ವಿಷಯಕ್ಕೆ ಹೋಗು

ಸದಸ್ಯ:Nayana75/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

ಎತ್ತ್ತ್ತನೋಡಿದರತ್ತ್ತ ಮರಳರಾಶಿ, ಗಗನಚುಂಬಿಸುವ೦ಥ ಮರಳಗುದಡ್ಡೆಗಳು, ಊರುತುಂಬ ಮರಳಿನದೇ ರಂಗವಲ್ಲಿ. ಗುಡಿ-ಗೋಪುರಗಳು, ಮನೆಮಠಗಳು, ಕಾಡು-ಮೇಡುಗಳು,ನಡೆವ ರಸ್ತೆ ಎಲ್ಲಕ್ಕೂ ಮರಳಿನದೇ ನಂಟು. ಇದು ತಲಕಾಡಿನ ಪರಿ. ಕಾಲಿಟ್ಟಲ್ಲಿ ಮರಳು ಕೈಚಾಚಿದಲ್ಲಿ ಮರಳು! ಇದು ತಲಕಾಡು ಇರುವ ರೀತಿ. ಇದರ ಹಿಂದೊಂದು ಶಾಪದ ಕಥೆ ಹೀಗಿದೆ. ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪತಟ್ಟಣದಲ್ಲಿ ಆಳುತ್ತಿದ್ದ ಕಾಲದಲ್ಲಿ ಆತನಿಗೆ ಬೆನ್ನುಫಣಿ ರೋಗಬರುತ್ತದೆ.ಅದರ ನಿವಾರಣೆಗಾಗಿ ಆತ ತನ್ನ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಗಿ ಬರುತ್ತಾನೆ. ಆ ಸಂದರ್ಭದಲ್ಲಿ ರೋಗ ಉಲ್ಬಣಗೊಂಡು ಶ್ರೀರಂಗರಾಯ ತಲಕಾಡಿನಲ್ಲೇ ಸಾವಿಗೀಡಾಗುತ್ತಾನೆ. ಈ ಸಂದ`ರ್ಭ ಉಪಯೋಗಿಸಿಕೊಂಡು ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ಮುತ್ತಿನ ಮೂಗುತಿಯೊಂದು ಸೇರಿದಂತೆ ಎಲ್ಲಾ ಒಡವೆಗಳನ್ನು ಕಿತ್ತುಕೊಳ್ಳಲು ರಾಜಒಡೆಯರು ಪ್ರಯತ್ನಿಸಿದಾಗ ಕೋಪಗೊಂಡ ಅಲಮೇಲಮ್ಮ"ತಲಕಾಡು ಮರಳಾಗಿ ಮಾಲಂಗಿ ಮಡುವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ" ಎಂದು ಶಾಪಹಾಕಿ ಒಡೆವೆಗಳೊಡನೆ ಕಾವೇರಿನದಿಗೆ ಹಾರಿ ಪ್ರಾಣಬಿಡುತ್ತಾಳೆ. ಇಂಥ ಅದೆಷ್ಟೋ ಕಥೆಗಳ ಸಹಿತ ತನ್ನ ಗ``ರ್ಭದಲ್ಲಿ ಹಲವು ಅದ್ಬುತಗಳನ್ನು ತುಂಬಿಕೊಂಡು ಮೈತುಂಬ ಮರಳ ರಶಿಯನ್ನು ಹೊದ್ದು ಮಲಗಿರುವ ತಲಕಾಡು ಪೌರಾಣಿಕವಾಗಿ, ಚಾರಿತ್ರಿಕವಾಗಿ,ಜಾನಪದವಾಗಿ,ಸಾಂಸ್ಕ್ರತಿಕವಾಗಿ,ಧಾ``ರ್ಮಿಕವಾಗಿ ಬಹು ಮಹತ್ವದ ಸ್ಥಳ. ಸಿದ್ದಾರಣ್ಯಕ್ಷೇತ್ರ,ಗಜಾರಣಕ್ಷೇತ್ರ,ತಲವನಪುರ,ರಾಜಪುರ ಮುಂತಾದ ಹೆಸರುಗಳಿಂದಲೂ ಪುರಾದಲ್ಲಿ,ಇತಿಹಾಸದಲ್ಲಿ ಕರೆಸಿಕೊಂಡಿರುವ ತಲಕಾಡು ಕ್ರಿ.ಶ.೨೪೭ರ ಕಾಲದಲ್ಲೇ ಗಂಗರಸರ ಸಾಮ್ರಾಜ್ಯದ ರಾಜಧಾನಿಯಾಗಿ ಅಪಾರ ಕೀ`ರ್ತಿಗಳಿಸಿ ಮೆರೆದ ಭವ್ಯನಾಡಾಗಿತ್ತು. ಗಂಗರಲ್ಲದೆ ಹೊಯ್ಸಳರು,ಚೋಳರು,ರಾಷ್ಟ್ರಕೂಟರು,ವಿಜಯನಗರದರಸರು,ಮೈಸೂರಿನ ಒಡೆಯರು ಮುಂತಾದ ರಾಜ ವಂಶಸ್ಥರ ನಾಡಗಿತ್ತು.

