ಸದಸ್ಯ:Naveen harsha s/WEP 2019-20

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                               ಸಾಲ ನಿರ್ಮಾಣ

ಸಾಲ ನಿರ್ಮಾಣವು ವಾಣಿಜ್ಯ ಬ್ಯಾಂಕುಗಳು ನಿರ್ವಹಿಸುತ್ತಿರುವ ಅತ್ಯಂತ ಮಹತ್ವ ಕಾರ್ಯವಾಗಿದೆ. ಪ್ರೊಫೆಸರ್.ಸೇಯರ್ಸ್ರ ರವರ ಪ್ರಕಾರ ಬ್ಯಾಂಕುಗಳು ಕೇವಲ ಹಣವನ್ನು ಸರಬರಾಜು ಮಾಡುವ ಸಂಸ್ಥೆಗಳಲ್ಲ,ಅವು ಹಣ

ಹಣ

ವನ್ನು ನಿರ್ಮಿಸುವ ಸಂಸ್ಥೆಗಳು ಹೌದು. ಆದ್ದರಿಂದ ಆಧುನಿಕ ವಾಣಿಜ್ಯ ಬ್ಯಾಂಕುಗಳನ್ನು ಸಾಲ ನಿರ್ಮಾಣದ ಕಾರ್ಖಾನೆಗಳು ಎಂದು ಕರೆಯಲಾಗುತ್ತದೆ .ಬ್ಯಾಂಕುಗಳು ತಮ್ಮ ಸಾಲ ನೀಡಿಕೆಯ ವ್ಯವಹಾರದ ಮೂಲಕ ದೇಶದಲ್ಲಿ ಒಟ್ಟು ಹಣದ ಪೂರೈಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತದೆ .ಇದರಿಂದ ಅವುಗಳು ಸಾಲ ನಿರ್ಮಾಣದ ಪ್ರಕ್ರಿಯೆ ಆರ್ಥಿಕ ವ್ಯವಸ್ಥೆಯ ಮೇಲೆ ಗಾಢವಾದ ಪ್ರಭಾವ ಹೊಂದಿರುತ್ತದೆ.

ಸಾಲ ನಿರ್ಮಾಣದ ಅರ್ಥ[ಬದಲಾಯಿಸಿ]

ಸಾಲ ನಿರ್ಮಾಣ ಎಂದರೆ ಸಾಲ ನೀಡಿಕೆಯ ಮುಖಾಂತರ ಬ್ಯಾಂಕು[೧] ಠೇವಣಿಗಳನ್ನು ವಿಸ್ತರಿಸುವ ಪ್ರಕ್ರಿಯೆಯಾಗಿದೆ. ಅಂದರೆ ಬಾಂಕುಗಳು ತಮ್ಮ ಸಾಲ  ಮಂಜೂರಾತಿ ಮತ್ತು ಹೂಡಿಕೆಯ ಮೂಲಕ ಠೇವಣಿಗಳನ್ನು ಸೃಷ್ಟಿಸಿ ಹಣದ  ಸರಬರಾಜನ್ನು ಹೆಚ್ಚಿಸುವುದು ಸಾಲ ನಿರ್ಮಾಣವಾಗುತ್ತದೆ.ಸಾಲಗಳು ಠೇವಣಿಗಳನ್ನು ಸೃಷ್ಟಿಸುತ್ತವೆ ಮತ್ತು ಠೇವಣಿಗಳು ಸಾಲವನ್ನು ಸೃಷ್ಟಿಸುತ್ತವೆ ಈ ರೀತಿ ಸಾಲ ನಿರ್ಮಾಣದ ಪ್ರಕ್ರಿಯೆ ಸಾಗುತ್ತದೆ. ಪ್ರೊಫೆಸರ್ ಬೆನ್ ಹ್ಯಾಂ ಪ್ರಕಾರ ಬ್ಯಾಂಕಿನ ಒಟ್ಟು ಠೇವಣಿಗಳನ್ನು ಹೆಚ್ಚಿಸುವ ಕ್ರಿಯೆಯೇ ಪತ್ತು ನಿರ್ಮಾಣ.

