ವಿಷಯಕ್ಕೆ ಹೋಗು

ಸದಸ್ಯ:Naveen.s.navi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನವೀನ್.ಎಸ
ಜನನ
ಬೆಂಗಳೂರು
ರಾಷ್ಟ್ರೀಯತೆಭಾರತೀಯರು
ವಿದ್ಯಾಭ್ಯಾಸಬಿ.ಕಾಂ
Titleನವೀನ್.ಎಸ
                 ನನ್ನ ಹೆಸರು ನವೀನ್. ನಾನು ಹುಟ್ಟಿದು ೦೯/೧೨/೧೯೯೭ ಉದ್ಯಾನ ನಗರಿ ಎಂಬ ಬೆಂಗಳೂರಿನಲ್ಲಿ ನನ್ನ ತಂದೆಯ ಹೆಸರು ಸೊಂಶೇಖರ್,ತಾಯಿ ಹೆಸರು ಗೌರಮ್ಮ ನನ್ನ ಬಾಲ್ಯದಿನಗಳಂನು ಶಿವಮ್ಗೊಗದಲ್ಲಿ ಕಳೆದೆನು.                                                        

ವಿದ್ಯಾಭ್ಯಾಸ

[ಬದಲಾಯಿಸಿ]
                 ಆಳ್ವಾಸ್ ಪಿಯು ಕಾಲೇಜಿನಿಂದ ಬಂದಿದ್ದೇನೆ. ನಾನು ಈಗ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ೨ನೇ ಬಿಕಾಂನಲ್ಲಿ ಓದುತ್ತಿದ್ದೇನೆ. ಆಳ್ವಾಸ್ ಪಿಯು ಕಾಲೇಜಿನಲ್ಲಿ ತುಂಬಾ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ ಆಳ್ವಾಸ್ ಕಾಲೇಜಿಗೆ ಹೋಲಿಕೆ ಮಾಡಿದರೆ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ತುಂಬಾ ಸ್ವತಂತ್ರವಿದೆ. ನನಗೆ ಈ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಓದುವುದು ತುಂಬಾ ಸುಲಭವೆನಿಸುತ್ತದೆ. ಕಾರಣ ನಾನು ಆಳ್ವಾಸ್ ಕಾಲೇಜಿನಲ್ಲಿ ಓದಿರುವುದು.ನಮ್ಮ ಆಳ್ವಾಸ್ ಕಾಲೇಜ್ ಕ್ರೀಡೆಗೆ ಹೆಸರುವಾಸಿಯಾದ ಕಾಲೇಜ್ ಕಾರಣ ನಮ್ಮ ಆಳ್ವಾಸ್ ಪಿಯು ಕಾಲೇಜಿನಲ್ಲಿ ಕ್ರೀಡೆಗೆ ಹೆಚ್ಛು ಮಹತ್ವವನ್ನು ನೀಡುತ್ತಿದ್ದರು.ನಮ್ಮ ಕಾಲೇಜಿನಿಂದ ಪ್ರತಿ ವರ್ಷ ರಾಷ್ಟ್ರಮಟ್ಟದ ಕ್ರೀಡೆನಲ್ಲಿ ಭಾಗವಹಿಸುತ್ತಿದ್ದರು. ನಮ್ಮ ಆಳ್ವಾಸ್ ಕಾಲೇಜಿನಲ್ಲಿ ಎಲ್ಲಾ ಕ್ರೀಡೆಗೂ ಮಹತ್ವ ನೀಡುತ್ತಿದ್ದರು ಹಾಗೂ ಪ್ರೋತ್ಸಾಹಿಸುತ್ತಿದ್ದರು. 

