ಸದಸ್ಯ:Natyadarpana/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಬ್ಬೂರು ಜಯತೀರ್ಥ ಹಾಗೂ ರಂಗಭೂಮಿ, ಅಬ್ಬೂರು ಎರಡರ ಅವಿನಾಭಾವ ಸಂಬಂಧದ ಜಯತೀರ್ಥರು ಶಾಲಾ ದಿನಗಳಿಂದಲೇ ನಾಟಕದ ಹುಚ್ಚು. ಬೆಂಗಳೂರಿನ ಕಲಾಕಾಲೇಜಿನಲ್ಲಿ ಅಭಿನಯ ಮುಂದುವರಿಕೆ. ಉದ್ಯೋಗಕ್ಕೆ ಸೇರಿದ್ದು ಅಕೌಂಟೆಂಟ್ ಜನರಲ್‌ರ ಪ್ರಧಾನ ಕಚೇರಿ. ನಾಟ್ಯವಾಹಿನಿ ಸಂಸ್ಥೆ ಕಟ್ಟಿ ಸಿಬ್ಬಂದಿಗಳಿಗೆ ನೀಡಿದ ಮನರಂಜನೆ. ಸರಸ್ವತಿ ಕಲಾನಿಕೇತನ, ನಾಟ್ಯದರ್ಪಣ, ಕಲಾಸಂಘಗಳ ನಾಟಕಗಳ ನಟ / ನಿರ್ದೇಶಕರಾಗಿ ರಂಗಭೂಮಿಗೆ ಪಾದಾರ್ಪಣೆ. ಅ.ನ.ಕೃ.ರವರ ಗುಬ್ಬಚ್ಚಿಗೂಡು ನಾಟಕವನ್ನು ವಿರೋಧದ ನಡುವೆಯೂ ಸಜ್ಜುಗೊಳಿಸಿದ ಖ್ಯಾತಿ.

ಪರ್ವತವಾಣಿ, ಶ್ರೀರಂಗರ ನಾಟಕಗಳಲ್ಲಿ ಕ್ರಿಯಾಶೀಲ ಕಾರ್ಯಕರ್ತ. 1960-1970 ರ ದಶಕದಿಂದ ರಂಗಭೂಮಿಯ ರಂಗಸಜ್ಜಿಕೆ, ಧ್ವನಿ, ಬೆಳಕಿಗೆ ಅನಿವಾರ್ಯ ವ್ಯಕ್ತಿ. ಚೋಪಟ್ ರಾಜ, ಅಪಕಾರಿ ಕಥೆ, ನಾಟಕಗಳಲ್ಲಿ ಬಿ.ವಿ. ಕಾರಂತರೊಡನೆ, ಬಿ ಜಯಶ್ರೀ, ಮೇಕಪ್ ನಾಣಿ, ಭಾರ್ಗವಿ ನಾರಾಯಣ್, ಗಿರಿಜ ಲೊಕೇಶ್, ಶಂಕರನಾಗ್, ಜೀವರಾಜ್ ಅಳ್ವಾ, ನಾಗಭರಣ, ರಾಜಾರಾಂ ಬಿವಿ, ಕಪ್ಪಣ್ಣ, ಶ್ರೀನಿವಾಸಪ್ರಭು, ಜಿ.ಎಸ್ಸ್.ಅರ್, ಎಸ್ ಕೆ ಮಾಧವರಾವ್, ಈಡಿಪಸ್ ನಾಟಕದಲ್ಲಿ ಗಿರೀಶ್ ಕಾರ್ನಾಡರೊಡನೆ ಅಭಿನಯ. ನೀ ಕೊಡೆ ನಾ ಬಿಡೆ, ಸ್ವರ್ಗಕ್ಕೆ ಮೂರೇ ಗೇಣು, ತುಘಲಕ್, ಸಂಕ್ರಾಂತಿ, ಬಯಲು ಸೀಮೆ ಸರದಾರ, ಬೆಳ್ಳಿಗುಂಡು ನಾಟಕಗಳ ಹಲವಾರು ಪ್ರಕಾರಗಳಲ್ಲಿ ಪ್ರಮುಖ ಜವಾಬ್ದಾರಿ.

ಆಷಾಡದ ದಿನಗಳು, ಸಿಕ್ಕು, ಉದ್ಭವ, ಮಾರೀಚನ ಬಂಧುಗಳು, ನೆರಳಿಲ್ಲದ ಜೀವಗಳು, ಹೆಜ್ಜೆಗಳು, ದೊಡ್ಡಪ್ಪ, ಹಯವದನ, ಮಾನವಜನ್ಮ-ದೊಡ್ಡದೋ, ತಪಸ್ವಿ ತರಂಗಿಣಿ, ಸದ್ದು ವಿಚಾರಣೆ ನಡೆಯುತ್ತಿದೆ…. ನಿರ್ದೇಶಿಸಿದ ನಾಟಕಗಳು. ಇಂಗ್ಲೆಂಡಿನ ಮ್ಯಾನ್‌ಚೆಸ್ಟರ್ನಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಉದ್ಬವ ನಾಟಕಕ್ಕೆ ಸಂಗೀತ ನಿರ್ದೇಶನದಿಂದ ಗಳಿಸಿದ ಖ್ಯಾತಿ.