ಸದಸ್ಯ:Nashvara/ನನ್ನ ಪ್ರಯೋಗಪುಟ
ಮೂಲ | |
---|---|
ಮೂಲ ಸ್ಥಳ | ದಕ್ಷಿಣ ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಆಂಧ್ರ ಪ್ರದೇಶ, ಕರ್ಣಾಟಕ, ಕೇರಳ, ತಮಿಳುನಾಡು, ತೆಲಂಗಾಣ |
ವಿವರಗಳು | |
ಬಡಿಸುವಾಗ ಬೇಕಾದ ಉಷ್ಣತೆ | ಬಿಸಿ |
ಮುಖ್ಯ ಘಟಕಾಂಶ(ಗಳು) | ಕಡಲೇ ಹಿಟ್ಟು , ಅಳೂಗಡ್ಡೆ (ಇನ್ನಿತರೇ ತರಕಾರಿಗಳು) |
ಬೊಂಡಾವು ಭಾರತದ ಒಂದು ವಿಶಿಷ್ಟ ತಿಂಡಿ. ಇದು ಭಾರತದ ವಿವಿದ ಜಾಗಗಳಲ್ಲಿ ಕಾರ ಮತ್ತು ಸಿಹಿಯ ರುಚಿ ಉಳ್ಳದಾಗಿರುತ್ತದೆ.
ಇತಿಹಾಸ
[ಬದಲಾಯಿಸಿ]೧೨ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಸೊಮೇಶ್ವರ೩ ಎಂಬುವವರು ಬೊಂಡ ತಯಾರಿಸುವ ವಿದಾನವನ್ನು ಸಂಸ್ಕೃತದ ನಿಘಂಟಾದ ಮಾನಸೊಲ್ಲಸ ಎಂಬುವುದರಲ್ಲಿ ನಮೂದಿಸಿದ್ದಾರೆ.
ತಯಾರಿಸುವ ವಿಧಾನ
[ಬದಲಾಯಿಸಿ]ಕಾರ ಬೊಂಡಾ ಮಾಡಲು ಮೊದಲಿಗೆ ಆಲೂಗೆಡ್ಡೆ ಪಲ್ಯವನ್ನುಮಾಡಿಕೊಂಡು ನಂತರ ಕಡಲೆ ಹಿಟ್ಟಿಗೆ ನೀರು,ಉಪ್ಪು ಮತ್ತು ಮಸಾಲೆ ಹಾಕಿ ದೋಸೆಹಿಟ್ಟಿನ ಹದದಲ್ಲಿ ಕಲೆಸಿಕೊಳ್ಳಬೇಕು ನಂತರ ಮೊದಲೆ ಮಾಡಿಟ್ಟುಕೊಂಡಿರುವ ಆಲೂಗೆಡ್ಡೆ ಪಲ್ಯದ ಉಂಡೆಗಳನ್ನು ಕಲಸಿದ ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಬೇಯಿಸಬೇಕು . ಕೇರಳದವರು ಮಾಡುವ ಸಿಹಿಬೊಂಡವನ್ನು ಸುಗಿಯಾನ್ ಎಂದು ಕರೆಯುತ್ತಾರೆ. ಭಾರತದ ಇನ್ನಿತರೆ ಜಾಗಗಳಲ್ಲಿ ಬೊಂಡವು ಉಪ್ಪು ಹುಳಿ ಕಾರವನ್ನು ಹೊಂದಿರುತ್ತದೆ . ಕೇರಳದ ಕೆಲವೆಡೆ ಆಲೂಗೆಡ್ಡೆಯ ಬದಲು ಮರಗೆಣಸು ಅಥವ ಸಿಹಿಗೆಣಸು, ಬೇಯಿಸಿರುವ ಮೊಟ್ಟೆ, ಮಸಾಲೆ, ಚಿಕ್ಕ ಚಿಕ್ಕ ತುಂಡು ಮಾಡಿರುವ ಮಾಂಸ, ಇನ್ನಿತರ ಪದಾರ್ಥಗಳುಳ್ಳ ಪಲ್ಯವನ್ನು ಹೊಂದಿರುತ್ತದೆ . ತರಕಾರಿ ಬೊಂಡವು ಉಡುಪಿಯಲ್ಲಿ ಒಂದು ವಿಶಿಷ್ಟವಾದ ತಿಂಡಿಯಾಗಿದೆ(ತಿನಿಸು). ಉಡುಪಿಯಲ್ಲಿ ತರಕಾರಿ ಬೊಂಡವನ್ನು ಮಾಡಲು ಹಸಿರುಬಟಾಣಿ, ಕ್ಯಾರೇಟ್, ಕೊತ್ತಂಬರಿ ಸೊಪ್ಪು ಮತ್ತು ಹುರಳಿಕಾಯ ಪಲ್ಯವನ್ನು ಬಳಸುತ್ತಾರೆ. ಕರ್ನಾಟಕದ ಜಿಲ್ಲೆಯಾದ ಮಂಗಳೂರಿನಲ್ಲಿ ಮಾಡುವ ಬೊಂಡವು ವಿಭಿನ್ನ ರುಚಿಯನ್ನು ಹೊಂದಿರುತ್ತದೆ . ಮಂಗಳೂರಿನಲ್ಲಿ ಬೊಂಡವನ್ನು ಮಾಡಲು ಮೈದವನ್ನು ಉಪಯೋಗಿಸುತ್ತಾರೆ.