ಬ್ಯಾಂಕ್ ಠೇವಣಿಗಳನ್ನು ಸಂಪೂರ್ಣವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಸೃಷ್ಟಿಸಲಾಗುತ್ತದೆ. ಬ್ಯಾಂಕು ನೀಡುವ ಪ್ರತಿಯೊಂದು ಸಾಲವು ಸರಿಸಮವಾದ ಠೇವಣಿಯನ್ನು ಸೃಷ್ಟಿಸುತ್ತದೆ. ವಾಸ್ತವವಾಗಿ ಎರಡು ಘಟನೆಗಳನ್ನು ಏಕಕಾಲದಲ್ಲಿ ಜರುಗುತ್ತಿರುತ್ತವೆ. ಅವುಗಳೆಂದರೆ ಸಾಲದ ಮಂಜೂರಾತಿ ಠೇವಣಿಗಳನ್ನು ಸೃಷ್ಟಿಸುತ್ತದೆ ಮತ್ತು ಠೇವಣಿ[೨] ಸಾಲವನ್ನು ಸೃಷ್ಟಿಸುತ್ತದೆ. ಬ್ಯಾಂಕುಗಳು ಠೇವಣಿದಾರರು ಠೇವಣಿ ಇಡುವ ಹಣವನ್ನು ಪೂರ್ತಿಯಾಗಿ ನಗದು ರೂಪದಲ್ಲಿ ಇಟ್ಟುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಏಕೆಂದರೆ ಎಲ್ಲ ಠೇವಣಿದಾರರು ಹಣವನ್ನು ವಾಪಾಸು ಪಡೆಯಲು ಏಕಕಾಲದಲ್ಲಿ ಬರುವುದಿಲ್ಲ.ಇದರಿಂದಾಗಿ ಅವುಗಳು ತಮ್ಮ ಠೇವಣಿದಾರರ ಹಣದ ಬೇಡಿಕೆ[೩]ಯನ್ನು ಪೂರೈಸಲು ತಮ್ಮ ಠೇವಣಿಯ ಕೆಲಭಾಗವನ್ನು ಮಾತ್ರ ನಗದು ಮೀಸಲು ರೂಪದಲ್ಲಿ ಇಟ್ಟುಕೊಂಡರೆ ಸಾಕು. ಉಳಿದ ಠೇವಣಿ ಹಣದ ಸಹಾಯದಿಂದ ಅವು ಸಾಲ ಮತ್ತು ಠೇವಣಿ ಸೃಷ್ಟಿ ಮಾಡುತ್ತಾ ಹೇಗೋ ನಗದು ಹಣವನ್ನು ಕಳೆದುಕೊಳ್ಳದೆಯೇ ಬಡ್ಡಿ ರೂಪದಲ್ಲಿ ಆದಾಯ ಪಡೆಯುತ್ತವೆ.

ಬ್ಯಾಂಕುಗಳು ಎರಡು ರೀತಿಯ ಠೇವಣಿಗಳು ಸೃಷ್ಟಿಯಾಗುತ್ತವೆ

1. ಪ್ರಾಥಮಿಕ ಅಥವಾ ಮೂಲ ಠೇವಣಿ

2. ನಿರ್ಮಿತ ಅಥವಾ ನಿಷ್ಪನ್ನ ಠೇವಣಿ

ಗ್ರಾಹಕರು ತಮ್ಮ ನಗದುಹಣ ವನ್ನು ಬ್ಯಾಂಕಿನ

ಅರ್ ಬಿ ಐ

ಲ್ಲಿ ಠೇವಣಿಯಾಗಿ ಇಟ್ಟಾಗ ಪ್ರಾಥಮಿಕ ಸೃಷ್ಟಿಯಾಗುತ್ತದೆ. ಈ ಠೇವಣಿಯ ಹಣವನ್ನು ಗ್ರಾಹಕರು ಯಾವಾಗಬೇಕಾದರೂ ಚೆಕ್ಕುಗಳ ಮೂಲಕ ಮರಳಿ ಪಡೆಯಲು ಅವಕಾಶವಿರುತ್ತದೆ. ಪ್ರಾಥಮಿಕ ಟಿಪ್ಪಣಿ ಸೃಷ್ಟಿಯಲ್ಲಿ ಬ್ಯಾಂಕಿನದು ಯಾವುದೇ ಪಾತ್ರೆ ವಿರುವುದಿಲ್ಲ.ಅಂದರೆ ಈ ಪ್ರಾಥಮಿಕ ಠೇವಣಿಗಳು ಮುಂದೆ ಬ್ಯಾಂಕಿನ ಸಾಲ ನೀಡಿಕೆ ವ್ಯವಹಾರಕ್ಕೆ ಆಧಾರವಾಗುತ್ತವೆ. ವಾಸ್ತವವಾಗಿ ಪ್ರಥಮಿಕ ಠೇವಣಿಗಳು ಹಣದ ಪೂರೈಕೆಯನ್ನು ಹೆಚ್ಚಿಸುವುದಿಲ್ಲ.ಇವು ಚಲಾವಣೆಯಲ್ಲಿರುವ ಹಣವನ್ನು ಠೇವಣಿಗಳ ಮೂಲಕ ಬ್ಯಾಂಕಿಗೆ ವರ್ಗಾಯಿಸುತ್ತವೆ