ಪಂಚಲಿಂಗಗಳ ಪುಣ್ಯಧಾಮ

[ಬದಲಾಯಿಸಿ]
ದಕ್ಷಿಣ ಕಾಶಿ ಎಂದೂ ಹೆಸರಾಗಿರುವ ತಲಕಾಡಿನಲ್ಲಿ ಜರುಗುವ ಪಂಚಲಿಂಗದ``ರ್ಶನವು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಷ್ಟೇ ಪ್ರಸಿದ್ದಿ ಪಡೆದಿದೆ. ಈ ಧಾ``ರ್ಮಿಕ ಸಂಭ್ರಮದಲ್ಲಿ ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿ ಪರಶಿವನ ಐದು ಮುಖಗಳು ಸ್ವತಃ ಉದ್ಭವವಾಗಿರುವುದನ್ನು ನೋಡಬಹುದು.ಈ ಐದು ಶಿವಲಿಂಗಳಿಗೆ ಪಂಚಲಿಂಗದ`ರ್ಶನ ಮಹೋತ್ಸವದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ.ತತ್ಪುರುಷ ಮುಖಂದ ಕಾವೇರಿಯ ಉತ್ತರವಾಹಿನಿಯ ಬಳಿ ಅ``ರ್ಕೇಶ್ವರನಾಗಿ, ಪೂ`ರ್ವ ವಾಹಿನಿಯ ಬಳಿ ಅಘೋರ ಮುಖದಿಂದ ಪಾತಾಳೇಶ್ವರನಾಗಿ, ದಕ್ಷಿಣವಾಹಿನಿಯ ಬಳಿ ಸದ್ಯೋಜಾತ ಮುಖದಿಂದ ಮರಳೇಶ್ವರನಾಗಿ, ಪಶ್ಚಿಮವಾಹಿನಿಯ ಬಳಿ ವಾಮದೇವ ಮುಖದಿಂದ ಮಲ್ಲಿಕಾ`ರ್ಜುನೇಶ್ವರನಾಗಿ ಮತ್ತು ಮಧ್ಯದಲ್ಲಿ ಈಶಾನ್ಯ ಮುಖದಿಂದ ವೈದ್ಯನಾಥೇಶ್ವರನಾಗಿ ಪಂಚಬ್ರಹ್ಮಮಯನಾದ ಪರಶಿವನು ತಲಕಾಡಿನಲ್ಲಿ ನೆಲೆಸಿದ್ದಾನೆ ಎಂಬ ವಿಚಾರವನ್ನು ಪುರಾಣದಿಂದ ತಿಳಿಯಬಹುದು.

