ಸದಸ್ಯ:Nanditha1810167/ನನ್ನ ಪ್ರಯೋಗಪುಟ
ಗೋಚರ
ನಂದಿತ . ಕೆ | |
---|---|
ಜನನ | ಬೆಂಗಳೂರು | ೨೬ ಮಾರ್ಚ್ ೨೦೦೦
ಪೋಷಕರು |
ಬಾಲ್ಯ: ನಮಸ್ಕಾರ ,
ನನ್ನ ಹೆಸರು ನಂದಿತ, ನನ್ನ ತಾಯಿಯ ಹೆಸರು ಸೌಮ್ಯ ಕುಮಾರ್, ನನ್ನ ತಂದೆಯ ಹೆಸರು ಕುಮಾರ್ ಕೆ.ಟಿ ಮತ್ತು ನನ್ನ ಸಹೋದರನ ಹೆಸರು ಸಂಜಯ್, ಇದು ನನ್ನ ಪುಟ್ಟ ಕುಟುಂಬ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ . ನನ್ನ ತಂದೆ ತಾಯಿ ನನ್ನನು ಜ್ಯೋತೀ ಕೇಂದ್ರೀಯ ವಿದ್ಯಾಲಯ ಎಂಬ ಶಾಲೆಗೆ ಸೇರಿಸಿದರು ಚಿಕ್ಕಂದಿನಿಂದಲೂ ನನ್ನಗೆ ಬಹಳ ಪ್ರಿಯವಾದ್ದದು ಏನೆಂದರೆ ಹಬ್ಬಗಳಲ್ಲಿ ಕೈ ತುಂಬ ಗೋರಂಟಿ ಹಾಕಿಸಿಕೊಳ್ಳುವುದು, ನನ್ನ ಬದುಕಿನಲ್ಲಿ ಮೊದಲನೆ ಪ್ರಶಸ್ತಿ ಪಡೆದ್ದದು ನಾನು ಒಂದನೇ ತರಗತಿಯಲ್ಲಿ ಓದುವಾಗ ಓಟದ ಸ್ಪರ್ಧೆಯಲ್ಲಿ ಮೊದಲನೇ ಪ್ರಶಸ್ತಿ ದೊರಕಿತು. ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಹಲವಾರು ತಂಡದ ನಾಯಕರನ್ನು ಆಯ್ಕೆ ಮಾಡಲು ಹಲವಾರು ಸ್ಪರ್ಧೆಯನ್ನು ಆಯೋಜಿಸುತಿದ್ದರು ಅದರಲ್ಲಿ ಗೆದ್ದವರನ್ನು ಶಾಲೆಯ ನಾಯಕ/ನಾಯಕಿ ಯಾಗಿ ಆಯ್ಕೆ ಮಾಡುತಿದ್ದರು. ನಾನು ಏಳನೇ ತರಗತಿಯಲ್ಲಿ ಶಾಲೆಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಗೆದ್ದು ಶಾಲೆಯಾ ನಾಯಕಿಯಾಗಿ ಆಯ್ಕೆ ಮಾಡಿದ್ದರು, ಇದು ನನ್ನ ಜೀವನದ ಒಂದು ಬಹಳ ಸುಂದರವಾದ ಅನುಭವ, ಏಕೆಂದರೆ ನಾನು ಬಹಳಷ್ಟು ವಿಶಯಗಳನ್ನು ಕಲಿತುಕೊಂಡೆನು. ನನ್ನಗೆ ಪ್ರಿಯವಾದ ಆಟಯೆಂದರೆ ಕ್ಯಾರಮ್ , ಅದರಲ್ಲೂ ಕೂಡ ಮೊದಲನೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ.ನನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು "ದಯಾನಂದ ಸಾಗರ ಪಿ,ಯು ಕಾಲೇಜಿನಲ್ಲಿ" ಪೂರ್ಣಗೊಳಿಸಿದೆ, ನಂತರ ನನ್ನ ಮುಂದಿನ ವಿದ್ಯಾಭ್ಯಾಸವನ್ನು "ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ" ಮುಂದುವರಿಸುತಿದ್ದೇನೆ.