ಬ್ಯಾಂಕುಗಳ ಸಾಲ ನೀಡಿದಾಗ ಸೃಷ್ಟಿಯಾಗುವ ಠೇವಣಿಗಳನ್ನು ನಿರ್ಮಿತ ಠೇವಣಿ ಎನ್ನಲಾಗುತ್ತದೆ. ಈ ಠೇವಣಿಗಳು ಬ್ಯಾಂಕುಗಳ ಸಾಲ ನೀಡಿಕೆ ವ್ಯವಹಾರದ ಮೂಲಕ ಬ್ಯಾಂಕುಗಳಲ್ಲೇ ಉತ್ಪತ್ತಿಯಾಗುತ್ತವೆ. ಈ ಠೇವಣಿಗಳ ನಿರ್ಮಾಣದಲ್ಲಿ ವಾಣಿಜ್ಯ ಬ್ಯಾಂಕು ಸಕ್ರಿಯ ಪಾತ್ರ ವಹಿಸುತ್ತದೆ ಹಾಗೂ ನಿಷ್ಪನ್ನ ಠೇವಣಿಗಳನ್ನು ದೇಶದಲ್ಲಿ ಹಣದ ಪೂರೈಕೆಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಮೂಲ ಠೇವಣಿಯ ಆಧಾರದಲ್ಲಿ ಬ್ಯಾಂಕು ಯಾವುದೇ ವ್ಯಕ್ತಿಗೆ ಸಾಲ ನೀಡಿದಾಗ ಅಥವಾ ಸಾಲ ಮಂಜೂರು ಮಾಡಿದಾಗ ಅದು ಹಣವನ್ನು ನೇರವಾಗಿ ಆ ವ್ಯಕ್ತಿಗೆ ಕೊಡುವುದಿಲ್ಲ. ಪ್ರತಿಯಾಗಿ ತಾನು ಮಂಜೂರು ಮಾಡಿದ ಸಾಲದ ಹಣವನ್ನು ಹೊಸದಾಗಿ ತೆರೆದು ಅಥವಾ ಪ್ರಸ್ತುತ ಇರುವ ಸಾಲಗಾರನ ಖಜಾನೆ ಜಮಾ ಮಾಡುತ್ತದೆ.ಆದ್ದರಿಂದ ಬ್ಯಾಂಕು ಸಾಲ ನೀಡಿದ್ದರಿಂದಾಗಿ ಹೊಸ ಠೇವಣಿಯನ್ನು ಸೃಷ್ಟಿಸಿದಂತಾಗುತ್ತದೆ. ಈ ರೀತಿಯಲ್ಲಿ ಪ್ರತಿಯೊಂದು ಸಾಲವು ಒಂದು ಠೇವಣಿಯನ್ನು ನಿರ್ಮಿಸುತ್ತದೆ.

ಸಾಲ ನಿರ್ಮಾಣದ ಗುಣಕ[ಬದಲಾಯಿಸಿ]

ಬ್ಯಾಂಕುಗಳು ತಮ್ಮ ಮೂಲ ಠೇವಣಿಯ ಸಹಾಯದಿಂದ ಎಷ್ಟು ಪ್ರಮಾಣದ ಸಾಲ ನಿರ್ಮಾಣ ಮಾಡುತ್ತವೆ ಎಂಬ ವಿಚಾರ ಪತ್ತು ನಿರ್ಮಾಣ ಗುಣಕದ ಮೌಲ್ಯವನ್ನು ಅವಲಂಬಿಸಿರುತ್ತದೆ. ಸಾಲ ನಿರ್ಮಾಣದ ಗುಣಕ ಸೂತ್ರ