ವೈದ್ಯನಾಥೇಶ್ವರ

[ಬದಲಾಯಿಸಿ]

ಸೋಮದತ್ತ ಮಹ`ರ್ಷಿ ಮತ್ತು ಅವರ ಶಿಷ್ಯರಿಗೆ ಹಾಗೂ ತಲ ಮತ್ತು ಕಾಡ ಎಂಬ ಬೇಡರಿಗೆ ಮೋಕ್ಷಪ್ರದಾನಿಸಿದ ಪರಮೇಶ್ವರ ತಾನೇ ಸ್ವಯಂ ವೈದ್ಯ ಮಾಡಿಕೊಂಡು ವೈದ್ಯನಾಥೇಶ್ವರನಾಗಿರುವುದೇ ಈ ದೇವಾಲಯದ ವಿಶೇಷ. ಇಲ್ಲಿ ಪುಜೆ ಮಾಡಿಸಿದರೆ ಸಕಲ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ವೈಶಾಖ ಶುದ್ಧ ಪೂ`ರ್ಣಿಮೆ ದಿವಸವು ವೈದ್ಯನಾಥೇಶ್ವರನ ಪೂಜೆ ಶ್ರೇಷ್ಠವಾಗಿರುತ್ತದೆ.

ಅ`ರ್ಕನಾಥೇಶ್ವರ

[ಬದಲಾಯಿಸಿ]
ಗ್ರಹಗಳಿಗೆಲ್ಲಾ ಅಧಿಪತಿಯಾಗಲು ಪುರಾಣದಲ್ಲಿ ಸೂ`ರ್ಯನಿಂದ ಪುಜಿಸಲ್ಪಟ್ಟ ಶಿವಲಿಂಗವೇ ಅ`ರ್ಕನಾಥೇಶ್ವರನೆಂದು ಪ್ರಸಿದ್ಧಿಯಾಗಿದೆ. ಇದು ವೈದ್ಯನಾಥೇಶ್ವರ ದೇಗುಲದ ಪೂ`ರ್ವ ದಿಕ್ಕಿಗೆ ಮೂರು ಮೈಲಿ ದೂರದ ವಿಜಯಪುರದಲ್ಲಿದ್ದು ಸಕಲ ಸಂಕಷ್ಟ ನಿವಾರಕ ಲಿಂಗವೆನಿಸಿದೆ. ಅ`ರ್ಕನಾಥೇಶ್ವರನ ಪೂಜೆಗೆ ಮಾಘ ಶುದ್ದ ಸಪ್ತಮಿ ದಿನವು ಬಹಳ ಶ್ರೇಷ್ಠವಾಗಿದೆ.

ಪಾತಾಳೇಶ್ವರ

[ಬದಲಾಯಿಸಿ]
ನಾಗಲೋಕದ ಚಕ್ರಾಧಿಪತ್ಯಕ್ಕಾಗಿ ವಾಸುಕಿಯಿಂದ ಪೂಜಿತಗೊಂಡಿರುವ ಈ ಶಿವಲಿಂಗವೇ ಪಾತಾಳೇಶ್ವರ. ವಾಸುಕೀಶ್ವರನೆಂಬುದುವುದು ಇದರ ಮತ್ತೊಂದು ಹೆಸರು. ಈ ದೇಗುಲ ವೈದ್ಯನಾಥೇಶ್ವರ ದೇಗುಲದ ಪೂ`ರ್ವ ದಿಕ್ಕೆಗೆ ಅ`ರ್ಧ ಮೈಲಿ ದೂರದಲ್ಲಿದೆ. ಇದು ಬಹಳ ಹಳ್ಳದಲ್ಲಿರುವುದರಿಂದ ಪಾತಾಳೇಶ್ವರನೆಂದೇ ಹೆಸರಾಗಿದೆ. ಇದರ ಪೂಜೆಗೆ ಶ್ರಾವಣ ಶುದ್ಧ ಪಂಚಮಿ ಅತ್ಯಂತ ಶ್ರೇಷ್ಠ ದಿವಸವಾಗಿದೆ. ಈ ಲಿಂಗವು ಪ್ರತಿದಿನ ಐದು ಬಣ್ಣಗಳಲ್ಲಿ ಹೊಳೆಯುತ್ತದೆಂದು ಹೇಳಲಾಗಿದೆ.

