ವಿಷಯಕ್ಕೆ ಹೋಗು

ಸದಸ್ಯ:Neelrakesh/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೂರವಾಣಿ ಯಾವುದೇ ಶಬ್ದವನ್ನು (ಸಾಮಾನ್ಯವಾಗಿ ಮಾತು) ಕಳಿಸುವ ಮತ್ತು ಸ್ವೀಕರಿಸುವ ಸಂಪರ್ಕ ಸಾಧನ. ಗೃಹಬಳಕೆಯಲ್ಲಿರುವ ಸಾಮಾನ್ಯ ಯಂತ್ರಗಳಲ್ಲಿ ದೂರವಾಣಿಯೂ ಒಂದು. ೨೦೦೬ ರ ಅಂತ್ಯದ ಹೊತ್ತಿಗೆ ಪ್ರಪಂಚದಲ್ಲಿ ಒಟ್ಟು ೪೦೦ ಕೋಟಿ ಜನರು ದೂರವಾಣಿಯನ್ನು ಉಪಯೋಗಿಸುತ್ತಿದ್ದರು. ಬಹುಪಾಲು ದೂರವಾಣಿ ಯಂತ್ರಗಳು ಧ್ವನಿಯನ್ನು ವಿದ್ಯುತ್ ಸಂಕೇತಗಳಾಗಿ ಮಾರ್ಪಡಿಸಿ ಇವುಗಳನ್ನು ದೂರವಾಣಿ ಜಾಲದ ಮೂಲಕ ಕಳಿಸುತ್ತವೆ.

ದೂರವಾಣಿಯ ಆವಿಷ್ಕರ್ತರು ಯಾರು ಎಂಬುದರ ಬಗ್ಗೆ ಅನೇಕ ವಿವಾದಗಳಿವೆ. ೧೯ ನೆ ಯ ಶತಮಾನದಲ್ಲಿ ಈ ಯಂತ್ರದ ಬಗ್ಗೆ ಯೋಚಿಸಿ, ಅದನ್ನು ತಯಾರಿಸುವ ನಿಟ್ಟಿನಲ್ಲಿ ಅನೇಕರು ಸ್ವತಂತ್ರವಾಗಿ ಕೆಲಸ ಮಾಡಿದ್ದಾರೆ. ಇವರಲ್ಲಿ ಪ್ರಮುಖರಾದವರು ಅಲೆಕ್ಸಾಂಡರ್ ಗ್ರಹಾಮ್ ಬೆಲ್, ಥಾಮಸ್ ಎಡಿಸನ್, ಎಲಿಷಾ ಗ್ರೇ ಮೊದಲಾದವರು.

ತಾಂತ್ರಿಕ ಸುಧಾರಣೆಗಳು

೧೮೭೭ ರಲ್ಲಿ ಮೊದಲ ದೂರವಾಣಿ ಎಕ್ಸ್ ಚೇಂಜ್ ಸ್ಥಾಪನೆಯಾಯಿತು. ಮೊದಲಿನ ಎಕ್ಸ್ ಚೇಂಜ್ ಗಳಲ್ಲಿ ಪ್ರತಿ ಕರೆಯನ್ನು ಒಬ್ಬರು ಆಪರೇಟರ್ ಸರಿಯಾದ ಸಂಪರ್ಕ ತಂತುವಿಗೆ ಜೋಡಿಸುವ ಮೂಲಕ ಸಂಪರ್ಕವನ್ನು ಸಾಧಿಸಬೇಕಾಗುತ್ತಿತ್ತು. ಸ್ವಯಂಚಾಲಿತ ಎಕ್ಸ್ ಚೇಂಜ್ ಗಳು ೧೮೯೨ ರಿಂದ ಮುಂದಕ್ಕೆ ಬಳಕೆಗೆ ಬಂದವು. ಆದರೂ ಮಾನವಚಾಲಿತ ಎಕ್ಸ್ ಚೇಂಜ್ ಗಳ ಉಪಯೋಗ ಇಪ್ಪತ್ತನೆಯ ಶತಮಾನದ ಮಧ್ಯದ ವರೆಗೆ ಮುಂದುವರಿದಿತು. ನಾಣ್ಯವನ್ನು ಹಾಕಿ ಉಪಯೋಗಿಸಬಹುದಾದಂಥ ಪೇ ಫೋನ್ ಗಳು ೧೮೮೯ ರಿಂದ ಬಳಕೆಗೆ ಬಂದವು. ಡಯಲ್ ಮಾಡಬೇಕಾದ ಸಂಖ್ಯೆಯನ್ನು ತಿಳಿಸಲು ತಿರುಗಿಸುವ "ರೋಟರಿ ಡಯಲ್" ೧೯೨೩ ರಿಂದ ಬಳಕೆಗೆ ಬಂದಿತು. ಈಗಿನ ಲಕಾಲದ ಯಂತ್ರಗಳಲ್ಲಿ ಸಾಮಾನ್ಯವಾಗಿ ಈ ಡಯಲ್ ಮಾಯವಾಗಿ ಗುಂಡಿಗಳನ್ನು ಒತ್ತುವ ಮೂಲಕ ಕರೆ ಮಾಡಲಾಗುತ್ತದೆ - ಈ ರೀತಿಯ ಯಂತ್ರಗಳು ೧೯೪೧ ರಲ್ಲಿ ಕೆಲವೆಡೆ ಚಾಲನೆಗೆ ಬಂದಿದ್ದವು.