K=1/r

K ಸಾಲ ನಿರ್ಮಾಣದ ಗುಣಕ ಮತ್ತು

r ನಗದು ಮೀಸಲು ಪ್ರಮಾಣವನ್ನು ಪ್ರತಿನಿಧಿಸುತ್ತದೆ

ಮೇಲಿನ ಸೂತ್ರದಲ್ಲಿ ಸ್ಪಷ್ಟವಾದಂತೆ ಪತ್ತು ನಿರ್ಮಾಣವು ನಗದು ಮೀಸಲು ನಿಧಿಯ ಮೊತ್ತವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ:

ನಗದು ಮೀಸಲು ಪ್ರಮಾಣ ಶೇಕಡ 20 ಅಗಿದ್ದರೆ ಠೇವಣಿ ಗುಣಕ K=೧/R=೧೦೦/೨೦=೫ ಆಗುತ್ತದೆ. ಒಂದು ವೇಳೆ ಮೀಸಲು ಹಣದ ಪ್ರಮಾಣ ಶೇಕಡ ೧೦ ಕೆ ಕಡಿಮೆಗೊಂಡರೆ ಠೇವಣಿ ಗುಣಕ ೧೦ ಆಗುತ್ತದೆ. ಹೀಗೆ ಮೀಸಲು ಹಣದ ಪ್ರಮಾಣ ಅಧಿಕಗೊಂಡಾಗ ಠೇವಣಿ ಗುಣಕದ ಬೆಲೆಯು ಕಡಿಮೆಯಾಗುತ್ತದೆ. ಹಾಗೂ ನಗದು ಮೀಸಲು ಪ್ರಮಾಣ ಅಧಿಕ ಗೊಂಡಾಗ ಠೇವಣಿ ಗುಣಕದ ಬೆಲೆ ಹೆಚ್ಚುತ್ತದೆ.

ಸಾಲ ನಿರ್ಮಾಣದ ಪ್ರಕ್ರಿಯೆ[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ತಮ್ಮ ಬಳಿ ಇರುವ ಠೇವಣಿಗಳ ಸಹಾಯದಿಂದ ಹಲವಾರು ಪಟ್ಟು ಅಧಿಕ ಪ್ರಮಾಣದ ಪತ್ತನ್ನು ಸೃಷ್ಟಿಸುವ ಸಮರ್ಥ್ಯ ಹೊಂದಿರುತ್ತವೆ. ಒಟ್ಟಾರೆಯಾಗಿ ಅವು ಎಷ್ಟು ಪ್ರಮಾಣದ ಪತ್ತನ್ನು ನಿರ್ಮಿಸಬಹುದು ಎಂಬ ವಿಚಾರ ಅವುಗಳ ನಗದು ಮೀಸಲು ನಿಧಿಯ ಪ್ರಮಾಣ ಮತ್ತು ಠೇವಣಿ ಅಥವಾ ನಿರ್ಮಾಣ ಗುಣಕವನ್ನು ಅವಲಂಬಿಸಿರುತ್ತದೆ. ಬ್ಯಾಂಕುಗಳು ತಮ್ಮ ಪ್ರಾಥಮಿಕ ಠೇವಣಿಗಳ ಸಹಾಯದಿಂದ ಹೇಗೆ ಪತ್ತು ನಿರ್ಮಾಣವನ್ನು ಮಾಡುತ್ತವೆ ಎಂಬ ಪ್ರಕ್ರಿಯೆಯನ್ನು ಸುಲಭವಾಗಿ ತಿಳಿದುಕೊಳ್ಳುವ ದೃಷ್ಟಿಯಿಂದ ಈ ಕೆಳಗಿನ ಕಲ್ಪನೆಗಳನ್ನು ಮಾಡಿಕೊಳ್ಳಬಹುದು

ಕಲ್ಪನೆ[ಬದಲಾಯಿಸಿ]

1. ಹಲವಾರು ಬ್ಯಾಂಕುಗಳು A, B, C, D ಮುಂತಾದ ಬ್ಯಾಂಕುಗಳು ಅಸ್ತಿತ್ವದಲ್ಲಿರುತ್ತವೆ.

2. ಪ್ರತಿಯೊಂದು ಬ್ಯಾಂಕು ತನ್ನ ಠೇವಣಿಗಳ ವಿರುದ್ಧವಾಗಿ ಶೇಕಡ ೧೦ರಷ್ಟು ನಗದು ಮೀಸಲು ನಿಧಿಯನ್ನು ಇಡಬೇಕಾಗುತ್ತದೆ.