ಮರಳೇಶ್ವರ

[ಬದಲಾಯಿಸಿ]

ಈ ದೇಗುಲದಲ್ಲಿ ಬ್ರಹ್ಮದೇವನನ್ನು ಪೂಜಿಸುತ್ತಾರೆ. ಸೈಕತೇಶ್ವರನೆಂಬ ಇನ್ನೊಂದು ಹೆಸರೂ ಉಂಟು. ಈ ದೇವಾಲಯ ಭಕ್ತರಿಗೆ ವರನೀಡುವುದರಲ್ಲಿ ಹೆಚ್ಚು ಪ್ರಸಿದ್ಧ. ಮರಳೇಶ್ವರನ ದ`ರ್ಶನಕ್ಕೆ ಮಾಘಮಾಸ ಚತು`ರ್ದಸಿಯ ದಿನ ಹೆಚ್ಚು ಶ್ರೇಷ್ಠ.

ಮಲ್ಲಿಕಾ`ರ್ಜುನೇಶ್ವರ: ಕೇಳಿದ್ದು ಕೊಂಡುವಂತಹ ಶಕ್ತಿಯನ್ನು ಪಡೆಯುವುದಕ್ಕಾಗಿ ಕಾಮಧೇನುವಿನಿಂದ ಪೂಜೆಗೊಳ್ಳುತ್ತಿದ್ದ ಶಿವಲಿಂಗವೇ ಮಲ್ಲಿಕಾ`ರ್ಜುನೇಶ್ವರ. ವೈದ್ಯನಾಥೇಶ್ವರನ ಉತ್ತರಕ್ಕೆ ಮೂರು-ನಾಲ್ಕು ಮೈಲಿಗಳ ದೂರದಲ್ಲಿ ಮುನ್ನೂರು ಅಡಿ ಎತ್ತರದ ಮುಡುಕುತೊರೆ ಬೆಟ್ಟದಲ್ಲಿರುವ ಈ ಶಿವಲಿಂಗನ ದರ್ಶನಕ್ಕೆ ಕಾರ್ತೀಕ ಶುದ್ಧ ಅಷ್ಟಮಿ ದಿವಸವು ಶ್ರೇಷ್ಠವಾಗಿರುತ್ತದೆ. ಇದು ದಕ್ಷಣದ ಶ್ರೀಶೈಲವೆಂದೇ ಖ್ಯಾತಿಯಾಗಿದೆ. ಇಲ್ಲಿ ಕಾವೇರಿ ನದಿಯು ನಾಲ್ಕು ದಿಕ್ಕುಗಳಲ್ಲಿಯೂ ಹರಿಯುವುದರಿಂದ ಈ ಸ್ಥಳದಲ್ಲಿಯೇ ಪಂಚಲಿಂಗ ದರ್ಶನ ಘಟಿಸುತ್ತದೆ. ತಲಕಾಡಿನಲ್ಲಲ್ಲದೆ ಬೇರಲ್ಲೂ ಇಂಥ ಮಹತ್ವವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಅಪರೂಪದ ಅಪೂರ್ವದರ್ಶನ

[ಬದಲಾಯಿಸಿ]
ಪಂಚಲಿಂಗ ದರ್ಶನಕ್ಕೆ ಕಾರ್ತೀಕ ಮಾಸದ ಅಮಾವಾಸ್ಯೆಯ ಸೋಮವಾರ ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಆ ದಿನ ಉಷಾಃ ಕಾಲದಲ್ಲಿ ಬರುವ ಕುಹೂಯೋಗ ಅಥವಾ ಪದ್ಮಕಯೋಗವು ಅತ್ಯಂತ ಫಲಪ್ರದವಾದ ಪರ್ವಕಾಲ. ಇಂಥ ದಿನ ಸುಮಾರು ೩ ರಿಂದ ೧೪ ವರ್ಷಗಳ ಸಮಯದಲ್ಲಿ ಒಮ್ಮೆ ಬರುತ್ತದೆ. ಆಗ ತಲಕಾಡು ಕ್ಷೇತ್ರದಲ್ಲಿ ಸಂಭವಿಸುವ ಪಂಚಲಿಂಗದರ್ಶನ ಮಹೋತ್ಸವದಲ್ಲಿ ಯಾರು ನಿರ್ಮಲ ಮನಸ್ಸಿನಿಂದ ಪೂಜಿಸುವರೋ ಅವರು ಮುಂದೆ ಶಿವಸಾಯುಜ್ಯವನ್ನು ಪಡೆಯುತ್ತಾರೆಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ.

Big text