ಸದಸ್ಯ:Naseeba456/sandbox
ಮಾನವ-ನಿರ್ಮಿತ ಬಿಕ್ಕಟ್ಟುಗಳ ವರ್ಷ
ಕಳೆದು ಹೋದ ವರ್ಷಗಳಲ್ಲಿ ಭಾರತದಲ್ಲಿ ಮತ್ತು ಜಾಗತಿಕವಾಗಿ ಅನೇಕ ಗಮನಾರ್ಹ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳು ತೆರೆದುಕೊಂಡಿವೆ. ವರ್ಷವು ಕೊನೆಗೊಂಡ ಈ ಹೊತ್ತಿನಲ್ಲಿ ಆ ಬಿಕ್ಕಟ್ಟುಗಳು ಕಲಿಸಿರುವ ಪಾಠವನ್ನು ಅರ್ಥ ಮಾಡಿಕೊಳ್ಳುವುದಕ್ಕಾದರೂ, ಆ ಘಟನೆಗಳನ್ನು ಒಂದುಕ್ಷಣ ಅವಲೋಕಿಸುವುದು ಅಗತ್ಯವಾಗಿದೆ. ಈ ಬಿಕ್ಕಟ್ಟುಗಳಲ್ಲಿ ಹಲವು ಮಾನವ ನಿರ್ಮಿತವೆಂಬುದು ನಿಕಟ ಪರಿಶೀಲನೆಯಿಂದ ತಿಳಿದು ಬರುತ್ತದೆ. ಅದು, ಸತತ ನಿರ್ಲಕ್ಷ್ಯದಿಂದಿರಬಹುದು, ಬಿಕ್ಕಟ್ಟು ತಡೆಗೆ ಸಾಕಷ್ಟು ಗಮನ ನೀಡದುದರಿಂದಿರಬಹುದು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಪರ್ಯಾಪ್ತ ಹೂಡಿಕೆ ಮಾಡದುದರಿಂದಿರಬಹುದು ಅಥವಾ ಕೇವಲ ಕಾಯಿಲೆಹಳನ್ನು ನಿರ್ಮೂಲ ಮಾಡಲಷ್ಟೇ ಲಕ್ಷ್ಯವಹಿಸಿ, ಅವುಗಳ ಮೂಲ ಕಾರಣವನ್ನು ನಿರ್ಲಕ್ಷ್ಯಿಸಿದುದರಿಂದ ಇರಬಹುದು. ಈ ವರ್ಷಾರಂಭದಲ್ಲಿ, ಗಾಝಾದಲ್ಲಿನ ಸಮರ ಹಾಗೂ ತಡೆಗಳು ಗಾಝಾದ ಜನರ ಸತತ ಅಂತಾರಾಷ್ಟ್ರೀಯ ನಿರ್ಲಕ್ಷ್ಯದಿಂದಾಗಿ ಆರೋಗ್ಯ ಬಿಕ್ಕಟ್ಟೊಂದು ಉಲ್ಬಣಿಸಿತ್ತು. ಕೊನೆಯ ಲೆಕ್ಕಾಚಾರದಂತೆ, ನಾಲ್ಕು ವಾರಗಳ ಸಂಘರ್ಷದಿಂದ 10 ಸಾವಿರ ಮನೆಗಳು ಸರ್ವನಾಶವಾದುವು ಹಾಗೂ 4,50,000 ಮಂದಿ ಸ್ಥಳಾಂತರಗೊಡರು. ವಿದ್ಯುತ್ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ ಹಾಗೂ ಸುರಕ್ಷಿತ ಮನೆಗಳಿಲ್ಲದಿರುವುದು ನಿಜವಾದ ಸಾರ್ವಜನಿಕ ಆರೋಗಹಯ ಬಿಕ್ಕಟ್ಟಾಗಿದೆ. ಭಾರೀ ಜನಜಂಗುಳಿ, ನೀರು ಮತ್ತು ಶುಚಿತ್ವದ ಕೊರತೆಯಿಂದಾಗಿ ಜಲಸಂಬಂಧಿ ರೋಗಗಳು