ಹವ್ಯಾಸಗಳು

[ಬದಲಾಯಿಸಿ]
                 ನಾನು ಕಬಡ್ಡಿ ಕ್ರೀಡೆನಲ್ಲಿ ಭಾಗವಹಿಸುತ್ತಿದ್ದೆನು. ಆದರೆ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಕಬಡ್ಡಿ ಎಂಬ ಕ್ರೀಡೆಯೇ ಇಲ್ಲ ಆದ್ದರಿಂದ ನಾನು ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಕ್ರೀಡೆನಲ್ಲಿ ಭಾಗವಹಿಸಿಲ್ಲ. ನಿಮಗೆ ಗೊತ್ತಾ? ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರಿದ್ದಾರೆ. ಆದರೆ ಈ ಯೂನಿರ್ವಸಿಟಿನಲ್ಲಿ ಕಬಡ್ಡಿ ಕ್ರೀಡೆಯೇ ಇಲ್ಲ. ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಕಬಡ್ಡಿ ಕ್ರೀಡೆಯನ್ನು ಜಾರಿಗೆ ತಂದರೆ ತುಂಬಾ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಆದ್ದರಿಂದ ನಾನು ಈ ಮನವಿ ಮಾಡಿಕೊಳ್ಳುವುದೇನೆಂದರೆ ಕಬಡ್ಡಿ ಕ್ರೀಡೆಯನ್ನು ಜಾರಿಗೆ ತನ್ನಿ. ನನಗೆ ಈ ಕಾಲೇಜ್ ತುಂಬಾ ಇಷ್ಟ ಆಯ್ತು ಏಕೆಂದರೆ ನನಗೆ ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ ಹಾಗೂ ತುಂಬಾ ಒಳ್ಳೆಯ ಸ್ನೇಹಿತರು ಸಹ ಸಿಕ್ಕಿದ್ದಾರೆ. ನನಗೆ ಕನ್ನಡದವರೆಂದರೆ ತುಂಬಾ ಪ್ರೀತಿ ಕಾರಣ ಕನ್ನಡದವರ ಮನಸ್ಸು ತುಂಬಾ ಮೃದು. ಎಲ್ಲದರಲ್ಲೂ ಭಾಗಿಯಾಗುತ್ತಾರೆ ಹಾಗೂ ನಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ. ಕ್ರೈಸ್ಟ್ ಯೂನಿರ್ವಸಿಟಿಯ ಬಗ್ಗೆ ಹೇಳಬೇಕಂದರೆ ಒಬ್ಬ ವ್ಯಕ್ತಿ ಉತ್ತಮವಾಗಿ ಬೆಳೆಯಲು ಬೇಕಾದ ಎಲ್ಲಾ ಗುಣಗಳು ಈ ಯೂನಿರ್ವಸಿಟಿನಲ್ಲಿವೆ.                 

ನೆನಪುಗಳು

[ಬದಲಾಯಿಸಿ]
               ನಿಮಗೆ ನಮ್ಮ ಊರಿನಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮ ಮುಂದೆ ಹೇಳಲು ಬಯಸುತ್ತೇನೆ. ಒಂದು ಮನೆನಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ವಾಸಿಸುತ್ತಿರುತ್ತಾರೆ. ಇವರಿಗೆ ಒಂದು ಚಿಕ್ಕ ಮಗು ಇರುತ್ತದೆ. ಕೆಲವು ದಿನಗಳ ಬಳಿಕ ಗಂಡ ತೀರಿಕೊಳ್ಳುತ್ತಾನೆ. ಗಂಡ ತೀರಿಕೊಂಡ ನಂತರ ಮಗುವನ್ನು ತಾಯಿ ಒಬ್ಬಳೇ ಪ್ರೀತಿಯಿಂದ ಸಾಕುತ್ತಾಳೆ. ತಾಯಿಗೆ ಮಗುವೆಂದರೆ ಪಂಚಪ್ರಾಣ ಅದೇ ರೀತಿ ಮಗುವಿಗು ತಾಯಿ ಕಂಡರೆ ತುಂಬಾ ಪ್ರೀತಿ. ತಾಯಿ ಮಗು ಇಬ್ಬರು ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ತಾಯಿ ತನ್ನ ಮಗುವನ್ನು ಶಾಲೆಗೆ ಸೇರಿಸುತ್ತಾಳೆ. ಮಗು ಶಾಲೆಯಿಂದ ಮನೆಗೆ ಬರುವವರೆಗೆ ತಾಯಿ ಬಾಗಿಲಿನಲ್ಲೆ ನಿಂತು ಕಾಯುತ್ತಿದ್ದಳು. ಇದೇ ರೀತಿ ಮಗುವು ಸಹ ಶಾಲೆ ಯಾವಾಗ ಬಿಡುತ್ತದೆಯೋ ನಾನು ಯಾವಾಗ ಅಮ್ಮನನ್ನು ನೋಡುತ್ತೇನೋ ಅಂತ ಕಾಯುತ್ತಿರುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಮಗು ಮನೆಗೆ ಹೋಡಿ ಬಂದು ತನ್ನ ತಾಯಿಯನ್ನು ತಬ್ಬಿಕೊಳ್ಳುತ್ತಿದ್ದ. ಶಾಲೆಯ ವಿದ್ಯಾಭ್ಯಾಸ ಮುಗಿದ ನಂತರ ಕಾಲೇಜಿಗೆ ಸೇರುತ್ತಾನೆ. ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೆಟ್ಟ ಚಟಗಳನ್ನು ಕಲಿತ್ತಿದ್ದರು. ಅಂದರೆ ಬೀಡಿ, ದೂಮಪಾನ ಮಾಡುವುದು ಹಾಗೂ ಕುಡಿಯುವುದು ಎಲ್ಲಾವನ್ನು ಕಲಿತ್ತಿದ್ದರು. ಇವನು ಸಹ ಆ ಕೆಟ್ಟ ವಿದ್ಯಾರ್ಥಿಗಳ ಸಹವಾಸ ಮಾಡಲು ಪ್ರಾರಂಬಿಸಿದನು. ಇದರಿಂದ ಇವನು ಧೂಮಪಾನ, ಕುಡಿಯುವುದನ್ನು ಕಲಿತನು. ಕೆಟ್ಟ ಚಟಗಳನ್ನು ಕಲಿತ ನಂತರ ಇವನು ಮನೆಗೆ ಬರುವುದನ್ನು ನಿಧಾನ ಮಾಡುತ್ತಾನೆ. ಆದರೆ ತಾಯಿ ಮನೆಯ ಬಾಗಿಲಿನಲ್ಲಿಯೇ ನಿಂತು ಮಗ ಬರಲಿಲ್ಲವೆಂದು ಕಾಯುತ್ತಾ ಇರುತ್ತಿದ್ದಳು. ಹೀಗೆ ಒಂದು ದಿನ ಮಗ ಮತ್ತು ಅವನ ಸ್ನೇಹಿತರು ತುಂಬಾ ಕುಡಿದು ಮನೆಗೆ ತಡವಾಗಿ ಬರುತ್ತಾರೆ. ಬಾಗಿಲಿನಲ್ಲೆ ಕಾಯುತ್ತಿದ್ದ ತಾಯಿ ಗಾಬರಿಗೊಂಡು ಮನೆಗೆ ಬಂದ ಮಗನನ್ನು ಕೇಳುತ್ತಾಳೆ. ಯಾಕೆ ಮಗ ಇಷ್ಟೊಂದು ಕುಡಿದು ಬಂದಿದ್ದೀಯ ಅಂತ ಕೇಳುತ್ತಾಳೆ. ತಾಯಿ ಮಗನ ಜೊತೆಗಿದ್ದ ಸೇಹಿತರಿಗೆ ಬೈಯುತ್ತಾಳೆ. ತಾಯಿ ಮಗನಿಗೆ ಹೇಳುತ್ತಾಳೆ ಮಗ ಈ ಕೆಟ್ಟ ಸ್ನೇಹಿತರ ಜೊತೆ ಗೆಳೆತನ ಮಾಡಬೇಡ ಸರಿಯಿಲ್ಲ ಇವರು ಅಂತ. ಆಗ ಸ್ನೇಹಿತರೆಲ್ಲಾ ಅವನಿಗೆ ಹೇಳುತ್ತಾರೆ. ಏನೋ ಮಗ ನಿನ್ನ ತಾಯಿ ನಮಗೆ ಬೈಯುತ್ತಾಳೆ ಅಂತ. ಸ್ನೇಹಿತರ ಮಾತನ್ನು ಕೇಳಿದ ಇವನಿಗೆ ತನ್ನ ತಾಯಿಯ ಮೇಲೆಯೇ ಕೋಪ ಬರುತ್ತದೆ. ಆಗ ಮನೆಯ ಒಳಗಡೆ ಇದ್ದ ಮಚ್ಚನ್ನು ತಂದು ತಾಯಿಯ ಹೊಟ್ಟೆಯನ್ನು ಬಗೆದು ಕರುಳನ್ನು ಕಿತ್ತು ಮರಕ್ಕೆ ಎಸೆಯುತ್ತಾನೆ. ತಾಯಿ ಸತ್ತು ಹೋಗುತ್ತಾಳೆ.. ಸತ್ತ ನಂತರವೂ ಮರಕ್ಕೆ ಸಿಕ್ಕಿಕೊಂಡಿದ್ದ ತಾಯಿಯ ಕರುಳು ಸಹ ಕಂದ ಕಂದ ಅಂತ ಬಡಿದುಕೊಳ್ಳುತ್ತಿತ್ತು. ಈ ಪ್ರಪಂಚದಲ್ಲಿ ಕೆಟ್ಟ ಮಗ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾದ್ಯವಿಲ್ಲ. ಈ ಸಣ್ಣ ಕಥೆಯಿಂದ ನಾವು ತಾಯಿಯ ಮಮತೆಯನ್ನು ತಿಳಿದುಕೊಳ್ಳಬಹುದು.
This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Naveen.s.navi