ವಿಷಯಕ್ಕೆ ಹೋಗು

ಸದಸ್ಯ:Navya Acharya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಮಾರ ಪರ್ವತ

[ಬದಲಾಯಿಸಿ]

ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬಂದು ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರದಲ್ಲಿರುವುದು.ದೇವಸ್ಥಾನದಿಂದ ಸುಮಾರು 12 ಮೈಲುಗಳ ಅಂತರದಲ್ಲಿರುವುದು ಹಾಗೂ ದೇವಸ್ಥಾನದ ಪೂರ್ವ ಭಾಗಕ್ಕೆ ಇರುವುದು. ಪ್ರತ್ಯೇಕವಾದ ಮೂರು ಶಿಖರಗಳು ಇಲ್ಲಿದೆ. ಆದರೆ ದೂರದಿಂದ ನೋಡಿದರೆ ಒಂದೇ ಎಂಬ ಭಾವನೆ ಬರುವುದು.ಶೇಷಪರ್ವತ,ಸಿದ್ದ ಪರ್ವತ ಹಾಗೂ ಕುಮಾರಪರ್ವತ ಹೀಗೆ ಮೂರು ಶಿಖರಗಳಿವೆ. ಶೇಷಪರ್ವತವನ್ನು ದಾಟಿ ಮುಂದೆ ಪಶ್ಚಿಮಕ್ಕೆ ಸಾಗಿದರೆ ಸಿಗುವದೇ ಕುಮಾರಪರ್ವತ. ಇಲ್ಲಿ ಮೇಲ್ಭಾಗಕ್ಕೆ ಸುಮಾರು ಒಂದು ಏಕರೆಯಷ್ಟು ಸಮತಟ್ಟಾದ ಭೂಮಿ ಇದೆ.ಕುಮಾರಸ್ವಾಮಿಯ ಪಟ್ಟಾಭಿಷೇಕದ ಈ ಸ್ಥಳದಲ್ಲಿ ಶಿಲೆಯಲ್ಲಿ ಎರಡು ಪಾದಗಳ ಚಿತ್ರ ಕಂಡು ಬರುವುದು. ಪಟ್ಟಾಭಿಷೇಕದ ತೀರ್ಥವೇ ಎರಡು ಭಾಗವಾಗಿ ಹರಿದು ಬಂದಿದೆ ಎಂದು ನಂಬಿಕೆ ಇದೆ.' ಉಭಯ ಕುಮಾರಾಧರೆ' ಎಂದು ಕರೆಯುತ್ತಾರೆ. ಪರ್ವತ ಶಿಖರದ ಮೇಲೆ ಒಂದು ವಿಶಿಷ್ಟವಾದ ಬಿಳಿ ವರ್ಣದ ಕಲ್ಲುಗಳು ದೊರೆಯುವವು. ಇವುಗಳಿಗೆ ಕುಮಾರಲಿಂಗಗಳೆಂದು ಕರೆಯುವರು. ಈ ಕಲ್ಲುಗಳಿಗೆ ಆರು ಮುಖಗಳಿರುವವು. ಈ ಕಲ್ಲುಗಳು ಆಕಾರದಲ್ಲಿ ಒಂದೇ ರೀತಿ ಇರುವವು. ಸನ್ನಿಧಿಯ ಪವಾಡವೋ, ನಿಸರ್ಗದ ಚಮತ್ಕಾರವೋ ಅಂತೂ ವಿಶಿಷ್ಟವಾದ ಕಲ್ಲುಗಳು ಭಕ್ತರನ್ನು ರಂಜಿಸುತ್ತವೆ. ಅಂತೆಯೇ ಇವುಗಳನ್ನು ಭಕ್ತರು ಪೂಜೆಗಾಗಿ ಕೊಂಡೊಯ್ಯುವರು.