದ. ಪೀಟರ್ ಪಾಷ್ ಮತ್ತು ಡ್ರಮ್ ವಾದಕ ಕಾರ್ಲಟನ್ ಬಾರೆಟ್ ಪ್ರತ್ಯೇಕ ಘಟನೆಗಳಲ್ಲಿ ಕೊಲೆಗೀಡಾದರು. ರೀಟಾ ಮಾರ್ಲೆ ತನ್ನ ಗಂಡನ ಹಾದಿಯಲ್ಲಿ ಸಾಗಿ, ಪ್ರವಾಸ ಕೈಗೊಂಡು, ರೆಕಾರ್ಡ್ ಮಾಡುತ್ತಾ, ಟಫ್ ಸಾಂಗ್ ಸ್ಟುಡಿಯೋ ಮತ್ತು ರೆಕಾರ್ಡ್ ಕಂಪನಿಯನ್ನು ಮುನ್ನಡೆಸಿಕೊಂಡು ಬಂದಳು.