3. ಮೊದಲ ಬ್ಯಾಂಕು ಅಂದರೆ A ಬ್ಯಾಂಕು ೧೦೦೦ ರೂಪಾಯಿಗಳ ಠೇವಣಿ ಹೊಂದಿದೆ.

4. ಒಂದು ಬ್ಯಾಂಕಿನಲ್ಲಿ ಪಡೆಯಲಾದ ಸಾಲವನ್ನು ಗ್ರಾಹಕ ಇನ್ನೊಂದು ಬಂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಠೇವಣಿ ಇಡುತ್ತಾನೆ, ಅಲ್ಲಿಂದ ಮತ್ತೊಂದು ಬ್ಯಾಂಕಿನಲ್ಲಿ, ಮುಂದೆ ಇನ್ನೊಂದು ಬ್ಯಾಂಕಿನಲ್ಲಿ ಮುಂದುವರೆಯುತ್ತದೆ.

5. ಪ್ರತಿಯೊಂದು ಬ್ಯಾಂಕು ಇನ್ನೊಂದು ಬ್ಯಾಂಕಿನ ಸಾಲಗಾರ ಠೇವಣಿ ಇಡುವ ಹಣದ ಮೂಲಕ ಪ್ರಾರಂಭದ ಠೇವಣಿಯಿಂದ ಕಾರ್ಯರಂಭ ಮಾಡುತ್ತದೆ.


ಉದಾಹರಣೆಗೆ[ಬದಲಾಯಿಸಿ]

A ಬ್ಯಾಂಕು ೧೦೦೦ ರೂಪಾಯಿ ಹೊಸ ಠೇವಣಿ ಸ್ವೀಕರಿಸಿ ಕಾರ್ಯಾರಂಭ ಮಾಡುತ್ತದೆ.ಈ ೧೦೦೦ ರೂಪಾಯಿ ಠೇವಣಿಯು ಈ ಬ್ಯಾಂಕಿನ ಬಳಿ ಇರುವ ನಗದು ಆಸ್ತಿಯಾಗುತ್ತದೆ. ಹಾಗೂ ಇದೆ ಅದರ ಹೊಣೆಗಾರಿಕೆಯೂ ಆಗುತ್ತದೆ .ನಗದು ಮೀಸಲು ನಿಧಿಯ ಪ್ರಮಾಣ ಶೇಕಡ ೧೦ ಅಗಿದ್ದಾಗ ಈ ಬ್ಯಾಂಕು ೧೦೦ ರೂಪಾಯನ್ನು ನಗದು ಮೀಸಲು ಇಟ್ಟುಕೊಂಡು ಉಳಿದ ೯೦೦ ರೂಪಾಯನ್ನು X ಎಂಬ ತನ್ನ ಗ್ರಾಹಕನಿಗೆ ಸಾಲ ನೀಡುತ್ತದೆ. ಈ X ಎಂಬ ಗ್ರಾಹಕ ತಾನು A ಬ್ಯಾಂಕಿನಿಂದ ತೆಗೆದುಕೊಂಡ ಸಾಲವನ್ನು Y ಎಂಬ ವ್ಯಕ್ತಿಗೆ ಕೊಡಬೇಕಾಗಿರುವ ಹಣವನ್ನು ಕೊಡಲು ಬಳಸಿಕೊಳ್ಳುತ್ತಾನೆ ಎಂದು ಭಾವಿಸಿಕೊಳ್ಳೋಣ .ಈ ಸನ್ನಿವೇಶದಲ್ಲಿ A ಬ್ಯಾಂಕಿನ ಆಸ್ತಿ - ಹೊಣೆಗಾರಿಕೆ ಪಟ್ಟಿಯು ಮುಂದಿನಂತಿರುತ್ತದೆ

A ಬ್ಯಾಂಕಿನ ಆಸ್ತಿ- ಹೊಣೆಗಾರಿಕೆ ಪಟ್ಟಿ

ಹೊಣೆಗಾರಿಕೆಗಳು ಆಸ್ತಿಗಳು
ಠೇವಣಿಗಳು - ರೂ.೧೦೦೦ ನಗದು ಹಣ - ರೂ.೧೦೦
ಒಟ್ಟು - ರೂ.೧೦೦೦ ಗೆ ಸಾಲ - ರೂ.೯೦೦
ಒಟ್ಟು - ರೂ.೧೦೦೦