ಬಲ ಬಲಹೀನ:
ಪ್ರತಿ ವ್ಯಕ್ತಿಗು ಅವರದೆಯಾದ ಬಲವು-ಬಲಹೀನತೆಯು ಇರುತ್ತದೆ ಮತ್ತು ಇದರ ಬಗ್ಗೆ ಅವರಿಗೆ ಮಾತ್ರಾ ಅರಿವಿರುತ್ತದೆ. ಈ ಶಕ್ತಿ-ದೌರ್ಬಲ್ಯಗಳನ್ನು ಇತರರು ವೆಮರ್ಶಿಸಲಾಗುವುದಿಲ್ಲ. ನನ್ನ ಬಲಗಳಲ್ಲಿ ಮುಖ್ಯವಾದುದು ನನ್ನ ಎಕಾಗ್ರತೆ, ಈ ಎಕಾಗ್ರತೆಯನ್ನು ನಾನು ನನ್ನ ಎಲ್ಲಾ ಚಟುವಟಿಕೆಯಲ್ಲಿ ಉಪಯೋಗಿಸುತ್ತೇನೆ, ಮುಖ್ಯವಾಗಿ ನನ್ನ ಓದಿನಲ್ಲಿ. ಇದರಿಂದಾಗಿ ನಾನು ನನ್ನ ಶಾಲಾಪರಿಕ್ಷೆಗಳಲ್ಲಿ ಹಾಗು ಕಾಲೇಜಿನಲ್ಲಿ ಉತ್ತಮ ಅಂಕಗಳನ್ನು ಪಡೆದ್ದಿದೆ . ನಾನು ಎಲ್ಲರೊಂದಿಗು ನಿಷ್ಟೆಯಿಂದ ಅವರ ಕಾರ್ಯಗಳಲ್ಲಿ ಸಹಾಯ ಮಾಡುವುದರಿಂದ ಎಲ್ಲರು ನನ್ನೋಂದಿಗೆ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ನನ್ನ ಮುಂದಿನ ವಿಷೇಶ ಬಲವು ನನ್ನ ಸೃಜನಶೀಲತೆ. ನನ್ನ ಸೃಜನಶೀಲತೆಯಿಂದ ನಾನು ಚಟುವಟಿಕೆಯಲ್ಲಿ ಚುರುಕಾಗಿಯು ಮತ್ತು ಕ್ರಿಯಾಶೀಲವಾಗಿಯು ಇರುತ್ತಿದ್ದೇನೆ. ಇದರಿಂದ ನನ್ನ ಪ್ರತಿ ಕೆಲಸವು ಅದ್ಭುತವಾಗಿಯು ಮತ್ತು ವಿಷೇಶವಾಗಿಯು ಹೊರಬರುತ್ತದೆ. ಎಲದಕ್ಕಿಂತ ಪ್ರಮುಖವಾದ ಬಲ ನನ್ನ ಜೀವನದಲ್ಲಿ ಮುಖ್ಯಪಾತ್ರವಹಿಸಿದ ನನ್ನ ತಂದೆ ತಾಯಿಗಳು. ಅವರ ಸಹಾಯದಿಂದ ನಾನು ಎಲ್ಲಾ ಅಡಕುಗಳನ್ನು ದಾಟಿ ಪ್ರಬಲವಾಗಿ ಮುಂದೆ ಸಾಗುತ್ತಿದ್ದೆನೆ.
ಹೇಗೆ ಬೆಳಕಿದ್ದಲ್ಲಿ ಕತ್ತಲು ಇರುವುದೋ ಹಾಗೆಯೆ ಬಲವಿದ್ದಲ್ಲಿ ಬಲಹೀನತೆಯು ಇರುತ್ತದೆ. ನನ್ನಲಿರುವ ಒಂದು ಬಲಹೀನತೆ ಭಯ. ಇದರ ಕಾರಣ ನಾನು ಹಲವಾರು ವರ್ಶಗಳಕಾಲ ನನ್ನ ಭಾವನೆಗಳನ್ನು ಜನರ ಮುಂದೆ ವ್ಯಕ್ತಪಡಿಸಲು ಹಿಂಜರಿಯುತ್ತಿದೆ. ಕೆಲವೊಮ್ಮೆ ನನ್ನ ಬಲಹೀನತೆಯಾಗಿ ಕಾಡುವ ಸಮಸ್ಯೆ ಆಲಸ್ಯತನ. ಆಲಸ್ಯತನದಿಂದ ಕೂಡಿರುವ ಯಾವುದೇ ಕೆಲಸವು ಫಲಪೂರಕವಾಗಿರುವುದಿಲ್ಲ. ಆಲಸ್ಯತನವು ನನ್ನ ಹಲವು ಅವಕಾಶಗಳನ್ನು ನಿರಾಶೆಗೊಳಿಸಿದೆ. ಹಾಗು ಮಾಡಬೇಕಾದ ಕೆಲಸಗಳನ್ನು ಮುಂದೂಡಿಸುತ್ತಿವೆ. ಕೆಲವು ಪರಿಸ್ಥಿತಿಗಳಲ್ಲಿ ಬಲವು ಬಲಹಿನತೆಯಾಗಿ ಕಾಣುತ್ತವೆ. ಉದಾಹರಣೆಗೆ, ಯಾವುದಾದರು ಹೊಸ ವಿಷಯಗಳಲ್ಲಿ ಆಸಕ್ತಿ ವ್ಯಕ್ತ ಪಡಿಸಿದಾಗ ನನಗೆ ಬೆನ್ನೆಲುಬಾಗಿ ಪ್ರೋತ್ಸಾಹ ನೀಡಲು ತಂದೆ-ತಾಯಿಯರು ಬಲವಾಗಿರುತ್ತಾರೆ.