ಹೆಚ್ಚಳವಾಯಿತು. ಸಮಯ ಸರಿದಂತೆ ಈ ವಿನಾಶವು ಹಲವು ಆರೋಗ್ಯ ಬಿಕ್ಕಟ್ಟುಗಳಿಗೆ ಕಾರಣವಾಗಬಹುದು ಹಾಗೂ ಅವು ನೂರಾರು, ಸಾವಿರಾರು ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಪಶ್ಚಿಮ ಆಫ್ರಿಕಾದಲ್ಲಿ ಎಬೊಲಾ ಬಿಕ್ಕಟ್ಟು ಸುದ್ದಿ ಮಾಡಿದಷ್ಟು ಬೇರೆ ಯಾವುದೂ ಮಾಡಿಲ್ಲ. ಕಾಯಿಲೆಗೆ 7 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾದರು.ಈ ಬಿಕ್ಕಟ್ಟು ಬಿಚ್ಚಿಕೊಂಡ ಖಂಡದ ಅತ್ಯಂತ ಬಡ ಹಾಗೂ ಬಹುಶಃ ರಾಕೀಯವಾಗಿ ಅತ್ಯಂತ ಅಸ್ತಿರ ಭಾಗದಲ್ಲಿ, ಆರೋಗ್ಯ ವ್ಯವಸ್ಥೆ, ಮೂಲಸೌಕರ್ಯ, ನಿಧಿ, ತರಬೇತಿ ಪಡೆದಿರುವ ಮಾನವ ಸಂಪನ್ಮೂಲ ಹಾಗೂ ಸಮುದಾಯ ಶಿಕ್ಷಣ ಕ್ಷೇತ್ರಗಳು ನಿರ್ಲಕ್ಷ್ಯಿಸಲ್ಪಟ್ಟಿರುವ ಅತಿ ದೊಡ್ಡ ಕ್ಷೇತ್ರಗಳಾಗಿವೆ. ಪಶ್ಚಿಮ ಆಫ್ರಿಕದಲ್ಲಿ ಎಬೊಲಾ ಸುಮಾರು ಎರಡು ದಶಕಗಳಿಂದ ಸ್ಥಾನಿಕ (ಆಗಾಗ ಕಾಣಿಸಿಕೊಳ್ಳುವ) ರೋಗವಾಗಿತ್ತು. ಆದಾಗ್ಯೂ, ಈ ಅಥವಾ ಇಂತಹ ರೋಗಗಳನ್ನು ನಿಯಂತ್ರಿಸುವ ಈ ಪ್ರದೇಶದ ಸಾಮರ್ಥ್ಯವು ತೀರಾ ಮಿತವಾಗಿಯೇ ಉಳಿದಿದೆ. ಎಬೊಲಾವು ಬಡ ಪ್ರಾಂತವೊಂದರಲ್ಲಿ ಕೇಂದ್ರೀಕರಿಸಿದ್ದುದರಿಂದ ಅದು ಜಾಗತಿಕ ಆದ್ಯತೆಯೂ ಆಗಿರಲಿಲ್ಲ. ಜನರು ಸಾಯುತ್ತಿದ್ದಾಗ ಅಂತಾರಾಷ್ಟ್ರೀಯ ಸಂಸ್ಥೆಗಳು ಸದ್ದು ಮಾಡಿದವು ಹಾಗೂ ಸ್ಪಂದಿಸಲು ತಮ್ಮ ಸಮಯವನ್ನು ತೆಗೆದುಕೊಂಡವು. ಅಮೆರಿಕದಲ್ಲಿ ಮೊದು ಎಬೊಲಾ ಪ್ರಕರಣ ಕಾಣಿಸಿಕೊಂಡ ಬಳಿಕ ಅದು ಅಂತಿಮವಾಗಿ ಪ್ರಮುಖ ರೋಗವೆಂಬ ಅರ್ಹತೆ ಪಡೆಯಿತು. ಕೂಡಲೇ ಹಿಸ ಪ್ರಾಯೋಗಿಕ ಔಷಧಗಳು, ಲಸಿಕೆಗಳು ಹಾಗೂ ಸಿದ್ಧತೆಗಳು ಆರಂಭವಾದವು. ಎಂದಿನಂತೆಯೇ, ಅದು ಅತ್ಯಲ್ಪವಾಗಿ ಹಾಗೂ ವಿಳಂಬವಾಗಿ ಗೋಚರಿಸಿತು. ಭಾರತದಲ್ಲಿ ಆರೋಗ್ಯ ಕಾಳಜಿ ನಾವೀಗ ಸ್ವದೇಶದತ್ತ ತಿರುಗೋಣ. ಭಾರತವು ‘ಅಚ್ಛೇ ದಿನ್’ ಗಳತ್ತ ಸಾಗುತ್ತಿರುವಂತೆಯೇ ಅದು ಹಲವು ಕಾಯಿಲೆಗಳ ಜಾಹತಿಕ ನಾಯಕತ್ವದೆಡೆಗೂ ಸಾಗಿದೆ. ಈ ವರ್ಷ ಮಲೇರಿಯಾ ಹಾಗೂ ಡೆಂಗ್ ಕಾಯಿಲೆಗಳ ಬಿಕ್ಕಟ್ಟು ಪುನರಾವರ್ತನೆಗೊಂಡಿದೆ. ಡಯಾಬಿಟಿಸ್ ಹಾಗೂ ಹೃದ್ರೋಗ ನಮ್ಮನ್ನು ದಿಗಿಲುಗೊಳಿಸುತ್ತಿವೆ. ಈ ವರ್ಷಾರಂಭದಲ್ಲಿ ನಾವು ಎಚ್ಐವಿ ಕಿಟ್ ಗಳು ಹಾಗೂ ಬಳಿಕ ಎಚ್ಐವಿ ಔಷಧಿಗಳ ಆಘಾತಕರ ಕೊರತೆಯನ್ನು ಅನುಭವಿಸಿದ್ದೆವು. ವಿಚಿತ್ರವೆಂದರೆ, ನಾವೇ ಅವುಗಳನ್ನು ಉತ್ಪಾದಿಸಿ ಪ್ರಪಂಚಕ್ಕೆ ಪೂರೈಸುತ್ತಿದ್ದೇವೆ. ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸಾವಿರಾರು ಮಂದಿ ಔಷಧಿ ವಂಚಿತರಾಗಿದ್ದರೂ, ಸರಕಾರವು ‘ಪರಿಸ್ಥಿತಿ ಅಷ್ಟೊಂದು ಕೆಟ್ಟಿಲ್ಲ’ ಎನ್ನುವ ಮೂಲಕ ತನ್ನನ್ನು ಸಮರ್ಥಿಸಿಕೊಂಡಿತ್ತು. ಭಾರತದ ಔಷಧಿ-ಪ್ರತಿರೋಧಿ ಟಿಬಿ ಬಿಕ್ಕಟ್ಟು ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳೊಂದಿಗೆ ಬಾಲ ಬಿಚ್ಚಿತ್ತು. ಟಿಬಿ ಎಂಬುದು ದೇಶದ ಟೈಂಬ ಬಾಂಬ್ ಎಂಬುದನ್ನು ನಾವು ಅಂತಿಮವಾಗಿ ರಾಷ್ಟ್ರೀಯ ಟಿವಿಯಲ್ಲಿ ಒಪ್ಪಿಕೊಂಡಿದ್ದೆ ಆದಾಗ್ಯೂ, ಛತ್ತೀಸ್ಗಡದ ಸಂತಾನಹರಣ ದುರಂತ ಪ್ರಾಮುಖ್ಯ ಪಡೆದಿತ್ತು. ರಾಜ್ಯದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 83 ಮಹಿಳೆಯರಲ್ಲಿ 10ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಅನೇಕರನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಈ ಘಟನೆಯು, ಮಹಿಳೆಯರನ್ನು ಸಂತಾನ ಹರಣ ಚಿಕಿತ್ಸೆಗೊಳಪಡಿಸುವುದೇ ಕುಟುಂಬ ಯೋಜನೆಯ ಅಡಿಗಲ್ಲು ಎಂಬ ಸರಕಾರದ ಪುರುಷ ಪ್ರಧಾನ ಮಾನಸಿಕತೆಯನ್ನು ಬಹಿರಂಗಪಡಿಸಿತು. ಮಹಿಳೆಯರಿಗೆ ನೀಡಲಾಗಿದ್ದ ಆ್ಯಂಟಿ ಬಯಾಟಿಕ್ಗಳಲ್ಲಿ ಇಲಿ ಪಾಷಣದ ಅಂಶ ಒಳಗೊಂಡಿದ್ದ ಶಂಕೆ ಮೂಡಿತ್ತು. ಇದರಿಂದಾಗಿ ಅದು ಸರಕಾರಿ ಅಧಿಕಾರಿಗಳು ಹಾಗೂ ಸಣ್ಣ ಉತ್ಪಾದಕರ ನಡುವಿನ ಅಪವಿತ್ರ ಮ್ಯೆತ್ರಿಯನ್ನೂ ಬಯಲುಗೊಳಿಸಿತು. ದುರದೃಷ್ಟವಶಾತ್,ಈ ಕೊಲೆಯಲ್ಲದ ಮಾನವ ಹತ್ಯೆಗಳಿಗಾಗಿ ಯಾವನೆ ಅಧಿಕಾರಿ ಅಥವಾ ರಾಜಕಾರಣಿಯ ವಿರುದ್ಧ ಪ್ರಕರಣ ದಾಖಲಾಗಿಲ್ಲ.ಈ ಸಾವುಗಳು ಶಿಕ್ಷೆ ನೀಡದೆಯೇ ಉಳಿದವು. ವಿಶಾಲ ಮಟ್ಟದಲ್ಲಿ ನಗರ ಹಾಗೂ ಗ್ರಾಮೀಣ ಭಾರತದಲ್ಲಿ, ಸಾರ್ವಜನಿಕ ಹಾಗೂ ಖಾಸಗಿ ವಲಯಗಳೆರಡರಲ್ಲೂ, ಆರೋಗ್ಯ ಸೇವೆಗಳ ಗುಣಮಟ್ಟವು ನಿರಾಶಾದಾಯಕವಾಗಿಯೇ ಮುಂದುವರಿದಿದೆ. ಇದರಿಂದಾಗಿ ಲಕ್ಷಾಂತರ ರೋಗಿಗಳು ಆರೋಗ್ಯ ಸೇವೆ ಪಡೆಯಲು ಬೇರೆ ಕಡೆಗಳಿಗೆ ಹೋಗುವಂತಾಗಿದೆ. ಶೇ.60ಕ್ಕೂ ಹೆಚ್ಚು ಭಾರತೀಯರು ಖಾಸಗಿ ವಲಯದಲ್ಲಿ (ಅನೇಕರು ನಕಲಿ ವ್ಯೆದ್ಯರಿಂದ) ದುಬಾರಿ ಬೆಲೆ ತೆತ್ತು ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಮುಂದುವರಿಸಿದ್ದಾರೆ. ಅವರನ್ನು ಆಗಾಗ ಅನಗತ್ಯ ಪರೀಕ್ಷೆಗಳನ್ನು ನಡೆಸುವ ಮೂಲಕ ವಂಚಿಸಲಾಗುತ್ತಿದೆ. ಔಷಧಿ ಮಳಿಗೆಗಳು ಸರಕಾರದ ಸಾಕಷ್ಟು ನಿಯಂತ್ರಣವಿಲ್ಲದೆಯೇ ಆ್ಯಂಟಿ ಬಯಾಟಿಕ್ಗಳ ಮಾರಟ ನಡೆಸುತ್ತಿರುವುದರಿಂದಾಗಿ,ಭಾರತದಲ್ಲಿ ಮೈಕ್ರೊ ಬ್ಯಾಕ್ಟೀರಿಯಾ ಪ್ರತಿರೋಧ ಕಾಯಿಲೆ ಅಡ ತಡೆಯಿಲ್ಲದೆ ಮುಂದುವರಿದಿದೆ. ಹೊಸ ಸರಕಾರವು ಆರೋಗ್ಯಕ್ಕಾಗಿ ವೆಚ್ಚ ಮಾಡುವ ಹಣವನ್ನು ಶೇ.20ರಷ್ಟು ಕಡಿತಗೊಳಿಸಲಿದೆಯೆಂಬ ಸುದ್ದಿ ಸೋರಿಕೆಯು ವರ್ಷಾಂತ್ಯದಲ್ಲಿ ಅತಿದೊಡ್ಡ ಆಘಾತವನ್ನು ನೀಡಿದೆ. ಆರೋಗ್ಯಕ್ಕಾಗಿ ಮಾಡುವ ವೆಚ್ಚ ವಿಶ್ವದಲ್ಲಿಯೇ ಅತಿ ಕಡಿಮೆಯಿರುವ ದೇಶವೊಂದು ವರ್ಷಾವನ್ನು ಕೊನೆಗೊಳಿಸುವ ಭಯಾನಕ ಮಾರ್ಗ ಇದಾಗಿದೆ. ಮುಂದಿನ ವರ್ಷಕ್ಕೆ ಪಾಠಗಳು 2015 ಕ್ಕಾಗಿ ನಾವು ಏನನ್ನು ಕಲಿಯಬಹುದು? ಅಭಿವೃದ್ಧಿ, ಬೆಳವಣಿಗೆ ಹಾಗೂ ಮಾನವ ಕಲ್ಯಾಣದ ಭರವಸೆ ನೀಡುವ ಭಾರತದ ಹಾಗೂ ಇತರೆಡೆಗಳ ಸರಕಾರಗಳು ಇದನ್ನು ಗುರುತಿಸಲೇ ಬೇಕು: ಆರೋಗ್ಯ ಹಾಗೂ ಆರೋಗ್ಯ ವ್ಯವಸ್ಥೆಗಳಿಗೆ ಬಂಡವಾಳ ಹೂಡದೆ ಇದೆಲ್ಲ ಸಾಧ್ಯವಾಗದು. ನಾವು ರೋಗ ತಡೆ ಹಾಗೂ ಪ್ರಾಥಮಿಕ ಆರೋಗ್ಯ ಕಾಳಜಿ, ಶುಚಿತ್ವ,ತ್ಯಾಜ್ಯ ಪ್ರಬಂಧನ ಹಾಗೂ ಆರೋಗ್ಯ ಶಿಕ್ಷಣಗಳ ಸುಧಾರಣೆಗಾಗಿ ಹೂಡಿಕೆ ಮಾಡಲೇ ಬೇಕು. ಅಂತಿಮವಾಗಿ, ಸತತ ಕಾಯಿಲೆಗಳ ನಮ್ಮ ಸುದೀರ್ಘ ಚರಿತ್ರೆ ಹಾಗೂ ಇತ್ತೀಚಿನ ಬಿಕ್ಕಟ್ಟುಗಳು ನಮಗೆ ಏನನ್ನಾದರೂ ಕಲ್ಪಿಸುತ್ತದೆ ಎಂದಾದರೆ, ಅದು,ಕಾಯಿಲೆಗಳ ನಿಯಂತ್ರಣಕ್ಕೆ ಆರೋಗ್ಯ ಮೂಲ ಸಿದ್ಧಾಂತಗಳು ನಿೃರ್ಣಾಯಕವಾಗಿ ಪ್ರಾಮುಖ್ಯ ಪಡೆಯುತ್ತವೆ- ಅವು, ಸಾಕಷ್ಟು ಪೌಷ್ಟಿಕಾಂಶ, ಸುರಕ್ಷಿತ ನಿವಾಸ,ಉತ್ತಮ ಗುಣಮಟ್ಟದ ಗಾಳಿ, ನೈರ್ಮಲ್ಯ, ಆರೋಗ್ಯಪೂರ್ಣ ನಡವಳಿಕೆ, ಸುರಕ್ಷೆ ಹಾಗೂ ಸಂಘರ್ಷರಾಹಿತ್ಯ ಎಂಬುದು. ಇವೆಲ್ಲವೂ ಕೇವಲ ಆರೋಗ್ಯದೊಂದಿಗೆ ಮಾತ್ರವಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ನೀತಿಯೊಂದಿಗೂ ಆಳವಾದ ಸಂಬಂಧ ಹೊಂದಿವೆ. ಆರೋಗ್ಯಕ್ಕಾಗಿ ಮಾಡುವ ಖರ್ಚಿನ ಕಡಿತ ಭಾರತ ಮತ್ತು ಇತರ ಯಾವುದೇ ಕಡೆ ಪರಿಸ್ಥಿತಿಯನ್ನು ಕೆಡಿಸುವುದೇ ಹೊರತು ಉತ್ತಮಗೊಳಿಸುವುದಿಲ್ಲ.ಭಾರತವು ತನ್ನ ಸಾರ್ವಜನಿಕ ನೀತಿಯಲ್ಲಿ ಈ ಪಾಠಗಳನ್ನು ಅಡಕಗೊಳಿಸಲಿಲ್ಲವಾದರೆ, ಮುಂದಿನ ವರ್ಷವಲ್ಲ, ಹತ್ತು ವರ್ಷಗಳೇ ಕಳೆದರೂ ಅಚ್ಛೇ ದಿನಗಳು ಬರಲಾರವು.