ಪಟ್ಟಿಯಲ್ಲಿ ವ್ಯಕ್ತವಾದಂತೆ A ಬ್ಯಾಂಕು ತನ್ನ ೧೦೦೦ ರೂಪಾಯಿ ಠೇವಣಿಯನ್ನು ದ್ವಿನಮೂದು ಲೆಖ್ಖಾ ಪದ್ದತಿಯಲ್ಲಿ ಹೊಣೆಗಾರಿಕೆ ಮತ್ತು ಆಸ್ತಿ ವಿಭಾಗಗಳೆರಡರಲ್ಲೂ ತೋರಿಸಿದೆ.ಆ ಮೇರೆಗೆ ಹೊಣೆಗಾರಿಕೆ ವಿಭಾಗದಲ್ಲಿ ೧೦೦೦ ರೂಪಾಯಿ ಠೇವಣಿಯನ್ನು ಹಾಗೂ ಆಸ್ತಿ ವಿಭಾಗದಲ್ಲಿ ೧೦೦ ರೂಪಾಯಿ ಮೀಸಲು ನಿಧಿಯನ್ನು ಹಾಗೂ X ಎಂಬ ಗ್ರಾಹಕನಿಗೆ ನೀಡಲಾದ ೯೦೦ ರೂಪಾಯಿ ಸಾಲವನ್ನು ತೋರಿಸಿದೆ. ಈ ಸನ್ನಿವೇಶದಲ್ಲಿ X ಎಂಬ ಗ್ರಾಹಕ ತಾನು A ಬ್ಯಾಂಕಿನಲ್ಲಿ ಪಡೆದ ಸಾಲದ ಹಣವನ್ನು ಬಳಸಿಕೊಂಡು Y ಎಂಬ ವ್ಯಕ್ತಿಗೆ ಕೊಡಬೇಕಾಗುವ ಹಣವನ್ನು ಪಾವತಿ ಮಾಡುತ್ತಾನೆ ಎಂದು ಬಳಸಿಕೊಳ್ಳೋಣ. ಈಗ Y ಎಂಬ ಈ ವ್ಯಕ್ತಿ ಈ ಹಣವನ್ನು B ಬ್ಯಾಂಕಿನಲ್ಲಿ ಠೇವಣಿ ಇಡುತ್ತಾನೆ ಹಾಗೂ B ಬ್ಯಾಂಕು ಇದರಲ್ಲಿ ೮೧೦ ರೂಪಾಯನ್ನು Z ಗೆ ಸಾಲವನ್ನು ನೀಡುತ್ತದೆ ಎಂದುಕೊಳ್ಳೋಣ.ಆಗ B ಬ್ಯಾಂಕಿನ ಆಸ್ತಿ ಹೊಣೆಗಾರಿಕೆ ಪಟ್ಟಿ ಮುಂದಿನಂತಿರುತ್ತದೆ