ಹವ್ಯಾಸಗಳು:
ನನ್ನ ಹವ್ಯಸಗಳಿಗೆ ಬಂದರೆ, ನನಗೆ ನೃತ್ಯವನ್ನು ಮಾಡಲು ಬಹಳ ಆಸಕ್ಥಿ. ನಾನು ಬಹಳ ಸಂಧರ್ಭಗಳಲ್ಲಿ ನನ್ನ ಕೆಲಸಕ್ಕಿಂತಲು ನನ್ನ ಹವ್ಯಸಗಳಿಗೇ ಹೆಚ್ಚು ಪ್ರಾಮುಕ್ಯತೆಯನ್ನು ನೀಡುತ್ತೇನೆ. ನನ್ನ ಹವ್ಯಾಸಗಳಲ್ಲಿ ನಾನು ಯಶಸ್ವಿಯಾಗದಿದ್ದರು ನಾನು ಅದನ್ನು ಮಾಡಲು ಬಯಸುತ್ತೇನೆ. ನನ್ನ ಮುಂದಿನ ಹವ್ಯಸ ಸೃಜನಾತ್ಮಕ ಕೆಲಸ. ನನಗೆ ತುಂಬಾ ಸ೦ತೋಷವನ್ನು ನೀಡುವ ಹವಸ್ಯ ಶುಭಾಶಯ ಪತ್ರಗಳನ್ನು ಮಾಡುವುದು.ಮೊದಲಿನಿಂದಲೂ ನನಗೆ ವಸ್ತ್ರಾ ವಿನ್ಯಾಸದಲ್ಲಿ ಆಸಕ್ತಿಯಿದೆ ಹಾಗು ಈ ವಿಷ್ಯದ ಕೂರಿತು ಹಲವಾರು ಪರೀಕ್ಷೆ ಗಳನು ಬರೆದಿದ್ದೆ, ನನ್ನ ಬಿಡುವಿನ ಕ್ಷಣದಲ್ಲಿ ವಸ್ತ್ರಾ ವಿನ್ಯಾಸದ ಬಗ್ಗೆ ಕಲೆತು ಹಲವಾರು ಪ್ರಯೋಗಳನ್ನು ಮಾಡುತ್ತಿರುತ್ತೇನೆ.
ನಾನು ತುಂಬಾ ಪ್ರಾಯೋಗಿಕ ಮತ್ತು ಪ್ರತಿಬಿಂಬಿಸುವ ವ್ಯಕ್ತಿ. ನನಗೆ ದೂರೆಯುವ ಎಲ್ಲ ಅವಕಾಶಗಳನ್ನು ಉಪಯೋಗಿಸಲು ಪ್ರಯತ್ನಿಸುತೇನೆ,ನನ್ನ ಪ್ರಕಾರ ಎಲ್ಲವೂ ಸಾಧ್ಯ. ಅದು ಸಾಧ್ಯವಾಗದಿದ್ದಲ್ಲಿ ನಮ್ಮ ಶೌರ್ಯ, ಶ್ರಮ, ಧೈರ್ಯ ಮುಂತಾದವುಗಳ ಕಾರಣದಿಂದಾಗಿ ನಾವು ಅದನ್ನು ಸಾಧಿಸಬಹುದು. ಇದು ನನ್ನ ಜೀವನದ ತತ್ವವಾಗಿದೆ.