B ಬ್ಯಾಂಕಿನ ಆಸ್ತಿ-ಹೊಣೆಗಾರಿಕೆ ಪಟ್ಟಿ

ಹೊಣೆಗಾರಿಕೆಗಳು ಆಸ್ತಿಗಳು
ಠೇವಣಿಗಳು - ರೂ.೯೦೦ ನಗದು ಹಣ - ರೂ.೯೦
ಒಟ್ಟು - ರೂ.೯೦೦ ಗೆ ಸಾಲ - ರೂ.೮೧೦
ಒಟ್ಟು - ರೂ.೯೦೦
ಪಟ್ಟಿಯಲ್ಲಿ ವ್ಯಕ್ತವಾದಂತೆ B ಬ್ಯಾಂಕು  ತನಗೆ ಲಭ್ಯವಾದ ೯೦೦ ರೂಪಾಯಿ ಠೇವಣಿಯಲ್ಲಿ ೯೦  ರೂಪಾಯನ್ನು ನಗದು ಮೀಸಲಿಟ್ಟುಕೊಂಡು ಉಳಿದ ೮೧೦  ರೂಪಾಯನ್ನು Z ಎಂಬ ಗ್ರಾಹಕನಿಗೆ ಸಾಲವಾಗಿ ಕೊಡುತ್ತದೆ.ಈ Z ತನಗೆ B  ಬ್ಯಾಂಕಿನಿಂದ ಲಭ್ಯವಾದ ಸಾಲದ ಹಣವನ್ನು  ತಾನು ಇನ್ನೊಬ್ಬನಿಗೆ ಕೊಡಬೇಕಾದ ಹಣವನ್ನು ಕೊಡಲು ಬಳಸಿಕೊಳ್ಳುತ್ತಾನೆಂದು ಕೊಳ್ಳೋಣ. ಈ ವ್ಯಕ್ತಿ C ಬ್ಯಾಂಕಿನ ಗ್ರಾಹಕನಾಗಿದ್ದು ಅವನು C ಬ್ಯಾಂಕಿನಲ್ಲಿ ತನಗೆ Z ನಿಂದ ಪಾವತಿಯಾದ ೮೧೦ ರೂಪಾಯಿಯನ್ನು ಠೇವಣಿ ಇಡುತ್ತಾನೆ ಈಗ C ಬ್ಯಾಂಕು ಕಾನೂನು  ಪ್ರಕಾರ ತಾನು ಇಟ್ಟುಕೊಳ್ಳಬೇಕಾದ ಶೇಕಡ ೧೦ರ ನಗದು ಮೀಸಲು ಹಣ ೮೧ ರೂಪಾಯಿ ಉಳಿಸಿಕೊಂಡು ಉಳಿದ ೭೨೯ ರೂಪಾಯಿಯನ್ನು ಮತ್ತೊಬ್ಬ ವ್ಯಕ್ತಿಗೆ ಸಾಲವಾಗಿ ನೀಡುತ್ತದೆ. ಆಗ C ಬ್ಯಾಂಕಿನ ಆಸ್ತಿ-ಹೊಣೆಗಾರಿಕೆ ಪಟ್ಟಿ ಮುಂದಿನಂತಿರುತ್ತದೆ.

C ಬ್ಯಾಂಕಿನ ಆಸ್ತಿ-ಹೊಣೆಗಾರಿಕೆ ಪಟ್ಟಿ

ಹೊಣೆಗಾರಿಕೆಗಳು ಆಸ್ತಿಗಳು
ಠೇವಣಿಗಳು - ರೂ.೮೧೦ ನಗದು ಹಣ - ರೂ.೮೧
ಒಟ್ಟು - ರೂ.೮೧೦ ಗೆ ಸಾಲ - ರೂ.೭೨೯
ಒಟ್ಟು - ರೂ.೮೧೦

ಈಗ C ಬ್ಯಾಂಕು ಸಹ ಶೇಕಡ ೧೦ರ ಮೀಸಲು ನಿಧಿಯನ್ನು ಇಟ್ಟುಕೊಂಡು ಉಳಿದ ಹಣವನ್ನು ಬೇರೊಬ್ಬರಿಗೆ ಸಾಲವಾಗಿ ನೀಡುತ್ತದೆ .ಈ ಪ್ರಕ್ರಿಯೆ ಹೀಗೆ ಮುಂದುವರೆದು ೧೦೦೦ ರೂಪಾಯಿ ಮೂಲ ಠೇವಣಿಯಿಂದ ಅಂತಿಮವಾಗಿ ಶೇಕಡ 90ರಷ್ಟು ಅಂದರೆ ೧೦೦೦೦ ರುಪಾಯಿಯಷ್ಟು ಹೊಸ ಠೇವಣಿ ಸೃಷ್ಟಿಸಲಾಗುತ್ತದೆ .ಹೀಗೆ ೧೦೦೦ ರೂಪಾಯಿ ಮೊತ್ತದ ಹೊಸ ಠೇವಣಿ ನಿರ್ಮಾಣವಾಗುವ ಬಗೆಯನ್ನು ಮುಂದಿನ ಪಟ್ಟಿಯಲ್ಲಿ ತೋರಿಸಲಾಗುತ್ತದೆ.

ಬಾಹುಗಣಿತ ಪತ್ತು ನಿರ್ಮಾಣ

ಬ್ಯಾಂಕು ಅವಶ್ಯವಿರುವ ಮೀಸಲು ಹೊಸ ಸಾಲಗಳು ಹೊಸ ಠೇವಣಿಗಳು
A ೧೦೦ ೯೦೦ ೧೦೦೦
B ೯೦ ೮೧೦ ೯೦೦
C ೮೧ ೭೨೯ ೮೧೦
ಇತರ ಎಲ್ಲ ಬ್ಯಾಂಕುಗಳು ೭೨೯ ೬೫೬೧ ೭೨೯೦
ಬ್ಯಾಂಕಿಂಗ್ ವ್ಯವಸ್ಥೆಯ ಒಟ್ಟು ೧೦೦೦ ೯೦೦೦ ೧೦೦೦೦
ಹೀಗೆ ಬ್ಯಾಂಕುಗಳು ತಮ್ಮ ಮೂಲ ಠೇವಣಿಗಳ ಸಹಾಯದಿಂದ ಸಾಲ ನಿರ್ಮಾಣ  ಮಾಡುತ್ತಲೇ ಸಾಗುತ್ತದೆ. ಅಂದರೆ ಎಲ್ಲಿಯವರೆಗೆ ಸಾಲವನ್ನು ಕೊಡುವುದು ಸಾಧ್ಯವಿರುತ್ತದೆ ಅಲ್ಲಿಯವರೆಗೂ ಸಾಲ ಕೊಡುತ್ತಲೇ ಇರುತ್ತವೆ. ಇನ್ನು ಸಾಲ ಕೊಡಲು ಹಣವಿಲ್ಲ ಅಥವಾ ಕೊಡುವುದು ಸಾಧ್ಯವೇ ಇಲ್ಲ ಎಂದಾಗ ಸಾಲ  ನೀಡಿಕೆಯನ್ನು ಸ್ಥಗಿತಗೊಳಿಸುತ್ತವೆ.ಈ  ಪ್ರಕ್ರಿಯೆಯನ್ನು ಸಾಲದ ಬಹುಗಣಿತ ವಿಸ್ತರಣೆ ಎನ್ನಲಾಗುತ್ತದೆ .ಅಂದರೆ ಬ್ಯಾಂಕು  ಅತ್ಯಧಿಕ ಪ್ರಮಾಣದ ನಗದು ಮೀಸಲನ್ನು ಇಟ್ಟುಕೊಳ್ಳ ಬೇಕಾದ ಈ ಕ್ರಿಯೆ ನಡೆಯುತ್ತದೆ. ಏಕೆಂದರೆ ಅಧಿಕ ಪ್ರಮಾಣದ ಮೀಸಲು ನಿಧಿಯನ್ನು ಇಟ್ಟುಕೊಂಡಾಗ ಸಾಲ ನೀಡಲು ಹಡವೆ ಲಭ್ಯವಿರುವುದಿಲ್ಲ. ಹಾಗಾಗಿ ಪತ್ತು ನಿರ್ಮಾಣ ಕುಗ್ಗುತ್ತದೆ.

ಸಾಲ ನಿರ್ಮಾಣದ ಮಿತಿಗಳು[ಬದಲಾಯಿಸಿ]

ಬ್ಯಾಂಕುಗಳ ಸಾಲ ನಿರ್ಮಾಣ ಸಾಮರ್ಥ್ಯದ ಮೇಲೆ ಹಲವಾರು ಮಿತಿಗಳಿವೆ

1. ನಗದು ಹಣದ ಪ್ರಮಾಣ

2. ನಗದು ಮೀಸಲು ಅನುಪಾತ

3. ಸರಿಯಾದ ಭದ್ರತೆಗಳು

4. ನಗದು ಹಣದದೊಲವು

5. ಬ್ಯಾಂಕಿಂಗ್ ಹವ್ಯಾಸ

6. ಆರ್ಥಿಕ ವಾತಾವರಣ

7. ಕೇಂದ್ರ ಬ್ಯಾಂಕಿನ ನೀತಿ

8. ಇತರ ಬ್ಯಾಂಕುಗಳ ವರ್ತನೆ

9. ಚಲಾವಣೆಯಲ್ಲಿರುವ ಹಣದ ಪ್ರಮಾಣ

ಉಲ್ಲೇಖಗಳು[ಬದಲಾಯಿಸಿ]

[೪]


ಹೆಚ್ಚಿನ ಓದುವಿಕೆಗೆ

  • ಎಚ್. ಆರ್, ಕೃಷ್ಣಯ್ಯ ಗೌಡ. ಆಧುನಿಕ ಅರ್ಥಶಾಸ್ತ್ರ.
  • ಎ.ಸ್, ಶರಣಪ್ಪ. ಆರ್ಥಿಕ ಸಿದ್ಧಾಂತ.